About Us       Contact

ಮುಂಬಯಿ, ಜೂ.03, 2018 : ಜಿ.ಎಸ್.ಬಿ ಮಂಡಲ ಡೊಂಬಿವಲಿ ಸಂಸ್ಥೆಯು ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮ ಇಂದಿಲ್ಲಿ ಭಾನುವಾರ ಆಯೋಜಿಸಿತ್ತು.

ಅಧಿಕ ಮಾಸದ ಪ್ರಯುಕ್ತ ಸಮಾಜ ಕಲ್ಯಾಣಕ್ಕಾಗಿ ಲಕ್ಷ ತುಳಸಿ ಆರ್ಚನೆ ಹಮ್ಮಿಕೊಳ್ಳಲಾಗಿದ್ದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜನೆ ಮತ್ತು ಪಂಚಾಂಬ್ರತ ಅಭಿಷೇಕ ನಡೆಯಿತು. ನಂತರ ಶ್ರೀ ರಾಮಚಂದ್ರ ದೇವರ ಸಾನಿಧ್ಯ ದಲ್ಲಿ ಸಮಾಜ ಭಾಂದವರು ಶ್ರೀ ವಿಷ್ಣು ಸಹಸ್ರ ನಾಮ, ಶ್ರೀ ರಾಮ ಸಹಸ್ರ ನಾಮ ಲಕ್ಷ ತುಳಸಿ ಅರ್ಚನೆ ನಡೆಸಿದರು.

ವೇದಮೂರ್ತಿ ಮೋಹನದಾಸ್ ಭಟ್ ಮಾರ್ಗದರ್ಶನ ಹಾಗೂ ವೇದಮೂರ್ತಿ ರಾಘವೇಂದ್ರ ಭಟ್ ಕಾರ್ಕಳ ಇವರ ನೇತೃತ್ವದಲ್ಲಿ ಕಾರ್ಯಕ್ರಮ ಸಂಗೋಪಸಾಂಗವಾಗಿ ನಡೆಯಿತು.

ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷ ಮನೋಹರ್ ಪೈ, ಕಾರ್ಯಕಾರಿ ಸಮಿತಿಸದಸ್ಯರು, ಡೊಂಬಿವಲಿ ಮತ್ತು ಕಲ್ಯಾಣ್ ನ ಸಮಾಜ ಭಾಂದವರು ಉಪಸ್ಥಿತರಿದ್ದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal