About Us       Contact

 


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.17: ಪೇಜಾವರ ಮಾಗಣೆ ಪೋರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನ ಕೆಂಜಾರು ಪೋರ್ಕೋಡಿ ಶ್ರೀ ಸೋಮನಾಥೇಶ್ವರ ದೇವರ ಬ್ರಹ್ಮಕಲಶ ಉತ್ಸವದ ನಿಮಿತ್ತ ಸಮಾಲೋಚನಾ ಸಭೆಯನ್ನು ಇಂದಿಲ್ಲಿ ಶನಿವಾರ ಸಂಜೆ ಸಯನ್ ಪಶ್ಚಿಮದ ಸದ್ಗುರು ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಮುಂಬಯಿ ಸಮಿತಿ ಅಧ್ಯಕ್ಷ ನವೀನ್ ಎನ್.ರೈ ಚಿಕ್ಕಪರಾರಿ ಅಧ್ಯಕ್ಷತೆಯಲ್ಲಿ ನೇರವೇರಿಸಲ್ಪಟ್ಟ ಸಭೆಯನ್ನು ಕಾರ್ಯಾಧ್ಯಕ್ಷರು ಡಾ| ಜಯರಾಮ ಶೆಟ್ಟಿ ಬಜಪೆ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ವೇದಿಕೆಯಲ್ಲಿ ವಿಶ್ವರ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬೊಂಬೇ ಬಂಟ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ಅಡ್ವಕೇಟ್ ಸುಭಾಷ್ ಬಿ.ಶೆಟ್ಟಿ, ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷ ಎಲ್.ವಿ.ಅಮೀನ್ ಉಪಸ್ಥಿತರಿದ್ದರು.

 

 

 

 

 

ಡಾ| ಜಯರಾಮ ಶೆಟ್ಟಿ ಮಾತನಾಡಿ ದೇವಸ್ಥಾನದ ಸಾನಿಧ್ಯ ಶುದ್ದಿ ಸಮರ್ಪಣೆಗೆ ಶುಭಾವಸರವಾಗಿದೆ. ಅಂತೆಯೇ ಬ್ರಹ್ಮಕಲಶೋತ್ಸವವನ್ನು ವಿಧಿವತ್ತಾಗಿ ಹಮ್ಮಿಕೊಂಡಿದ್ದೇವೆ. ಈ ಉತ್ಸವ ಆಡಂಬರ ಅಲ್ಲದಿದ್ದರೂ ಕ್ರಮಬದ್ಧವಾಗಿ, ಧಾರ್ಮಿಕವಾಗಿ ನಡೆಸುವವರಿದ್ದೇವೆ. ನಮ್ಮ ದೇವಸ್ಥಾನ ನಮ್ಮ ಕಾಯಕ ಎನ್ನುವ ಮನೋಭಾವವಿರಿಸಿ ಆಗಮಿಸಿ ಕ್ಷೇತ್ರದ ಮತ್ತು ನಾಡಿನ ಸರ್ವೋನ್ನತಿಗಾಗಿ ಶ್ರಮಿಸುವರೇ ಕೋರುತ್ತೇನೆ ಎಂದರು.

ನವೀನ್ ಎನ್.ರೈ ಮಾತನಾಡಿ ದೇವಸ್ಥಾನಗಳು ಸಂಸ್ಕಾರ ನೀಡುವ ಕ್ಷೇತ್ರಗಳಾಗಿವೆ. ಆದುದರಿಂದ ತವರೂರ ಕ್ಷೇತ್ರಗಳ ಎಲ್ಲಾ ಕೆಲಸಗಳು ಪ್ರತೀಯೋರ್ವ ಆಸ್ತಿಕರದ್ದಾಗಿದೆ. ಅಂತೆಯೇ ತಾವೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಎಲ್ಲಾ ಧಾರ್ಮಿಕ ಸೇವೆಗಳಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಿರಿ ಎಂದರು.

 

 

 

 

 

 

ಸಭೆಯಲ್ಲಿ ಕೋಶಾಧಿಕಾರಿ ಸುರೇಶ ಶೆಟ್ಟಿ ಬಜಪೆ ಅರೆಕಲ್ಲು, ಸುನೇತ್ರ ಶೆಟ್ಟಿ, ಸುಕೇಶ್ ಶೆಟ್ಟಿ, ಸುರೇಂದ್ರ ಪೆರ್ಗಡೆ, ಮುಂಬಯಿ ಸಮಿತಿ ಸದಸ್ಯರುಗಳಾದ ವಿಜಯ ಶೆಟ್ಟಿ ಚಿಕ್ಕಪರಾರಿ, ಕರುಣಾಕರ ಶೆಟ್ಟಿ ನಾರ್ಯನಡಿಗುತ್ತು, ಪ್ರತಾಪ್ ಜಿ.ಶೆಟ್ಟಿ ಪಡ್ಡೋಡಿಗುತ್ತು, ಲೀಲಾ ಶೆಟ್ಟಿ ಪಡ್ಡೋಡಿಗುತ್ತು, ವನಜ ಕೆ.ಶೆಟ್ಟಿ ಪಡ್ಡೋಡಿಗುತ್ತು, ಮನೋರಮಾ ಎಸ್.ಶೆಟ್ಟಿ ಪಡ್ಡೋಡಿಗುತ್ತು, ಲೋಕನಾಥ ಎ.ಶೆಟ್ಟಿ, ಸೋಮಶೇಖರ ಶೆಟ್ಟಿ ಚಿಕ್ಕಪರಾರಿ, ಶಂಕರ ಎಲ್.ಶೆಟ್ಟಿ ಅಚಾರಿಬೆಟ್ಟು, ರವಿ ಶೆಟ್ಟಿ ಹೊಸಮನೆ, ಪೂವಣಿ ಮಡಿವಾಳ, ಸುಭಾಶ್ ಶೆಟ್ಟಿ ಅರೆಕಲ್ಲು, ಮಾಧವ ಕಯ್ಯ ಚಾವಡಿದಡಿ, ಭಗವಾನ್ ಆಳ್ವ ಮುಂಡಾರುಗುತ್ತು, ಶೇಖರ ಜೋಗಿ ಪೋರ್ಕೋಡಿ, ಪೂವಪ್ಪ ಪೂಜಾರಿ ಪಿಲ್ಚಂಡಿ ಗುಡ್ಡೆ, ಸುರೇಂದ್ರ ಶೆಟ್ಟಿ ಹೊಸಮನೆ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶ್ರೀ ಸೋಮನಾಥೇಶ್ವರ ದೇವರ ಬ್ರಹ್ಮಕಲಶ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಭಕ್ತಾಭಿಮಾನಿಗಳಿಗೆ ವಿತರಿಸಿದರು.

ಉದಯ ಶೆಟ್ಟಿ ಪಡ್ಡೋಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆಗೈದರು. ಇದೇ ಮಾ.26ರಿಂದ ಎಪ್ರಿಲ್ 05 ವರೆಗೆ ಶ್ರೀ ಕ್ಷೇತ್ರದಲ್ಲಿ ಜರುಗುವ ಉತ್ಸವದಲ್ಲಿ ಮುಂಬಯಿ ನೆಲೆವಾಸಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನವೀನ್ ಎನ್.ರೈ ಕೋರಿದರು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal