About Us       Contact

ಮುಂಬಯಿ, ಮೇ. 18: ಕಾಸರಗೋಡು ಉಪ್ಪಳ ಕೊಂಡೆವೂರು ಅಲ್ಲಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ `ಅತಿರಾತ್ರ ಸೋಮಯಾಗ'ದ ಪೂರ್ವಭಾವಿಯಾಗಿ `ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ಅಭಿಯಾನ'ದ ಉದ್ಘಾಟನಾ ಕಾರ್ಯಕ್ರಮ ದಿನಾಂಕ 20.05.2018 ಆದಿತ್ಯವಾರ ಅಪರಾಹ್ನ 3.00 ಗಂಟೆಯಿಂದ ಸೂರ್ಯಾಸ್ತದವರೆಗೆ `ಉಪ್ಪಳ ಶಾರದಾನಗರದ ಕಡಲಕಿನಾರೆ' ಇಲ್ಲಿ ನಡೆಯಲಿದೆ. ಅಪರಾಹ್ನ.00 ಗಂಟೆಗೆ ದೀಪಪ್ರಜ್ವಲನೆ, ಭಜನೆ, 3.45ರಿಂದ ಸಾಮೂಹಿಕವಾಗಿ ವಿಷ್ಣುಸಹಸ್ರನಾಮಾವಳಿಯೊಂದಿಗೆ ಅರ್ಚನೆ, 4.30ಕ್ಕೆ ಧಾರ್ಮಿಕ ಸಭೆ, 6.00 ಗಂಟೆಗೆ ಸಾಮೂಹಿಕ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ, ಮಹಾಪೂಜೆ, ಸೂರ್ಯಾಸ್ತ ಸಮಯದಲ್ಲಿ ಸಮುದ್ರಪೂಜೆ ನಡೆಸಿ ಪ್ರಸಾದ ವಿತರಿಸಲಾಗುವುದು.

 

ಧಾರ್ಮಿಕ ಸಭೆಯಲ್ಲಿ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿದ್ದು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಸಭಾಧ್ಯಕ್ಷತೆಯನ್ನು ವಸಂತ ಪೈ ಬದಿಯಡ್ಕ ವಹಿಸಲಿದ್ದಾರೆ. ಕಟೀಲಿನ ಬ್ರಹ್ಮಶ್ರೀ ಅನಂತಪದ್ಮನಾಭ ಅಸ್ರಣ್ಣ ಮತ್ತು ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿಗಳ ದಿವ್ಯಉಪಸ್ಥಿತಿ ಇರಲಿದ್ದು, ಮುಖ್ಯಅತಿಥಿüಗಳಾಗಿ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಅಜಿತ್ ಕುಮಾರ್ ರೈ ಮಾಲಾಡಿ, ಶಂಕರಪ್ರಸಾದ್ ಕುಂಬಳೆ, ಯಶಪಾಲ್ ಸುವರ್ಣ, ಮಾಧವ ಕಾವುಗೋಳಿ ಮತ್ತು ಡಾ| ಆಶಾಜ್ಯೋತಿ ರೈ ಪಾಲ್ಗೊಳ್ಳಲಿದ್ದಾರೆ.

ಮೋನಪ್ಪ ಭಂಡಾರಿ, ಕೋಡಿಬೈಲು ನಾರಾಯಣ ಹೆಗ್ಡೆ, ಕರುಣಾಕರ ಬೆಳ್ಚಪ್ಪಾಡ, ಕುಟ್ಟಿ ಕೃಷ್ಣನ್, ಶಿವರಾಮ್ ಬಂಗೇರ ಹಾಗೂ ಅಶೋಕ್ ಶ್ರೀಯಾನ್ ರವರು ಉಪಸ್ಥಿತರಿರುವರು.

ಉಪ್ಪಳ ಗೇಟಿನಿಂದ ಕಾರ್ಯಕ್ರಮಕ್ಕೆ ವಾಹನ ಸೌಲಭ್ಯ ಕಲ್ಪಿಸಲಾಗಿದ್ದು, ಭಕ್ತಾದಿಗಳು ಈ ಅತ್ಯಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಣ್ಯಭಾಜನರಾಗಬೇಕಾಗಿ ವಿನಂತಿ.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal