About Us       Contact

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.07, 2017: ಗುಜರಾತ್ ರಾಜ್ಯದ ಬರೋಡದಲ್ಲಿ ಹೆಸರಾಂತ ಉದ್ಯಮಿ, ಕೊಡುಗೈದಾನಿ, ಗುಜರಾತ್ ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಇವರ ಅತಿಥ್ಯಸಂಸ್ಥೆ ಶಶಿ ಕೇಟರಿಂಗ್ ಸರ್ವಿಸ್ ದೇಶದ ಪ್ರತಿಷ್ಠಿತ ಹತ್ತು ಕ್ಯಾಟರಿಂಗ್ ಸರ್ವಿಸ್‍ಗಳಲ್ಲಿ ಒಂದೆಣಿಸಿ ಪ್ರತಿಷ್ಠಿತ ಗೌರವಕ್ಕೆ ಭಾಜನವಾಗಿದೆ. ಸಿಲಿಕಾನ್ ಇಂಡಿಯಾ ಪತ್ರಿಕೆ ದೇಶದಾದ್ಯಂತ ಕಾರ್ಪೊರೇಟ್ ಕೇಟರಿಂಗ್ ಸರ್ವಿಸ್ ಪ್ರೋವೈಡರ್-2017 ವಿಚಾರಿತ ಸರ್ವೆಯಲ್ಲಿ ಈ ಆಯ್ಕೆ ನಡೆಸಿ ಈ ಫಲಿತಾಂತ ಹೊರಡಿಸಿತ್ತು.

 

 

 

ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆ ನವಶಕ್ತಿ ದಿ| ಬಾಬು ಶೆಟ್ಟಿ ಮತ್ತು ಶ್ರೀಮತಿ ಕಾಶಿ ಶೆಟ್ಟಿ ಇವರ ಪುತ್ರರಾಗಿದ್ದು ಸದ್ಯ ಬೆಳ್ತಂಗಡಿ ಶಕ್ತಿ ನಗರ ಮೂಲತಃ ಇವರು ಅನೇಕ ವರ್ಷಗಳಿಂದ ಬರೋಡದಲ್ಲಿ ನೆಲೆಯಾಗಿದ್ದಾರೆ. ಮಂಗಳೂರುನಲ್ಲೂ ಉದ್ಯಮ ಹೊಂದಿರುವ ಶಶಿಧರ ಶೆಟ್ಟಿ ಹಲವು ವರ್ಷಗಳಿಂದ ಗುಜರಾತ್‍ನ ಬರೋಡದಲ್ಲಿ ಶಶಿ ಕ್ಯಾಟರಿಂಗ್ ಸರ್ವಿಸ್ ಎಂಬ ಸಂಸ್ಥೆಯನ್ನು ನಡ್ಸುತ್ತಿದ್ದಾರೆ.

ಈ ಸಂಸ್ಥೆ ಗ್ರಾಹಕರಿಗೆ ನೀಡುತ್ತಿರುವ ಅತ್ಯುತ್ತಮ ಪ್ರೀತಿ ವಿಶ್ವಾಸದ ಸೇವೆ ಮತ್ತು ಗುಣಮಟ್ಟದ ಆಹಾರ, ಸುಮಾರು ಆರು ಸಾವಿರಕ್ಕೂ ಹೆಚ್ಚು ಮಂದಿ ಯುವಕರಿಗೆ ಉದ್ಯೋಗ ನೀಡಿ ಅವರ ಜೀವನಕ್ಕೆ ಆಧಾರವಾಗಿರುವುದು ಹಾಗೂ ಈ ಸಂಸ್ಥೆ ಅನೇಕ ಆಧುನಿಕ ಸವಲತ್ತು ಹೊಂದಿರುವುದು. ಜನರು ಉತ್ತಮ ಭರವಸೆಯನ್ನು ಹೊಂದಿರುವುದು ಮೊದಲಾದ ಅಂಶಗಳನ್ನು ಸರ್ವೆಯಲ್ಲಿ ಪರಿಗಣಿಸಿ ಈ ಸಂಸ್ಥೆಯನ್ನು ರಾಷ್ಟ್ರದ ಅತ್ಯುತ್ತಮ ಸಂಸ್ಥೆ ಎಂಬ ಸಾಲಿಗೆ ಆಯ್ಕೆ ಮಾಡಲಾಗಿದೆ. ಈ ಸಂಸ್ಥೆ ಅನೇಕ ಬಾರಿ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಗುಜರಾತ್, ಹರಿಯಾಣ, ದೆಹಲಿ, ಕೊಲ್ಕತ್ತಾ, ಅಸ್ಸಾಂ, ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ ಹಾಗೂ ದೇಶದ ಹಲವು ಭಾಗಗಳಲ್ಲಿ ತಮ್ಮ ಸಂಸ್ಥೆಯನ್ನು ಹೊಂದಿದ್ದಾರೆ. ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶವಾದ ಗುರುವಾಯನಕೆರೆಯಿಂದ ಗುಜರಾತ್‍ಗೆ ತೆರೆಳಿ ತನ್ನ ಸರಳ ಸಜ್ಜನಿಕಾ ವ್ಯಕ್ತಿತ್ವವುಳ್ಳ ಶಶಿಧರ್ ಎಲ್ಲರೊಡನೆಯೂ ಬೆರೆಯುವ ಸ್ವಭಾವ ಹೊಂದಿರುವ ಪ್ರತಿಷ್ಠಿತ ಸಮಾಜ ಸೇವಕರಾಗಿದ್ದಾರೆ. ಓರ್ವ ಅನನ್ಯ ಸಮಾಜ ಸೇವಕಾಗಿ ನೂರಾರು ವಿದ್ಯಾಥಿರ್üಗಳು, ವಿಧವೆ, ಅಬಲೆಯರು, ಅನಾಥರ ಪಾಲಿನ ಪೋಷಕರಾಗಿ ಇವರ ತೆರೆಮರೆಯ ಅವರ ಸಾಧನೆ ಯುವಜನಾಂಗಕ್ಕೆ ಮಾದರಿಯಾಗಿದೆ.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal