About Us       Contact

ಮುಂಬಯಿ, ಮಾ.೩೦: ಕಳೆದ ಗುರುವಾರದಂದು ಧರ್ಮಸ್ಥಳ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜಯಂತಿ ಆಚರಿಸಲಾಯಿತು. ಮಹಾವೀರ ಸ್ವಾಮಿಗೆ ಜನ್ಮಾಭಿಷೇಕ, ಮಕ್ಕಳಿಂದ ಅಷ್ಟವಿಧಾರ್ಚನೆ ಪೂಜೆ, ನಾಮಕರಣ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಪೂಜ್ಯ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು, ಶ್ರೀಮತಿ ಹೇಮಾವತಿ ವಿ.ಹೆಗ್ಗಡೆ ಮತ್ತು ಕುಟುಂಬದವರ ಮಾರ್ಗದರ್ಶನದಲ್ಲಿ ಬಾಹುಬಲಿ ಮಹಿಳಾ ಸೇವಾ ಸಮಿತಿ ವತಿಯಿಂದ ಮಹಾವೀರ ಜಯಂತಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಊರ ಶ್ರಾವಕ ಶ್ರಾವಿಕಿಯರು ಪಾಲ್ಗೊಂಡು ಪುಣ್ಯಭಾಗಿಗಳಾದರು.

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal