About Us       Contact


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ,ಫೆ.05: ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ತನ್ನ 102ನೇ ಶಾಖೆಯನ್ನು ಇಂದಿಲ್ಲಿ ಬುಧವಾರ ಬೆಳಿಗ್ಗೆ ನಗರದ ಖಾರ್ ಪೂರ್ವದಲ್ಲಿನ ಜವಾಹರ್ ನಗರದ ಗೋಲಿಬಾರ್ ರಸ್ತೆಯಲ್ಲಿರುವ ಮಹಾತ್ಮಾ ಕೋ.ಅಪರೇಟಿವ್ ಹೌಸಿಂಗ್ ಸೊಸೈಟಿಯ ಕಟ್ಟಡದಲ್ಲಿ ಸೇವಾರಂಭಿಸಿದ್ದು ಬ್ಯಾಂಕ್ ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್ ರಿಬ್ಬನ್ ಬಿಡಿಸಿ ನೂತನ ಶಾಖೆ ಉದ್ಘಾಟಿಸಿದರು.

 

 

 

 

 

 

 

 

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ (ಬ್ಯಾಂಕ್‍ನ ನಿವೃತ್ತ ಮಹಾ ವ್ಯವಸ್ಥಾಪಕ) ದೀಪ ಪ್ರಜ್ವಲಿಸಿ ವಿಧ್ಯುಕ್ತವಾಗಿ ಶಾಖೆಯನ್ನು ಉದ್ಘಾಟಿಸಿದರು. ಬ್ಯಾಂಕ್‍ನ ಹಿರಿಯ ನಿರ್ದೇಶಕಿ ಪುಷ್ಫಲತಾ ಎನ್.ಸಾಲ್ಯಾನ್ ಭದ್ರತಾ ಖಜಾನೆಗೆ ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಕಂಪ್ಯೂಟರೀಕೃತ ಸೇವೆಗಳಿಗೆ ಚಾಲನೆ ನೀಡಿ ಶುಭಾರೈಸಿದರು.

ಈ ಸಂದರ್ಭದಲ್ಲಿ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಖಾರ್ ಅಧ್ಯಕ್ಷ ಶಂಕರ್ ಕೆ.ಸುವರ್ಣ, ಕಾರ್ಯಧ್ಯಕ್ಷ ಆರ್.ಡಿ ಕೋಟ್ಯಾನ್, ಗೌರವಾಧ್ಯಕ್ಷ ಶ್ರೀಧರ್ ಜೆ.ಬಂಗೇರ, ಗೌ| ಪ್ರ| ಕಾರ್ಯದರ್ಶಿ ಯೋಗೇಶ್ ಕೆ.ಹೆಜ್ಮಾಡಿ, ಮಾಜಿ ನಿರ್ದೇಶಕರುಗಳಾದ ಎನ್.ಎಂ ಸನಿಲ್, ಮೋಹನ್ ಜಿ.ಪೂಜಾರಿ, ಸಮಾಜ ಸೇವಕರುಗಳಾದ ಸುರೇಶ್ ಸುವರ್ಣ (ಆಮಂತ್ರಣ್), ಸಿಎ| ಅಶ್ವಜಿತ್ ಹೆಜ್ಮಾಡಿ, ರತ್ನಾಕರ್ ಪೂಜಾರಿ, ಸುರೇಖಾ ಸುವರ್ಣ, ಭೋಜ ಸಿ.ಪೂ ಜಾರಿ, ಉದ್ಯಮಿ ರವಿ ಪೂಜಾರಿ (ಆದರ್ಶ್) ಮತ್ತಿತರ ಗಣ್ಯರು ಉಪಸ್ಥಿತರಿದ್ದು ನೂತನ ಶಾಖೆಯ ಸರ್ವೋನ್ನತಿಗೆ ಶುಭಾರೈಸಿದರು.

ಗ್ರಾಹಕರ ಅನನ್ಯ ಸೇವೆಯಲ್ಲಿ ತೊಡಗಿಸಿಕೊಂಡ ಪರಿಣಾಮವಾಗಿ ಬ್ಯಾಂಕ್ ಶಿಖರೋನ್ನತಿ ಸಾಧಿಸಿದೆ. ಆಡಳಿತ ಮಂಡಳಿ, ಉನ್ನತಾಧಿಕಾರಿಗಳು ಮತ್ತು ಕರ್ಮಚಾರಿಗಳು ಒಂದು ಪರಿವಾರದಂತೆ ಸೇವಾ ನಿರತವಾಗಿರುವ ಕಾರಣ ರಾಷ್ಟ್ರದ ಸಹಕಾರಿ ರಂಗದಲ್ಲಿ ಪಂಚಸ್ಥಾನವನ್ನಲಂಕರಿಸಿದೆ. ನಮ್ಮೆಲ್ಲರ ಅಭಿಮಾನದ ಈ ಬ್ಯಾಂಕ್ ಬಿಲ್ಲವರ ಕೀರ್ತಿ ಪತಾಕೆಯನ್ನು ವಿಶ್ವಕ್ಕೆ ಪರಿಚಯಿಸಿದೆ. ಈ ಮಹಾನ್ ಸಾಧನಾಶೀಲತೆಯಲ್ಲಿ ಜಯ ಸುವರ್ಣರ ಪರಿಶ್ರಮ ಅಸಾಧರಣೀಯ. ಈ ನಮ್ಮ ಶೀಘ್ರ ಬೆಳವಣಿಗೆಯ ಸಹಕಾರಿ ಬ್ಯಾಂಕ್ ಇಂತಹ ಮಹಾನ್ ವ್ಯಕ್ತಿಯ ಕಾಲಾವಧಿಯಲ್ಲೇ ಮುಂದಿನ ದಿನಗಳಲ್ಲಿ ಭಾರತದಾದ್ಯಂ ತ ಪಸರಿಸುವಂತಾಗಲಿ ಎಂದು ಶಂಕರ್ ಸುವರ್ಣ ಹಾರೈಸಿದರು.

ನಾನೂ ಈ ಬ್ಯಾಂಕ್‍ನಲ್ಲಿ ಉನ್ನತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು ನನ್ನ ಸೆವಾವಧಿಯಲ್ಲಿ ನೂರು ಶಾಖೆಗಳ ಸೇವಾರ್ಪಣೆ ಆಗಿರುವುದು ನನ್ನ ಪುಣ್ಯೋದಯ. ನಿವೃತ್ತಿಯ ಬಳಿಕ ಮಾತೃ ಸಂಸ್ಥೆಯ ಅಧ್ಯಕ್ಷನಾಗಿ ಇಂದು ಉದ್ಘಾಟನಾ ದೀಪ ಬೆಳಗಿಸುವ ಅವಕಾಶ ಒಲಿದಿರುವುದು ಮತ್ತೊಂದು ಸೌಭಾಗ್ಯವಾಗಿದೆ. ಬ್ಯಾಂಕ್‍ನ ಸೇವಾವಧಿ ಜೀವನವನ್ನು ನೆಮ್ಮದಿಯಾಗಿ ಅನುಭವಿಸುವಂತಾಗಿಸಿದೆ. ಕೆಳವರ್ಗದ, ಮಧ್ಯಮ ವರ್ಗದ ಜನತೆಯ ಆಥಿರ್üಕ ಸುಧಾರಣೆ ಜೊತೆಗೆ ಸಾವಿರಾರು ಉದ್ಯಮಶೀಲರನ್ನು ಸೃಷ್ಠಿಸಿದ ಬ್ಯಾಂಕ್‍ನ ಸೇವೆಯೇ ಅನುಪಮ.ಮಹಾರಾಷ್ಟ್ರ ಸ್ಟೇಟ್ ಕೋ.ಆಪರೇಟಿವ್ ಬ್ಯಾಂಕ್'ಸ್ ಅಸೋಸಿಯೇಶನ್‍ನ `ಪದ್ಮಭೂಷಣ ವಸಂತ್‍ದಾದಾ ಪಾಟೀಲ್ ಉತ್ಕೃಷ್ಟ ಸಹಕಾರಿ ಬ್ಯಾಂಕ್' ಗೌರವಕ್ಕೆ ಭಾಜನವಾಗಿರುವ ಈ ಪಥಸಂಸ್ಥೆ ಸಮಗ್ರ ಭಾರತೀಯರ ಮೇರಾ ದೇಶ್ ಭಾರತ್ ಎನ್ನುವಂತೆ ಮೇರಾ ಬ್ಯಾಂಕ್ ಭಾರತ್ ಆಗಲಿ ಎಂದು ನಿತ್ಯಾನಂದ್ ಕೋಟ್ಯಾನ್ ಆಶಯ ವ್ಯಕ್ತ ಪಡಿಸಿದರು.

ಎನ್.ಎಂ ಸನಿಲ್ ಮತ್ತು ಯೋಗೇಶ್ ಕೆ.ಹೆಜ್ಮಾಡಿ ಸಂದರ್ಭೋಜಿತವಾಗಿ ಮಾತನಾಡಿ ಶಾಖೆ ಹಾಗೂ ಬ್ಯಾಂಕ್ ನ ಸಾಧನೆಗೆ ಅಭಿನಂದಿಸಿ ಯಶ ಕೋರಿದರು.

 

 

 

 

 

 

 

 

 

 

 

 

ಬ್ಯಾಂಕ್‍ನ ನಿರ್ದೇಶಕರುಗಳಾದ ಯು.ಎಸ್ ಪೂಜಾರಿ, ಭಾಸ್ಕರ್ ಎಂ.ಸಾಲ್ಯಾನ್, ಚಂದ್ರಶೇಖರ ಎಸ್.ಪೂಜಾರಿ, ಹರೀಶ್ಚಂದ್ರ ಜಿ.ಮೂಲ್ಕಿ, ದಾಮೋದರ ಸಿ.ಕುಂದರ್, ಆರ್.ಡಿ ಪೂಜಾರಿ, ಕೆ.ಬಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಅಶೋಕ್ ಎಂ.ಕೋಟ್ಯಾನ್, ಜ್ಯೋತಿ ಕೆ.ಸುವರ್ಣ ಉಪಸ್ಥಿತರಿದ್ದು, ಶಾಖೆಯ ಮುಖ್ಯಸ್ಥೆ ಜಯ ಎ.ಕೋಟ್ಯಾನ್, ಸಹಾಯಕ ಪ್ರಬಂಧಕಿ ಜಯಶ್ರೀ ವಿ.ಅವಿೂನ್, ಸಿಬ್ಬಂದಿಗಳಾದ ಸಚಿನ್ ಡಿ.ಪೂಜಾರಿ, ಯಶೋಧಾ ಟಿ. ಅವಿೂನ್, ಉನ್ನತ್ ಸಿ.ಬಂಗೇರ, ಗೋಪಾಲ್ ಎನ್.ಪೂಜಾರಿ ಅವರನ್ನು ಪುಷ್ಪಗುಪ್ಛವನ್ನಿತ್ತು ಗೌರವಿಸಿದರು.


ಮಹಾ ಪ್ರಂಬಧಕರುಗಳಾದ ದಿನೇಶ್ ಬಿ.ಸಲ್ಯಾನ್, ನವೀನ್‍ಚಂದ್ರ ಎಸ್.ಬಂಗೇರ, ಉಪ ಮಹಾ ಪ್ರಂಬಧಕರುಗಳಾದ ಸುರೇಶ್ ಎಸ್.ಸಾಲ್ಯಾನ್, ವಿಶ್ವನಾಥ್ ಜಿ.ಸುವರ್ಣ, ಪ್ರಭಾಕರ್ ಜಿ.ಪೂಜಾರಿ, ಮಹೇಶ್ ಬಿ.ಕೋಟ್ಯಾನ್, ಪ್ರಭಾಕರ್ ಜಿ.ಸುವರ್ಣ, ಸಹಾಯಕ ಮಹಾ ಪ್ರಂಬಧಕರುಗಳಾದ ಜಗದೀಶ್ ಎನ್.ಪೂಜಾರಿ, ಮಂಜುಳಾ ಎನ್.ಸುವರ್ಣ, ಹರೀಶ್ ಕೆ.ಹೆಜ್ಮಾಡಿ, ವಿವಿಧ ಶಾಖೆಗಳ ಮುಖ್ಯಸ್ಥರುಗಳಾದ ಕರುಣಾಕರ್ ಸುವರ್ಣ (ಶಾರ್ ಪಶ್ಚಿಮ), ಶೀತಲ್ ವಿ.ಅವಿೂನ್ (ಚಾರ್ಕೋಪ್), ನಿವೃತ್ತ ಮಹಾ ಪ್ರಂಬಧಕಿ ಶೋಭಾ ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.

ಉಳ್ಳೂರು ಧನಂಜಯ ಶಾಂತಿ ಗಣಹೋಮವನ್ನು, ಉಳ್ಳೂರು ಶೇಖರ್ ಶಾಂತಿ ವಾಸ್ತುಪೂಜೆ, ದ್ವಾರಪ್ರವೇಶ ಪೂಜೆ ನೆರವೇರಿಸಿ ಹರಸಿದರು. ಗಂಗಾಧರ್ ಕಲ್ಲಾಡಿ ತೀರ್ಥಪ್ರಸಾದ ವಿತರಿಸಿದರು. ಯಶೋಧಾ ತರುಣ್ ಅವಿೂನ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದÀರು.

ಜಯ ಎ.ಕೋಟ್ಯಾನ್ ಸ್ವಾಗತಿಸಿದರು. ಬ್ಯಾಂಕ್‍ನ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ (ಡಿಜಿಎಂ) ಬ್ಯಾಂಕ್‍ನ ಸೇವಾ ವೈಖರಿ ಪ್ರಸ್ತಾಪಿಸಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಖಾ ಮುಖ್ಯಸ್ಥ ಜಯಶ್ರೀ ವಿ. ಅವಿೂನ್ ಕೃತಜ್ಞತೆ ಸಮರ್ಪಿಸಿದರು.

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal