About Us       Contact

Feb.22, 2018: Dr. Sonia Sethi Additional Director of Commerce, Industry & Foreign Trade, Govt. Of India on behalf of Commerce & Industry Minister Shri Suresh Prabhu Awarded Mr. Chandrashekara Shetty (Ex.General Secretary, Bombay Bunts Association) in recognition of Excellent Services in Manufacturing Category at 7th Global Economic Summit held at World Trade Centre in Mumbai today. 


ಸರ್ವೋತ್ಕೃಷ್ಟ ಉತ್ಪಾದಕ ಪ್ರಶಸ್ತಿಗೆ ಭಾಜನರಾದ ಚಂದ್ರಶೇಖರ್ ಶೆಟ್ಟಿ

ಮುಂಬಯಿ, ಫೆ.22: ಇಂದಿಲ್ಲಿ ಮುಂಬಯಿನ ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿ ಜರುಗಿದ 7ನೇ ಆರ್ಥಿಕ ಶೃಂಗಸಭಾ (ಎಕಾನಾಮಿಕ್ ಸುಮಿತ್) ತುಳುಕನ್ನಡಿಗ ಉದ್ಯಮಿ, ಬೊಂಬೇ ಬಂಟ್ಸ್ ಅಸೋಸಿಯೇಶನ್‍ನ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ಅವರಿಗೆ ಸರ್ವೋತ್ಕೃಷ್ಟ ಉತ್ಪಾದಕ ಪ್ರಶಸ್ತಿಗೆ ಪ್ರದಾನಿಸಿ ಗೌರವಿಸಲಾಯಿತು.

ಕೈಗಾರಿಕೋದ್ಯಮದಲ್ಲಿನ ಉತ್ತಮ ನಿರ್ಮಾಪಕ ಸೇವೆ ಗುರುತಿಸಿ ಸರ್ವೋತ್ಕೃಷ್ಟ ಉತ್ಪಾದಕ (ಎಕ್ಸಲೆಂಟ್ ಸರ್ವಿಸ್ ಇನ್ ಮ್ಯಾನ್ಯುಫ್ಯಾಕ್ಛರ್) ಪ್ರಶಸ್ತಿಗೆ ಭಾಜನರಾದ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತ ರಾಷ್ಟ್ರದ ವಾಣಿಜ್ಯ, ಉದ್ಯಮ ಮತ್ತು ವಿದೇಶ ಉದ್ದಿಮೆ ಇಲಾಖೆಯ ಹೆಚ್ಚುವರಿ ನಿರ್ದೇಶಕಿ ಡಾ| ಸೊನಿಯಾ ಸೇಥಿ ಅವರು ಶೆಟ್ಟಿ ಅವರಿಗೆ ಪ್ರಶಸ್ತಿ ಫಲಕ, ಮಾನ್ಯತಾಪತ್ರ ಪ್ರದಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಸುರೇಶ್ ಪ್ರಭು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal