About Us       Contact

ಮಂಗಳೂರು: ಶ್ರೀಮುತ್ತು ರಾಮ್ ಕ್ರಿಯೇಷನ್ಸ್ ಅವರ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ಪಮ್ಮಣ್ಣೆದಿ ಗ್ರೇಟ್ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಮಂಗಳೂರು ಪುರಭವದಲ್ಲಿ ಜರಗಿತು.


ಬಿಡುಗಡೆ ಸಮಾರಂಭದಲ್ಲಿ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್. ಗಣೇಶ್ ರಾವ್ ಭಾಗವಹಿಸಿದ್ದರು. ಧ್ವನಿಸುರುಳಿಯನ್ನು ಬಿಡುಗಡೆ ಗೊಳಿಸಿದ ಅವರು, ತುಳು ಸಿನಿಮಾ ರಂಗ ಇಂದು ಕನ್ನಡ ಚಿತ್ರರಂಗದಂತೆ ಬೆಳೆಯುತ್ತಿದೆ. ಬಹಳಷ್ಟು ಮಂದಿ ಯುವ ನಿರ್ದೇಶಕರು, ಕಲಾವಿದರು ಆಕರ್ಷಿತರಾಗಿ ತುಳು ಸಿನಿಮಾರಂಗಕ್ಕೆ ಬರುತ್ತಿದ್ದಾರೆ. ತುಳುಇ ಭಾಷೆಯ ಮೇಲಿನ ಅಭಿಮಾನ, ಪ್ರೀತಿಯಿಂದ ನಿರ್ಮಾಪಕರು ತುಳು ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಇಲ್ಲಿ ಲಾಭ ನಷ್ಟದ ಪ್ರಶ್ನೆಯೇ ಇಲ್ಲ. ಭಾಷೆಯ ಮೇಲಿನ ಅಭಿಮಾನದಿಂದ ಚಿತ್ರ ನಿರ್ಮಿಸುವವರನ್ನು ಪ್ರೇಕ್ಷಕರು, ಕಲಾಭಿಮಾನಿಗಳು ಟಿಕೇಟು ಪಡೆದು ಸಿನಿಮಾ ವೀಕ್ಷಿಸಬೇಕು ಎಂದು ಅವರು ಕರೆ ನೀಡಿದರು.ಸಮಾರಂಭದಲ್ಲಿ ಪ್ರದೀಪ್ ಕುಮಾರ್ ಕಲ್ಕೂರಾ, ವಿಜಯಕುಮಾರ್ ಕೊಡಿಯಾಲ್‍ಬೈಲ್, ಪ್ರಕಾಶ್ ಪಾಂಡೇಶ್ವರ್, ಪಮ್ಮಿ ಕೊಡಿಯಾಲ್‍ಬೈಲ್, ರೋನ್ಸ್ ಲಂಡನ್, ವೀರೇಂದ್ರ ಸುವರ್ಣ, ವಸಂತಕುಮಾರ್, ವಿಜಿಪಾಲ್, ಸುದೇಶ್ ಕುಮಾರ್, ಯೋಗೀಶ್ ಶೆಟ್ಟಿ ಜೆಪ್ಪು, ಯಾಕೂಬು ಖಾದರ್ ಗುಲ್ವಾಡಿ ಮೊದಲಾದವರು ಇದ್ದರು. ಸಮಾರಂಭದಲ್ಲಿ ಡಾ. ಸಂಜೀವ ದಂಡಕೇರಿ,ಸೀತಾರಾಮ್ ಕುಲಾಲ್, ಭೋಜ ಸುವರ್ಣ, ಚಂದ್ರಕಾಂತ್ ಶೆಟ್ಟಿ, ಚರಣ್ ಕುಮಾರ್ ರಾಗ್, ಸತೀಶ್ ಬಂದಲೆ ಮೊದಲಾದವರನ್ನು ಸನ್ಮಾನಿಸಲಾಯಿತು. ಶರ್ಮಿಳಾ ಅಮೀನ್ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಸ್ವಾಗತಿಸಿದರು.


ಕೃಷ್ಣ ನಾಯಕ್ ಕಾರ್ಕಳ, ವಿರೇಂದ್ರ ಸುವರ್ಣ ಕಟೀಲು ನಿರ್ಮಾಣ ಮಾಡಿರುವ ಈ ಸಿನಿಮಾಕ್ಕೆ ಎಂ.ಕೆ. ಸೀತಾರಾಮ್ ಕುಲಾಲ್, ಸುರೇಶ್ ಆರ್.ಎಸ್., ಕಾ.ವಿ. ಕೃಷ್ಣದಾಸ್ ಕೂಡ ಸಾಹಿತ್ಯ ಬರೆದಿದ್ದಾರೆ. ಅನುರಾಧಾ ಭಟ್, ಹೇಮಂತ್, ಚೇತನ್, ಕುಸಾಲ್ ಖುಷಿ ಕಂಠದಲ್ಲಿ ಹಾಡುಗಳು ಮೂಡಿ ಬಂದಿವೆ ಎಂದರು. ಅರವಿಂದ ಬೋಳಾರ್ ಮುಖ್ಯ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಪೃಥ್ವಿ ಅಂಬರ್, ಶಿಲ್ಪ ಸುವರ್ಣ, ಅನುಷ್ ಕೋಟ್ಯಾನ್, ರಮೇಶ್ ಪಂಡಿತ್, ಸತೀಶ್ ಬಂದಲೆ, ದೀಪಕ್ ರೈ ಪಾಣಾಜೆ ಅಭಿನಯಿಸಿದ್ದಾರೆ. ಆರ್.ಕೆ. ಮಂಗಳೂರು ಛಾಯಾಚಿತ್ರಗ್ರಹಣ ಮಾಡಿದ್ದು, ಸುಜಿತ್ ನಾಯಕ್ ಸಂಕಲನ ನಿರ್ವಹಿಸಿದ್ದಾರೆ. ಕಾಪು, ಉಚ್ಚಿಲ, ಕಟಪಾಡಿ, ಪಿಲಿಕುಳ, ಮಂಗಳೂರು, ಮೂಲ್ಕಿ, ಕಟೀಲುವಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು, 30 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಸಿನಿಮಾ ಜೂನ್ ತಿಂಗಳಲ್ಲಿ ತೆರೆ ಕಾಣಲಿದೆ. ಎಂದರು. ಅರವಿಂದ ಬೋಳಾರ್, ಪೃಥ್ವಿ ಅಂಬರ್, ಶಿಲ್ಪ ಸುವರ್ಣ, ಧನ್ವಿತ್ ಉಪಸ್ಥಿತರಿದ್ದರು.

ತುಳುನಾಡಿನ ಮೊಗವೀರ ಸಮಾಜದ ಕುಟುಂಬವೊಂದನ್ನು ಕೇಂದ್ರೀಕರಿಸಿರುವ ಕಥೆ ಹೊಂದಿರುವ ಪಮ್ಮಣ್ಣೆ ದಿ ಗ್ರೇಟ್‍ಸಿನೆಮಾ ಸೀತಾರಾಮ್ ಕುಲಾಲ್ ರಚನೆಯ ಮೋಕೆದ ಸಿಂಗಾರಿ... ಉಂತುದೆ ವಯ್ಯಾರಿ ಹಾಡು ಇರುವುದು ವಿಶೇಷ. ಜತೆಗೆ ಮೀನ್ ಬೋಡಾ ಮೀನ್ ಹಾಡು ಕೂಡ ಗಮನ ಸೆಳೆಯುವಂತಿದೆ ಎಂದು ಚಿತ್ರತಂಡ ಹೇಳುತ್ತಿದೆ. ಚಿತ್ರಕ್ಕೆ ಎಸ್.ಪಿ. ಚಂದ್ರಕಾಂತ್ ಸಂಗೀತ ಅವರು ಸಂಗೀತ £ೀಡಿದ್ದಾರೆ. ಎಸ್. ಗಣೇಶ್ ರಾವ್ ಗೌರವ ಪಾತ್ರದಲ್ಲಿ ಹಾಗೂ ರೋನ್ಸ್ ಲಂಡನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಹೇಳುತ್ತಿದೆ. ಈ ಚಿತ್ರದ ಹಾಡುಗಳು ತುಂಬಾ ಉತ್ತಮವಾಗಿದ್ದು, ಹಳೆಯ ಬೇರಿನೊಂದಿಗೆ ಹೊಸ ಚಿಗುರು ಮೂಡಿ ಬಂದಂತಿದೆ. ಎಲ್ಲರಿಗೂ ಪ್ರಿಯವಾಗಿ ಅಪಾರ ಪ್ರೇಕ್ಷಕರ ಮೆಚ್ಚುಗೆ ಗಳಿಸುವ £ರೀಕ್ಷೆ ಇದೆ ಎಂದು ಚಿತ್ರತಂಡ ಹೇಳುತ್ತಿದೆ.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal