About Us       Contact


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಫೆ.24: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಐಕಳ ಹರೀಶ್ ಅವರಿಗೆ ಅಭಿನಂದನೆಗಳು. ನಿಜಕ್ಕೂ ಇವರು ಇಂತಹ ಪ್ರತಿಷ್ಠಿತ ಮತ್ತು ಸರ್ವೋತ್ಕೃಷ್ಟ ಹುದ್ದೆಗೆ ಅರ್ಹರು. 20 ವಷರ್Àಗಳ ಹಿಂದೆ ನನ್ನ ಅಧ್ಯಕ್ಷಾವಧಿಯಲ್ಲೂ ಪೆÇವಾಯಿಯಲ್ಲಿ ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆಯನ್ನು ಹುಟ್ಟ್ಟಿ ಹಾಕಿದ್ದು ಅದು ಇಂದು ಹೆಮ್ಮರವಾಗಿ ಬೆಳೆದಿದೆ. ಅಂದು ಶಾಲೆಯನ್ನು ಪ್ರಾರಂಭ ಮಾಡಲು ಅಷ್ಟುಸುಲಭವಾಗಿರಲಿಲ್ಲ. ಕಾರಣ ಆ ಕಾಲದಲ್ಲಿ ಹಣ ಕೊರತೆಯಿತ್ತು. ಇಂದು ಹಾಗಲ್ಲ ಲಕ್ಷಾಂತರ ಹಣ ಒಟ್ಟಾಗಿಸಬಹುದು. ಯಾವಾಗ ನಮ್ಮ ದೂರದೃಷ್ಟಿ ಸೂಕ್ಷವಾಗಿರುತ್ತದೆಯೋ ಆವಾಗ ಸಮುದಾಯದ ಪೆÇ್ರೀತ್ಸಾಹ ಸಿಗುತ್ತದೆ ಆ ಮೂಲಕ ಎಲ್ಲವೂ ಸುಲಭವಾಗುತ್ತದೆ ಇದು ಸಮಾಜೋದ್ಧಾರಕ್ಕೆ ಪೂರಕವಾಗುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾತು ಸಬ್‍ಕ ಸಾಥ್, ಸಬ್‍ಕ ವಿಕಾಸ್. ಎಲ್ಲರೂ ಇದನ್ನು ಮೈಗೂಡಿಸುವ ಅಗತ್ಯವಿದೆ. ಜೊತೆಗೆ ಪ್ರಧಾನಮಂತ್ರಿ ಯೋಜನೆಯ ಫಲಾನುಭವ ನಮ್ಮ ಸಂಸ್ಥೆಗಳು ಪಡೆಯಬೇಕು. ನಮ್ಮೆಲ್ಲರ ಮನಸ್ಸು ಸಮಾನರಾದರೆ ಬಡ ಮಕ್ಕಳ ವಿಕಾಸವಾಗುವುದು. ಬಡವರಿಗೆ ಸಹಾಯಹಸ್ತ ನೀಡಿದಾಗಲೇ ನಾವೂ ಪುಣ್ಯಾಧಿ ಆಶೀರ್ವಾದ ಗಳಿಸಲುಸಾಧ್ಯ. ಆದುದರಿಂದ ಸೇವೆಗಳ ಮುಖೇನ ಜಾಗತಿಕ ಬಂಟರ ಒಕ್ಕೂಟ ಸಮಾಜದ ಬಡ ಜನತೆ ತನಕ ತಲುಪುವಂತಾಗಲಿ ಅದಕ್ಕಾಗಿ ಒಕ್ಕೂಟಕ್ಕೂ ದೇಣಿಗೆ ನೀಡುವ ಉದಾರತೆ ನಮ್ಮಲ್ಲಿ ಮೂಡಲಿ. ಇಂತಹ ಹಲವಾರು ಬಂಟರ ಸಮ್ಮೇಳನ ಆಯೋಜಿಸಿ ಬಂಟತನದ ನಂಟು ಇನ್ನೂ ಬಲಪಡಿಸೋಣ ಎಂದು ಆ್ಯಡ್‍ಲ್ಯಾಬ್ಸ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ, ಬಂಟ್ಸ್ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಮನ್ಮೋಹನ್ ಆರ್.ಶೆಟ್ಟಿ ತಿಳಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಇಂದಿಲ್ಲಿ ಶನಿವಾರ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ರಚಿಸಲಾಗಿದ್ದ ಮುನಿಯಾಲ್ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‍ನ ಘನಸಿರಿ ವೇದಿಕೆಯಲ್ಲಿ ಆಯೋಜಿಸಿದ್ದ ವಿಶ್ವ ಬಂಟರ ಸಮ್ಮೇಳನ-2018ನ್ನು ಮನ್ಮೋಹನ್ ಶೆಟ್ಟಿ ಮತ್ತು ಶಶಿ ಮನ್ಮೋಹನ್ ದಂಪತಿ ಹಿಂಗಾರ ಅರಳಿಸಿ ಕಳಶೆಯಲ್ಲಿರಿಸಿ ತಂಡುಲ ವೃಷ್ಠಿಗೈದು ವಿಧ್ಯುಕ್ತವಾಗಿ ಸಮ್ಮೇಳನಕ್ಕೆ ಚಾಲನೆಯನ್ನಿತ್ತÀು ಮನ್ಮೋಹನ್ ಶೆಟ್ಟಿ ಮಾತನಾಡಿದರು.

 

 

 

 

 

 

 

 

 

 

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಸಮ್ಮೇನದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮುಖ್ಯ ಅತಿಥಿsಯಾಗಿದ್ದು, ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ದೀಪ ಪ್ರಜ್ವಲಿಸಿ ಸಮ್ಮೇಳ ನಕ್ಕೆ ಚಾಲನೆಯನ್ನಿತ್ತರು.

ಗೌರವ ಅತಿಥಿsಗಳಾಗಿ ಬೋರಿವಿಲಿ ಲೋಕಸಭಾ ಸಂಸದ ಗೋಪಾಲ್ ಸಿ.ಶೆಟ್ಟಿ, ಬಂಟ್ಸ್ ಸಂಘ ಬೆಂಗಳೂರು ಅಧ್ಯಕ್ಷ ಚಂದ್ರಹಾಸ ರೈ, ಬಂಟ್ಸ್ ಸಂಘ ಪುಣೆ ಅಧ್ಯಕ್ಷ ಸಂತೋಷ್ ಶೆಟ್ಟಿ, ಬೋಂಬೆ ಬಂಟ್ಸ್ ಅಸೋಶಿಯೇಶನ್ ಅಧ್ಯಕ್ಷ ನ್ಯಾ| ಸುಭಾಷ್ ಬಿ.ಶೆಟ್ಟಿ, ಬಂಟ್ವಾಳ ಬಂಟರ ಸಂಘ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, ಬಂಟ್ಸ್ ಸಂಘ ಮೈಸೂರು ಅಧ್ಯಕ್ಷ ಪ್ರಭಾಕರ ಶೆಟ್ಟಿ, ಯುಎಇ ಬಂಟ್ಸ್ ಸರ್ವೋತ್ತಮ ಎಸ್.ಶೆಟ್ಟಿ, ಬಂಟ್ಸ್ ಸಂಘ ಬಾಹ್ರೇಯ್ನ್ ಅಧ್ಯಕ್ಷ ಕೆ.ನಾಗೇಶ್ ಶೆಟ್ಟಿ, ಬಂಟ್ಸ್ ಸಂಘ ಓಮನ್ ಅಧ್ಯಕ್ಷ ಶಶಿಧರ ಶೆಟ್ಟಿ, ಜವಾಬ್ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಬಂಟ್ಸ್ ಸಂಘ ನಾಸಿಕ್ ಅಧ್ಯಕ್ಷ ಕರುಣಾಕರ ಶೆಟ್ಟಿ, ಬಂಟ್ಸ್ ಸಂಘ ಪಿಂಪ್ರಿ ಚಿಂಚ್ವಾಡ್ ಅಧ್ಯಕ್ಷ ಮಹೇಶ್ ಹೆಗ್ಡೆ, ಬಂಟ್ಸ್ ಪೆÇೀರಂ ವಿೂರಾ-ಭಯಂಧರ್ ಅಧ್ಯಕ ಜಯಪ್ರಕಾಶ್ ಭಂಡಾರಿ, ಬಂಟ್ಸ್ ಅಸೋಸಿಯೇಶನ್ ಪುಣೆ ಅಧ್ಯಕ್ಷ ನಾರಾಯಣ ಶೆಟ್ಟಿ, ಥಾಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಕುಶಲ್ ಸಿ.ಭಂಡಾರಿ, ಮುಲುಂಡ್ ಬಂಟ್ಸ್ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ವಿೂರಾಡಾಹಾಣು ಬಂಟ್ಸ್ ಅಧ್ಯಕ್ಷ ಅರವಿಂದ್ ಶೆಟ್ಟಿ (ನಗರ ಸೇವಕ), ಬಂಟ್ಸ್ ಸಂಘ ಮೂಲ್ಕಿ ಅಧ್ಯಕ್ಷ ಎಳತ್ತೂರುಗುತ್ತು ಸಂತೋಷ್ ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಮಹಿಳಾ ವಿಭಾಗಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಬಂಟ್ಸ್ ಸಂಘ ಅಹ್ಮದಾಬಾದ್ ಅಧ್ಯಕ್ಷ ಅಪ್ಪು ಶೆಟ್ಟಿ, ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ಇದರ ಮಹಿಳಾಧ್ಯಕ್ಷೆ ಆಶಾಜ್ಯೋತಿ ರೈ ಮಾಲಾಡಿ, ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಉದಯ ಕೆ.ಶೆಟ್ಟಿ, ಉದ್ಯಮಿಗಳಾದ ಶಂಕರ ಬಿ.ಶೆಟ್ಟಿ ವಿರಾರ್, ಶಶಿಧರ ಕೆ.ಶೆಟ್ಟಿ ಇನ್ನಂಜೆ (ನಲ್ಲಸೋಫರಾ), ಸಂಜೀವ ಎನ್.ಶೆಟ್ಟಿ (ಅಶ್ವಿತ್ ನೆರೂಳ್), ಹರೀಶ್ ಶೆಟ್ಟಿ ಗುರ್ಮೆ (ನಲ್ಲಸೋಫರಾ), ಹರೀಶ್ ಪಾಂಡು ಶೆಟ್ಟಿ ಮೊದಲಾದವ ರು ಉಪಸ್ಥಿತರಿದ್ದರು.

ಇಂದಿನ ಈ ಜಾಗತಿಕ ಬಂಟರ ಒಕ್ಕೂಟ ಸಮಾರಂಭದಲ್ಲಿ ದೊಡ್ಡ ಸಂಖ್ಯೆಯ ಉಪಸ್ಥಿತಿ ಕಂಡು ಸಂತೋಷ ಆಗುತ್ತಿದೆÉ. ಅದಕ್ಕೆ ಐಕಳ ಹರೀಶ್‍ರÀ ಪರಿಶ್ರಮ ಮತ್ತು ಚಾಣಕ್ಷತನವೇ ಕಾರಣ. ನಾವು ಬಂಟರು ಸಮಾಜಮುಖಿ ಚಿಂತನೆವುಳ್ಳವರಾಗಿದ್ದು ಸಮಾಜ ಉದ್ಧಾರ ನಮ್ಮ ಮೂಲತ್ವವಾಗಿದೆ. ವೀರ, ಶೂರತನ ಬಂಟರ ವೈಶಿಷ್ಟ್ಯವಾಗಿದ್ದು ಸದ್ಯ ಆಥಿರ್sಕವಾಗಿಯೂ ಬಲವುಳ್ಳವರಾಗಿ ಮುನ್ನಎಯುತ್ತಿದ್ದೇವೆ. ಬ್ರಿಟಿಷರಲ್ಲೂ ಬಂಟರಿಗೆ ವಿಶ್ವಾಸ ಸ್ಥಾನವಿತ್ತು. ಕಾರಣ ಬಂಟರಲ್ಲಿ ಸಾಮಾಜಿಕ ಕಳಕಳಿಯಿತ್ತು. ಅದೇ ಬಂಟರ ಅಭಿಮಾನÀ ಇಂದಿಗೂ ದೃಢವಾಗಿದೆ. ನಾವು ಸಮಾಜವನ್ನು ಮುಂದೆ ತರುವಂತಹ ಸದ್ಗುಣವುಳ್ಳವರು. ನಮ್ಮಲ್ಲಿ ನಾಯಕತ್ವ ಮತ್ತು ಮುಂದಾಳುತ್ವತನವಿದೆ ಅದಕ್ಕೆ ಈ ವೇದಿಕೆ ಸಾಕ್ಷಿಯಾಗಿದೆ. ಐಕಳ ಹರೀಶ್ ಶೆಟ್ಟಿ ಕಳೆದ ಎರಡುವರೆ ದಶಕಗಳಿಂದ ಬಂಟರ ಸಂಘದಲ್ಲಿ ವಿವಿಧ ಹುದ್ದೆಗಳನ್ನಲಂಕರಿಸಿ ಕಾಯಕ ಸಿದ್ಧಿಸಿದ್ದಾರೆ. ಅವರೋರ್ವ ಬಂಟರಲ್ಲಿನ ಅಭಿವೃದ್ಧಿ ಕ್ರಾಂತಿಕಾರ. ಆದುದರಿಂದಲೇ ಐಕಳ ಹರೀಶ್ ಬಂಟ ಸಮುದಾಯಕ್ಕೆ ಸ್ವರ್ಣ ಮುರುಕುವಾಗಿದ್ದಾರೆ. ಈ ಫೆಡೇರೇಶÀನ್‍ನನ್ನು ಪುನರುಸ್ಥಾನಗೊಳಿಸಿದ ಕೀರ್ತಿ ಇವರದ್ದಾಗಿದೆ ಎಂದು ಪದ್ಮನಾಭ ಪಯ್ಯಡೆ ನುಡಿದರು.

 

 

 

 

 

 

 

 

 

 

 

 

 

ಅಜಿತ್ ಮಾಲಾಡಿ ಮಾತನಾಡಿ ಮಹಾರಾಷ್ಟ್ರ ಅಥವಾ ಮುಂಬಯಿಯಲ್ಲಿನ ಜನತೆಯೇ ದೊಡ್ಡ ಮನಸ್ಸುವುಳ್ಳವರು. ಅದರಲ್ಲೂ ಬಂಟರಂತೂ ಪ್ರೀತಿಸುವ ಹೃದಯವುಳ್ಳವರು. ಇವರಹಾಗೆ ಮತ್ಯಾರೂ ಇಲ್ಲ. ನಮ್ಮಲ್ಲಿನ ಯಾವುದೇ ಕಾರ್ಯಕ್ರಮಗಳಲ್ಲಿ ಯುವಕರು ಮತ್ತು ಮಕ್ಕಳ ಕೊರತೆ ಇದ್ದು, ಇದಕ್ಕೂ ನಾವೂ ಪರಿಹಾರ ಕಂಡುಕೊಳ್ಳುವ ಅವಶ್ಯಕತೆಯಿದೆ. ಯುವಶಕ್ತಿ ನಮ್ಮ ಪರಂಪರೆ, ಸಂಸ್ಕೃತಿ, ಆಚಾರ ವಿಚಾರ ತಿಳಿದಾಗ ಮಾತ್ರ ನಮ್ಮ ಅಸ್ತಿತ್ವ ಬೆಳೆದು ಉಳಿಯುವುದು. ಇಲ್ಲವೇ ಇದು ಸಮುದಾಯದ ಮೇಲೆ ಭಾರೀ ಪರಿಣಾಮ ಬೀಳುವುದು. ಬರೇ ಭವನ, ಕಟ್ಟಡ ನಿರ್ಮಿಸುವುದರಿಂದ ಸಮುದಾಯದ ಬಲಿಷ್ಠ ಅಸಾಧ್ಯ. ಆದುದರಿಂದ ಯುವಶಕ್ತಿಯನ್ನು ನಮ್ಮೊಡನೆ ಒಗ್ಗೂಡಿಸುವ ಕೆಲಸ ತ್ವರಿತವಾಗಿ ನಡೆಯಬೇಕು. ಪರಿವರ್ತನೆಗೆ ತಕ್ಕ ಬದಲಾವಣೆ ಆಗುವ ಅಗತ್ಯ ಬಂಟರಲ್ಲೂ ಇದ್ದು ಬಾಂಧವ್ಯದ ಮೂಲಕ ಬಂಟರ ಒಗ್ಗಟ್ಟು ಭದ್ರ ಪಡಿಸೋಣ. ಅತ್ಮೀಯ ಭಾವನೆಗಳನ್ನು ಮೈಗೂಡಿಸಿ ಜಗತ್ತಿನ ಪ್ರತಿಯೊಂದು ಬಂಟರನ್ನು ಗುರುತಿಸಲು ಈ ವೇದಿಕೆ ಪೂರಕವಾಗಲಿ. ಇದಕ್ಕೆ ಸಮಗ್ರ ಬಂಟ ಸಮುದಾಯದ ಸಹಕಾರ ನೀಡುವರೇ ಭರವಸೆ ವ್ಯಕ್ತ ಪಡಿಸಿದರು.
ಐಕಳ ಅವರ ಸಾಧನೆ ನಂಬಲಸಾಧ್ಯವಾಗದು. ಅವರೋರ್ವ ಯಶಸ್ವಿ ಮತ್ತು ವಚನಬದ್ಧ ಸಂಘಟಕ. ಸಾಮರಸ್ಯದಿಂದ ಒಗ್ಗೂಡಿಸುವ ಉದಾತ್ತಧ್ಯೇಯವುಳ್ಳ ಇಂತವರಿಂದ ಮಾತ್ರ ಇಂತಹ ಐಕ್ಯತಾ ಸಮ್ಮೇಳನಗಳ ಆಯೋಜನೆ ಸಾಧ್ಯ. ಸ್ವಸಮುದಾಯದ ಮೂಲಸ್ವರೂಪ ಮರೆಯದ ಅಸಮಾನ್ಯ ಸ್ವಭಾವದ ಐಕಳ ಹರೀಶ್‍ರ ಸಾಂಘಿಕತೆಯನ್ನು ವಿಶ್ವದ ನಾಯಕರೇ ಗುರುತಿಸಿ ಕೊಂಡಿದ್ದಾರೆ. ಮುಂಬಯಿನ ಬಂಟರ ಸಂಸ್ಥೆಯ ಕಾರ್ಯಕ್ರಮಗಳಂತೂ ಲಿಮ್ಕಾ ಬುಕ್‍ರೆಕಾರ್ಡ್‍ಗೆ ಸೇರಿಸುವಷ್ಟಿವೆ. ತವರೂರ ಸÀಂಬಂಧವನ್ನು ನಿಕಟವಾಗಿರಿಸಿ ಎಲ್ಲಾ ಕಾರ್ಯಕ್ರಮಗಳನ್ನು ಸಾಮರಸ್ಯಯುತವಾಗಿ ನಡೆಸುವ ಪರಿ ವಿಶ್ವಕ್ಕೇ ಮಾದರಿ. ಯುವ ಇನ್ನೂ ಮತ್ತಷ್ಟು ಜನತೆಯಲ್ಲಿ ಸಂಬಂಧಗಳನ್ನು ಬಲಪಡಿಸುವ ಅಗತ್ಯವಿದೆ. ಮಕ್ಕಳಲ್ಲಿ ಮಿತ್ರತ್ವದ ಸಂಬಂಧಗಳು ಹೆಚ್ಚಾಗುತ್ತಿದ್ದು ಸ್ವಸಮುದಾಯ, ಕುಟುಂಬ ಸಂಬಂಧಗಳು ಮಾಯವಾಗುತ್ತಿವೆ. ಅವರಲ್ಲೂ ಸ್ವಸಮಾಜದ ಒಲವು ತೋರಿಸಿ ಬಂಟತ್ವ ಬಲಪಡಿಸಿ ಸಮಾಜವನ್ನು ಶಕ್ತಿಯುತ ಗೊಳಿಸೋಣ ಎಂದು ಗೋಪಾಲ ಶೆಟ್ಟಿ ತಿಳಿಸಿದರು.
ಸಮಗ್ರ ಬಂಟ ಸಂಘಸಂಸ್ಥೆಗಳನ್ನು ಒಗ್ಗೂಡಿಸಿ ಬಂಟರ ಐಕ್ಯತೆಯೇ ಮತ್ತು ಸಮಾಜೋದ್ಧಾರವೇ ಸಮ್ಮೇಳನದ ಉದ್ದೇಶವಾಗಿಸಿ ಇತಿಹಾಸ ಕಾರ್ಯಕ್ರಮ ಮಾಡಬೇಕು ಎನ್ನುವ ಆಶಯ ನನ್ನಲ್ಲಿತ್ತು. ಇಂತಹ ಮಹಾನ್ ಕನಸು ನನಸಾಗಿಸಿದ ಅಭಿಮಾನ ಇಂದು ಫಲಿಸಿದೆ. ಅಧ್ಯಕ್ಷಪದ ಅಲಂಕರಿಸುವುದು ಸುಲಭ ಆದರೆ ಅದರಲ್ಲಿನ ಜವಾಬ್ದಾರಿಗಳು ಅನೇಕ. ನಾನು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷನಾಗುವ ಸಮಯದಲ್ಲಿ ಅಂದಿನ ನಿಕಟಪೂರ್ವ ಅಧ್ಯಕ್ಷ ಸುಧಾಕರ ಹೆಗ್ಡೆ ಅವರು ದಾನ ನೀಡಿರುವುದು ಸುಲಭ, ಆದರೆ ಅಧ್ಯಕ್ಷಹುದ್ದೆ ವಹಿಸುವುದು ಕಷ್ಟ ಎಂದಿದ್ದರು. ಇಂದು ದಾನಿಗಳ ಪೆÇ್ರೀತ್ಸಾಹ ದತ್ತುನಿಧಿಯಿಂದ ನಾವೂ ಬಡ ಮಕ್ಕಳಿಗೆ ಸಹಾಯ ಮಾಡಲು ಸಾಧ್ಯವಾಗಿದೆ. ನಾವು ಕೆಲವು ಗಣ್ಯವ್ಯಕ್ತಿಗಳಿಗೆ ಆಹ್ವಾನಿಸಲು ಹೋದಾಗ ಅವರು ಪೆÇ್ರೀತ್ಸಹಿಸಿದ್ದಾರೆ. ಈ ಒಕ್ಕೂಟದ ಅಧ್ಯಕ್ಷಸ್ಥಾನಕ್ಕೆ ಲೋಪದೋಷ ಬಾರದ ಹಾಗೆ ನಾನು ನಡೆದುಕೊಳ್ಳುತ್ತೇನೆ. ನನ್ನ ಮುಂದಿನ ಮೂರು ವರ್ಷದ ಅವಧಿಯಲ್ಲಿ ಯಾರು ಮಾಡದ ಕೆಲಸಗಳನ್ನು ಮಾಡುವ ಉದ್ದೇಶ ಹೊಂದಿದ್ದು ತಮ್ಮೆಲ್ಲರ ಸಹಕಾರದಿಂದ ನನ್ನ ಯೋಜನಾ ಯೋಚನೆಗಳನ್ನು ಪೂರೈಸುವೆ. ಒಕ್ಕೂಟದಲ್ಲಿ ಆದಾಯವಿಲ್ಲ. ಅದಕ್ಕಾಗಿ ಸದಸ್ಯತ್ವ ಮತ್ತು ಶಾಶ್ವತನಿಧಿ ದಾನಿಗಳಾಗಿ ಪೆÇ್ರೀತ್ಸಹ ನೀಡಬೇಕು. ಆ ಮೂಲಕ ಗ್ರಾಮೀಣ ಪ್ರದೇಶದ ಬಂಟರ ಸಂಘಗಳ ಏಳಿಗೆಯನ್ನು ಅರ್ಥಪೂರ್ಣವಾಗಿ ಮಾಡೋಣ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಐಕಳ ಹರೀಶ್ ಶೆಟ್ಟಿ ತಿಳಿಸಿದರು. ಹಾಗೂ ಸಹಕಾರ ನೀಡಿದ ಎಲ್ಲಾ ಪ್ರಾಯೋಜಕರು, ದಾನಿಗಳು, ಪಾಲ್ಗೊಂಡ ಸರ್ವರನ್ನೂ ಅಭಿವಂದಿಸಿದರು.

 

 

 

 

 

 

 

 

 

 

 

ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಗೌ| ಕಾರ್ಯದರ್ಶಿ ವಿಜಯಪ್ರಸಾದ್ ಆಳ್ವ, ಗೌ| ಕೋಶಾಧಿಕಾರಿ ಕೊಲಾಡಿ ಬಾಲಕೃಷ್ಣ ರೈ, ಬಂಟ್ಸ್ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಗೌ| ಕಾರ್ಯದರ್ಶಿ ಸಿಎ| ಸಂಜೀವ ಶೆಟ್ಟಿ, ಗೌ| ಕೋಶಾಧಿಕಾರಿ ಪ್ರವೀಣ್ ಬಿ.ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್.ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಯುವ ವಿಭಾಗಧ್ಯಕ್ಷ ಶರತ್ ವಿ.ಶೆಟ್ಟಿ, ಕಾರ್ಯಕ್ರಮ ಸಮಿತಿ ಕಾರ್ಯಧ್ಯಕ್ಷ ಶಾಂತರಾಮ ಬಿ.ಶೆಟ್ಟಿ, ಸಲಹಾ ಸಮಿತಿ ಕಾರ್ಯಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಸಲಹಾ ಸಮಿತಿ ಕಾರ್ಯನಿರತ ಕಾರ್ಯಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ, ಕಾರ್ಯಕ್ರಮ ಸಮಿತಿ ಯುವ ಸಂಯೋಜಕ ಗಿರೀಶ್ ಶೆಟ್ಟಿ ತೆಲ್ಲಾರ್ ಸೇರಿದಂತೆ ವಿವಿಧ ಸಮಿತಿಗಳ ಮುಖ್ಯಸ್ಥರು, ಹಾಲಿ-ಮಾಜಿ ಪದಾಧಿಕಾರಿಗಳು, ಬಂಟ ಗಣ್ಯರನೇಕರು ಉಪಸ್ಥಿತರಿದ್ದು ಮನ್ಮೋಹನ್ ಶೆಟ್ಟಿ ಮತ್ತು ಶಶಿ ಮನ್ಮೋಹನ್ ಹಾಗೂ ಐಕಳ ಹರೀಶ್ ಶೆಟ್ಟಿ ಮತ್ತು ಚಂದ್ರಿಕಾ ಹರೀಶ್ ದಂಪತಿಗೆ ಅಭಿನಂದನಾ ಗೌರವ ಪ್ರದಾನಿಸಿ ಶುಭಾರೈಸಲಾಗಿದ್ದು, ಅಜಿತ್ ಕುಮಾರ್ ರೈ ಮಾಲಾಡಿ ಮತ್ತು ಆಶಾಜ್ಯೋತಿ ರೈ ಹಾಗೂ ಪದ್ಮನಾಭ ಎಸ್.ಪಯ್ಯಡೆ ಮತ್ತು ಮಾಲಿನಿ ಪದ್ಮನಾಭ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಅತಿಥಿüಗಳೆಲ್ಲರಿಗೂ ಚಿನ್ನದ ಅರಿವಾಣದಲ್ಲಿ ಅಡಿಕೆ, ವೀಳೆದೆಳೆ, ರಥ ಸ್ಮರಣಿಕೆ ನೀಡಿ ಸತ್ಕರಿಸಿ ಗೌರವಿಸಲಾಯಿತು.

ಆದಿಯಲ್ಲಿ ಬಂಟರ ಸಂಘದ ಜ್ಞಾನ ಮಂದಿರದಲ್ಲಿನ ಶ್ರೀಮಹಾವಿಷ್ಣು ಹಾಗೂ ಗಣಪತಿ ದೇವರಿಗೆ ಪೂಜೆ ನೆರವೇರಿಸಿ ಸಮ್ಮೇಳನಕ್ಕೆ ವಿಧಿವತ್ತಾಗಿ ಚಾಲನೆನೀಡಲಾಯಿತು.ದೇವಸ್ಥಾನದ ಪ್ರಧಾನ ಆರ್ಚಕ ವಿದ್ವಾನ್ ಅರವಿಂದ ಬನ್ನಿಂತ್ತಾಯ ಪೂಜಾಧಿಗಳನ್ನು ನೆರವೇರಿಸಿ ತೀರ್ಥ ಪ್ರಸಾದವನ್ನಿತ್ತು ಅನುಗ್ರಹಿಸಿದರು. ತೋನ್ಸೆ ವಿಜಯಕುಮಾರ್ ಶೆಟ್ಟಿ ಪ್ರವೇಶದ್ವಾರದಲ್ಲಿದ್ದೇ ಸಂಪ್ರದಾಯಿಕ ಸುಖಾಗಮನ ಬಯಸಿದರು.

ಸುರೇಶ್ ಶೆಟ್ಟಿ ಶಿಬರೂರು ಪ್ರಾರ್ಥನೆಯನ್ನಾಡಿದರು. ಬಂಟಗೀತೆಯೊಂದಿಗೆ ಸಮ್ಮೇಳನ ಆದಿಗೊಂಡಿದ್ದು ಕಾರ್ಯಕ್ರಮ ಸಮಿತಿ ಸಂಚಾಲಕ ಉಳ್ತೂರು ಮೋಹನದಾಸ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಅಶೋಕ್ ಪಕ್ಕಳ ಮತ್ತು ಕು| ಸನ್ನಿಧಿ ಹರೀಶ್ ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜೊತೆ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು. ದೇಶ ವಿದೇಶಗಳಿಂದ ನೂರಾರು ಬಂಟ ಮಹಾನೀಯರು ಪಾಲ್ಗೊಂಡಿದ್ದು ಮಧ್ಯಾಂತರದಲ್ಲಿ ಸ್ಪರ್ಧಾರೂಪಕವಾಗಿ ಬಂಟ ಸಮಾಜದ ಸುಮಾರು 19 ತಂಡಳು ಸಾಂಸ್ಕೃತಿಕ ಕಾರ್ಯಕ್ರಮಗಳÀನ್ನು ಪ್ರದರ್ಶಿಸಿದವು.


ವಿಶ್ವದ ಬಂಟ ಸಂಸ್ಥೆಗಳು ಮುಂಬಯಿನ ಬಂಟರ ಭವನದತ್ತ ಮುಖಮಾಡಿದ್ದು, ಸಮ್ಮೇಳನದ ಮಧ್ಯಾಂತರ ದಲ್ಲಿ ಹಿರಿಯ ಬಂಟ ಮುತ್ಸದ್ಧಿ, ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ಅಧ್ಯಕ್ಷತೆಯಲ್ಲಿ `ಬಂಟರ ನಡಿಗೆ ಪ್ರಗತಿಯೆಡೆಗೆ' ವಿಚಾರಗೋಷ್ಠಿ ನಡೆಸಲ್ಪಟ್ಟಿತು. ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕುದಿ ವಸಂತ ಶೆಟ್ಟಿ, ಎಸ್‍ಡಿಪಿಸಿ ಕಟೀಲು ಪ್ರಾಂಶುಪಾಲ ಪೆÇ್ರ| ಬಾಲಕೃಷ್ಣ ಶೆಟ್ಟಿ, ನವ ದೆಹಲಿಯ ಹೆಸರಾಂತ ಸಮಾಜ ಸೇವಕ ವಸಂತ್ ಶೆಟ್ಟಿ ಬೆಳ್ಳಾರೆ, ಎಸ್‍ಎಂ ಶೆಟ್ಟಿ ಕಾಲೇಜು ಪೆÇವಾಯಿ-ಮುಂಬಯಿ ಪ್ರಾಂಶುಪಾಲ ಡಾ| ಶ್ರೀಧರ ಎಸ್.ಶೆಟ್ಟಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಮಂಡಿಸಿದರು.

 

 

 

 

 

 

 

 

 

 

 

 

 

 

 

 

 

 

ಸಮ್ಮೇಳನದ ವೈಶಿಷ್ಟ ್ಯತೆ:
ಶ್ರೀಮತಿ ರಂಜನಿ ಸುಧಾಕರ್ ಹೆಗ್ಡೆ (ತುಂಗಾ) ಸೋಶಿಯಲ್ ವೆಲ್ಫೇರ್ ಅನೇಕ್ಸ್ ಕಟ್ಟಡದ ಆವರಣದಲ್ಲಿ ತುಳುನಾಡ ಸಂಸ್ಕೃತಿ ಬಿಂಬಿಸುವ ವೈಭವೋಪೇತ ಗುತ್ತುದ ಮನೆಯ ಮುಖ್ಯದ್ವಾರಲ್ಲೇ ಚಿತ್ತೈಸಿದ ಆಮಂತ್ರಿತರಿಗೆ ಸಂಪ್ರದಾಯಿಕ ಸುಖಾಗಮನಕ್ಕೆ ಸುಧಾಕರ ಸಾಲ್ಯಾನ್ ಸಂಕಲಕರಿಯ ಏಳಿಂಜೆ ಇವರ ಪ್ರತಿಷ್ಠೆಯ ಕಂಬಳದ ಕೋಣ (ಗೀರ್ದಎರುಲು) ಗಳ ಪ್ರತಿರೂಪಗಳೂ ಬರಮಾಡಿ ಕೊಳ್ಳುವಂತಿತ್ತು. ಮನೆಕಾಯುವ ರಾಟ್‍ವಿಲ್ಹಾರ್ ನಾಯಿ ಬೌಬೌ ಬೊಗಳುತ್ತಾ ನೆಂಟರ ಮನೆ ಯಜಮಾನನಿಗೆ ಆಗಮನದ ಸೂಚನೆ ನೀಡುತ್ತಿದ್ದರೆ. ಅಂಗಳದಲ್ಲಿನ ಗಿಡಬುಡಕ್ಕೆ ಕಟ್ಟಿದ್ದ ಅಂಕದ ಕೋಳಿಗಳೆರಡು ಕೊಕ್ಕೋಕೋಕ್ಕೋ ಎನ್ನುತ್ತಾ ಮನೆಯೊಡತಿಯನ್ನು ಕರೆಯುತ್ತಿದ್ದವು. ಬಂದ ಅತಿಥಿüಗಳು ಕಟ್ಟಿಟ್ಟ ತುಳುವರ ಸಾಂಪತ್ತಿಕ ಬದುಕÀು ಬಿಂಬಿಸುವ ತುಪ್ಪೆ (ಕಣಜ)ಯ ಕಂಡು ಮನೋಲ್ಲಾಸ ಪಡೆದು ಪಕ್ಕದಲ್ಲಿನ ಬಾವಿಕಟ್ಟೆಯತ್ತ ತೆರಳಿ ತಿಳಿನೀರನ್ನು ಕಂಡು ಲಟ್ಟನೆಯ ಮೂಲಕ ನೀರನ್ನೆಳೆದು ಕೈಕಾಲುಗಳನ್ನು ತೊಳೆಯುತ್ತಾ ಹೆಜ್ಜೆಗಳನ್ನಿತ್ತು ತುಳಸೀಕಟ್ಟೆಗೆ ನಮಿಸಿ ನಡೆಯುತ್ತಿದ್ದಂತೆಯೇ ಗುತ್ತಿನ ಮನೆಯಂಗಳದಲ್ಲೇ ಮನೆಮಂದಿ ಸ್ತ್ರೀಯರು ಹಣೆಗೆ ಕುಂಕುಮ ಹಚ್ಚಿ, ಮಂಗ್ಳೂರು ಮಲ್ಲಿಗೆ ಮುಡಿಸಿ ಬರಮಾಡಿಕೊಳ್ಳುತ್ತಿದ್ದತೆಯೇ ಮನೆಯೊಳಗೆ ಪ್ರವೇಶಿಸಿದ ಅತಿಥಿüಗಳು ಅಲ್ಲಿನ ತುಳುವರ ಆರಾಧ್ಯದೈವ, ದೇವರ ಗುಡಿ (ಸಾಣ)ಕ್ಕೆ ನಮಿಸಿ ಕುಶಲೋಪರಿಯನ್ನು ನಡೆಸುವ ರೀತಿ ಯುವ ಪೀಳಿಗೆ ಮಾದರಿಯಾಗಿತ್ತು. ಪ್ರತಿಷ್ಠೆಯ ಅಂಗಳದ ಘನತೆ, ಗುತ್ತಿನ ಮನೆಯತ್ತ ನೋಡಿದರೆ ಹಲವು ಸ್ಥಿತ್ಯಾಂತರಗಳಿಗೆ ಕಾರಣವಾಗಿರುವ ಚಾವಡಿ ಒಂದೆಡೆಯಾದರೆ. ವಿಠಲ ಎಸ್.ಆಳ್ವ ಅವರ ಕ್ರಮಬದ್ಧವಾದ ಆಸನ ವ್ಯವಸ್ಥೆ ಗಣ್ಯರ ಮೆಚ್ಚುಗೆ ಪಾತ್ರವಾಯಿತು. ಚೆಂಡೆವಾದ್ಯಗಳ ನೀನಾದದೊಂದಿಗೆ ಶಿಸ್ತುಬದ್ಧವಾದ ಸ್ವಾಗತ, ಊಟೋಪಚಾರ ಇತ್ಯಾದಿಗಳೊಂದಿಗೆ ರಂಗೇರಿದ ಸಮ್ಮೇಳನವಂತೂ ಪ್ರಶಂಸನೀಯ. ಭೀಮ ಬಲ ನೀಡುವ ಅತ್ಯಾಕರ್ಷಕ `ಗಧೆ'ಯನ್ನು ಸಮ್ಮೇಳನ ಸ್ಮರಣಾರ್ಥ ಚಿಹ್ನೆಯಾಗಿ ನೀಡಿ ಗೌರವಿಸಿದ್ದು ಮತ್ತೊಂದು ವಿಶೇಷತೆಯಾಗಿತ್ತು. ಇವೆಲ್ಲವೂ ಐಕಳ ಹರೀಶ್ ಅವರ ಸಂಘಟನಾ ಚಾತುರ್ಯತೆಗೆ ಕೈಗನ್ನಡಿಯಾಗಿತ್ತು. ಈ ಮಧ್ಯೆ ಮಕ್ಕಳಿಗಾಗಿ ರಚಿಸಿದ ಇಳಿಜಾರು ಬಂಡಿ ಮನೋಲ್ಲಾಸ ನೀಡಿತು.

ಸಹೋದರರ ಸವಾಲ್:
ಪದ್ಮನಾಭ ಪಯ್ಯಡೆ ಅವರು ತನ್ನ ಸಹೋದರ ಮುಂಡಪ್ಪ ಪಯ್ಯಡೆಗೆ ಹಾಗೂ ಐಕಳ ಹರೀಶ್ ಶೆಟ್ಟಿ ತನ್ನ ಸಹೋದರ ಐಕಳ ಗುಣಾಪಾಲ್ ಶೆಟ್ಟಿ ಅವರನ್ನು ಸ್ಮರಣಿಕೆಯನ್ನಿತ್ತು ಗೌರವಿಸಿದ್ದು ಕೂಡು ಕುಟುಂಬಕ್ಕೆ ಸಾಕ್ಷಿಯಾಗಿತ್ತು.ಇವರಂತೆ ಇನ್ನೂ ಅನೇಕ ಸಹೋದರವರ್ಯರು ಸಮುದಾಯದ ಏಕತೆ, ಸರ್ವೋಭಿವೃದ್ಧಿಗೆ ಬಂಟರ ಸಂಘದಲ್ಲಿ ಪರಸ್ಪರ ಸೇವಾ ನಿರತವಾಗಿರುವುದು ಎಲ್ಲರಲ್ಲೂ ಹರ್ಷವನ್ನು ಮೂಡಿಸಿತು. ಸಾಂಸ್ಕೃತಿಕ ಕಾರ್ಯಕ್ರಮಗಳೂ ಒಂದಕ್ಕೊಂದು ನೀತಿಬೋಧಕವಾಗಿದ್ದು ವಿಶೇಷವಾಗಿ ತಮ್ಮ ಮಕ್ಕಳನ್ನು ಕೌಟುಂಬಿಕವಾಗಿ ಬೆಳೆಸಿ ಸಂಸ್ಕಾರವನ್ನು ರೂಪಿಸುವಲ್ಲಿ ಎಚ್ಚರಿಸುವಂತಿದ್ದವು. ಪರದೇಶ ವ್ಯಾಮೋಹಕ್ಕಿಂತ ಸ್ವದೇಶಿ ಬದುಕಿನೊಂ ದಿಗೆ ಸಂಬಂಧ್ಯವನ್ನು ಮೈಗೂಡಿಸಿ ಬಾಳುವ ಸಂದೇಶ ನೀಡುವಂತಿದ್ದವು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal