About Us       Contact

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.14, 2018 : ಘಾಟ್ಕೋಪರ್ ಪಶ್ಚಿಮದ ಅಸಲ್ಫಾ ಇಲ್ಲಿನ ಶ್ರೀ ಗೀತಾಂಬಿಕಾ ಸೇವಾ ಸಮಿತಿ ಸಂಚಾಲಕತ್ವದ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನ ಅಸಲ್ಫಾದಲ್ಲಿ ಶ್ರೀ ಗೀತಾಂಬಿಕಾದೇವಿ ಮತ್ತು ಪರಿವಾರದ ದೇವತೆಗಳ ಇಪ್ಪತ್ತನೇ ಪ್ರತಿಷ್ಠಾ ವರ್ಧಂತೋತ್ಸವ ಇಂದಿಲ್ಲಿ ಗುರುವಾರ ವಿಜೃಂಭನೆಯಿಂದ ನೆರವೇರಿಸಲ್ಪಟ್ಟಿತು.

ವಿಲಂಬಿ ನಾಮ ಸಂವತ್ಸರದ ಜೇಷ್ಠ ಮಾಸಾ ಶುಕ್ಲ ಪಕ್ಷದಶುಭಾವಸರದಿ ಆಚರಿಸಲ್ಪಟ್ಟ ದ್ವಿದಶಕ ಪ್ರತಿಷ್ಠಾ ವರ್ಧಂತೋತ್ಸವಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ರಘುಪತಿ ಭಟ್ ಉಡುಪಿ ಅವರ ಮುಂದಾಳುತ್ವ ದಿನಪೂರ್ತಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಸಲ್ಪಟ್ಟವು. ಅಂತೆಯೇ ವೇದಮೂರ್ತಿ ಶ್ರೀ ಶಂಕರನಾರಾಯಣ ತಂತ್ರಿ ಡೊಂಬಿವಲಿ ತನ್ನ ಪೌರೋಹಿತ್ಯದಲ್ಲಿ ಸಾಮಾಹಿಕ ಪ್ರಾರ್ಥನೆ, ಅದ್ಯಗಣ ಯಾಗ, ತೋರಣ ಮೂಹೂರ್ತ, ಪರಿವಾರ ದೇವತೆಗಳ ನವಕ ಕಲಶ ಹಾಗೂ ಶ್ರೀ ದೇವಿಗೆ 25 ಕಲಶದ ಕಲಶಪೂರಣ, ಪಂಚಾಮೃತ ಅಭಿಷೇಕ, ಪರಿವಾರ ದೇವತೆಗಳ ಅಭಿಷೇಕ, ಶ್ರೀ ದೇವಿಗೆ ಪ್ರಧಾನ ಹೋಮ, ಪಲ್ಲಪೂಜೆ, ಪ್ರಧಾನ ಕಲಶಾಭಿಷೇಕ, ಮಧ್ಯಾಹ್ನ ಮಹಾಮಂಗಳಾರತಿ ಮತ್ತು ಅನ್ನ ಸಂತರ್ಪಣೆ ನಡೆಸಲಾಯಿತು.

ಮಂದಿರದಲ್ಲಿ ಪ್ರತಿಷ್ಠಾಪಿತ ಗಣಪತಿ, ಈಶ್ವರ, ಆಂಜನೇಯ, ನಾಗದೇವರು, ರಕ್ತೇಶ್ವರಿ ಹಾಗೂ ಭದ್ರಕಾಳಿ ದೇವರಿಗೂ ವಿಶೇಷ ಪೂಜೆಗೈಯಲಾಯಿತು. ವಿದ್ವಾನರುಗಳಾದ ರಘುಪತಿ ಭಟ್, ಸುಬ್ರಹ್ಮಣ್ಯ ಭಟ್, ರಾಜೇಶ್ ಭಟ್ ಕಿದಿಯೂರು, ಉಮಾಶಂಕರ್ ಭಟ್, ದುರ್ಗಾಪ್ರಸಾದ್ ಭಟ್, ವ್ಯಾಸ ಭಟ್, ಉದಯಶಂಕರ ಭಟ್, ನಿರಂಜನ ಭಟ್ ನಂದಿಕೂರು ವಿವಿಧ ಪೂಜಾಧಿಗಳನ್ನು ನಡೆಸಿ ನೆರದ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಿ ಹರಸಿದರು.

ಉಪಸ್ಥಿತ ನಗರದ ಹಿರಿಯ ಹೊಟೇಲು ಉದ್ಯಮಿ, ದಾನಿ ಗಂಗಾಧರ ಎಸ್.ಪಯ್ಯಡೆ ಅವರನ್ನು ಶ್ರೀ ಗೀತಾಂಬಿಕಾ ಸೇವಾ ಸಮಿತಿ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಮತ್ತು ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ್ ಪಿ.ಕೋಟ್ಯಾನ್ ಹಾಗೂ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

ಸಂಜೆ ಶ್ರೀ ಗೀತಾಂಬಿಕಾ ಭಜನಾ ಮಂಡಳಿ ಭಜನೆ ನಡೆಸಿದ್ದು, ಸೂರ್ಯೋಸ್ತಮದ ಬಳಿಕ ಶ್ರೀ ದೇವಿಯ ದರ್ಶನ, ರಾತ್ರಿ ರಂಗಪೂಜೆ ನಂತರ ಉತ್ಸವ ಬಲಿ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ಗಂಗಾಧರ ಪಯ್ಯಡೆ ಪ್ರಾಯೋಜಕತ್ವದಲ್ಲಿ ದಿ| ರಮಾನಾಥ ಪಯ್ಯಡೆ ಸ್ಮರಣಾರ್ಥ ಶ್ರೀ ಗೀತಾಂಬಿಕಾ ಕೃಪಾ ಪೆÇೀಷಿತ ಯಕ್ಷಗಾನ ಮಂಡಳಿಯ ಕಲಾವಿದರು `ಇಂದ್ರಜಿತು ಕಾಳಗ' ಯಕ್ಷಗಾನ ಬಯಲಾಟ ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಸೇವಾ ಸಮಿತಿ ಕೋಶಾಧಿಕಾರಿ ವಿಕ್ರಮ ಸುವರ್ಣ, ಉಪಾಧ್ಯಕ್ಷ ಸತೀಶ್ ಕೆ.ಶೆಟ್ಟಿ, ಉಪ ಗೌರವಧ್ಯಕ್ಷ ಜಯರಾಮ ಜಿ.ರೈ, ಕಾರ್ಯಧ್ಯಕ್ಷ ಸುರೇಶ್ ಪಿ.ಕೋಟ್ಯಾನ್, ಉಪ ಕಾರ್ಯಾಧ್ಯಕ್ಷರುಗಳಾದ ವಿಠಲ್ ಶೆಟ್ಟಿ ಮತ್ತು ಬೆಳುವಾಯಿ ಸಂಜೀವ ಪೂಜಾರಿ, ಜೊತೆ ಕಾರ್ಯದರ್ಶಿ ಸುಧಾಕರ ಶೆಟ್ಟಿ, ಜೊತೆ ಕೋಶಾಧಿಕಾರಿಗ ಳಾದ ಸಚಿನ್ ಡಿ.ಜಾಧವ್, ಸೌಮ್ಯ ಎಸ್.ಪೂಜಾರಿ, ಲೆಕ್ಕಪತ್ರ ಪರಿಶೋಧಕ ಸಿಎ| ಬಿಪಿನ್ ಶೆಟ್ಟಿ, ಯಕ್ಷಗಾನ ಮಂಡಳಿಯ ಸಂಚಾಲಕ ಸುನೀಲ್ ಅಮೀನ್, ವ್ಯವಸ್ಥಾಪಕ ಪ್ರಭಾಕರ್ ಕುಂದರ್, ಮಹಿಳಾ ಮಂಡಳಿ ಮತ್ತು ಪೂಜಾ ಸಮಿತಿ ಹಾಗೂ ಭಜನಾ ಸಮಿತಿ ಸದಸ್ಯರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal