About Us       Contact

 


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.08: ಉಡುಪಿ ಜಿಲ್ಲೆಯ ಬಾರ್ಕೂರು ಅಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯು ಇಂದಿಲ್ಲಿ ಮಂಗಳವಾರ ಶ್ರೀ ನಾಗೇಶ್ವರನ ಸನ್ನಿಧಿಯಲ್ಲಿ ಶಾಸ್ತ್ರೋಕ್ತವಾಗಿ ಅಷ್ಟಬಂಧ ಪೂರ್ವಕ ಬ್ರಹ್ಮಕಲಶೋತ್ಸವ ನೆರವೇರಿಸಿತು.

ಪ್ರಾತಃಕಾಲ ಶ್ರೀನಾಗೇಶ್ವರ ದೇವರಿಗೆ ಸಹಸ್ರ ಸೀಯಾಳಾಭಿಷೇಕ, ಶ್ರೀ ನಾಗೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕ ಪ್ರಾರಂಭಿಸಿತು. ವೇ| ಮೂ| ಶ್ರೀ ಕೆ.ವಿಠಲ್ ಭಟ್ ಕಲ್ಮಂಜೆ ಮತ್ತು ಸಹ ಪುರೋಹಿತರು ಬೆಳಿಗ್ಗೆ ಮಿಥುನ ಲಗ್ನ ಶುಭ ಮುಹೂರ್ತದಲ್ಲಿ `ಬ್ರಹ್ಮಕುಂಭಾಭಿಷೇಕ', ನ್ಯಾಸ ಪೂಜೆ, ಶ್ರೀ ನಾಗದೇವರಿಗೆ ಸರ್ಪತ್ರಯ ಮಂತ್ರ ಹೋಮ, ಅಷ್ಠನಾಗಗಾಯತ್ರೀ ಮಂತ್ರ ಹೋಮ,109 ಕಲಶಾಧಿವಾಸ, ಅಧಿವಾಸ ಹೋಮ, ಕಲಶಾಭಿಷೇಕ `ಆಶ್ಲೇಷಾಬಲಿ ಸೇವೆ' ನಡೆಸಿದರು. ಶ್ರೀ ವಾಸುಕಿ ಅನಂತ ಪದ್ಮಾನಾಭ ದೇವಸ್ಥಾನ ಬಡಗುಪೇಟೆ ಇದರ ಬ್ರಹ್ಮಶ್ರೀ ವೇ| ಮೂ| ಶ್ರೀಕಾಂತ ಸಾಮಗ ಇವರ ಪ್ರಧಾನ ನೇತೃತ್ವ ಮತ್ತು ಶ್ರೀ ನಾಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಬಿ.ಆರ್ ವಿಶ್ವನಾಥ ಶಾಸ್ತ್ರಿ, ಸಹ ಅರ್ಚಕ ಹರಿ ಭಟ್ ಅರ್ಚಕತ್ವದಲ್ಲಿ ಅಷ್ಠಬಂಧ ನವೀಕರಣ ಸಹಿತ ಬ್ರಹ್ಮ ಕಲಶಾಭಿಷೇಕ ನೆರವೇರಿಸಿದರು.

ಪೂರ್ವಾಹ್ನ ಮಹಾಪೂಜೆ ಪಲ್ಲಪೂಜೆ, ಮಧ್ಯಾಹ್ನ ಬ್ರಾಹ್ಮಣ, ವಟುಕನ್ನಿಕಾ, ಸುವಾನಿನಿ ಸಂತರ್ಪಣೆ, `ಮಹಾ ಅನ್ನಸಂತರ್ಪಣೆ', ಸಂಜೆ ಶ್ರೀ ನಾಗೇಶ್ವರ ದೇವರಿಗೆ ದೀಪಾರಾಧನೆ, ರಂಗಪೂಜೆ ಅಷ್ಟಾವಿಧಾನ ಸೇವೆ, ರಾತ್ರಿ ಶ್ರೀ ನಾಗದೇವರ ಸನ್ನಿಧಿಯಲ್ಲಿ ಪ್ರಸನ್ನ ಪೂಜಾ, ಸುಧಾಕುಂಭ ಪ್ರತಿಷ್ಠಾ ಪೂರ್ವಕ ಹಾಲಿಟ್ಟು ಸೇವಾ, ಸ್ವಸ್ತಿಗೆ ದೇವರನ್ನು ಕೂಡಿ ಪಲ್ಲಕ್ಕಿಯಲ್ಲಿ ನಾಗಮಂಡಲ ಮಂಟಪ ಪ್ರವೇಶ ನಡೆಸಲಾಯಿತು. ನಂತರ `ನಾಗ ಮಂಡಲ ಕಲ್ಪೋಕ್ತ ಪೂಜೆ' ನೆರವೇರಿಸಿದ ಪುರೋಹಿತರು ನೆರೆದ ಸದ್ಭಕ್ತರಿಗೆ ತೀರ್ಥಪ್ರಸಾದವನ್ನಿತ್ತು ಹರಸಿದರು.

ಬ್ರಹ್ಮಕಲಶೋತ್ಸವ ಪ್ರಯುಕ್ತ ಕಳೆದ ಸೋಮವಾರ ಸಂಜೆ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್‍ನ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್.ಭಂಡಾರಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಸಲ್ಪಟ್ಟಿದ್ದು, ಉದ್ಯಮಿ ಮನೋಹರ ಶೆಟ್ಟಿ ಉಡುಪಿ ಕಾರ್ಯಕ್ರಮ ಉದ್ಘಾಟಿಸಲಿದ್ದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನಗೈದರು.

 

 

 

 

 

 

 

 

 

 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಭಂಡಾರಿ ಮಹಾಮಂಡಲ ಇದರ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಗೌರವ ಅತಿಥಿüಗಳಾಗಿ ಮುಂಬಯಿನ ಉದ್ಯಮಿಗಳಾದ ಸುರೇಶ ಆರ್.ಕಾಂಚನ್, ಪ್ರದೀಪ್‍ಚಂದ್ರ ಕುತ್ಪಾಡಿ, ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾ| ಶೇಖರ್ ಎಸ್.ಭಂಡಾರಿ, ಮಾಜಿ ಅಧ್ಯಕ್ಷ ನ್ಯಾ| ಸುಂದರ ಜಿ.ಭಂಡಾರಿ, ಚಲನಚಿತ್ರ ನಟ ಕಡಂದಲೆ ಸೌರಭ್ ಎಸ್. ಭಂಡಾರಿ ಉಪಸ್ಥಿತರಿದ್ದರು.

ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ ಸಂಪತ್ತಿನ ಸೊಗಡು ಭಾರತೀಯ ಸಂಸ್ಕೃತಿಯಲ್ಲಿದೆ. ಆದ್ದರಿಂದಲೇ ವಿದೇಶಿಗರು ಭಾರತೀಯ ಸಂಸ್ಕೃತಿಯತ್ತ ಒಲವು ತೋರುತ್ತಿದ್ದಾರೆ. ಇದು ಭಾಗ್ಯವೇ ಸರಿ ಇದು ಸುಖ ಸಮೃದ್ಧಿಯ ಪರಿಯೂ ಹೌದು. ಭಂಡಾರಿ ಸಮಾಜವು ಭವಿಷ್ಯತ್ತಿನ ಪೀಳಿಗೆಯಾದ ತಮ್ಮ ಮಕ್ಕಳನ್ನು ಸಂಸ್ಕೃತಿಕವಾಗಿ ಬೆಳೆಸುತ್ತಿದ್ದಾರೆ ಇದು ಅಭಿನಂನೀಯ. ಇದನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕು. ಅಮ್ಮ ಅಮ್ಮಳಾಗಿ ಅಪ್ಪ ಅಪ್ಪನಾಗಿಯೇ ಇರಬೇಕು. ಸಂಸ್ಕೃತಿ ಬಾಳಿನ ಅವಿಭಾಜ್ಯ ಅಂಗವಾಗಿದೆ. ಸಂಸ್ಕೃತಿಯುಳ್ಳ ಬದುಕೇ ಬಹು ಸುಖವಾಗಿ ಪರಿಣಮಿಸುವುದು ಎಂದರು.

ವೈಭವೋತ್ಸವ ವಿಶೇಷತೆ:
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭೋಜನ ಶಾಲೆಗಳಿಗೆ ನದಿ, ಪುಷ್ಪಫಲಗಳ ಹೆಸರನ್ನು ಇರಿಸಲಾಗುತ್ತಿದೆ. ಆದರೆ ಇಲ್ಲಿ ಋಷಿಮುನಿಗಳ ಹೆಸರುಗಳನ್ನು ಹೆಸರನ್ನಿರಿಸಿ ಭಕ್ತರ ಮನಾಕರ್ಷಣೆಗೆ ಪಾತ್ರವಾಯಿತು. ಭೋಜನ ಶಾಲೆಯ ಸಂಖ್ಯೆ ಒಂದರ ಪಂಕ್ತಿಗೆ ಮಹರ್ಷಿ ಜಮದಗ್ನಿ ಎಂದು ನಾಮಕರಿಸಲಾಗಿತ್ತು. ಅಂತೆಯೇ ಉಳಿದ ಹನ್ನೆರಡು ಪಂಕ್ತಿಗಳಿಗೆ ಅಗಸ್ತ ್ಯ, ಕಶ್ಯಪ, ವ್ಯಾಸ, ಭಾರದ್ವಜ, ಗೌತಮ, ಜಾಂಬಳಿ,ಅಂಗೀರಸ,ಭೈಗು, ವಿಶ್ವಾಮಿತ್ರ, ಅಷ್ಠಾವಕ್ರ, ಪುಲಸ್ಯ ಪಂಕ್ತಿ ಎಂದಾಗಿ ಹೆಸರಿಸಲ್ಪಟ್ಟು ಅನ್ನಸಂತಾರ್ಪಣಾ ವೇಳೆ ಪದೇಪದೇ ವಿಶೇಷವಾಗಿ ಈ ಹೆಸರುಗಳನ್ನು ಕರೆಯುತ್ತಿರುವುದು ಕೇಳುಗರಲ್ಲಿ ಅಚ್ಚರಿ ಮೂಡಿಸಿತು.

ಭಂಡಾರಿ ಸೇವಾ ಸಮಿತಿ ಮುಂಬಯಿ ಮತ್ತು ಮಹಾರಾಷ್ಟ್ರದಲ್ಲಿನ ಭಂಡಾರಿ ಬಾಂಧವರು ಸಾಂಸ್ಕೃತಿಕ ಸಮಿತಿ ಸಂಚಾಲಕ ಜಯಶೀಲ ಭಂಡಾರಿ ಮುಂಬಯಿ ನಿರ್ದೇಶನದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

 

 

 

 

 

 

 

 

 

 

ಕಾರ್ಯಕ್ರಮದಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್‍ನ ಉಪಾಧ್ಯಕ್ಷರುಗಳಾದ ಯು.ಗಣೇಶ್ ಹಳೆಯಂಗಡಿ ಮತ್ತು ವರಲಕ್ಷ್ಮೀ ನಾಗೇಶ್, ಕೋಶಾಧಿಕಾರಿ ಸಂಜೀವ ಭಂಡಾರಿ ಬನ್ನಂಜೆ, ಜೊತೆ ಕಾರ್ಯದರ್ಶಿ ಪೂರ್ಣಿಮಾ ಶಿವರಾಮ್ ಭಂಡಾರಿ, ಜೊತೆ ಕೋಶಾಧಿಕಾರಿ ವಾರಿಜ ವಾಸುದೇವ ಭಂಡಾರಿ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರುಗಳಾದ ಸುಭಾಶ್ ಭಂಡಾರಿ ಉಡುಪಿ, ಕುತ್ಪಾಡಿ ಅಶೋಕ್ ಭಂಡಾರಿ, ಶಾರದಾ ವಿಠಲ್ ಭಂಡಾರಿ, ಕೋಶಾಧಿಕಾರಿ ಸತೀಶ್ ಭಂಡಾರಿ ಕಾಡಬೆಟ್ಟು, ಸಂಚಾಲಕರುಗಳಾದ ವಿಶ್ವನಾಥ ಭಂಡಾರಿ ಕಾಡಬೆಟ್ಟು, ವಿಜಯ ಭಂಡಾರಿ ಬೈಲೂರು, ಬಿರ್ತಿ ಗಂಗಾಧರ ಭಂಡಾರಿ, ಭಂಡಾರಿ ಮಹಾಮಂಡಲದ ಉಪಾಧ್ಯಕ್ಷರಾದ ಚಂದ್ರಮೋಹನ್ ಭಂಡಾರಿ, ಅರುಣ್ ಭಂಡಾರಿ ಪರ್ಕಳ, ಅಮಿತಾ ಗಿರೀಶ್ ಉಡುಪಿ, ಗಿರೀಶ್ ಕುಮಾರ್ ಪುತ್ತೂರು, ಪ್ರಭಾಕರ ಪಿ.ಭಂಡಾರಿ ಥಾಣೆ, ಯುಕ್ತ ಆರ್.ಭಂಡಾರಿ, ಪ್ರಧಾನ ಕಾರ್ಯದರ್ಶಿ ಯು.ಸತೀಶ್ ಭಂಡಾರಿ, ಕೋಶಾಧಿಕಾರಿ ಚಂದ್ರಶೇಖರ ಭಂಡಾರಿ ಬೈಕಾಡಿ, ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಉಪಾಧ್ಯಕ್ಷ ನ್ಯಾ| ರಾಮಣ್ಣ ಎಂ.ಭಂಡಾರಿ, ಗೌ| ಪ್ರ| ಕಾರ್ಯದರ್ಶಿ ವಿಜಯ ಆರ್. ಭಂಡಾರಿ, ಗೌ| ಕೋಶಾಧಿಕಾರಿ ಕರುಣಾಕರ ಜಿ.ಭಂಡಾರಿ, ಜೊತೆ ಕಾರ್ಯದರ್ಶಿಗಳಾದ ಶಶಿಧರ್ ಡಿ.ಭಂಡಾರಿ ಮತ್ತು ಪುರುಷೋತ್ತಮ ಜಿ.ಭಂಡಾರಿ,ಜೊತೆ ಕೋಶಾಧಿಕಾರಿ ಪ್ರಕಾಶ್ ಭಂಡಾರಿ, ಮಾಜಿ ಕೋಶಾಧಿಕಾರಿ ರಮೇಶ್ ವಿ.ಭಂಡಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ಕಡಂದಲೆ, ಮಾಜಿ ಕಾರ್ಯಾಧ್ಯಕ್ಷೆ ಲಲಿತಾ ವಿ.ಭಂಡಾರಿ, ಉಪ ಕಾರ್ಯಾಧ್ಯಕ್ಷೆಯರಾದ ಪಲ್ಲವಿ ರಂಜಿತ್ ಭಂಡಾರಿ, ಅನುಶ್ರೀ ಶಿವರಾಮ ಭಂಡಾರಿ, ಕಾರ್ಯದರ್ಶಿ ರೇಖಾ ಎ.ಭಂಡಾರಿ, ಕೋಶಾಧಿಕಾರಿ ಕು| ಕ್ಷಮಾ ಆರ್.ಭಂಡಾರಿ, ಜೊತೆ ಕಾರ್ಯದರ್ಶಿ ಸರಿತಾ ಬಂಗೇರ ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದರು.

 

 

 

 

 

 

 

 

 

 

 

ಶ್ರೀ ಕಚ್ಚೂರು ನಾಗೇಶ್ವರ ದೇವರನ್ನು ಪೂಜಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಮಾಧವ ಭಂಡಾರಿ ಕೂಳೂರು ಸ್ವಾಗತಿಸಿದರು. ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್‍ನ ಗೌರವ ಕಾರ್ಯದರ್ಶಿ ಸೋಮಶೇಖರ ಎಂ.ಭಂಡಾರಿ ಪ್ರಸ್ತಾವನೆಗೈದರು. ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚ, ಸ್ಮರಣಿಕೆ ನೀಡಿ ಗೌರವಿಸಿದರು. ಸಂಧ್ಯಾ ಭಂಡಾರಿ ಉಳಾಯಿಬೆಟ್ಟು ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಮೋಹನ್ ಪಟ್ಲ ವಂದನಾರ್ಪಣೆಗೈದರು.

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal