About Us       Contact

(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.17: ಮಹಾನಗರದಲ್ಲಿನ ಮರಾಠಿ, ತುಳುಕನ್ನಡಿಗರ ಸಾಮರಸ್ಯದ ಬಾಳ್ವೆಗೆ ಹೆಸರುವಾಸಿಯಾದ ಚೆಂಬೂರು ತಿಲಕನಗರದಲ್ಲಿನ ಸಹ್ಯಾದ್ರಿ ಕ್ರೀಡಾ ಮಂಡಲ (ರಿ.) ಸಾರ್ವಜನಿಕ ಗಣೇಶೋತ್ಸವ ಸಮಿತಿ ಈ ಬಾರಿ 42ನೇ ವಾರ್ಷಿಕ ಗಣೇಶೋತ್ಸವ ಸಂಭ್ರಮ ಸಡಗರದಿಂದ ಆಚರಿಸಿತು. ಹೊಸತನಕ್ಕೆ ಪ್ರಸಿದ್ದಿ ಪಡೆದ ಈ ಮಂಡಲವು ಈ ಬಾರಿ ಪ್ಲಾಸ್ಟಿಕ್, ಥರ್ಮೋಕೊಲ್ ಇನ್ನಿತರ ಪರಿಸರ ಮಾಲಿನ್ಯ ಅಥವಾ ಪರಿಸರ ಹಾನಿಕಾರಕ ವಸ್ತುಗಳನ್ನು ಬಳಸÀದೆ ಮುಂಬಯಿನಲ್ಲೊಂದು ಪರಿಸರಸಯ್ಯ ಮನಾಕರ್ಷಕ, ಚಿತ್ತಕಾರ್ಷಕ, ಭಕ್ತಿ ಮೈಗೂಡಿಸುವ ಅಯೋಧ್ಯಾ ಶ್ರೀರಾಮ ಮಂದಿರ ರೂಪಿತ ಗಣಪತಿ ಮಂಡಲ ರಚಿಸಿ ಭಕ್ತರನ್ನು ಸೆಳೆಯುತ್ತಿದೆ.

ಹಿಂದೂ ದೇವಾಲಯದ ಸಂಪ್ರದಾಯಿಕ ಪರಂಪರೆಯಂತೆ ಮಂದಿರದ ಮೇಲ್ಛಾವಣಿಯಲ್ಲಿ ಮೂರು ಕಲಶಗಳನ್ನು ಇರಿಸಲಾಗಿದ್ದು ಪ್ರಧಾನ ಕಲಶ ಸುಮಾರು 550 ಕಿಲೋ ಭಾರವಿದ್ದು ಅದನ್ನು ಬೃಹತ್ ಕ್ರೇನ್ ಮೂಲಕ ಇರಿಸಲಾಗಿದೆ. ಶಿವಾಜಿ ಮಹಾರಾಜ್, ಬಾಬಾ ಸಹೇಬ್ ಅಂಬೇಡ್ಕರ್ ಮತ್ತು ಗಣೇಶೋತ್ಸವದ ಜನಕ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಪುಸ್ಥಳಿಗಳ ಸ್ವಾಗತಕಟ್ಟೆಯ ಸುತ್ತ ಹನುಮಂತನು ರಾಮಸೇತು ಬಳಿ ಬರೆದಿಟ್ಟ ಕಪ್ಪುಕಲ್ಲುಗಳ ಕೋಟೆಯೊಳಗೆ ಈ ಮಂದಿರ ನಿರ್ಮಿಸಲಾಗಿದೆ. ಭವ್ಯ ದೇವಾಲಯದ ಒಳಗೆ ಚಿತ್ರಕಲಾಕಾರರಾದ ನಿತೇಶ್ ಕುಮಾರ್ ಮತ್ತಿ ನಿತಿಲೇಶ್ ಕುಮಾರ್ ಸಹೋದರರು ರಚಿಸಿದ ಶ್ರೀರಾಮ ಚರಿತ್ರೆಯ ಸಂದೇಶ ಸಾರುವ ಚಿತ್ರಗಳು ಗೋಡೆಯಲ್ಲಿ ರಾರಜಿಸುತ್ತಿದ್ದು ಅಧ್ಯಕ್ಷ ರಾಹುಲ್ ಗಜಾನನ ವಾಲಂಜ್ ಅವರ ಪರಿಕಲ್ಪನೆಯಲ್ಲಿ ಇತಿಹಾಸಕರ್ತರ ನಿರ್ದೇಶನದಲ್ಲಿ ಮಂದಿರ ನಿರ್ಮಾಣಗೊಂಡಿದೆ. ಸುಜತಾ ವಾಲಂಜ್ ಅವರ ಸೇವೆಯಂತೆ ದೈನಂದಿನವಾಗಿ ಗಣಪತಿ ವಸ್ತ್ರಾಲಂಕಾರ ಬದಲಾವಣೆ ನಡೆಸಿ ಶ್ರೀ ಗಣಪನನ್ನು ಆರಾಧಿಸಲಾಗುತ್ತಿದೆ. ಕಾರ್ಯದರ್ಶಿ ಅಶೋಕ್ ಸಾತರ್ಡೇಕರ್, ಕೋಶಾಧಿಕಾರಿ ರಾಜೇಂದ್ರ ಮೋಹಿತೆ, ಮಂಗೇಶ್ ಅದಟ್ರಾ ಮತ್ತಿತರ ಸೇವೆಯೊಂದಿಗೆ ಪೂಜಿಸಲ್ಪಡುವ ಇಲ್ಲಿ ವಿವಿಧ ಕ್ಷೇತ್ರಗಳ ದಿಗ್ಗಜರು ಆಗಮಿಸಿ ಬೇಡಿಕೆಗಳನ್ನು ವ್ಯಕ್ತಪಡಿಸಿ ಧ್ಯನರೆಣಿಸುತ್ತಿದ್ದಾರೆ.

ಛೋಟಾ ರಾಜನ್ ಮಂಡಳಿ ಎಂದೇ ಜನಜನಿತ ಈ ಸಹ್ಯಾದ್ರಿ ಕ್ರೀಡಾ ಮಂಡಲವು ಈ ಹಿಂದೆ ಮೈಸೂರು ಪ್ಯಾಲೇಸ್ ನಿರ್ಮಿಸಿ ಲಕ್ಷಾಂತರ ಭಕ್ತರನ್ನು ಆಕರ್ಷಿಸಿ ಬಾರೀ ಜನಪ್ರಿಯತೆ ಪಡೆದಿತ್ತು. ಈ ಬಾರಿ 42ನೇ ವಾರ್ಷಿಕ ಗಣಪತಿ ಉತ್ಸವದ ಶುಭಾವಸರದಲ್ಲಿ ಅಯೋಧ್ಯಾ ಶ್ರೀರಾಮ ಮಂದಿರ ಸೃಷ್ಠಿಸಿ ವಿಶೇಷತೆ ಮೆರೆದಿದೆ. ಉತ್ಸವವು ಬಹಳ ಸದ್ದುಗದ್ದಲ, ಸಂಭ್ರಮ ಸಡಗರದಿಂದ ವಿಜೃಂಭನೆಯಿಂದ ನಡೆಸಲ್ಪಡುತ್ತಿದ್ದು, ಮಂಡಲದ ಸಭಾಂಗಣ ಹೊರ, ಒಳ ಆವಾರಣಗಳು ಮನಾಕರ್ಷಕವಾಗಿ ಶೃಂಗಾರಿಸಿ ಮನಸ್ಸೆಳೆಯುವಂತೆ ನಿರ್ಮಿಸಲಾಗಿದೆ.

ಸ್ಥಾನೀಯ ನಿವಾಸಿ ಛೋಟ ರಾಜನ್ (ನಿಕಾಳ್ಜೆ) ಅವರ ಸಾರಥ್ಯದ ಮಂಡಳಿ ಎಂದೇ ಪ್ರಸಿದ್ಧಿಯೊಂದಿಗೆ ಕಳೆದ ಸುಮಾರು ನಾಲ್ಕು ದಶಕಗಳಿಂದ ಅತೀ ವಿಜೃಂಭನೆಯಿಂದ ಇಲ್ಲಿ ಮಹಾಗಣಪತಿಯನ್ನು ಆರಾಧಿಸಲ್ಪಡುತ್ತದೆ. ಬಾಬಿ ಮಾಂದೇಕರ್ ಅವರ ಮಕ್ಕಳು ನಿರ್ಮಿಸಿದ ಮಹಾ ಗಣಪತಿಯನ್ನು ಅಖಿಲ ಭಾರತ ಸಂತ ಅಖಾಡದ ಅಧ್ಯಕ್ಷ ಬಾಬಾ ಗರೀಬ್ ದಾಸ್‍ಜೀ ಮಹಾರಾಜ್ ಮತ್ತು ಶ್ರೀ ರಾಮ ಮಂದಿರ ಆಯೋಧ್ಯಾ ಸಮಿತಿ ಕಾರ್ಯಾಧ್ಯಕ್ಷ ಡಾ| ಶ್ರೀರಾಮ್‍ವಿಲಾಸ್ ವೇದಾಂತಿ ಆಗಮಿಸಿ ಶ್ರೀಗಣಪತಿಯನ್ನು ಈ ಬಾರಿ ಪ್ರತಿಷ್ಠಾಪಿಸಿದರು. ಪುರೋಹಿತ ರಾಮಚಂದ್ರ ನಾರಾಯಣ ವಾಟ್‍ವೇ ತಮ್ಮ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಗಣಪತಿಯನ್ನು ಪೂಜಿಸುತ್ತಿದ್ದಾರೆ.

ಇದೇ ಸೆ.23ರ ಆದಿತ್ಯವಾರ ಅನಂತ ಚತುರ್ಧಶಿ ದಿನ ಧರ್ಮಾನಿಷ್ಠೆ, ಹಿಂದೂ ಸಂಪ್ರದಾಯದಂತೆ ಶಸ್ತ್ರಾಸ್ತ್ರವಾಗಿ ಒಂದು ಗದ್ದಲ ಹೊಂದಿರುವ ಶಕ್ತಿಯುತನಾದ ಏಕಾದಂತ, ಎಲ್ಲಾ ಪ್ರಾಯಶ್ಚಿತ್ತವನ್ನು ಸ್ವೀಕರಿಸುವ ದೇವವ್ರಾತ ಗಜಧಾರ ವಿನಾಯಕನನ್ನು ಪೂಜಿಸಿ ಭಕ್ತರ ಭವ್ಯ ಮೆರವಣಿಗೆಯೊಂದಿಗೆ ಗಣಪತಿ ಜಲಸ್ತಂಭನ ನಡೆಸಲಾಗುವುದು. ಆ ಪ್ರಯುಕ್ತ ತುಳುಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಅಯೋಧ್ಯಾ ಶ್ರೀರಾಮ ಮಂದಿರಕ್ಕೆ ಚಿತ್ತೈಸಿ ವಿನಾಯಕನ ಅನುಗ್ರಹಕ್ಕೆ ಪಾತ್ರರಾಗುವಂತೆ ಜಯ ಎ.ಶೆಟ್ಟಿ ತಿಳಿಸಿದ್ದಾರೆ.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal