About Us       Contact

(ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.11, 2018 : ಘಾಟ್ಕೋಪರ್ ಪಶ್ಚಿಮದ ಅಸಲ್ಫಾ ಇಲ್ಲಿನ ನಾರಿ ಸೇವಾ ಸದನ್ ರಸ್ತೆಯಲ್ಲಿರುವ ಶ್ರೀ ಗೀತಾಂಬಿಕಾ ಸೇವಾ ಸಮಿತಿ ಸಂಚಾಲಕತ್ವದ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನ ಅಸಲ್ಫಾದಲ್ಲಿ ಈ ಬಾರಿ ಶ್ರೀ ಗೀತಾಂಬಿಕಾದೇವಿ-ಪರಿವಾರದ ದೇವತೆಗಳ 20ನೇ ಪ್ರತಿಷ್ಠಾ ವರ್ಧಂತೋತ್ಸವವನ್ನು ಇದೇ ಜೂ.14ರ ಗುರುವಾರ ದಿನಪೂರ್ತಿಯಾಗಿ ಸಂಭ್ರಮಿಸಲಾಗುವುದು.

ವಾರ್ಷಿಕ ಪ್ರತಿಷ್ಠಾ ವರ್ಧಂತೋತ್ಸವ ಪ್ರಯುಕ್ತ ಈ ಬಾರಿಯೂ ವಿಲಂಬಿ ನಾಮ ಸಂವತ್ಸರದ ಜೇಷ್ಠ ಮಾಸಾ ಶುಕ್ಲ ಪಕ್ಷದಂದು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಗೀತಾಂಬಿಕಾದೇವಿ ಹಾಗೂ ಪರಿವಾರದ ದೇವತೆಗಳ ನ್ನು ವಿಶೇಷವಾಗಿ ಪೂಜಿಸಲಾಗುವುದು. ವೇದಮೂರ್ತಿ ಶ್ರೀ ಶಂಕರನಾರಾಯಣ ತಂತ್ರಿ ಡೊಂಬಿವಲಿ ಇವರ ನೇತೃತ್ವದಲ್ಲಿ ವಿವಿಧ ಪೂಜೆಗಳು ನೇರವೇರಿಸಲಾಗುವುದು.

ಬೆಳಿಗ್ಗೆ 8.00 ಗಂಟೆಯಿಂದ ಸಾಮಾಹಿಕ ಪ್ರಾರ್ಥನೆ, ಅದ್ಯಗಣಯಾಗ, ತೋರಣ ಮೂಹೂರ್ತ, 9.30 ಗಂಟೆಗೆ ಪರಿವಾರ ದೇವತೆಗಳ ನವಕ ಕಲಶ ಹಾಗೂ ಶ್ರೀ ದೇವಿಗೆ 25 ಕಲಶದ ಕಲಶಪೂರಣ, ಪಂಚಾಮೃತ ಅಭಿಷೇಕ, ಪರಿವಾರ ದೇವತೆಗಳ ಅಭಿಷೇಕ, ಶ್ರೀ ದೇವಿಗೆ ಪ್ರಧಾನ ಹೋಮ, ಪಧಾನ ಕಲಶಾಭಿಷೇಕ, ಮಧ್ಯಾಹ್ನ 12.00 ಗಂಟೆಗೆ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಂತರ ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ 5.00 ಗಂಟೆಯಿಂದ ಭಜನೆ, 7.30 ಗಂಟೆಯಿಂದ ಶ್ರೀ ದೇವಿಯ ದರ್ಶನ, ರಾತ್ರಿ 8.00 ಗಂಟೆಗೆ ರಂಗಪೂಜೆ ನಂತರ ಉತ್ಸವ ಬಲಿ, ರಾತ್ರಿ 10.30 ಗಂಟೆಯಿಂದ ಪ್ರಸಾದ ವಿತರಣೆ, ರಾತ್ರಿ 11.00 ಗಂಟೆಯಿಂದ ಗಂಗಾಧರ ಎಸ್.ಪಯ್ಯಡೆ ಅವರ ಪ್ರಾಯೋಜಕತ್ವದಲ್ಲಿ ದಿ| ರಮಾನಾಥ ಪಯ್ಯಡೆ ಸ್ಮರಣಾರ್ಥ `ಇಂದ್ರಜಿತು ಕಾಳಗ' ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಡುವುದು. ಮಾರನೆದಿನ (ಶುಕ್ರವಾರ) ಬೆಳಿಗ್ಗೆ ಸಂಪೆÇೀಕ್ಷಣೆ ಮತ್ತು ಮಹಾ ಮಂಗಳಾರತಿಯೊಂದಿಗೆ ವಾರ್ಷಿಕೋತ್ಸವ ಸಮಾಪ್ತಿ ಕಾಣಲಿದೆ

ಆ ಪ್ರಯುಕ್ತ ಭಕ್ತಾಭಿಮಾನಿಗಳೆಲ್ಲರೂ ಆಗಮಿಸಿ ತನುಮನಧನಗಳಿಂದ ಸಹಕರಿಸಿ ಶ್ರೀ ಗೀತಾಂಬಿಕಾ ದೇವಿಯ ಹಾಗೂ ಪರಿವಾರ ದೇವತೆಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಶ್ರೀ ಗೀತಾಂಬಿಕಾ ಸೇವಾ ಸಮಿತಿ ಪರವಾಗಿ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಗೌರವಾಧ್ಯಕ್ಷ ಮುದ್ರಾಡಿ ದಿವಾಕರ ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ್ ಕೋಟ್ಯಾನ್, ಕೋಶಾಧಿಕಾರಿ ವಿಕ್ರಮ ಸುವರ್ಣ ಮತ್ತಿತರ ಪದಾಧಿಕಾರಿಗಳು ಸದಸ್ಯರು ಈ ಮೂಲಕ ವಿನಂತಿಸಿದ್ದಾರೆ.

ಶ್ರೀ ಗೀತಾಂಬಿಕಾದೇವಿ ದೇವಸ್ಥಾನದ ಬಗ್ಗೆ ಒಂದಿಷ್ಟು......

ಉದರ ಪೆÇೀಷಣೆಗೆಂದು ಊರಿನಿಂದ ಮುಂಬಯಿಗೆ ಆಗಮಿಸಿದ ತುಳು-ಕನ್ನಡಿಗರೆಷ್ಟೊ ಜನ ಮುಂಬಯಿಯಲ್ಲಿ ನೆಲೆಸಿ ತದ ನಂತರ ಅಲ್ಲಲ್ಲಿ ತಮ್ಮದೇ ಆದ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ, ದೇವಾಲಯಗಳನ್ನು ನಿರ್ಮಿಸಿ ತಮ್ಮ ಜನರನ್ನು ಒಂದು ಚಕ್ರದೊಳಗೂಡಿಸಿಕೊಳ್ಳಲು ಪ್ರಯತ್ನಿಸಿದರು. ಇಂದು ಈ ಮಹಾನಗರದಲ್ಲಿ ಕರ್ನಾಟಕದ ಪರಂಪರೆಯನ್ನು ತೋರಿಸಲು ಮುಂಬಯಿಯ ಎಲ್ಲಾ ಭಾಗದಲ್ಲಿ ಅದೆಷ್ಟೊ ಇಂತಹ ಸಂಘ ಮಂದಿರಗಳನ್ನು ನಾವು ಕಾಣಿಸಬಹದು. ತುಳು-ಕನ್ನಡಿಗರನ್ನು ಒಂದುಗೂಡಿಸಿ ಜನಬಲ ತೋರಿಸಿ, ಮಕ್ಕಳಿಗೆ ಸಂಸ್ಕಾರ, ಸಂಸ್ಕøತಿ ಕಲಿಸಲು ಇದೊಂದು ಮಾದರಿಯಾಯಿತು ಎಂದರೆ ತಪ್ಪಾಗಲಾರದು. ಇಂತಹದರಲ್ಲಿ ಘಾಟ್ಕೋಪರ್ ಅಸಲ್ಫಾ ಇಲ್ಲಿನ ಶ್ರೀ ಗೀತಾಂಬಿಕಾ ಮಂದಿರ ಊರ, ಪರವೂರ ಕ್ಷೇತ್ರದಲ್ಲಿ ಒಂದು ಅತಿ ದೊಡ್ಡ, ಚಿರಪರಿತವಾದುದು.

ಸುಮಾರು 65 ವರ್ಷ ಇತಿಹಾಸವುಳ್ಳ ಶ್ರೀ ಗೀತಾಂಬಿಕಾ ಮಂದಿರ 1963ರಲ್ಲಿ ಶ್ರೀ ನಿತ್ಯಾನಂದ ಭಜನಾ ಮಂಡಳಿ ಎಂದು ಸ್ಥಾಪನೆ ಗೊಂಡರೆ ಒಂದೆರಡು ವರ್ಷದಲ್ಲಿ ಸ್ಥಾಪಕ ಸದಸ್ಯರಿಗೆ ಒಂದು ದೇವಾಸ್ಥಾನವನ್ನು ನಿರ್ಮಿಸುವ ಚಿಂತನೆ ಮಾಡಿತು. ಜನರಿಗೆ ದೇವರ ಬಗ್ಗೆ ಆಸಕ್ತಿ ಹುಟ್ಟಿಸುವಂತಹ ಭಜನೆ, ಪೂಜೆ, ಕೀರ್ತನೆ ಇತ್ಯಾದಿ ದೇವತಾ ಕಾರ್ಯವನ್ನು ನಡೆಸಲು ಅನಿವಾರ್ಯ ಎಂದು ಯಾಚಿಸಿ, ಘಾಟ್ಕೋಪರ್‍ನಲ್ಲಿ ಭಟವಾಡಿಯಿಂದ ಶ್ರೀ ದೇವಿಯ ಮೂರ್ತಿ ತಂದು ಸ್ಥಾಪಿಸಿ ಶ್ರೀ ನಿತ್ಯಾನಂದ ಭಗವತಿ ಮಂದಿರ ಎಂದು ನಾಮಕರಣಗೊಂಡಿತು. ಸ್ಥಾಪಕರಲ್ಲಿ ಮುಖ್ಯವಾಗಿ ನಾರಾಯಣ ಸನಿಲ್, ರಾಮಚಂದ್ರ ಪೂಜಾರಿ, ಮಹಾಬಲ ಪೂಜಾರಿ, ನಾರಾಯಣ ಕಾರ್ಕಳ್, ಭೋಜ ಶೆಟ್ಟಿ, ಶ್ಯಾಮ ಬಳ್ಳಾಲ್, ಕುಪ್ಪ ಮೂಲ್ಯ, ಸೇಸು ಪೂಜಾರಿ, ಬಾಲಕೃಷ್ಣ ಶೆಟ್ಟಿ, ಪದ್ಮನಾಭ ಕೋಟ್ಯಾನ್, ಎಸ್.ಎಸ್ ತೋಳಾರ್, ಪಿ.ಎಂ ಕುಲಕರ್ಣಿ ಹಾಗೂ ಸಂಜೀವ.ಡಿ ಕಾಂಚನ್ ಮತ್ತಿತರರು ಇದ್ದರು. ಆ ಪಯ್ಕಿ ರಾಮಚಂದ್ರ ಪೂಜಾರಿ ಅವರ ಕನಸಿನಲ್ಲಿ ಆಗಾಗ ಬಾಲಿಕೆ ಓರ್ವಳು ಕೈಯಲ್ಲಿ ಪುಸ್ತಕ ಹಿಡಿದು ಅಭಯವೀಯುವ ದೃಷ್ಟಾಂತವಾಗುತ್ತಿತ್ತು.

ಆ ಬಾಲಿಕೆಯ ಕೈಯಲ್ಲಿರುವುದು ಭಗವದ್ಗೀತಾ ಎಂದು ಕಲ್ಪಿಸಿ ದೇವಿಗೆ ಗೀತಾ-ಅಂಬಿಕಾ ಅಂದರೆ ಶ್ರೀ ಗೀತಾಂಬಿಕಾ ಮಂದಿರವೆಂದು ಪುನ:ರ್‍ನಾಮಕರಣ ಮಾಡಿದರು. ಅಂದಿನಿಂದ ಶ್ರೀ ಗೀತಾಂಬಿಕಾ ಮಂದಿರ ಭಕ್ತಾದಿಗಳಿಂದ ಭಜನೆ, ಕೀರ್ತನೆ, ಪೂಜೆ, ಪುರಸ್ಕಾರಗಳನ್ನು ಸ್ವೀಕರಿಸಿ ಭಕ್ತಾದಿಗಳ ಮನದ ಇತ್ಯರ್ಥಗಳು ನೆರವೇರಿಸಿ ಅಸಲ್ಪಾ ಶ್ರೀಕ್ಷೇತ್ರದ ಗ್ರಾಮದೇವತೆಯಾಗಿ ಮೆರೆಯುತ್ತಿದ್ದಾಳೆ.

1965ರಲ್ಲಿ ಮಂದಿರದಲ್ಲಿ ಮೂಳೂರು ಸಂಜೀವ ಕಾಂಚನ ಹಾಗೂ ಇತರರ ಸಹಕರದಿಂದ ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿ ಮಂದಿರದ ಇನ್ನೊಂದಂಗವಾಗಿ ಸ್ಥಾಪನೆಗೊಂಡಿತ್ತು. ಮೊದಲಿಗೆ ಯಕ್ಷಗಾನ ಮಂಡಳಿಗೆ ಬೇಕಾದ ಸಮಗ್ರ ವೇಷ-ಭೋಷಣಗಳನ್ನು ಅಂದಿನ ಅಧ್ಯಕ್ಷರಾದ ಮರೋಳ್ ದಾಮೋದರ್ ಶೆಟ್ಟಿ ಅವರು ಒದಗಿಸಿದರು. ಮಂಡಳಿಯು ಮುಂಬಯಿಯ ಹಲವು ಭಾಗಗಳಲ್ಲಿ ಯಕ್ಷಗಾನ ಪ್ರದರ್ಶಿಸಿ ಶ್ರೀ ಗೀತಾಂಬಿಕಾ ಮಂದಿರದ ಹೆಸರು ಎಲ್ಲಾಕಡೆ ಪಸರಿಸುವಲ್ಲಿ ಮಾದರಿಯಾಯಿತು ಎಂದರೆ ತಪ್ಪಾಗಲಾರದು.

ದಿನದಿಂದ ದಿನಕ್ಕೆ ಆಗಮಿಸುವ ಭಕ್ತಾದಿಗರ ಸಂಖ್ಯೆ ವೃದ್ಧಿಗೊಂಡು ದೇವಸ್ಥಾನದ ಜಾಗ ಕಡಿಮೆ ಎಂದು ಮನದಟ್ಟದಾಗ ಸಮಿತಿಯು ಹಲವೊಂದು ಸಭೆಯನ್ನು ಕರೆದು ದೇವಸ್ಥಾನದ ಜೀರ್ಣೋಧ್ಧಾರದ ಬಗ್ಗೆ ಚಿಂತನ ಮಂತನ ನಡೆಸಿದರು. ಕೊನೆಗೆ 1998ರಲ್ಲಿ ಜೀರ್ಣೋದ್ಧಾರ ಸಮಿತಿಯೊಂದನ್ನು ರಚಿಸಲಾಯಿತು. ಡಿ.ಕೆ. ಪೂಜಾರಿ ಅವರ ನೇತೃತ್ವದಲ್ಲಿ ಸುಮಾರು 25 ಲಕ್ಷಕ್ಕಿಂತ ಅಧಿಕ ವೆಚ್ಚದ ಕರಸು ಯೋಜನೆಯೊಂದಿಗೆ ಮಂದಿರ ಆಗಿನ ಸೇವಾ ಸಮಿತಿಯ ಸದಸ್ಯರನ್ನೊಡಗೂಡಿ ಜೀರ್ಣೋದ್ಧಾರದ ಕಾರ್ಯವೈಖರಿ ಪ್ರಾರಂಭವಾಯಿತು. ಮುಂಬಯಿಯ ಗಣ್ಯ ವ್ಯಕ್ತಿಗಳು ಹಾಗೂ ಇತರ ಭಕ್ತಾಧಿಗಳ ದೇಣಿಗೆಯೊಂದಿಗೆ ಮಂದಿರದ ನವೀಕರಣ ಪ್ರಾರಂಭವಾಯಿತು. ಮಂದಿರದ ಒಳಗೆ `ಗಣಪತಿ', ಶ್ರೀ ದೇವಿ, ಈಶ್ವರ, ಆಂಜನೇಯ ನಾಗದೇವರು ಹಾಗೂ ದೇವಸ್ಥಾನದ ಬಲಬದಿಯಲ್ಲಿ ರಕ್ತೇಶ್ವರಿ ಹಾಗೂ ಭದ್ರಕಾಳಿ ಇವರ ಬಿಂಬಗಳನ್ನು ಊರಿನ ಶ್ರೇಷ್ಠ ಶಿಲ್ಪಿ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಶ್ಯಾಮರಾಯ ಆಚಾರ್ಯ ಅವರಿಂದ ನಿರ್ಮಿಸಿ ಮುಂಬಯಿಗೆ ತರಿಸಲಾಯಿತು. ಧರ್ಮಸ್ಥಳದ ಸೀತಾರಾಮ ಕೆದ್ಲಾಯ ರಚಿತ ಮಂದಿರದ ದ್ವಾರ ಬಾಗಿಲನ್ನು ಇತರ ಶಿಲ್ಪಿಗಳು ಹಾಗೂ ಅಶೋಕ್ ಕೊಡ್ಯಡ್ಕ ತಯಾರಿಸಿರುವರು. ನೇತೃತ್ವದಲ್ಲಿ ಗುರುವಾರ ತಾ. 28.05.1998ರಂದು ವಿಜೃಂಭಣೆಯಿಂದ ಬ್ರಹ್ಮಕಲತೋತ್ಸವ ನರೆವೇರಿತು. ತದನಂತರ ಡಿ.ಕೆ ಪೂಜಾರಿ ಅವರನ್ನು ಮಂದಿರದ ಅಧ್ಯಕ್ಷರನ್ನಾಗಿ ಸರ್ಮಾನುಮತದಿಂದ ಆರಿಸಲಾಯಿತು.

ಶ್ರೀ ಗೀತಾಂಬಿಕೆಯ ಸಾನಿಧ್ಯದಲ್ಲಿ ಪ್ರತಿದಿನ ತ್ರಿಕಾಲ ಪೂಜೆ ಬ್ರಾಹ್ಮಣೊತ್ತರಿಂದ ನಡೆದು ಬಂದಿದೆ. ಪ್ರತಿ ಶುಕ್ರವಾರ ಸಾಯಂಕಾಲ ಭಜನೆ, ಮಹಾಪೂಜೆ, ಹೂವಿನ ಪೂಜೆ ಹಾಗೂ ದೇವಿದರ್ಶನ ನಡೆಯುತ್ತಿದೆ. ಮಂಗಳವಾರ ಶ್ರೀ ನಾಗ ದೇವರಿಗೆ ತನು ತಂಬಿಲ ಪೂಜೆ ಬೆಳಗ್ಗಿನ ಸಮಯದಲ್ಲಿ ನೆರವೇರುತ್ತಿದೆ. ಭಕ್ತಾದಿಗಳ ಅನುಕೂಲತೆ ಪ್ರಕಾರ ದೇವಸ್ಥಾನದಲ್ಲಿ ಗಣಹೋಮ, ಸತ್ಯ ನಾರಾಯಣ ಕಥೆ, ನವಗ್ರಹ ಶಾಂತಿ ಹಾಗೂ ಇತರ ಪೂಜೆಗಳು ನಡೆಯುತ್ತಿದ್ದು ವಿಶೇಷವಾಗಿ ಬ್ರಹ್ಮಕಲಶೊತ್ಸವದ ವರ್ಷಾವಧಿ ಪೂಜೆ, ನಾಗರ ಪಂಚಮಿಯಂದು ಮುಂಜಾನೆ ನಾಗಪೂಜೆ ಹಾಗೂ ಸಂದ್ಯಾಕಾಲದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ, ಗಣೇಶೋತ್ಸವ, ಸಾಮೂಹಿಕ ಸತ್ಯನಾರಾಯಣ ಪೂಜೆ, ಶ್ರೀ ಕೃಷ್ಣಾಜನ್ಮಾಷ್ಟಮಿ ಹಾಗೂ ದಸರಾ ಮಹೋತ್ಸವದ ಅಂಗವಾಗಿ ಮುರ್ದಿಜ ವಾರ್ಷಿಕ ಪೂಜೆಯನ್ನು ನವರಾತ್ರಿ ಉತ್ಸವ ಆಚರಿಸಲಾಗುತ್ತಿದೆ. ಒಂಬತ್ತು ದಿನದ ಈ ನವರಾತ್ರಿ ಪೂಜೆಗೆ ಭಕ್ತಾಭಿಮಾನಿಗಳು ಸಾವಿರಾರು ಮಂದಿ ಆಗಮಿಸಿ ಶ್ರೀ ದೇವರ ಸಿರಿಮುಡಿ-ಗಂಧ ಪ್ರಸಾದ ಸ್ವೀಕರಿಸುತ್ತಾರೆ. ಕೆಲವು ವರ್ಷ ಈ ಕ್ಷೇತ್ರದಲ್ಲಿ ಅಯ್ಯಪ್ಪ ಮಾಲೆಧಾರಣೆ ಮಾಡಿ ಒಂದು ಮಂಡಳ ಮಂದಿರವನ್ನೇ ಶಿಬಿರವನ್ನಾಗಿ ಮಾಡಿ ಶಬರಿಮಾಲೆಗೆ ತೆರಳಿದ್ದಾರೆ. ಕೆಲವು ವರ್ಷ ಆಹೋ ರಾತ್ರಿ ಭಜನೆಯನ್ನು ಈ ಮಂದಿರದಲ್ಲಿ ಆಚರಿಸಲಾಯಿತು. 

ನಂತರ ದೇವಸ್ಥಾನದ ರಂಗ ಮಂಟಪ ಕ್ಷಿಣಾವಸ್ಥೆಯಲ್ಲಿ ಇದ್ದದ್ದು ಕಂಡು ಮಂದಿರದ ಸೇವಾ ಸಮಿತಿ ಸದಸ್ಯರು ಆದರೆ ಜೀರ್ಣೋದ್ಧಾರದ ಬಗ್ಗೆ ಹಲವು ಸಭೆಯನ್ನು ಕರೆಸಿದರು ಈ ಯೋಜನೆಗೆ ತಗಲುವ ವೆಚ್ಚವನ್ನು ಭರಿಸಲು ಹಗೂ ಸಮರ್ಥವ್ಯಕ್ತಿಗಳ ಅಗತ್ಯವಿದ್ದುದರಿಂದ ಪ್ರತ್ಯೇಕ ಜೀರ್ಣೊದ್ಧಾರ ಸಮಿತಿ ರಚಿಸಲಾಯಿತು. ಪ್ರಾರಂಭದಲ್ಲಿ ಕೆಲಸವು ತೀವ್ರಗತಿಯಿಂದ ಪ್ರಾರಂಭವಾದರೂ ಮಧ್ಯದಲ್ಲಿ ಆಥಿರ್üಕ ಮುಗ್ಗಟ್ಟಿನಿಂದ ಕೆಲಸ ನಿಂತು ಹೋಯಿತು. ಈ ಸಂದರ್ಭದಲ್ಲಿ ಸಂಕಪ್ಪ ಭಂಡಾರಿ ಅವರು ತನ್ನ ವೈಯಕ್ತಿಕ ದೇಣಿಗೆ ಸಂಗ್ರಹಿಸಿ ಇತರ ಸದಸ್ಯರೂ ಇನ್ನೊಮ್ಮೆ ದೇಣಿಗೆ ಸಂಗ್ರಹಿಸಲು ಪ್ರಾರಂಭಿಸಿದರು. ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿ ಸುಮಾರು 1.50 ಲಕ್ಷ ರೂಪಾಯಿ ನೀಡಿದರು. ಅಂತೆಯೇ ಅತಿರಥ ಮಹಾರಥರ ಉಪಸ್ಥಿತಿಯಲ್ಲಿ ಕ್ಷೇತ್ರದ ಶಾಸಕ ರಾಮಕದಂ ಮತ್ತು ಕ್ಷೇತ್ರ ನಗರ ಸೇವಕಿ ಅಶ್ವಿನಿ ಭರತ್ ಮಕೆ, ಭಿವಂಡಿಯ ನಗರ ಸೇವಕ ಸಂತೊಷ್ ಶೆಟ್ಟಿ, ಹಾಗೂ ಉದ್ಯಮಿ ಪಾಂಡುರಂಗ ಶೆಟ್ಟಿಯವರ ಮುಖೀನ ರಂಗ ಮಂಟಪದ ಉದ್ಘಾಟನೆ ಸಮಿತಿ ಧಾರ್ಮಿಕ ಸಭೆಯಲ್ಲಿ ಭಂಟರ ಸಂಘದ ಅಧ್ಯಕ್ಷರಾದ ಶಂಕರ್ ಶೆಟ್ಟಿ, ತುಳುಕೂಟದ ರಾಷ್ಟ್ರೀಯ ಅಧ್ಯಕ್ಷರಾದ ದೇವಾಡಿಗ, ಉದ್ಯಮಿ ಕರುಣಕರ ಶೆಟ್ಟಿ, ಅಧ್ಯ್ಕಷರಾದ ಡಿ.ಕೆ ಪೂಜಾರಿ ಹಾಗೂ ಹಿರಿಯ ಸದಸ್ಯ ಸಂಕಪ್ಪ ಭಂಡಾರಿ ಉಪಸ್ಥಿತರಿದ್ದರು.

ಮುಂದೆ ಅಧ್ಯಕ್ಷ ಡಿ.ಕೆ ಪೂಜಾರಿ ಅವರು ತಮ್ಮ ಅನಾರೋಗ್ಯದಿಂದ ತನ್ನ ಸ್ಥಾನವನ್ನು ತೆರವು ಮಾಡಿದಾಗ ಉಪಾಧ್ಯಕ್ಷರಾದ ಜಯರಾಮ್ ಜಿ.ರೈ ಅವರು ಆ ಸ್ಥಾನವನ್ನು ಪಡೆದುಕೊಂಡರು. ದೇವಸ್ಥಾನದ ಸುವರ್ಣ ಮಹೋತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಯಿತು. ಸುವರ್ಣ ಮಹೋತ್ಸವದ ವೇಳೆ ನಡೆದ ಬಹುಜನರ ಗಮನ ಸೆಳೆಯಿತು. ಅಸಲ್ಪಾ, ಸಾಕಿನಾಕ, ಒಳಗೊಂಡ ಈ ಸುಧೀತ್ರ ಬಲಿ ಎಲ್ಲರನ್ನೂ ವಿಸ್ಮಯ ಗೊಳಿಸಿದೆ ಎಂದರೆ ಅತಿಶೋಕ್ತಿ ಆಗಲಾರದು.

ಸದ್ಯ ಮಂದಿರದ ಅಧ್ಯಕ್ಷಸ್ಥಾನವನ್ನು ಊರಿನ ಹಾಗೂ ಮುಂಬಯಿಯ ಚಿರಪರಿತ ಕಡಂದಲೆ ಸುರೇಶ್ ಭಂಡಾರಿ ಅಲಂಕರಿಸಿದರೆ, ದಿವ್ಯಸಾಗರ್ ಸಮೂಹದ ನಿದೇರ್ಶಕ ಮುದ್ರಾಡಿ ದಿವಾಕರ್ ಶೆಟ್ಟಿ ಅವರು ಗೌರವಾಧ್ಯಕ್ಷರಾಗಿ, ಧರ್ಮಪಾಲ್ ಎಸ್.ಕೊಟ್ಯಾನ್ (ಗೌ| ಪ್ರ| ಕಾರ್ಯದರ್ಶಿ), ವಿಕ್ರಮ್ ಸುವರ್ಣ (ಗೌ| ಕೋಶಾಧಿಕಾರಿ0, ಸಿಎ| ಬಿಪಿನ್ ಶೆಟ್ಟಿ (ಅಂತರಿಕ ಲೆಕ್ಕಪತ್ರ ಪರಿಶೋಧಕ), ಸುರೇಶ್ ಕೋಟ್ಯಾನ್ (ಕಾರ್ಯಾಧ್ಯಕ್ಷ), ಸತೀಶ್ ಶೆಟ್ಟಿ ಮತ್ತು ಇರುವೈಲು ದಾಮೋಧರ್ ಶೆಟ್ಟಿ (ಉಪಾಧ್ಯಕ್ಷ), ಜಯರಾಮ್ ರೈ (ಉಪ ಗೌರವಾಧ್ಯಕ್ಷ), ವಿಠಲ್ ಶೆಟ್ಟಿ, ಬೆಳುವಾಯಿ ಸಂಜೀವ ಪೂಜಾರಿ (ಉಪಕಾರ್ಯಾಧ್ಯಕ್ಷರು) ಹಾಗೂ ನಿತಿನ್ ಜಾಧವ್ (ಉಪಕೋಶಾಧಿಕಾರಿ) ಆಗಿ ಶ್ರಮಿಸುತ್ತಿದ್ದಾರೆ. ಕರ್ಮಾರು ಮೋಹನ್ ರೈ, ಪ್ರಕಾಶ್ ಶೆಟ್ಟಿ ಸುರತ್ಕಲ್, ಕುಕ್ಕುಂದೂರು ಕರುಣಾಕರ ಶೆಟ್ಟಿ, ಪೆÇಲ್ಯ ಲಕ್ಷ್ಮಿನಾರಾಯಣ ಶೆಟ್ಟಿ. ಉದ್ಯಮಿ ಮಾಧವ್ ಶೆಟ್ಟಿ ಆಡಳಿತ ಸಮಿತಿಗೆ ಮಾರ್ಗದರ್ಶಕರಾಗಿ ಸಹಕರಿಸುತ್ತಿದ್ದಾರೆ. ಅವ್ಯಾಹತವಾಗಿ ದೈನಂದಿನ ತ್ರಿಕಾಲ ಪೂಜೆಯನ್ನು ಮಂದಿರದ ಪ್ರಧಾನ ಅರ್ಚಕ ರಘುಪತಿ ಭಟ್ ನೆರವೇರಿಸುತ್ತಿದ್ದಾರೆ.

ಸದ್ರಿ ಮಂದಿರದ ಸಮಿತಿ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷರ ದಿಟ್ಟ ಮುಂದಾಳತ್ವದಲ್ಲಿ ಮಂದಿರದ ಸಕಲ ಪೂಜಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿದೆ. ನವರಾತ್ರಿಯ 9 ದಿನದ ಪೂಜೆಯಲ್ಲಿ ಭಾಗವಹಿಸುವವರಿಗೆ ಪ್ರತಿದಿನ ಅನ್ನದಾನ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ ವಾರ್ಷಿಕ ವಿಶೇಷ ಪೂಜೆಯ ನಿಮಿತ್ತ ಆಯಾಯ ಪೂಜೆ ಮುಗಿದ ನಂತರ ಅನ್ನ ಸಂತರ್ಪಣೆಯ ವ್ಯವಸ್ಥೆ ಇದೆ. ಹೊಸದಾಗಿ ನಿರ್ಮಿತಗೊಂಡ ರಂಗಮಂಟಪದಲ್ಲಿ ಮದುವೆ, ನಿಶ್ಚಿತಾರ್ಥ ಸಭೆ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ರಿಯಾಯಿತಿ ದರ ನೀಡಲಾಗುತ್ತಿದೆ.

ಮಂದಿರದ ಭವ್ಯ ರಂಗಮಂಟಪದಲ್ಲಿ ಊರಿನ ಸುಪ್ರಸಿದ್ಧ ಮೇಳಗಳ ಯಕ್ಷಗಾನ ಬಯಲಾಟ ಪ್ರದರ್ಶಿಸಲಾಗಿದೆ. ಊರಿನ ಹಲವು ನಾಟಕ ಕಲಾ ಮಂಡಳಿಯವರು ಈ ಕ್ಷೇತ್ರದಲ್ಲಿ ನಾಟಕದ ಪ್ರಯೋಗವನ್ನು ಪ್ರದರ್ಶಿಸಿದ್ದಾರೆ. ಇದಕ್ಕೆ ಮುಖ್ಯವಾಗಿ ಪ್ರಕಾಶ್ ಶೆಟ್ಟಿ ಸುರತ್ಕಲ್ ಹಾಗೂ ಕರ್ಮಾರು ಮೋಹನ್ ರೈ ಇವರ ಸಹಕಾರ ಪ್ರಶಂಸನೀಯ. ಊರಿನ ಯಕ್ಷಗಾನ ತಾಳಮದ್ದಳೆಯ ಕಲಾಕಾರರು ಆಜೆಕಾರು ಬಾಲಕೃಷ್ಣ ಶೆಟ್ಟಿಯವರ ಮುಂದಾಳತ್ವದಲ್ಲಿ ನಮ್ಮಿ ಕ್ಷೇತ್ರದಲ್ಲಿ ತಾಳಮದ್ದಳೆ ಪ್ರದರ್ಶನವಾಗಿದೆ.

ಮಂದಿರ ಸಮಿತಿ ಸಂಚಾಲಿತ ಶ್ರೀ ಗೀತಾಂಬಿಕಾ ಕೃಪಾ ಪೆÇೀಷಿತ ಯಕ್ಷಗಾನ ಮಂಡಳಿ ಪ್ರತಿಭಾ ಕಲಾವಿದರ ಸಮಾವೇಶ ಗೊಂಡಿದ್ದು ಪ್ರಸಿದ್ಧ ಭಾಗವತ ಪೆÇಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ನಿದೇರ್ಶನದಲ್ಲಿ ನಗರದ ವಿವಿಧ ಭಾಗದಲ್ಲಿ ಯಶಸ್ವಿ ಪ್ರದರ್ಶನಗಳನ್ನು ಪ್ರದರ್ಶಿಸುತ್ತಿದೆ. ವಿಶೇಷವಾಗಿ ಹಲವು ಪ್ರದರ್ಶನಗಳಲ್ಲಿ ಊರಿನ ಪ್ರಮುಖ ಕಲಾವಿದರು ಮುಂಬಯಿಗೆ ಬಂದು ಯಕ್ಷಗಾನದಲ್ಲಿ ಭಾಗವಹಿಸುತ್ತಿರುವುದು ಉಲ್ಲೇಖನೀಯ.

ಸದ್ಯ ಯಕ್ಷಗಾನ ಮಂಡಳಿಯ ಸ್ಥಾಪಕಾಧ್ಯಕ್ಷರಾಗಿ ಮೂಳೂರು ಸಂಜೀವ ಕಾಂಚನ್, ಗೌರವಾಧ್ಯಕ್ಷರಾಗಿ ಪೆÇಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಕರ್ನೂರು ಮೋಹನ್ ರೈ (ಅಧ್ಯಕ್ಷ), ಇರುವೈಲು ದಾಮೋಧರ್ ಶೆಟ್ಟಿ (ಕಾರ್ಯಾಧ್ಯಕ್ಷ) ಅಜೆಕಾರು ಬಾಲಕೃಷ್ಣ ಶೆಟ್ಟಿ (ಕಾರ್ಯದರ್ಶಿ), ಸುನಿಲ್ ಅಮೀನ್ (ಸಂಚಾಲಕ) ಆಗಿ ದುಡಿಯುತ್ತಿದ್ದಾರೆ. ಪ್ರಭಾಕರ್ ಕುಂದರ್ ಹಾಗೂ ಗೋವಿಂದ ಸಫಲಿಗ ವ್ಯವಸ್ಥಾಪಕರಾಗಿ ಹಾಗೂ ಮಾನಾಡಿ ಸದಾನಂದ ಶೆಟ್ಟಿ ಮತ್ತು ಬೋಜ ಬಂಗೇರ, ಕೆ.ಕೆ ದೇವಾಡಿಗ ಇವರು ಸಲಹೆಗಾರರಾಗಿದ್ದಾರೆ. ಅಮೋಘ ಯಕ್ಷಗಾನ ಪ್ರದರ್ಶನವನ್ನು ನೀಡುವ ಈ ಯಕ್ಷಗಾನ ಮಂಡಳಿ ಮುಂಬಯಿ ಅಲ್ಲದೆ ಪೂನಾ, ಬರೊಡ ಹಾಗೂ ಇತರ ಹೊರ ವಲಯದಲ್ಲಿ ಯಕ್ಷಗಾನ ಪ್ರದರ್ಶಿಸಿ ಶ್ರೀ ಗೀತಾಂಬಿಕಾ ಮಂದಿರದ ಹೆಸರನ್ನು ಎಲ್ಲಡೆ ಪರಿಚಯಿಸಿದೆ ಎಂದರೆ ತಪ್ಪಾಗಲಾರದು ಮಂಡಳಿಯ ಗೆಜ್ಜೆ ಕಟ್ಟುವ ಹಾಗೂ ಗೆಜ್ಜೆ ತೆಗೆಯುವ ರೂಢಿಯನ್ನು ಕ್ರಮವಾಗಿ ನವರಾತ್ರಿ ಹಾಗೂ ಬ್ರಹ್ಮಕಲತೋತ್ಸವ ಸಮಯ ಯಕ್ಷಗನದ ಪ್ರಾರಂಭ ಹಾಗೂ ಕೊನೆಗೆ ಮುದ್ರಾಡಿ ದಿವಕರ್ ಶೆಟ್ಟಿ ಹಾಗೂ ಗಂಗಾಧರ್ ಪಯ್ಯಡೆ ಅವರ ಪ್ರಾಯೋಜಕತ್ವದಲ್ಲಿ ಹಮ್ಮಿಕೊಳ್ಳಲಾಗುತ್ತದೆ.

ಮಂದಿರದಲ್ಲಿ ನೃತ್ಯ, ಯೋಗದ ಶಿಬಿರಗಳು ನಡೆಯುತ್ತಿದ್ದು ಬಹುಸಂಖ್ಯಾ ವಿದ್ಯಾರ್ಥಿಳು ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ನೇತ್ರ ಚಿಕಿತ್ಸೆಯ, ರಕ್ತದಾನದ ಶಿಬಿರಗಳು ಕೂಡಾ ಆಗಾಗ ಇತರ ಸಂಘ, ಸಂಸ್ಥೆಗಳ ಪ್ರಾಯೋಜಿಕತ್ವದಲ್ಲಿ ವಿಶುಲ್ಕವಾಗಿ ನಡೆಯಿತ್ತಿದೆ.

ಮಂದಿರದ ಆಗುಹೋಗುವ ಕಾರ್ಯಕಲಾಪದಲ್ಲಿ ಇನ್ನಷ್ಟು ತೀವೃತೆಯನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಅಧ್ಯಕ್ಷರ ನಿರ್ದೇಶನದಂತೆ ಭಜನಾ ಶಿಬಿರವನ್ನು ಪ್ರಾರಂಭಿಸಲಾಗಿದೆ. ಪ್ರಖ್ಯಾತ ಭಜನಾಕಾರರಾದ ನಿತ್ಯಾನಂದ್ ಶೆಟ್ಟಿ ಗುರುಗಳಾಗಿ ಹಾಗೂ ನಾಗೇಶ್ ಸುವರ್ಣ ಅವರು ನಿದೇರ್ಶಕರಾಗಿ ನಿಯುಕ್ತಿಗೊಂಡಿದ್ದಾರೆ. ವೃದ್ಧರೂ ಕೂಡ ಈ ಭಜನಾ ಶಿಬಿರದಲ್ಲಿ ಬುಧವಾರ ಹಾಗೂ ಶುಕ್ರವಾರ ಸಾಯಂಕಲ ಭಾಗವಹಿಸಬಹುದು.

ಪ್ರತೀ ಶುಕ್ರವಾರದ ಭಜನೆಯನ್ನು ಮಹಾನೀಯರ ಪ್ರಾಯೋಜಕತ್ವದಲ್ಲಿ ಇದೇ ವರ್ಷ ನಡೆಸಬಹುದು. ಇನ್ನು ಪ್ರತೀ ತಿಂಗಳ ಕೊನೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ರಂಗಪೂಜೆ ಹಾಗೂ ಶನಿಪೂಜೆ ಇಡಬೇಕೆಂದು ಸಮಿತಿ ಸಭೆಯಲ್ಲಿ ನಿರ್ಧರಿಸಿದ್ದು. ಆಸಕ್ತ ಮಹಾನೀಯರು ಈ ನಿಟ್ಟನಲ್ಲಿ ಮಂದಿರಕ್ಕೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ. ಪ್ರತೀ ಶುಕ್ರವಾರ ಪೂಜೆಯ ನಂತರ ಅನ್ನಸಂತರ್ಪಣೆ ನೀಡುವರೇ ಅದಕ್ಕೂ ಭಕ್ತಾದಿಗಳು ತಮ್ಮ ಹೆಸರನ್ನು ಮುಂಗಡವಾಗಿ ಸಮಿತಿಗೆ ತಿಳಿಸಬಹುದು.

ಮಂದಿರದಲ್ಲಿ ಶಾಶ್ವತಪೂಜೆಯು ನಡೆಯುತ್ತಿದ್ದು ಆಸಕ್ತಿ ಭಕ್ತಾದಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡರೆ ಆ ಪೂಜೆಯನ್ನು ಅವರು ಹೇಳಿದ ದಿನಾಂಕದಲ್ಲಿ ಮಾಡಲಾಗುತ್ತಿದೆ. ಆಯಾ ದಿನದ ಪೂಜೆಯನ್ನು ಬರೆದವರು ಸಾಯಂಕಾಲ ಅಥವಾ ಬೆಳಿಗ್ಗೆ ಬಂದು ಪ್ರಸಾದ ಪಡಕೊಳ್ಳಬಹುದು ಅಥವಾ ಬರಲು ಅನಾನುಕೂಲವಿದ್ದ ಪಕ್ಷದಲ್ಲಿ ಗಂಧ ಪ್ರಸಾದವನ್ನು ಭಕ್ತರ ವಿಳಾಸಕ್ಕೆ ಕಳುಹಿಸÀಲಾಗುವುದು ಎಂದು ದೇವಸ್ಥಾನ ಮಂಡಳಿ ತಿಳಿಸಿದೆ.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal