About Us       Contact

ಬಂಟ್ವಾಳ, Oct 18 : ಆಧ್ಯಾತ್ಮಿಕ ವಾಗಿ ಶ್ರದ್ದಾ ಭಕ್ತಿಯಿಂದ ನಡೆದುಕೊಳ್ಳುವ ಪ್ರತಿಯೊಬ್ಬ ನು ಜೀವನದಲ್ಲಿ ಯಶಸ್ಸು ಕಂಡಿದ್ದಾರೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅದ್ಯಕ್ಷ ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಹೇಳಿದರು.

ಡಾ! ಭಟ್ ಅವರು ಶ್ರೀ ಮಹಾಗಣಪತಿ ದೇವಸ್ಥಾನ ಬೊಂಡಾಲ, ಪಾಣೆಮಂಗಳೂರು ಜೀರ್ಣೋದ್ಧಾರದ ಅಂಗವಾಗಿ ವಿಜ್ಞಾಪಣಾ ಪತ್ರವನ್ನು ದೇವಸ್ಥಾನದ ಅಂಗಣದಲ್ಲಿ ಇಂದು ಬೆಳಿಗ್ಗೆ ಬಿಡುಗಡೆ ಮಾಡಿ ಮಾತನಾಡಿದರು. ದೇವಾಲಯ ಗಳು ಭಕ್ತಿ ಮತ್ತು ಶಕ್ತಿಯ ಕೇಂದ್ರ ವಾಗಿರುವುದರಿಂದ ಇಂತಹ ಕೇಂದ್ರ ಗಳ ಜೀರ್ಣೋದ್ಧಾರ ಗಳು ಆಗಬೇಕಾಗಿದೆ ಎಂದರು. ‌

ದೇವಾಲಯ ಗಳು ಅಧ್ಯಾತ್ಮಿಕ ಶಕ್ತಿ ಯನ್ನು ನೀಡುವ , ಸಂಸ್ಕಾರ, ಧರ್ಮಶಿಕ್ಷಣ, ಇತಿಹಾಸ ಚರಿತ್ರೆಯ ನ್ನು ಪೋಷಿಸುವ ಕೇಂದ್ರವಾಗಿದೆ. ದೇವರು ನಂಬಿಕೆಯ ಶ್ರದ್ಧೆ ಯ ಪ್ರತೀಕವಾಗಿ ದೆ. ಇಂತಹ ಶ್ರದ್ದಾ ಕೇಂದ್ರ ಗಳ ಬಗ್ಗೆ ಯೆ ಅನೇಕ ಕಡೆಗಳಲ್ಲಿ ದಾಳಿಯಾಗುತ್ತಿದೆ. ಇದು ನಂಬಿಕೆಯ ಪ್ರಶ್ನೆಯಾಗಿದೆ ಎಂದರು. ‌

ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ಮಾತನಾಡಿ ಭಜನೆಯ ಮೂಲಕ ಧಾರ್ಮಿಕವಾಗಿ ಒಟ್ಟಾದ ಹಿಂದೂ ಸಮಾಜ ವಿಭಜನೆ ಯಾರಿಂದಲೂ ಸಾಧ್ಯವಿಲ್ಲ ಎಂದರು. ಧಾರ್ಮಿಕ ಕೇಂದ್ರ ಗಳ ಅಭಿವೃದ್ಧಿ ಯ ಜೊತೆ ಸಂಸ್ಕಾರ ಮತ್ತು ನಂಬಿಕೆಯನ್ನು ಉಳಿಸುವ ಕೆಲಸ ಮಾಡೋಣ ಎಂದರು.

ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಅವರ ಸಹಾಯಕ ಜಗನ್ನಾಥ ಬಂಗೇರ ಮಾತನಾಡಿ ಇಂತಹ ಕಾರ್ಯಗಳ ಜೊತೆ ಯುವಕರನ್ನು ಹೆಚ್ಚು ತೊಡಗಿಸಿಕೊಂಡಾಗ ಮುಂದಿನ ಪೀಳಿಗೆಗೆ ಧರ್ಮ ದ ಉಳಿವು ಸಾಧ್ಯ ಎಂದು ಅವರು ಹೇಳಿದರು.

ಜೀರ್ಣೋದ್ದಾರ ದ ಕಾರ್ಯಕ್ಕೆ ಎರಡು ಲಕ್ಷ ರೂ ನೀಡುವುದಾಗಿ ಇದೇ ಸಂಧರ್ಭದಲ್ಲಿ ತಿಳಿಸಿದರು.

ಟೆಲಿಕಾಂ ನಿವ್ರತ್ತ ಜನರಲ್ ಮ್ಯಾನೇಜರ್ ಮಹಾಬಲ ಶೆಟ್ಟಿ ಕಕ್ಕೆಮಜಲು, ಬಂಟ್ವಾಳ ತಾಲೂಕು ಗಾಣಿಗರ ಸೇವಾಸಂಘದ ಅದ್ಯಕ್ಷ ರಘು ಸಪಲ್ಯ , ಜಿಪಂ ಸದಸ್ಯೆ ಕಮಲಾಕ್ಷೀ ಕೆ ಪೂಜಾರಿ, ಪುರಸಭಾ ಸದಸ್ಯ ಜನಾರ್ಧನ ಬೊಂಡಾಲ, ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಜನಾರ್ದನ ಕುಲಾಲ್ ನಾಗ್ತಿಮಾರ್, ಬೊಂಡಾಲ ವಿನೋದ್ ಶೆಟ್ಟಿ, ದಯಾನಂದ ಕುಮಾರ್ ಬೊಂಡಾಲ, ದೇವೇಂದ್ರ ಶೆಟ್ಟಿ ಮಂಗಳೂರು, ನಾಗೇಶ್ ಕಲ್ಲಡ್ಕ , ಸುಬ್ರಹ್ಮಣ್ಯ ಭಟ್ ಕಲ್ಲಡ್ಕ, ಪ್ರೇಮ್ ಕುಮಾರ್ ಶೆಟ್ಟಿ, ಸುಕೇಶ್ ಶೆಟ್ಟಿ, ಪ್ರವೀಣ್ ಅಮೀನ್ ಮತ್ತು ವಸಂತ ಅಂಚನ್ ಕಾಪಿಕಾಡು ಉಪಸ್ಥಿತರಿದ್ದರು.

ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ದೇವಸ್ಥಾನ ಸಮಿತಿ ಅದ್ಯಕ್ಷ ಮಾಜಿ ಶಾಸಕ ಕೆ ಪದ್ಮನಾಭ ಕೊಟ್ಟಾರಿ ಪ್ರಸ್ತಾವಿಕವಾಗಿ ಮಾತನಾಡಿ ಧಾರ್ಮಿಕ ವಾಗಿ ಮತ್ತು ಜ್ಞಾನ ಅಭಿವೃದ್ಧಿ ಗಾಗಿ ದೇವಾಲಯ ಕೂಡ ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದರು.

ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ದೇವಸ್ಥಾನ ದ ಉಪಾಧ್ಯಕ್ಷ ನಾಗೇಶ್ ಶೆಟ್ಟಿ ಬೊಂಡಾಲ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜಯರಾಮ ಹೊಳ್ಳ ನಾಗ್ತಿಮಾರು ವಂದಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal