About Us       Contact

ಮುಂಬಯಿ, ಮೇ. 02: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ, ಸಾಯನ್, ಶ್ರೀ ನರಸಿಂಹ ಜಯಂತಿಯನ್ನು, ವೈಶಾಖ ಶುದ್ಧ ಚತುರ್ದಶಿ ಪುಣ್ಯದಿನವಾದ ಶನಿವಾರ ದಿನಾಂಕ 28.4.2018 ರಂದು ಬಿ.ಎಸ್. ಕೆ. ಬಿ. ಎಸೋಸಿಯೇಶನ್ ನ ಸಹಯೋಗದೊಂದಿಗೆ ಆಶ್ರಯದಲ್ಲಿ ಆಚರಿಸಿತು.

ವೇದಿಕೆಯಲ್ಲಿ ಅಲಂಕೃತ ಮಂಟಪದಲ್ಲಿ ಶ್ರೀ ನರಸಿಂಹ ಪ್ರತಿಷ್ಠೆ, ಕಲ್ಪೋಕ್ತ ಪೂಜೆ, ವಿಷ್ಣು ಸಹಸ್ರ ನಾಮಾರ್ಚನೆ ಮುಂತಾದ ಧಾರ್ಮಿಕ ವಿಧಿಗಳನ್ನು, ಬಾಲಾಲಯ ಅರ್ಚಕರಾದ ಶ್ರೀ ಕೃಷ್ಣಪ್ರಸಾದ್ ಕೆದಿಲಾಯರವರು ವಿದ್ಯುಕ್ತವಾಗಿ ನಡೆಸಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೋಕುಲ ಭಜನಾ ಮಂಡಳಿಯಿಂದ ಶ್ರೀ ನರಸಿಂಹ ಸ್ತೋತ್ರ ಪಠನೆ ಹಾಗೂ ಭಜನಾ ಕಾರ್ಯಕ್ರಮ ನೆರವೇರಿತು. ಶ್ರೀ ದೇವರಿಗೆ ಮಹಾ ಮಂಗಳಾರತಿಯಾದ ನಂತರ ತೀರ್ಥ ಪ್ರಸಾದ ವಿತರಣೆ ಹಾಗೂ ಉಪಹಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಸಂಘದ ಉಪಾಧ್ಯಕ್ಷರು ವಾಮನ್ ಹೊಳ್ಳ, ಗೌ| ಕಾರ್ಯದರ್ಶಿ ಎ ಪಿ.ಕೆ. ಪೆÇೀತಿ, ಕೋಶಾಧಿಕಾರಿ ಹರಿದಾಸ್ ಭಟ್ ಮತ್ತಿತರು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ನೂರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು,

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal