About Us       Contact

 

 


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಅ.10: ಗೌಡ ಸಾರಸ್ವತ್ ಬ್ರಾಹ್ಮಣ್ ಸಭಾ ದಹಿಸರ್ ಬೊರಿವಲಿ ಸಂಸ್ಥೆಯು ವಾರ್ಷಿಕವಾಗಿ ಆಚರಿಸುವಂತೆ ಈ ಬಾರಿ ಹನ್ನೊಂದನೇ ವಾರ್ಷಿಕ ನವರಾತ್ರಿ ಉತ್ಸವವನ್ನು ಸಂಭ್ರಮ ಸಡಗರ, ಸಂಪ್ರದಾಯಿಕ ಪೂಜಾಧಿಗಳಿಂದ ಆಚರಿಸುತ್ತಿದ್ದು ಇಂದಿಲ್ಲಿ ಬುಧವಾರ ಬೆಳಿಗ್ಗೆ ನವರಾತ್ರಿ ಉತ್ಸವ 2018ಕ್ಕೆ ಧಾರ್ಮಿಕ ವಿಧಿಗಳೊಂದಿಗೆ ಚಾಲನೆಯನ್ನೀಡಿತು. ಕುಲಗುರು ದೈವಕ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಗಳ ಕೃಪೆ ಮತ್ತು ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಆಶೀರ್ವಾದಗಳೊಂದಿಗೆ ದಹಿಸರ್ ಪೂರ್ವದ ಎನ್.ಎಲ್ ಕಾಂಪ್ಲೆಕ್ಸ್‍ನ ಸಾರಸ್ವತ ಕಲ್ಚರಲ್ ಎಂಡ್ ರಿಕ್ರಿಯೇಷನ್ ಸೆಂಟರ್ ಮೈದಾನದಲ್ಲಿ ನಿರ್ಮಿತ ಮಾಧವೇಂದ್ರ ಸಭಾ ಮಂಟಪÀದಲ್ಲಿ ರಚಿತÀ ಪುಷ್ಪಾಲಂಕೃತ ಭವ್ಯ ಮಂಟಪದಲ್ಲಿ ರಜತ ಪ್ರಭಾವಳಿಯೊಂದಿಗೆ ಸ್ವರ್ಣಮುಕುಟ, ವಜ್ರ, ಚಿನ್ನಾಭರಣ, ಶ್ರೀಸರಸ್ವತಿ ದೇವಿಯನ್ನು ಬೆಳಿಗ್ಗೆ ಶ್ರೀ ಹರಿ ಗುರು ಸೇವಾ ಪ್ರತಿಷ್ಠಾನ ಗೊಳಿಸಿ ನಂತರ ಪ್ರಾಣ ಪ್ರತಿಷ್ಠೆ ನಡೆಸುವ ಮುಖೇನ ಹನ್ನೊಂದನೇ ವಾರ್ಷಿಕ `ದಹಿಸರ್ ದಸರಾ' ಮಹೋತ್ಸವಕ್ಕೆ ಭಕ್ತಿಪೂರ್ವಕವಾಗಿ ಚಾಲನೆ ನೀಡಲಾಯಿತು.

ವೇದಮೂರ್ತಿ ಲಕ್ಷ್ಮೀ ನಾರಾಯಣ ಭಟ್ ತಮ್ಮ ಪೌರೋಹಿತ್ಯದಲ್ಲಿ ವಿವಿಧ ಪೂಜಾಧಿಗಳನ್ನು ನೆರವೇರಿಸಿ ಸದ್ಭಕ್ತರನ್ನು ಹರಸಿದರು. ಪುರೋಹಿತರಾದ ವೇ| ಮೂ| ಉಲ್ಲಾಸ್ ಭಟ್, ವೇ| ಮೂ| ಮಂಜುನಾಥ್ ಪುರಾಣಿಕ್, ವೇ| ಮೂ| ಪ್ರಶಾಂತ್ ಪುರಾಣಿಕ್, ವೇ| ಮೂ| ವಿನಾಯಕ ಭಟ್, ವೇ| ಮೂ| ಮೋಹನ್ ಭಟ್, ವೇ| ಮೂ| ಹರೀಶ್ ಭಟ್ ಮತ್ತಿತರ ವಿದ್ವಾನರು ಪೂಜಾಧಿಗಳ ಸಹಭಾಗಿತ್ವ ವಹಿಸಿದ್ದರು. ಮಧ್ಯಾಹ್ನ ಸುಧೀಂದ್ರ ನಗರ ಭಜನಾ ಮಂಡಳಿ ಮತ್ತು ಸಂಜೆ ಮಕ್ಕಳಿಂದ ಭಜನೆ ನಡೆಸಲ್ಪಟ್ಟಿತು.

 

 

 

 

ಈ ಸಂದರ್ಭದಲ್ಲಿ ಗೌಡ ಸಾರಸ್ವತ್ ಬ್ರಾಹ್ಮಣ್ ಸಭಾ ದಹಿಸರ್ ಬೊರಿವಲಿ ಸಂಸ್ಥೆಯ ಸಂಚಾಲಕರಾದ ಕುಂದಾಪುರ ಶ್ರೀನಿವಾಸ ಪ್ರಭು, ಜಿ.ಡಿ ರಾವ್, ಸಿ.ಎಂ.ಎಸ್ ರಾವ್, ಶೋಭಾ ವಿ.ಕುಲ್ಕರ್ಣಿ, ಸಗುಣಾ ಕೆ. ಕಾಮತ್, ಅಧ್ಯಕ್ಷ ಕೆ.ಆರ್.ಮಲ್ಯ, ಉಪಾಧ್ಯಕ್ಷ ಸಾಣೂರು ಮೋಹನ್ ವಿ.ಕಾಮತ್, ಗೌ| ಪ್ರ| ಕಾರ್ಯದರ್ಶಿ ಎಂ.ಉದಯ ಪಡಿಯಾರ್, ಗೌ| ಕೋಶಾಧಿಕಾರಿ ಮೋಹನ್ ಎ.ಕಾಮತ್, ಜತೆ ಕಾರ್ಯದರ್ಶಿಗಳಾದ ವಿನೋದ್ ಕೆ.ಪ್ರಭು ಮತ್ತು ಶಿವಾನಂದ ಇ.ಭಟ್ ಸೇರಿದಂತೆ ಸೇವಾಕರ್ತರು, ಭಕ್ತರÀನೇಕರು ಉಪಸ್ಥಿತರಿದ್ದರು.

ಉತ್ಸವದ ಒಂಭತ್ತು ದಿನಗಳಲ್ಲಿ
ಹರಿಗುರು ಸೇವಾ ಪ್ರತಿಷ್ಠಾನ ಮತ್ತು ಪ್ರಾಣ್ ಪ್ರತಿಷ್ಠಾನ ಇವುಗಳ ಸೇವೆಯೊಂದಿಗೆ ಸರಸ್ವತಿ ದೇವಿ ಪ್ರತಿಷ್ಠಾಪನೆಗೈದು ಪೂಜೆ ನೆರವೇರಿಸಿ ನವರಾತ್ರಿ ಉತ್ಸವಕ್ಕೆ ಚಾಲನೆಯನ್ನೀಡಲಾಯಿತು. ಉತ್ಸವದ 9 ದಿನಗಳಲ್ಲೂ ಶ್ರೀ ದೇವಿಯನ್ನು ವಿಭಿನ್ನ ಸ್ವರೂಪಳಿಂದ ಶೃಂಗರಿಸಿ ಪೂಜಿಸಲಾಗುವುದು. ಅಂತೆಯೇ ಕ್ರಮವಾಗಿ ಇಂದು (ಅ.11) ಗುರುವಾರ ಅನ್ನಪೂರ್ಣೇಶ್ವರಿ, ಚಾಮುಂಡೇಶ್ವರಿ, ಮಹಾಲಕ್ಷ್ಮೀ, ದುರ್ಗಾ ಪರಮೇಶ್ವರಿ, ಶಾಂತಾದುರ್ಗಾ, ಚಂಡಿಕಾ ದೇವಿ, ಮಹಾಕಾಳಿ, ವೈಷ್ಣೋದೇವಿ, ಅ.19ರ ಶುಕ್ರವಾರ ವಿಜಯದಶಮಿ ದಿನ ಶಾರದಾ ದೇವಿಯನ್ನು ಪೂಜಿಸಿ ಸಂಜೆ ವಿಸರ್ಜನೆ ನಡೆಸಲಾಗುವುದು.

ಇಂದು (ಅ.11) ಗುರುವಾರ ಬೆಳಿಗ್ಗೆ ಬಂಟ್ಸ್ ಸಂಘ ಜೋಗೇಶ್ವರಿ ದಹಿಸರ್ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನೆ, ಸಂಜೆ ಸಂಸ್ಕೃತಿ ಕಲ್ಚರಲ್ ಅಕಾಡೆಮಿ ದಹಿಸರ್‍ನ ಕಲಾವಿದರಿಂದ ಭರತನಾಟ್ಯಂ ಪ್ರದರ್ಶನ. ಅ.12ನೇ ಶುಕ್ರವಾರ ಬೆಳಿಗ್ಗೆ ಮನೀಷಾ ಬುರ್ಡೆ ಬಳಗದ ಮೌಲಿ ಭಜನಾ ಮಂಡಳಿಯಿಂದ ಭಜನೆ. ಸಂಜೆ ಮಾಧವಿ ನೃತ್ಯಾ ವಿದ್ಯಾಲಯದ ಕಲಾವಿದರಿಂದ ಗುರು ಉಣ್ಣಿ ಕೃಷ್ಣನ್ ವಾಸು ನಿರ್ದೇಶನದಲ್ಲಿ ನೃತ್ಯ ಪ್ರದರ್ಶನ ಮತ್ತು ಅಕ್ಷಯ್ ಅಹಿರೆ ಮತ್ತು ಬಳಗದ ಭರತನಾಟ್ಯಂ. ಅ.13ನೇ ಶನಿವಾರ ಬೆಳಿಗ್ಗೆ ಹರಿಬೋಲ ಭಜನಾ ಮಂಡಳಿಯಿಂದ ಭಜನೆ, ಸಂಜೆ ವಿದ್ಯಾ ಶ್ರೀರಾಮ್ ಅವರಿಂದ ಆಧ್ಯಾತ್ಮಿಕ ಆರಾಧನಾ ಕೀರ್ತಿನೋಟ, ಮಹಿಳೆಯರಿಂದ ಹಳದಿಕುಂಕುಮ, ಅ.14ನೇ ಆದಿತ್ಯವಾರ ಬೆಳಿಗ್ಗೆ ಆಶ್ವಿನಿ ಪ್ರಭು ಮತ್ತು ಪೂರ್ವಿ ಪ್ರಭು ಅವರಿಂದ ಭಜನೆ, ಸಂಜೆ ಶಕ್ತಿ ಬಳಗದಿಂದ ನೃತ್ಯಾವಳಿಗಳು ಮತ್ತು ಸಂಜೆ ಸುಜಾತಾ ಎ.ಶೆಟ್ಟಿ ಪ್ರಾಯೋಜಕತ್ವದಲ್ಲಿ ಮನೋರಂಜನಾ ವೈವಿಧ್ಯತೆ. ಅ.15ನೇ ಸೋಮವಾರ ಬೆಳಿಗ್ಗೆ ಸ್ವರಾಂಜಲಿ ಭಜನಾ ಮಂಡಳಿಯಿಂದಭಜನೆ, ಸಂಜೆ ಗುರುವಾರಿಯಾ ರೂಪಾಲಿ ದೇಸಾಯಿ ಇವರ ಸಂಕಲ್ಪನೆ ಮತ್ತು ನಿರ್ದೇಶನದಲ್ಲಿ ಸಂಸ್ಕೃತಿ ಕಲಾಮಂದಿರದ ಪ್ರತಿಭೆಗಳಿಂದ ನೃತ್ಯವೈವಿಧ್ಯ ಕಾರ್ಯಕ್ರಮ ಅ.16ನೇ ಮಂಗಳವಾರ ಸಿನೀಯರ್ ಸಿಟಿಝನ್ ಸಹಯೋಗ್ ಸೆಂಟರ್ ದಹಿಸರ್ ಅವರಿಂದ ಭಜನೆ, ಸಂಜೆ ಉಮಾ ನಂಬಿಯಾರ್ ಇವರ ಮುದ್ರಾ ಡ್ಯಾನ್ಸ್ ಅಕಾಡೆಮಿ ಇವರಿಂದ ಭರತನಾಟ್ಯಂ. ಅ.17ನೇ ಬುಧವಾರ ಬೆಳಿಗ್ಗೆ ವಿಘ್ನಾರ್ಥ ಭಜನಾ ಮಂಡಳಿಯಿಂದ ಭಜನೆ. ಸಂಜೆ ದೀಪೆÇೀತ್ಸವ. ಅ.18ನೇ ಗುರುವಾರ ಬೆಳಿಗ್ಗೆ ಮಹಿಷಾ ಮರ್ಧಿನಿ ಭಜನಾ ಮಂಡಳಿಯಿಂದ ಭಜನೆ. ಸಂಜೆ ರಿತೂ ಮಣಿಕ್ ಇವರಿಂದ ಭರತನಾಟ್ಯಂ. ಅ.19ನೇ ಶುಕ್ರವಾರ ಬೆಳಿಗ್ಗೆ 9.00 ಗಂಟೆಗೆ ವಿದ್ಯಾಥಿರ್sಗಳಿಗೆ ಪುಸ್ತಕ ವಿತರಣೆ, ನಂತರ ಜಿಎಸ್‍ಬಿ ಸಮಾಜ ಮುಂಬಯಿ ಬಾಲ ಭಜನಾ ಮಂಡಳಿಯಿಂದ ಭಜನೆ. ಸಂಜೆ 4.00 ಘಂಟೆಗೆ ಭಕ್ತರಿಂದ ಶ್ರೀದೇವಿಗೆ ಬಂದ ಸೀರೆಗಳ ಲಕ್ಕಿಡ್ರಾ ಕಾರ್ಯಕ್ರಮ, ಸಂಜೆ 5.00 ಗಂಟೆಗೆ ವಿಸರ್ಜನಾ ಮೆರವಣಿಗೆ ನೇರವೇರಲಿದೆ. ಉತ್ಸವದ ಎಲ್ಲಾ ದಿನಗಳಲ್ಲೂ ಸಂಜೆ 7.00 ಗಂಟೆಯಿಂದ ರಾತ್ರಿ 10.00 ಗಂಟೆ ವರೇಗೆ ಗರ್ಭಾ ದಾಂಡಿಯಾರಾಸ್ ನೃತ್ಯ ನೇರವೇರಲಿದೆ.

ಆ ಪ್ರಯುಕ್ತ ವಾರ್ಷಿಕವಾಗಿ ನಡೆಸಲ್ಪಡುವ ಈ ಶರನ್ನವರಾತ್ರಿ ಮಹೋತ್ಸವದಲ್ಲಿ ನಾಡಿನ ಸಮಸ್ತ ಭಕ್ತರು ಆಗಮಿಸಿ ಶ್ರೀಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ಉತ್ಸವದ ಪ್ರಧಾನ ಸಂಘಟಕ, ಉಪಾಧ್ಯಕ್ಷ ಸಾಣೂರು ಮೋಹನ್ ವಿ.ಕಾಮತ್ ಮತ್ತು ಗೌ| ಪ್ರ| ಕಾರ್ಯದರ್ಶಿ ಉದಯ ಪಡಿಯಾರ್ ತಿಳಿಸಿದ್ದಾರೆ.

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal