About Us       Contact

ಮಹಾನಗರದಲ್ಲಿ ಪಟ್ಟದ ರಾಮವಿಠಲ ಮತ್ತು ಶ್ರೀ ಕೃಷ್ಣ ದೇವರಿಗೆ ಮಹಾಪೂಜೆ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.29, 2018 : ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಇಂದಿಲ್ಲಿ ಆದಿತ್ಯವಾರ ಬೆಳಿಗ್ಗೆ ಸಾಂತಾಕ್ರೂಜ್ ಪೂರ್ವದ ಶ್ರೀ ಪೇಜಾವರ ಮಠದಲ್ಲಿ ಪಟ್ಟದ ದೇವರಾದ ರಾಮ ವಿಠಲ ದೇವರಿಗೆ ಮಹಾ ಪೂಜೆ ನೆರವೇರಿಸಿದರು. ನಂತರ ಮಠದಲ್ಲಿ ಪ್ರತಿಷ್ಠಾಪಿತ ಶ್ರೀ ಕೃಷ್ಣ ದೇವರಿಗೆ ಪೂಜೆ, ಮಹಾಆರತಿ ನೆರವೇರಿಸಿ ಪಾವಿತ್ರ್ಯತಾ ತಪ್ತ ಮುದ್ರಾಧಾರಣೆಗೈದು ನೆರೆದ ಭಕ್ತರಿಗೆ ಮಂತ್ರಾಕ್ಷತೆ, ಪ್ರಸಾದ ವಿತರಿಸಿ ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಅಧ್ಯಕ್ಷ ಡಾ| ಎ.ಎಸ್ ರಾವ್, ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ಕಾರ್ಯಕಾರಿ ಸಮಿತಿ ಸದಸ್ಯ ರಾಮ ವಿಠಲ ಕಲ್ಲೂರಾಯ, ವಿಷ್ಣುಮೂರ್ತಿ ಆಚಾರ್ಯ ಉಡುಪಿ, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರುಗಳಾದ ಪ್ರಕಾಶ ಆಚಾರ್ಯ ರಾಮಕುಂಜ, ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್, ನಿರಂಜನ್ ಗೋಗ್ಟೆ, ವಿದ್ವಾನ್ ನಾಗರಹಳ್ಳಿ ಪ್ರಹ್ಲಾದ್ ಆಚಾರ್ಯ, ವಿದ್ವಾನ್ ಎಸ್.ಎನ್ ಉಡುಪ, ವಿದ್ವಾನ್ ಅರವಿಂದ ಬನ್ನಿಂತ್ತಾಯ, ಪಡುಬಿದ್ರಿ ವಿ.ರಾಜೇಶ್ ರಾವ್ (ಅದಮಾರು ಮಠ), ಸಾಣೂರು ಸಾಂತಿಂಜ ಜನಾರ್ದನ ಭಟ್, ಡಾ| ಎಸ್.ಕೆ ಭವಾನಿ, ಡಾ| ಮನೋಜ್ ಟಿ.ಹುನ್ನೂರು, ಮಂಜುಳಾ ಟಿ.ಹುನ್ನೂರು, ರಾಘವೇಂದ್ರ ಕುಲಕರ್ಣಿ, ಮಾಧವಿ ಕುಲಕರ್ಣಿ, ನ್ಯಾಯವಾದಿ ರವಿ ಕೋಟ್ಯಾನ್, ಪುರೋಹಿತರನೇಕರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದು ಮುದ್ರಾಧಾರಣೆ ಹಚ್ಚಿಸಿ ಕೊಂಡರು.

ದಿನೇಶ್ ವಿನೋದ್ ಕೋಟ್ಯಾನ್ ಬಳಗದ ಸೆಕ್ಸೋಫೆÇೀನ್ ವಾದ್ಯ ನಿನಾದದೊಂದಿಗೆ ಭಕ್ತರು ಭಜನೆ ನಡೆಸಿದರು. ಶ್ರೀಕೃಷ್ಣ ಪ್ರತಿಷ್ಠಾನ ಮುಂಬಯಿ ಸಂಸ್ಥಾಪಕ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಹರಿನಾಮ ಕೀರ್ತನೆಗೈದರು.

ಇಂದು (ಜು.30 ಸೋಮವಾರ) ಶ್ರೀಪಾದರು ದಿನವಿಡೀ ಮಠದಲ್ಲೇ ಇರಲಿದ್ದು ಪಟ್ಟದ ದೇವರಾದ ಶ್ರೀ ರಾಮವಿಠಲ ದೇವರ ಮಹಾಪೂಜೆ, ಭಕ್ತಾಭಿಮಾನಿಗಳ ದರ್ಶನ, ತೀರ್ಥಪ್ರಸಾದ, ಆಶೀರ್ವಚನ ನಡೆಸಲಿದ್ದಾರೆ. ನಾಳೆ (ಜು.31 ಮಂಗಳವಾರ) ಬೆಳಿಗ್ಗೆ ದೇವರ ಪೂಜೆ ನೆರವೇರಿಸಿ ಬಳಿಕ ಪುಣೆಗೆ ಪ್ರಯಾಣಿಸÀಲಿದ್ದಾರೆ. ಶ್ರೀಗಳ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಸಹಭಾಗಿಗಳಾಗಿ ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾಗುವಂತೆ ಪೇಜಾವರ ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal