About Us       Contact

 


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮೇರಿಮಾತೆ ಕೌಟುಂಬಿಕ ಬದುಕಿನ ದೇವಮಾತೆ : ಫಾ| ಆರ್ಚೀಬಾಲ್ಡ್ ಗೋನ್ಸಾಲ್ವಿಸ್

ಮುಂಬಯಿ, ಸೆ.09: ಮಿನಿ ಮಂಗಳೂರು ಪ್ರಸಿದ್ಧ ಮುಂಬಯಿ ಉಪನಗರದ ವಿೂರಾರೋಡ್ ಪೂರ್ವದಲ್ಲಿನ ಸಂತ ಜೋಸೆಫ್'ಸ್ ಇಗರ್ಜಿಯಲ್ಲಿ ಇಂದಿಲ್ಲಿ ಶನಿವಾರ ಬೆಳಿಗ್ಗೆ ಏಸುಕ್ರಿಸ್ತರ ಜನನಿದಾತೆ ಕನ್ಯಾಮೇರಿ ಜನ್ಮೋತ್ಸವ ಸ್ತ್ರೀಯರ ದಿನಾಚರಣೆ ಮತ್ತು ಪ್ರಕೃತಿಉತ್ಸವವಾಗಿಸಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಕರ್ಮೆಲಿತ್ ಸಮೂಹದ ಕರ್ನಾಟಕ-ಗೋವಾ ಪ್ರಾಂತ್ಯದ ಧರ್ಮಾಧಿಕಾರಿ ವಂದನೀಯ ರೆ| ಫಾ| ಆರ್ಚೀಬಾಲ್ಡ್ ಗೋನ್ಸಾಲ್ವಿಸ್ (ಒಸಿಡಿ) ಸಂಭ್ರಮಿಕ ಕೃತಜ್ಞತಾ ದಿವ್ಯಪೂಜೆ ನೆರವೇರಿಸಿ ಪ್ರಸಂಗವನ್ನಿತ್ತರು. ಅಂತೆಯೇ ಕೃಷಿಕ, ರೈತರಿಂದ ಅರ್ಪಿಸಲ್ಪಟ್ಟ ಹೊಸಪೈರು (ಬತ್ತದ ತೆನೆ), ತರಕಾರಿ, ದವಸ-ಧಾನ್ಯವನ್ನು ಆಶೀರ್ವಾದಿಸಿ ತೆನೆಹಬ್ಬ ಸಂಭ್ರಮಕ್ಕೆ ಮೆರುಗು ನೀಡಿದರು.

ಸ್ವರ್ಗದ ಮಾತೆಯ ಜನ್ಮೋತ್ಸವ ಸಂಭ್ರಮ. ಮಾತೆಕ್ಕಿಂತ ಭಿನ್ನ ಮತ್ತೊಂದಿಲ್ಲ, ಅವರೂ ಶ್ರೇಷ್ಠವಾದವರು. ಸಮಾಜದಲ್ಲಿ ಸ್ತ್ರೀಯಾರಿಗೆ ಶ್ರೇಷ್ಠ ಸ್ಥಾನಮಾನ ಲಭಿಸಬೇಕು. ಸ್ತ್ರೀಯರೇ ಸಂಸಾರದ ದೊಡ್ಡಸ್ಥಿಕೆಯಾಗಿದ್ದಾರೆ. ಮಾತೃದೇವೋಭಾವ ದೈನಂದಿನವಾಗಿ ಶೋಭಿಸಲಿ ಎಂದು ಪ್ರಸಂಗವನ್ನೀಡಿ ಫಾ| ಆರ್ಚೀಬಾಲ್ಡ್ ಮೊಂತಿ ಹಬ್ಬದ ಮಹತ್ವ, ವೈಶಿಷ್ಟ್ಯ ಬಣ್ಣಿಸಿ ಉಪಸ್ಥಿತ ಮೇರಿ ಭಕ್ತರನ್ನು ಅನುಗ್ರಹಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಮೇರಿಮಾತೆ ಕೌಟುಂಬಿಕ ಬದುಕನ್ನು ರೂಢಿಸುವಲ್ಲಿ ವಿಭಿನ್ನ ರೀತಿಯ ಚಿಂತನೆ ಮೈಗೂಡಿದ ದೇವಮಾತೆ ಆಗಿದ್ದಾ ರೆ. ಏಕೆಂದರೆ ಈ ಮಾತೆ ದೇವರ ಆಶಯದ ಪೂರ್ಣತೆ ತಿಳಿದವರು. ಆದುದರಿಂದ ಮಾತೆಮರಿಯಮ್ಮರನ್ನು ಕ್ರಿಶ್ಚಿಯನ್ನರು ಪ್ರಧಾನವಾಗಿ ನಂಬಿ, ಆರಾಧಿಸುತ್ತಾರೆ. ಅವರ ಆದರ್ಶಗಳು ಬಂಧುತ್ವ, ಸಹೋದರತ್ವ ಮತ್ತು ಕೂಡು ಕುಟುಂಬವಾಗಿ ಬಾಳಲು ಪ್ರೇರಕವಾಗಿದೆ. ಮನುಕುಲದ ಪೂರ್ಣತೆಯ ಬಾಳಿಗೆ ಅವರ ಜೀವನಶೈಲಿ ಪೂರಕವಾಗಿದೆ. ಇದನ್ನು ನಾವು ದೈನಿಕವಾಗಿ ಸ್ವೀಕರಿಸಿ ಬಾಳಿದಾಗ ಮಾತೆಯ ಸನ್ಮಾರ್ಗದ ಹಾದಿಯನ್ನು ಅನುಸರಿಸಲು ಸುಲಭಸಾಧ್ಯ ಆಗುವುದು. ಮಾತೆಯ ಅನುಗ್ರಹದಿಂದ ನಾವು ಸದಾ ಹರ್ಷೋಲ್ಲಾಸದಿಂದ ಸದ್ಭಾವನೆಯಿಂದ ಬಾಳುತ್ತಾ ಪರರಿಗೆ ಆದರ್ಶರಾಗಬೇಕು ಎಂದು ಫಾ| ಆರ್ಚೀಬಾಲ್ಡ್ ಪ್ರಾಥಿರ್üಸಿದರು.

ಸಂತ ಜೋಸೆಫ್'ಸ್ ಇಗರ್ಜಿಯ ಪ್ರಧಾನ ಧರ್ಮಗುರು ರೆ| ಫಾ| ಮೆಲ್ವಿನ್ ಡಿ'ಕುನ್ಹಾ (ಒಸಿಡಿ) ಪ್ರಾರ್ಥನೆ ನಡೆಸಿ ಸ್ತ್ರೀಯರು ಸಂಸ್ಕೃತಿಯ ಪ್ರತಿರೂಪವಾಗಿದ್ದು ಸಂಸ್ಕೃತಿಯೇ ಪ್ರಕೃತಿ ಆಗಿದೆ. ಆದುದರಿಂದ ಪ್ರಕೃತಿ ಆರಾಧನೆಯೇ ಸ್ತ್ರೀಯರ ಗೌರವವಾಗಿದೆ. ಮಾತೆಯ ಭಕ್ತಿಯೇ ಕುಟುಂಬವನ್ನು ಒಗ್ಗೂಡಿಸುತ್ತಿದೆ ಎಂದರು.

ರೆ| ಫಾ| ಲಾರೇನ್ಸ್ ಡಿ'ಕುನ್ಹಾ, ರೆ| ಫಾ| ವಾಲ್ಟರ್ ಡಿ'ಸೋಜಾ, ಫಾ| ರೋನಾಲ್ಡ್ ಡಿ'ಸೋಜಾ, ಫಾ| ಕಾನ್ನಿಯೋ ಕಡ್ರ್ಝೊ, ಫಾ| ಲ್ಯಾನ್ಸಿ ಮೆಂಡೋನ್ಸಾ, ಫಾ| ನೆಲ್ಸನ್ ಕರ್ಡೋಜಾ ಭವ್ಯ ಪೂಜೆಯಲ್ಲಿ ಸಹಭಾಗಿಯಾಗಿದ್ದರು. ಬ್ರದರ್ಸ್ ಹಾಗೂ ಸ್ನೇಹಸಾಗರ್ ಭಗಿನಿಯರು ಸೇರಿದಂತೆ ಅಪಾರ ಸಂಖ್ಯೆಯ ಮಾತೆ ಭಕ್ತರು ಧಾರ್ಮಿಕ ವಿಧಿ, ಪೂಜೆಯಲ್ಲಿ ಸಹಭಾಗಿಗಳಾಗಿದ್ದರು.

ಸೈಂಟ್ ಜೋಸೆಫ್ ಕೊಂಕಣಿ ವೆಲ್ಫೇರ್ ಅಸೋಸಿಯೇಶನ್‍ನ ಸಹಯೋಗದೊಂದಿಗೆ ಕೊಂಕಣಿ ಪೂಜೆ ನೆರವೇರಿದ್ದು ಪೂಜೆಯ ಬಳಿಕ ಭವ್ಯ ಮೆರವಣಿಗೆಯಲ್ಲಿ ವೆಲಂಕಣಿ ಮಾತೆಯ ಅಲಂಕೃತ ಪುಸ್ಥಳಿಯೊಂದಿಗೆ ನೆರೆದ ಭಕ್ತ ಸಮೂಹ ಹಬ್ಬದ ಸಂಭ್ರಮವನ್ನು ನಗರದಾದ್ಯಂತ ಪಸರಿಸುತ್ತಾ ಶುಭಹಾರೈಸಿದರು. ರಾಬರ್ಟ್ ಭಂಡಾರಿ ಅವರು ಸುಮಾರು 180ಕೆಜಿ ಗಾತ್ರದ ಬೃಹದಾಕಾರದ ಕೇಕ್ ಪ್ರಾಯೋಜಿಸಿದ್ದು ಗುರುಗಳು ಕೇಕ್ ಕತ್ತರಿಸಿ ಮರಿಯ ಮಾತೆಯ ಜನ್ಮೋತ್ಸವ ಸಂಭ್ರಮಿಸಿದರು.

ಅಸೋಸಿಯೇಶನ್‍ನ ಆಧ್ಯಾತ್ಮಿಕ ನಿರ್ದೇಶಕ ಫಾ| ಮೆಲ್ವಿನ್ ಡಿ'ಕುನ್ಹಾ ನಿರ್ದೇಶನದಲ್ಲಿ ಆಚರಿಸಲ್ಪಟ್ಟ ವಾರ್ಷಿಕ ಉತ್ಸವದಲ್ಲಿ ಅಸೋಸಿಯೇಶನ್ ಅಧ್ಯಕ್ಷ ಡೈಗೋ ರೋಡ್ರಿಗಸ್, ಉಪಾಧ್ಯಕ್ಷ ವಿಲ್ಸನ್ ಡಿ'ಸೋಜಾ, ಕೋಶಾಧಿಕಾರಿ ಲಾರೇನ್ಸ್ ಮಥಾಯಸ್, ಜತೆ ಕಾರ್ಯದರ್ಶಿ ಜೆರಾಲ್ಡ್ ಡಿ'ಸೋಜಾ, ಜತೆ ಕೋಶಾಧಿಕಾರಿ ಜೋನ್ ಕೊರೆಯಾ, ಸಾಂಸ್ಕೃತಿಕ ಕಾರ್ಯದರ್ಶಿ ಜೊಸ್ಸಿ ಗೋನ್ಸಾಲ್ವಿಸ್, ಜತೆ ಕಾರ್ಯದರ್ಶಿ ವಿಕ್ಟರ್ ಮಸ್ಕರೇನ್ಹಾಸ್, ಮಾಜಿ ಪದಾಧಿಕಾರಿಗಳಾದ ಜೋನ್ ಕ್ರಾಸ್ತ, ಅರುಣ್ ನೋರೋನ್ಹಾ, ಡೆನಿಸ್ ರೆಬೆಲ್ಲೋ, ಹಿಲ್ಡಾ ಸೆರಾವೋ ಸೇರಿದಂತೆ ಇತರೇ ಸದಸ್ಯರು ಪಾಲ್ಗೊಂಡÀು ಕರ್ನಾಟಕ ಕರಾವಳಿ ಕೊಂಕಣಿ ಕ್ರೈಸ್ತ ಜನತೆ ರೂಢಿಸಿರುವ ಈ ಸಾಂಪ್ರದಾಯಿಕ ಹಬ್ಬವನ್ನು ಧಾರ್ಮಿಕ, ಸಾಂಸ್ಕೃತಿಕ ಮತ್ತು ಪ್ರಕೃತಿ ಉತ್ಸವವಾಗಿ ಸಂಭ್ರಮಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal