About Us       Contact


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.05: ವಿದ್ಯಾಥಿರ್üಗಳನ್ನು ಶೈಕ್ಷಣಿಕವಾಗಿ ಪೆÇ್ರೀತ್ಸಾಹಿಸಿ, ಅವರಲ್ಲಿನ ಕೌಶಲ್ಯಗಳನ್ನು ಅನಾವರಣ ಗೊಳಿಸಿದಾಗಲೇ ಸಂಸ್ಥೆಗಳ ಉದ್ದೇಶಗಳು ಪರಿಪೂರ್ಣ ಗೊಳ್ಳುವುದು. ಶಿಕ್ಷಣದ ಜೊತೆಜೊತೆಗೆ ವಿದ್ಯಾಥಿರ್üಗಳಲ್ಲಿನ ಪ್ರತಿಭೆಗಳನ್ನು ಬೆಂಬಲಿಸಿ ಅವರನ್ನು ಸಾಂಸ್ಕೃತಿಕವಾಗಿ ಬೆಳೆಸಿದಾಗ ಮಕ್ಕಳೂ ಸುಸಂಸ್ಕೃತರಾಗಿ ಬಾಳುತ್ತಾ ರಾಷ್ಟ್ರದ ಸಂಸ್ಕೃತಿಯು ಜೀವಾಳವಾಗುವುದು. ಸಂಸ್ಕಾರಯುತವಾಗಿ ಬೆಳೆದ ಮಕ್ಕಳಿಂದ ಸುಸಂಸ್ಕೃತ ಬದುಕು ಸಾಧ್ಯವಾಗುವುದು. ನಮ್ಮ ದೇಶವು ಬಹುಭಾಷಾ, ವೈವಿಧ್ಯತಾ ಸಂಸ್ಕೃತಿವುಳ್ಳದಾ -ಗಿದ್ದು ಬಹುತ್ವವೇ ಭಾರತದ ಬುನಾದಿಯಾಗಿದೆ. ಆದುದರಿಂದ ನಾವು ಜಾತಿ, ಮತ, ಪಂಥ ಬೇಧ ಮರೆತು ಎಲ್ಲರನ್ನೂ ಸಮಾನವಾಗಿ ಕಂಡು ಸಮಾನತೆಯ ಬಾಳಿಗೆ ಪ್ರೇರೆಪಿಸ ಬೇಕು. ಅವಾಗಲೇ ಭವ್ಯ ಭಾರತದ ಕನಸು ನನಸಾಗುವುದು. ಇದನ್ನೇ ಕೆಸಿಎ ಸಂಸ್ಥೆ ಮುನ್ನಡೆಸಿ ಬಂದಿದೆ ಎಂದು ಕೊಂಕಣಿ ಕಥೊಲಿಕ್ ಅಸೋಸಿಯೇಶನ್ ನಲ್ಲಸೋಫರಾ (ಕೆಸಿಎ) ಸಂಸ್ಥೆಯು ಅಧ್ಯಕ್ಷ ಹ್ಯಾರಿ ಬಿ.ಕುಟಿನ್ಹೋ ತಿಳಿಸಿದರು.

ಕೊಂಕಣಿ ಕಥೊಲಿಕ್ ಅಸೋಸಿಯೇಶನ್ ನಲ್ಲಸೋಫರಾ (ಕೆಸಿಎ) ಸಂಸ್ಥೆಯು ಸ್ಥಾನೀಯ ಬಡ ಶಾಲಾಮಕ್ಕಳಿಗೆ ಧರ್ಮಾರ್ಥವಾಗಿ ಕೊಡಮಾಡುವ ವಾರ್ಷಿಕ ಶೈಕ್ಷಣಿಕ ಪರಿಕರಣೆಗಳನ್ನು ಪ್ರದಾನಿಸುವ ಈ ಬಾರಿಯ 2018ನೇ ಸಾಲಿನ ಪಠ್ಯಪುಸ್ತಕ, ಶೈಕ್ಷಣಿಕ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಹೆಲ್ಪಿಂಗ್ ಹ್ಯಾಂಡ್ಸ್ ಡಾಟ್ ಗಿವ್ಸ್ ಸಂಸ್ಥೆಯ ಸಹಯೋಗದಲ್ಲಿ ಇಂದಿಲ್ಲಿ ಭಾನುವಾರ ಪೂರ್ವಹ್ನ ನಲ್ಲಾಸೋಫರಾ ಪೂರ್ವದಲ್ಲಿನ ಕೆಸಿಎ ಸಭಾಗೃಹದಲ್ಲಿ ನಡೆಸಿದ್ದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕುಟಿನ್ಹೋ ಮಾತನಾಡಿದರು.

 

 

 

 

 

 

 

 

 

 

 

 

 

 

 

 

 

 

 

ಕಾರ್ಯಕ್ರಮದಲ್ಲಿ ಕೆಸಿಎ ಮತ್ತು ಹೆಲ್ಪಿಂಗ್‍ಹ್ಯಾಂಡ್ಸ್ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದು ಮುಖ್ಯ ಅತಿಥಿüಯಾಗಿ ಉಪಸ್ಥಿತ ಥಾಣೆ ಜಿಲ್ಲಾ ಪಾಲ್ಘರ್‍ನ ಪೆÇೀಲಿಸ್ ಅಧಿಕಾರಿ ಸಂದೀಪ್ ಮಕೋಳ್ ಮಕ್ಕಳಿಗೆ ವೇತನ ವಿತರಿಸಿ ಶುಭಾರೈಸಿದರು.

ಸಂದೀಪ್ ಮಕೋಳ್ ಮಾತನಾಡಿ ವಿದ್ಯಾಥಿರ್üಗಳನ್ನು ಉತ್ತೇಜಿಸುವುದು ಮಹತ್ತರವಾದ ಕೆಲಸವಾಗಿದೆ. ಆ ನಿಟ್ಟಿನಲ್ಲಿ ಕೆಸಿಎ ಸಂಸ್ಥೆಯ ಸೇವೆ ಅನನ್ಯ. ಈ ಸಂಸ್ಥೆ ಇನ್ನೂ ಪ್ರಾಮಾಣಿಕವಾಗಿ ಸೇವೆಯಲ್ಲಿ ತೊಡಗಿಸಿಕೊಂಡುಉ ಎಲ್ಲರ ಪ್ರಶಂಸಗೆ ಪಾತ್ರವಾಗಲಿ ಎಂದರು.

ಈ ವರ್ಷವೂ ಸ್ಥಳೀಯ ಆಥಿರ್üಕವಾಗಿ ಹಿಂದುಳಿದ ನೂರಾರು ಮಕ್ಕಳಿಗೆ ಶಾಲಾ ಶುಲ್ಕ, ಸಮವಸ್ತ್ರ, ಟಿಪ್ಪಣಿ ಪುಸ್ತಕ (ನೋಟ್‍ಬುಕ್), ಇನ್ನಿತರ ಶೈಕ್ಷಣಿಕ ಉಪಯೋಗಿತ ಅವಶ್ಯಕ ವಸ್ತುಗಳಗಳನ್ನು ವಿತರಿಸಿದ್ದು, ಕೆಸಿಎ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಹಿಲ್ಡಾ ಡಿ'ಸೋಜಾ, ಕ್ಲಾಡ್ ಡಿ'ಸಿಲ್ವಾ, ಲವಿನಾ ಡಾಯಸ್, ಲಿಲ್ಲಿ ಕ್ವಾಡ್ರಸ್,
ರೋಮಿಯೋ ಕಾಸ್ತೆಲಿನೋ, ಡೈನಾ ಮೊರಾಯಸ್, ಹೆಲ್ಪಿಂಗ್ ಹ್ಯಾಂಡ್ಸ್‍ನ ಜೀವನ್ ಕೋಟ್ಯಾನ್, ಇಮೆಲ್ಡಾ ಡಿ'ಸೋಜಾ, ಪೀಟರ್ ರೋಡ್ರಿಗಸ್ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದರು.

ರೋಹಿನ್‍ಗ್ಟನ್ ಕಾಕ ಸುಖಾಗಮನ ಬಯಸಿಕಾರ್ಯಕ್ರಮ ನಿರ್ವಹಿಸಿದರು. ರೋನಿ ಪಾಯ್ಸ್ ಫಲಾನುಭವಿಗಳ ಪಟ್ಟಿ ವಾಚಿಸಿದರು. ರಿಚಾರ್ಡ್ ಪಿಂಟೋ ಅಭಾರ ಮನ್ನಿಸಿದರು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal