About Us       Contact

ಗುರುಪುರ : ಇಲ್ಲಿನ ಮೂಳೂರು ಶ್ರೀ ಮುಂಡಿತ್ತಾಯ ವೈದ್ಯನಾಥ) ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದಂಗವಾಗಿ ಎ. 5ರಂದು ಬೆಳಿಗ್ಗೆ ಕುಡುಪು ನರಸಿಂಹ ತಂತ್ರಿ ಹಾಗೂ ಕೃಷ್ಣರಾಜ ತಂತ್ರಿ ನೇತೃತ್ವದಲ್ಲಿ `ಅನುಜ್ಞಾ ಕಲಶ' ಮತ್ತು `ಸಂಕೋಚ ಕ್ರಿಯೆ' ಪೂಜಾ ವಿಧಿ ನಡೆಯಿತು. ಬಳಿಕ ಶ್ರೀ ದೈವಗಳ ಮಂಚಗಳನ್ನು ಭಂಡಾರಮನೆಯಲ್ಲಿ ವ್ಯವಸ್ಥೆ ಮಾಡಲಾದ ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು.

ಜೀರ್ಣೋದ್ಧಾರಕ್ಕೆ ತಿಲಕಪ್ರಾಯವೆಂಬಂತೆ ದೈವಾಲಯದ ಗುಡಿಗಳ ಮೇಲ್ಭಾಗದ ಕಳಶಗಳನ್ನು ಗೂಳಿಯೊಂದರ ಸಹಾಯದಿಂದ ಕೆಡವಲಾಯಿತು. ಇದು ಜೀರ್ಣೋದ್ಧಾರ ಕೆಲಸ ಆರಂಭಿಸಲು ಸಾಂಕೇತಿಕ ಧಾರ್ಮಿಕ ವಿಧಿಯಾಗಿದೆ. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಪ್ರಮೋದ್ ಕುಮಾರ್ ರೈ, ಡಾ. ರವಿರಾಜ ಶೆಟ್ಟಿ, ಪ್ರವೀಣ್ ಶೆಟ್ಟಿ ಬೆಳ್ಳಿಬೆಟ್ಟು, ಸತೀಶ್ ಕಾವ, ಪುರಂದರ ಮಲ್ಲಿ, ಯಶವಂತ ಕೋಟ್ಯಾನ್, ಕಿಟ್ಟಣ್ಣ ರೈ, ಜಗದೀಶ ಶೆಟ್ಟಿ, ಪುರುಷೋತ್ತಮ ಮಲ್ಲಿ, ವಿಲಾಸ್ ಶೆಟ್ಟಿ, ಪ್ರೇಮನಾಥ ಮಾರ್ಲ, ಕರುಣಾಕರ ಕುಕ್ಕದಕಟ್ಟೆ, ಸುಬ್ಬಯ್ಯ ಶೆಟ್ಟಿ, ಹರೀಶ್ ಶೆಟ್ಟಿ, ಶ್ರೀಧರ ಪೂಜಾರಿ, ಚಂದ್ರಹಾಸ ಪೂಜಾರಿ ಕೌಡೂರು, ನರಸಿಂಹ ಪೂಜಾರಿ, ರಾಮ ಮುಖಾರಿ, ಚಂದ್ರಹಾಸ ಕಾವ, ತನಿಯಪ್ಪ ಪೂಜಾರಿ, ನಳಿನಿ ಶೆಟ್ಟಿ, ತುಕಾರಾಮ ಪೂಜಾರಿ, ಸಚಿನ್ ಅಡಪ, ರೋಹಿತಾಶ್ವ ಭಂಡಾರಿ, ಯಶವಂತ ಆಳ್ವ, ಭಾಗ್ಯರಾಜ ಆಳ್ವ, ಭಾಸ್ಕರ ಭಂಡಾರಿ ಸಹಿತ ನೂರಾರು ಭಕ್ತರು ನೆರೆದಿದ್ದರು.

ಎ. 4ರಂದು ರಾತ್ರಿ ದೈವಸ್ಥಾನದಲ್ಲಿ ಕುಡುಪು ತಂತ್ರಿವರ್ಯಯ ಪೌರೋಹಿತ್ಯ ಹಾಗೂ ಜಿ ಟಿ ಅಣ್ಣು ಭಟ್ ಉಪಸ್ಥಿತಿಯಲ್ಲಿ `ವಾಸ್ತು ರಕ್ಷೋಘ್ನ' ಹೋಮ ಜರುಗಿತು. ಎಪ್ರಿಲ್ 11ರಂದು ಬೆಳಿಗ್ಗೆ 11 ಗಂಟೆಗೆ ಶಿಲಾನ್ಯಾಸ ಹಾಗೂ ಮೇ 10ರಂದು ಗುರುವಾರ ಬೆಳಿಗ್ಗೆ 7;20ಕ್ಕೆ `ಪಾದುಕಾನ್ಯಾಸ' ನಡೆಯಲಿದೆ.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal