About Us       Contact

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)ಮುಂಬಯಿ, ಫೆ.14: ಕ್ರಿಶ್ಚನ್ನರು ಅನುಪಾತ ಹಾಗೂ ಉಪವಾಸ ವೃತವನ್ನಾಚರಿಸುವ ನಲ್ವತ್ತು ದಿನಗಳ ಪವಿತ್ರ ಕಲಾವಧಿ `ಕಪ್ಪು ತಿಂಗಳು' ಇಂದು ಬುಧವಾರ ಆರಂಭಗೊಂಡಿದ್ದು, ಆ ಪ್ರಯುಕ್ತ ಕ್ರೈಸ್ತ ಬಾಂಧುಗಳು ಉಪವಾಸವ್ರತ ಕೈಗೊಂಡು ಇಗರ್ಜಿಗಳಿಗೆ ತೆರಳಿ ಹಣೆಗೆ ಶುದ್ಧಿಕೃತ ಬೂದಿ ಸವರಿಸಿ ಕಪ್ಪುತಿಂಗಳನ್ನು ಆರಂಭಿಸಿದರು.

 

 

 

ಏಸು ಕ್ರೈಸ್ತರು ಶಿಲುಬೆಯಲ್ಲಿ ಪ್ರಾಣಾರ್ಪಣೆಗೈದ ಸಂದರ್ಭವನ್ನು ಸ್ಮರಿಸಿ ಕ್ರೈಸ್ತ ಜನತೆ ಪರಂಪರಿಕವಾಗಿ ಆಚರಿಸಲ್ಪಟ್ಟು ಬಂದಿರುವಂತೆ ಇಂದಿನಿಂದ ಮುಂಬರುವ ಮಾರ್ಚ್ 30ರ ಶುಭ ಶುಕ್ರವಾರ (ಗುಡ್‍ಪ್ರೈಡೇ) ವರೆಗೆ ತ್ಯಾಗ ಭರಿತ ನಿರಂತರ ನಾಲ್ವತ್ತು ದಿನಗಳನ್ನು ಉಪವಾಸ,ವಿಶೇಷ ಪೂಜೆಗಳೊಂದಿಗೆ ರೂಢಿಸಿಕೊಳ್ಳಲಿದ್ದಾರೆ. ಕ್ರೈಸ್ತರು ಈ ದಿನಗಳನ್ನು ವಿಶೇಷವಾದ ಭಕ್ತಿ, ಆರಾಧನೆ, ಶಿಲುಬೆ ಪ್ರಾರ್ಥನೆ, ತ್ಯಾಗಮಯ ಪೂಜಾವಿಧಿಗಳಿಂದ ಆರಾಧಿಸಿ ಸಾಂಪ್ರದಾಯಿಕವಾಗಿ `ಕಪ್ಪು ತಿಂಗಳು'ನ್ನು ಉಪವಾಸ ವ್ರತಾಚರಣೆಯೊಂದಿಗೆ ನಡೆಸಲಿರುವರು.

ಮಹಾನಗರ ಮುಂಬಯಿಯಲ್ಲೂ ಕರ್ನಾಟಕ ಕರಾವಳಿ ಪ್ರಾಂತ್ಯದ ಮಂಗಳೂರು-ಗೋವಾ ಪ್ರದೇಶದ ಕೊಂಕಣಿ ಭಾಷಾ ಕ್ರೈಸ್ತರು ಇಂದು ಮುಂಜಾನೆಯಿಂದಲೇ ಇಗರ್ಜಿಗಳಿಗೆ ತೆರಳಿ ಭಕ್ತಿಶ್ರದ್ಧಾಪೂರ್ವಕವಾಗಿ ಪೂಜೆ ಬಲಿದಾನದಲ್ಲಿ ಪಾಲ್ಗೊಂಡು ತ್ಯಾಗಮಯ ಕಾಲಕ್ಕೆ ತಮ್ಮನ್ನು ಸಮರ್ಪಿಸಿ ಕೊಂಡರು.

ಆ ಪ್ರಯುಕ್ತ ಅಂಧೇರಿ ಪೂರ್ವದ ಚಕಲಾ ಅಲ್ಲಿನ ಹೋಲಿ ಫ್ಯಾಮಿಲಿ ಚರ್ಚ್‍ನಲ್ಲಿ ಕ್ರೈಸ್ತ ಭಕ್ತಾದಿಗಳು ಉಪವಾಸದೊಂದಿಗೆ ಪ್ರಾರ್ಥನೆ ನೆರವೇರಿಸಿ ಹಣೆಗೆ ಶುದ್ಧಿಕೃತ ಬೂದಿ ಸವರಿಸಿ ಕಪ್ಪು ತಿಂಗಳಿಗೆ ಚಾಲನೆಯನ್ನಿತ್ತರು. ರೆ| ಫಾ| ರೊಬಿನ್ ಸೆಲ್ವಿನ್ (ಎಸ್‍ಜೆ) ಪೂಜೆ ನೆರವೇರಿಸಿ ಅನುಗ್ರಹಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal