About Us       Contact

ಕುಕ್ಕದಕಟ್ಟೆಯ ಹತ್ತಿರವಿರುವ ಕೋಟ್ಯಾನ್ ಕುಟುಂಬಿಕರ ಮನೆಯಲ್ಲಿ ಭಾನುವಾರ ನಡೆದ ಸಿರಿ `ದಲ್ಯ'ದ ಒಂದು ದೃಶ್ಯ. `ಪಂಚ ದಲ್ಯ'(ಅಬ್ಬಗ, ದಾರಗ, ಸೊನ್ನೆ, ಗಿಂಡೆ, ಸಿರಿ)ಎಂದೂ ಕರೆಯಲ್ಪಡುವ, ತುಳುನಾಡಿನಲ್ಲಿ ಈಗಲೂ ಬಿಲ್ಲವರು ಭಕ್ತಿಪೂರ್ವಕವಾಗಿ ಆರಾಧಿಸಿಕೊಂಡು ಬರುತ್ತಿರುವ ಸಿರಿ ಮತ್ತು ಕುಮಾರ ದೇವರ ದರ್ಶನ ಇದಾಗಿದೆ. ಹಿಂದೆ ತುಳುನಾಡಿನ ಅಲ್ಲಲ್ಲಿ ಜರುಗುತ್ತಿದ್ದ ಈ ದರ್ಶನ ಈಗ ಅಪೂರ್ವವೆನಿಸಿದೆ. ಆದರೆ ಬಿಲ್ಲವರ ಆಲಡೆಗಳಲ್ಲಿ(ಮೂಲಸ್ಥಾನ) ಈಗಲೂ ವರ್ಷಕ್ಕೊಂದು ಬಾರಿ ನೂರಾರು ಮಂದಿ ಇದೇ ರೀತಿಯ ಪಂಚ ದಲ್ಯದಲ್ಲಿ ಪಾಲ್ಗೊಳ್ಳುವ ಉತ್ಸವ ಜರುಗುತ್ತದೆ.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal