About Us       Contact

(ಚಿತ್ರ /  ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಡಿ.10: ಇಂದು ಸಾರ್ವಜನಿಕ ವಲಯದ ಸೇವಾ ನಡಿಗೆ ಬಲುಕಷ್ಟಕರ. ಆದರೂ ಈ ಸಂಸ್ಥೆ ಎಪ್ಪತ್ತೈದರ ಮುನ್ನಡೆಯಲ್ಲಿ ಸಾಗುತ್ತಿರುವುದು ಅಭಿನಂದನೀಯ. ಪ್ರಾಮಾಣಿಕ ಮತ್ತು ಶ್ರಮದ ಗಳಿಕೆ ಎಂದೂ ಶಾಸ್ವತವಾಗಿರುತ್ತದೆ. ಇದಕ್ಕೆ ಈ ವಾರ್ಷಿಕೋತ್ಸವವೇ ಸಾಕ್ಷಿಯಾಗಿದೆ. ಬದಲಾವಣೆಯಲ್ಲಿ ಕಾಲಘಟ್ಟದಲ್ಲಿ ನಾವು ಬದಲಾಗಿ ಮುನ್ನಡೆಯುವ ಅಗತ್ಯವಿದೆ. ಆದರೆ ಎಂದಿಗೂ ನಮ್ಮ ಪರಂಪರೆ, ಸಂಸ್ಕೃತಿ ಮರೆಯದೆ ಅದರ ಪರಿಪಾಲನೆ ನಮ್ಮ ಆದ್ಯ ಕರ್ತವ್ಯ ಆಗಬೇಕು. ಆವಾಗಲೇ ನಮ್ಮ ಬದುಕು ಸಫಲತೆ ಕಾಣುವುದು  ಎಂದು ಆದಾಯ ತೆರಿಗೆ ಇಲಾಖೆಯ ನಿವೃತ್ತ ಉನ್ನತಾಧಿಕಾರಿ ವಲೇರಿಯನ್ ಡೆ'ಸಾ ತಿಳಿಸಿದರು.

ಬೃಹನ್ಮುಂಬಯಿಯ ಅಲ್ಲಿನ ಫೆÇೀರ್ಟ್  ಲಯನ್ ಗೇಟ್ ಅಲ್ಲಿ ಕಳೆದ ಸುಮಾರು ಏಳುವರೆ ದಶಕಗಳಿಂದ ಸೇವಾನಿರತ ಸೈಂಟ್ ಪಾವ್ಲ್'ಸ್ ಕಥೊಲಿಕ್ ಅಸೋಸಿಯೇಶನ್ ಮುಂಬಯಿ ಸಂಸ್ಥೆ ಇಂದಿಲ್ಲಿ ಆದಿತ್ಯವಾರ ಅಸೋಸಿಯೇಶನ್‍ನ ಸೈಂಟ್ ಪಾವ್ಲ್ ಸಭಾಗೃಹದÀಲ್ಲಿ ಸಂಭ್ರಮಿಸಿದ 75ನೇ ಸಂಸ್ಥಾಪನಾ ದಿನಾಚರಣೆ ಮತ್ತು ವಾರ್ಷಿಕೋತ್ಸವ ಸಂಭ್ರಮವನ್ನುದ್ದೇಶಿಸಿ ಅಮೃತಮಹೋತ್ಸವ ಆಚರಣೆಗೆ ಚಾಲನೆಯನ್ನಿತ್ತು `ಸೈಂಟ್ ಪಾವ್ಲ್ ಅಮೃತಮಹೋತ್ಸವ'ಸ್ಮರಣಿಕಾ ಮುಖಪುಟ ಅನಾವರಣ ಗೊಳಿಸಿ ವಲೇರಿಯನ್ ಮಾತನಾಡಿದರು.

 

 

 

 

 

 

 


ಅತಿಥಿü ಅಭ್ಯಾಗತರುಗಳಾಗಿ ಮಜ್ಗಾಂಗ್ ಡಾಕ್ ಲಿಮಿಟೆಡ್ ಸಂಸ್ಥೆಯ ಸಹಾಯಕ ಮಹಾ ಪ್ರಬಂಧಕ ಅಲ್ಫೋನ್ಸ್ ಮಸ್ಕರೇನ್ಹಾಸ್, ಉದ್ಯಮಿಗಳಾದ ಸ್ಟೀವನ್ ಡಿ'ಮೆಲ್ಲೋ, ಡೆನಿಸ್ ಕಾರ್ದೋಜಾ,  ಹಿರಿಯ ಕವಿ, ಲೇಖಕ ವಿ.ಡಿ'ಸಿಲ್ವಾ ಕಾಂಜೂರುಮಾರ್ಗ್, ಅಸೋಸಿಯೇಶನ್‍ನ ಹಿರಿಯ ಸದಸ್ಯ ಥೋಮಸ್ ನೊರೋನ್ಹಾ,  ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ವಾರ್ಷಿಕೋತ್ಸವ ಹಾಗೂ ಕ್ರಿಸ್ಮಸ್ ಹಬ್ಬದ ಶುಭಾಶಯ ಹಾರೈಸಿದರು.
ಸಬಿನಾ ಡಿ'ಮೆಲ್ಲೋ ಮತ್ತು ಎಲಿಜಾ ಮಾರ್ಟಿಸ್ ಅವರು ಅಧ್ಯಕ್ಷ  ಸ್ಟೇನಿ ಫೆರ್ನಾಂಡಿಸ್ ಮತ್ತು ಪದಾಧಿಕಾರಿ ಗಳೊಂದಿಗೆ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿ ಶುಭಾರೈಸಿದರು.

ಗೌರವ ಕಾರ್ಯದರ್ಶಿ ಸ್ವಾಗತಿಸಿ ರಿಚಾರ್ಡ್ ಡಿ'ಸೋಜಾ ಸಂಸ್ಥೆಯ ಎಪ್ಪತ್ತೈದರ ಸಾಮಾಜಿಕ ಸೇವಾ ಸಾಧನೆ, ಚಟುವಟಿಕೆ ತಿಳಿಸಿ ನಾವೆಲ್ಲರೂ ವಿಭಿನ್ನ ಪರಿವಾರದಿಂದ ಬಂದವರು. ಆದ್ದರಿಂದ ನಮ್ಮ ಮನೋಭಾ ವ, ಆಚಾರ ವಿಚಾರ, ನಡೆನುಡಿಗಳೂ ಭಿನ್ನವಾಗಿರುತ್ತವೆ. ಆದರೆ ಇಂತಹ ತಾರತಮ್ಯಗಳು ಸೈಂಟ್ ಪಾವ್ಲ್ ಸಂಸ್ಥೆಯಲ್ಲಿ ಉದ್ಭವಿಸಿಲ್ಲ. ಆದುದರಿಂದ ಸಂಸ್ಥೆಯು ಎಲ್ಲರ ಪ್ರೀತ್ಯಾಧಾರಕ್ಕೆ ಪಾತ್ರವಾಗಿ ಪ್ರತಿಷ್ಟಿತ ಸಂಸ್ಥೆಯಾಗಿ ಇಷ್ಟೆತ್ತರಕ್ಕೆ ಬೆಳೆದು ನಿಂತಿದೆ ಎಂದರು.

 

 

 

 

 

 

 

 


ವಾರ್ಷಿಕೋತ್ಸವದ ನಿಮಿತ್ತ ಬೆಳಿಗ್ಗೆ ಕೊಲಬಾ ಅಲ್ಲಿನ ವುಡ್‍ಹೌಸ್ ಹೊಲಿನೇಮ್ ಕಾಥೆದ್ರಾಲ್‍ನಲ್ಲಿ ಸಂಭ್ರಮಿಕ ಅಭಿವಂದನಾ ಪೂಜೆ ನಡೆಸಲಾಗಿದ್ದು, ರೆ| ಫಾ| ರಿಚಾರ್ಡ್ ಡಿ'ಸೋಜಾ ತ್ರಾಸಿ ಕೊಂಕಣಿಯಲ್ಲಿ ಪೂಜೆ ನೆರವೇರಿಸಿ ಅನುಗ್ರಹಿಸಿದರು. ನಾವು ಬರೇ ದಿನಾಚರಣೆ, ಹಬ್ಬಹರಿದಿನಗಳನ್ನು ಆಚರಿಸುವುದರಲ್ಲಿ ಅರ್ಥವಿಲ್ಲ. ನಾವು ಯಾರನ್ನು ಗೌರವಿಸುತ್ತೇವೆಯೋ ಅವರ ಜೀವನಶೈಲಿಯನ್ನು ನಮ್ಮಲ್ಲಿ ಅಳವಡಿಸಿ ಬಾಳಬೇಕು. ಆವಾಗಲೇ ಉತ್ಸವಗಳು ಅರ್ಥಪೂರ್ಣ ಆಗುತ್ತವೆ ಎಂದೂ ಹಿತನುಡಿಗಳನ್ನಾಡಿದರು.


ಗೌರವ ಕೋಶಾಧಿಕಾರಿ ಮೈಕಲ್ ಲೊಬೋ, ಜೊತೆ ಕಾರ್ಯದರ್ಶಿ ಆ್ಯಂಟನಿ ನಜ್ರೇತ್, ಜೊತೆ ಕೋಶಾಧಿಕಾರಿ ಸುನೀಲ್ ತಾವ್ರೋ ವೇದಿಕೆಯಲ್ಲಿ ಆಸೀನರಾಗಿದ್ದು, ಅಧ್ಯಕ್ಷ ಸ್ಟೇನಿ ಫೆರ್ನಾಂಡಿಸ್ ಅವರು ಅತಿಥಿüಗಳು, ಉಪಸ್ಥಿತ ಹಿರಿಯ ಸದಸ್ಯರುಗಳಿಗೆ ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು. ವಿವಿಯನ್ ಮಚಾದೋ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಪ್ರಸಾದ್ ನಜ್ರೇತ್ ಅಭಾರ ಮನ್ನಿಸಿದರು. ಪ್ರವೀಣ್ ಅಲ್ಮೇಡ ಸಾಂತಕ್ಲೋಸ್ ಮೂಲಕ ನೆರೆದ ಸರ್ವರನ್ನೂ ಮನೋರಂಜಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal