About Us       Contact

ಮುಂಬಯಿ, ಎ.26: ಸಾಂಗತಿ ಕ್ರಿಯೇಶನ್ಸ್ ಮುಂಬಯಿ ಪ್ರಸ್ತುತಿಯ ಪ್ರಪ್ರಥಮ ಕೊಂಕಣಿ ಚಲನಚಿತ್ರ `ಜಾಂವಂಯ್ ನಂಬರ್ ವನ್' (ಅಳಿಯ ಸಂಖ್ಯೆ ಒಂದು) ಸಾಮಾಜಿಕ ಮತ್ತು ಹಾಸ್ಯಪ್ರಧಾನ ಕೊಂಕಣಿ ಚಲನಚಿತ್ರದ ಪ್ರೀಮಿಯರ್ ಪ್ರದರ್ಶನ ಗಣ್ಯರ ಉಪಸ್ಥಿತಿಯಲ್ಲಿ ಇದೇ ಎ.28ರ ಶನಿವಾರ ಸಂಜೆ 6.00 ಗಂಟೆಗೆ ಕುರ್ಲಾ ಪಶ್ಚಿಮದ ಅಂಧೇರಿ ಕುರ್ಲಾ ರಸ್ತೆಯ ಜೆರಿಮೆರಿ ಅಲ್ಲಿನ ಮ್ಯಾಕ್ಸಸ್ ಥಿüಯೇಟರ್‍ನಲ್ಲಿ ಪ್ರದರ್ಶನ ಕಾಣಲಿದೆ.

ಎ.29ರ ಆದಿತ್ಯವಾರ ಬೆಳಿಗ್ಗೆ 10.30 ಗಂಟೆಗೆ ಮತ್ತು ಸಂಜೆ 6.00 ಗಂಟೆಗೆ ಇದೇ ಮ್ಯಾಕ್ಸಸ್ ಥಿಯೇಟರ್ ನಲ್ಲಿ ಸಾರ್ವಜನಿಕವಾಗಿ ಪ್ರದರ್ಶನ ಕಾಣಲಿದೆ. ಅಂತೆಯೇ ಎ.30ರ ಸೋಮವಾರ ದಿಂದ ಮೇ.03ರ ಗುರುವಾರ ತನಕ ದಿನಂಪ್ರತಿ ಸಂಜೆ 7.00 ಗಂಟೆಗೆ ಚಿತ್ರರಸಿಕರಿಗಾಗಿ `ಜಾಂವಂಯ್ ನಂಬರ್ ವನ್' ಚಿತ್ರ ತೆರೆಕಾಣಲಿದೆ.

ಮಹಾನಗರದಲ್ಲಿನ ಎಲ್ಲಾ ಕೊಂಕಣಿ ಜನತೆ ಮತ್ತು ಚಲನಚಿತ್ರ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರದರ್ಶನದ ಯಶಸ್ಸಿಗೆ ಸಹಕರಿಸುವಂತೆ ಸಾಂಗತಿ ತಂಡದ ಪಾಲುದಾರರು ಈ ಮೂಲಕ ವಿನಂತಿಸಿದ್ದಾರೆ.

 

 

ಜಾಂವಂಯ್ ನಂಬರ್ ವನ್:
ಬೃಹನ್ಮುಂಬಯಿಯಲ್ಲಿ `ತ್ರಿಮೂರ್ತಿ ಕಲಾ ಸಂಘಟಕರು' ಎಂದೇ ಪ್ರಸಿದ್ಧ ವಾಲ್ಟರ್ ಡಿ'ಸೋಜಾ ಕಲ್ಮಾಡಿ, ಸಿರಿಲ್ ಕಾಸ್ತೆಲಿನೋ ಹಾಗೂ ಲಿಯೋ ಫೆರ್ನಾಂಡಿಸ್ ಜೆರಿಮೆರಿ ಇವರ `ಸಾಂಗತಿ ಕ್ರಿಯೇಶನ್ಸ್ ಮುಂಬಯಿ' ಬ್ಯಾನರ್‍ನ ನಿರ್ಮಾಪಕತ್ವದಲ್ಲಿ `ಜಾಂವಂಯ್ ನಂಬರ್ ವನ್' ಸಿನೆಮಾ ಸಿದ್ಧಗೊಂಡಿದೆ. ಬೋಜ್‍ಪುರಿ, ಬಾಲಿವುಡ್ ಹಾಗೂ ಕೊಂಕಣಿ ಚಲನಚಿತ್ರಗಳನ್ನು ನಿರ್ದೇಶಿಸಿದ ಅನುಭವೀ ಚಿತ್ರನಿರ್ದೇಶಕ ಹ್ಯಾರಿ ಫೆರ್ನಾಂಡಿಸ್ ಬಾರ್ಕೂರು ಕಥೆ ರಚನೆ ಹಾಗೂ ಸ್ವನಿರ್ದೇಶನದಲ್ಲಿ ತಯಾರಾದ ಚಿತ್ರದಲ್ಲಿ ದೀಪಕ್ ಪಾಲಡ್ಕ ನಾಯಕ ನಟನಾಗಿ ಮತ್ತು ಜೊಸಿಟಾ ಅನೊಲ್ ರೋಡ್ರಿಗಸ್ ನಾಯಕಿ ನಟಿ ಪಾತ್ರ ನಿಭಾಯಿಸಿದ್ದಾರೆ.

ಗೋವಾದ ಹೆಸರಾಂತ ಹಿರಿಯ ಕಲಾವಿದ ಪ್ರಿನ್ಸ್ ಜಾಕೋಬ್, ರಂಜಿತಾ ಲೂಯಿಸ್, ಸ್ಟಾ ್ಯನಿ ಅಲ್ವಾರಿಸ್, ಕೆವಿನ್ ಡಿ'ಮೆಲ್ಲೊ, ಕ್ಲ್ಯಾನ್‍ವಿನ್ ಫೆರ್ನಾಂಡಿಸ್ ಮತ್ತಿತರ ಸಹಕಲಾವಿದರು ಅಭಿನಯಿಸಿದ ಚಿತ್ರಕ್ಕೆ ಜೆರಿ ಬೋಂದೆಲ್, ಲಾಯ್ಡ್ ರೆಗೋ, ಹ್ಯಾರಿ ಫೆರ್ನಾಂಡಿಸ್ ರಚಿಸಿದ್ದು ಎರಿಕ್ ಓಝೇರಿಯೊ, ಜೆರಿ ಬೋಂದೆಲ್, ಗುಣ್‍ವಂತ್ ಸೆನ್ ಸಂಗೀತ ನೀಡಿರುವರು. ಶಫೀಕ್ ಶೇಖ್ ಅವರ ಛಾಯಾಗ್ರಹಣ ನಿರ್ದೇಶನ (ಡಿಒಪಿ)ದಲ್ಲಿ ಮೂಡಿವ ಚಿತ್ರಕ್ಕೆ ನವೀನ್ ಆರ್ಯಾನ್ ಕೋರಿಯೋಗ್ರಾಫಿ ಮಾಡಿದ್ದು ಅಭಿಷೇಕ್ ಮ್ಹಾಸ್ಕರ್ ಸಂಪಾದಕರಾಗಿ, ಸುನೀಲ್ ರೋಡ್ರಿಗಸ್ ಸಾಹಸಿಗನ ಪಾತ್ರ ನಿಭಾಹಿಸಿದ್ದಾರೆ. ಡಿಜಿಲೋಕ್ಸ್ ಚಿತ್ರ ರಚಿಸಿದ್ದು ಕರೆಲ್ ಪ್ರೇಮ್ ಡಿ'ಸೋಜಾ ಚಿತ್ರಉತ್ಪನ್ನ ಮೇಲ್ವಿಚರಾಕರಾಗಿ ಶ್ರಮಿಸಿದ್ದಾರೆ.

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal