About Us       Contact

ಬಂಟ್ವಾಳ: ಕುಂಭೋದರಿ ದೇವಿ ಕ್ಷೇತ್ರ ಬಿಸಿರೋಡು ಇಲ್ಲಿಯ ಕರಂಬೇರ ಕುಟುಂಬಸ್ಥರ ಮೂಲಸ್ಥಾನ ದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ನಾಗ ಸಾನ್ನಿದ್ಯದಲ್ಲಿ ಶ್ರೀ ನಾಗಾಬ್ರಹ್ಮಾದಿ ಪರಿವಾರ ದೇವರ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ನಾಗದರ್ಶನ ಸೇವೆ ಮತ್ತು ಯಕ್ಷಗಾನ ಬಯಲಾಟದ ಅಂಗವಾಗಿ ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಣೆ ಬಿಸಿರೋಡಿನ ರಕ್ತೇಶ್ವರೀ ದೇವಸ್ಥಾನ ದ ವಠಾರದಿಂದ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಹೊರಡಿತು. ಹೊರೆ ಕಾಣಿಕೆ ಮೆರವಣಿಗೆಯನ್ನು ರಕ್ತೇಶ್ವರಿ ದೇವಸ್ಥಾನದಲ್ಲಿ ದೇವಸ್ಥಾನದ ಅದ್ಯಕ್ಷ ಸೋಮನಾಥ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ರಾದ ಮೋಹನ್ ಬಿಸಿರೋಡು, ಬಾಸ್ಕರ್ ಟೈಲರ್ ಕಾಮಾಜೆ, ಪ್ರವೀಣ್ ಬಿ. ಸ್ಥಳೀಯ ಪ್ರಮುಖರಾದ ರವಿರಾಜ್ ಬಿಸಿರೋಡ್, ಗೋಪಾಲ ಸುವರ್ಣ, ಕುಂಭೊದರಿ ದೇವಸ್ಥಾನ ದ ಅದ್ಯಕ್ಷ ಬಾಬು ಕೈರಂಗಳ, ಜೀರ್ಣೋದ್ದಾರ ಸಮಿತಿ ಯ ಅದ್ಯಕ್ಷರು ಹಾಗೂ ಸದಸ್ಯ ರುಗಳು , ಹೊರೆಕಾಣಿಕೆ ಸಮಿತಿ ಪ್ರಮುಖರಾದ ಸೋಮನಾಥ ಮತ್ತು ಮಾದವ ಕುಲಾಲ್ ಮತ್ತು ಸ್ಥಳೀಯ ಪ್ರಮುಖರು ಹಾಜರಿದ್ದರು.

 

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal