Print

 

ಕಿರಿಮಂಜೇಶ್ವರ :ಇಲ್ಲಿನ ಶುಭದಾಆಂಗ್ಲ ಮಾಧ್ಯಮ ಶಾಲೆಯ‘ಶುಭದಾ ಸ್ಕೌಟ್ಸ್‍ ಟ್ರೂಪ್’ ಮತ್ತುಗ್ರಾಮ ಪಂಚಾಯತ್‍ ನಾವುಂದ ಸಹಭಾಗಿತ್ವದಲ್ಲಿ ನಾವುಂದ ಸಮುದ್ರಕಿನಾರೆಯಿಂದ ಶುಭದಾ ಶಾಲೆಯ ಸಮುದ್ರಕಿ ನಾರೆಯ ತನಕಕ ಸಕಡ್ಡಿ ಪ್ಲಾಸ್ಟಿಕ್ ಮತ್ತುಅನಾವಶ್ಯಕ ತ್ಯಾಜ್ಯಗಳನ್ನು ಆರಿಸಿ ಪರಿಸರವನ್ನು ಸ್ವಚ್ಚಗೊಳಿಸಿ ಊರಜನರ ,ಪಂಚಾಯತ್ ಸದಸ್ಯರ ಮೆಚ್ಚುಗೆಗೆ ಪಾತ್ರರಾದರು.ಈ ಸ್ವಚ್ಚತಾಅಭಿಯಾನದಕಾರ್ಯಕ್ರಮದಲ್ಲಿ ಮಕ್ಕಳ ಜೊತೆ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದಡಾ.ಎನ್.ಕೆ.ಬಿಲ್ಲವಗ್ರಾಮ ಪಂಚಾಯತ್‍ಅಧ್ಯಕ್ಷರಾದ ನರಸಿಂಹ ದೇವಾಡಿಗ ಶಾಲಾ ಸಲಹಾ ಸಮಿತಿ ಸದಸ್ಯರಾದ ರಾಜೀವ ಶೆಟ್ಟಿ ಹಾಗೂ ನಾಗರಿಕರಾದ ಮೊಗವೀರ ಮಹಾಜನ್ ಸಂಘ, ಮುಂಬಯಿ ನಾಣುಚಂದನ್ ,ಸಾಯಿರಾಮ್ ಮೆಂಡನ್ ಸಲೂನ್‍ಎಂಟರ್ ಪ್ರೈಸಸ್ ಮುಂಬಯಿ, ಹಂಝ, ಮತ್ತು ಸತೀಶ್ ಮಧ್ಯಸ್ಥ ಹಾಗೂ ಸ್ಕೌಟ್ಸ್ ಶಿಕ್ಷಕ ರತ್ನಕುಮಾರ್‍ಪಾಲ್ಗೊಂಡುಮಕ್ಕಳನ್ನು ಪ್ರೋತ್ಸಾಹಿಸಿದರು. ಆಸುಪಾಸಿನಲ್ಲಿರುವ ಮನೆಗಳಿಗೆ ವಿದ್ಯಾರ್ಥಿಗಳು ತೆರಳಿ ಅವರಿಗೆ ಪ್ಲಾಸ್ಟಿಕ್ ಮುಕ್ತ ಪರಿಸರದ ಮಹತ್ವವನ್ನು ತಿಳಿಸಿ ಮುಂದಿನ ದಿನಗಳಲ್ಲಿ ತ್ಯಾಜ್ಯಗಳನ್ನು ಬೇಕಾಬಿಟ್ಟಿಎಸೆಯದಂತೆ ಮನವರಿಕೆ ಮಾಡಲಾಯಿತು.