About Us       Contact

ಉತ್ತಮ ಸೇವೆಯಿಂದ ಗ್ರಾಹಕರ ವಿಶ್ವಾಸ ಗಳಿಕೆಸಾಧ್ಯ : ಪ್ರಕಾಶ್ ಭಟ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.03, 2018: ವೃತ್ತಿ, ಉದ್ಯಮದ ದೀರ್ಘಾವಧಿ ಪಯಣದ ನೈಜ್ಯ ಅನುಭವದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಿಂದ ಗ್ರಾಹಕಸ್ನೇಯಿ ಏರ್‍ಕೂಲರ್ಸ್‍ಗಳನ್ನು ಉತ್ಪಾಧಿಸಿ ಯಶಸ್ವಿ ಉದ್ಯಮದ ಕನಸು ನನಸಾಗಿಸಿದ್ದೇವೆ. ಭಾರತ ರಾಷ್ಟ್ರದಲ್ಲೇ ಇಂತಹ ಏರ್‍ಕೂಲರ್ ಉತ್ಪನ್ನ ಸದ್ಯ ಮತ್ತೊಂದಿಲ್ಲ. ಆ ಮೂಲಕ ನಮ್ಮ ಉದ್ಯಮಶೀಲಾ ಅನುಭವೀ ದೂರದೃಷ್ಠಿತ್ವದ ಯೋಚನೆ ಫಲಪ್ರದಗೊಳಿಸಿದ ನೆಮ್ಮದಿ ನಮಗಾಗಿದೆ. ಒಳ್ಳೆ ವಸ್ತು ನೀಡಿ, ಉತ್ತಮ ಸೇವೆ ನೀಡಿದಾಗ ಮಾತ್ರ ಗ್ರಾಹಕರ ವಿಶ್ವಾಸ ಗಳಿಸಲು ಸಾಧ್ಯ. ಇದಕ್ಕೆ ನಾವು ಹೊಸ ಅವಿಷ್ಕಾರಗಳೊಂದಿಗೆ ಉತ್ಪಧಿಸಿದ ಕೂಲರ್‍ಗಳೇ ನಿದರ್ಶನವಾಗಿವೆ ಎಂದು ಮುಂಬಯಿನ ವರ್ಣಡ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪ್ರಕಾಶ್ ಭಟ್ ತಿಳಿಸಿದರು.

 

 

 

 

 

ನಗರದ ಹೆಸರಾಂತ ಗೃಹಪಯೋಗಿ ವಸ್ತುಗಳ ಮಾರಾಟ ಮಳಿಗೆ ಮಲಾೈಕಾ ಸಂಸ್ಥೆಯು ವರ್ಣಡ ಸಂಸ್ಥೆ ಉತ್ಪಾಧಿತ ವರ್ಣ ಏರ್‍ಕೂಲರ್ಸ್‍ಗಳನ್ನು ಕಳೆದ ಶುಕ್ರವಾರ ಸಂಜೆ ವಿೂರಾರೋಡ್ ಅಲ್ಲಿನ ಜಿಸಿಸಿ ಕ್ಲಬ್ ಸಭಾಗೃಹದಲ್ಲಿ ಮಾರುಕಟ್ಟೆಗೆ ಬಿಡುಗಡೆ ಗೊಳಿಸಿ ಪ್ರಕಾಶ್ ಭಟ್ ಮಾತನಾಡಿದರು.

ಆಧುನಿಕ ತಂತ್ರಜ್ಞಾನದ ಬಳಕೆ ವರ್ಣ ಏರ್‍ಕೂಲರ್ಸ್‍ಗಳಲ್ಲಿ ಬಳಸಲಾಗಿದ್ದು, ಬಾಲ್ ಬೇರಿಂಗ್‍ನೊಂದಿಗೆ ತಾಮ್ರದ ಕಾಯಿಲ್ ಅಳವಡಿಸಿ ಸಿದ್ಧಪಡಿಸಿದ ಭಾರತದ ಏಕೈಕ ಏರ್‍ಕೂಲರ್ಸ್ ಆಗಿದೆ. ಗೃಹಪಯೋಗಿ ಉತ್ಪನ್ನಗಳ ಮಾರಾಟ ಮತ್ತು ವಿತರಣೆಗೆ ಅನುಭವಸ್ಥ ಮಲಾೈಕಾ ಸಂಸ್ಥೆ ವರ್ಣ ಏರ್‍ಕೂಲರ್‍ನ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ಪ್ರಮುಖ ವಿತರಣಾ ಸಂಸ್ಥೆಯಾಗಿದೆ. ನಾವು ಇದೀಗಲೇ 25 ಮಾದರಿಯ ನೂತನ ಶೈಲಿಯ ಕೂಲರ್‍ಗಳನ್ನು ಸಿದ್ಧಪಡಿಸಿದ್ದು, ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಇರುವ ಕಾರಣ ಇನ್ನೂ ಅತ್ಯಾಧುನಿಕ 5 ಶೈಲಿಯ ಏರ್‍ಕೂಲರ್‍ಗಳನ್ನು ಉತ್ಪಾಧನೆ ಮಾಡುತ್ತಿದ್ದೇವೆ ಎಂದೂ ಪ್ರಕಾಶ್ ಭಟ್ ತಮ್ಮ ಉತ್ಪಧನಾ ಬಗ್ಗೆ ಮಾಹಿತಿಯನ್ನಿತ್ತರು.

ಹಣ ದುಡಿಮೆಯಿಂದಲ್ಲ ಬುದ್ಧಿವಂತಿಕೆಯಿಂದ ಗಳಿಸಬೇಕು ಮತ್ತು ಬುದ್ಧಿವಂತಿಕೆಯನ್ನು ಶ್ರಮದಾಯಕ, ನಿಷ್ಠಾಯುತವಾಗಿ ಬಳಸಿಕೊಳ್ಳಬೇಕು ಅನ್ನುವುದಕ್ಕೆ ಪ್ರಕಾಶ್ ಭಟ್ ಉದ್ಯಮಶೀಲರಿಗೆ ತಿಳಿಸಿ ಕೊಟ್ಟಿದ್ದಾರೆ. ಔದ್ಯೋಗಿಕ ಕ್ಷೇತ್ರಕ್ಕೆ ಅವರೋರ್ವ ಮಾದರಿ ಉದ್ಯಮಿ ಆಗಿದ್ದಾರೆ. ಅವರಲ್ಲಿನ ಸರಳ ವ್ಯವಹಾರಜ್ಞಾನ ಅದ್ಭುತ ಮತ್ತು ಯುವಪೀಳಿಗೆಗೆ ಮಾದರಿಯಾಗಿದೆ. ಮಾನವನ ದುಡಿಮೆ ಆತನ ನೆಮ್ಮದಿಗಾಗಿ ಆಗಿದ್ದು, ಇಂತಹ ನೆಮ್ಮದಿಗೆ ನಿದ್ರೆ, ವಿಶ್ರಾಂತಿಯ ಅವಶ್ಯವಿದ್ದು ಅದಕ್ಕಾಗಿ ಗುಣಮಟ್ಟದ ಸಾಮಾಗ್ರಿಗಳ ಬಳಕೆಯೊಂದಿಗೆ ಶಾಂತ, ನಿಶಬ್ಧ ವಾತಾವರಣದೊಂದಿಗೆ ಆರೋಗ್ಯದಾಯಕ ಗಾಳಿ ನೀಡುವ ಏರ್‍ಕೂಲರ್‍ಗಳನ್ನು ನಿರ್ಮಿಸಿರುವುದು ಹೆಮ್ಮೆದಾಯಕ ಎಂದು ಮಲಾೈಕಾ ಎಪ್ಲೈಯನ್ಸಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಗಿಲ್ಬರ್ಟ್ ಬ್ಯಾಪ್ಠಿಸ್ಟ್ ನುಡಿದರು.

 

 

 

 

 

ಮಲಾೈಕಾ ಸಂಸ್ಥೆ ಕಳೆದ ಅನೇಕ ದಶಕಗಳಿಂದ ವಿಶ್ವದ ಹತ್ತಾರು ಪ್ರತಿಷ್ಠಿತ ಬ್ರಾಂಡ್‍ಗಳ ಗೃಹಪಯೋಗಿ ವಸ್ತುಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಪಾತ್ರವಾಗಿದೆ. ಹೆಸರಾಂತ ಕಂಪೆನಿಗಳ ವೈವಿಧ್ಯಮಯ ಉತ್ಪನ್ನಗಳ ವಿಸ್ತಾರ ಸಂಗ್ರಹ, ವಿತರಣೆ, ಸ್ವಂತಿಕೆಯ ಉತ್ಪನ್ನಗಳ ಮಾರಾಟದೊಂದಿಗೆ ಬದ್ದತೆ ಮತ್ತು ವಿಶ್ವಾಸ ಕಾಯ್ದಿರಿಸಿದೆ. ಹುಟ್ಟೂರ ಕರ್ನಾಟಕದ ಕರಾವಳಿ ನಗರಗಳಲ್ಲೂ ಶಾಖೆಗಳನ್ನು ತೆರೆದು ಸೇವೆಯಲ್ಲಿ ಜನಮನ್ನಣೆ ಪಡಿದಿದೆ. ಆ ಮೂಲಕ ಮಲಾೈಕಾ ಸಂಸ್ಥೆ ಸದ್ಯ ಮುಂಬಯಿ ಹಾಗೂ ಉಪನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಗೃಹಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಮನೆಮಾತಾಗಿದೆ ಎಂದೂ ಗಿಲ್ಬರ್ಟ್ ಬ್ಯಾಪ್ಠಿಸ್ಟ್ ತಿಳಿಸಿದರು.

ವರ್ಣ ಕೂಲರ್ಸ್‍ನ ಭಾರತ ಮಾರುಕಟ್ಟೆ ಸೇವಾ ಮುಖ್ಯಸ್ಥ ಶ್ಯಾಮ್ ಗ್ವಲಾನಿ, ಮುಂಬಯಿ ಪ್ರಾದೇಶಿಕ ವ್ಯವಸ್ಥಪಕ ಮೆಹುಲ್ ಓಝಾ, ಗ್ಲೋಬಲ್ ಗರ್ನರ್ ಸಂಸ್ಥೆಯ ಪ್ರಮೋದ್ ಪುರರ್ಕರ್, ಕಾರ್ಯಕ್ರಮದಲ್ಲಿ ಮಲಾೈಕಾ ಸಮೂಹದ ನಿರ್ದೇಶಕಿ ಮರ್ಸೆಲಿನ್ ಜಿ.ಬ್ಯಾಪ್ಠಿಸ್ಟ್, ಉನ್ನತಾಧಿಕಾರಿಗಳಾದ ಎಲ್ಸಿ ಜೆ.ರೋಡ್ರಿಗಸ್, ಮನೋಹರ್ ಆರ್.ಶೆಟ್ಟಿ, ತೇಜಾ ರವೀಂದ್ರ ಶೆಟ್ಟಿ, ಲೋಯಲ್ ಬ್ಯಾಪ್ಠಿಸ್ಟ್, ರಮಣಿ ಐಯ್ಯರ್, ಅಲ್ಬನ್ ನೊರೋನ್ಹಾ ಮತ್ತಿತರರು ಉಪಸ್ಥಿತರಿದ್ದರು.

ಮಲಾೈಕಾ ಸಮೂಹದ ನಿರ್ದೇಶಕಿ ಮಲಾೈಕಾ ಜಿ.ಬ್ಯಾಪ್ಠಿಸ್ಟ್ ಸ್ವಾಗತಿಸಿದರು. ಕಿಂಗ್ ಎಡ್ವರ್ಡ್ ಕಾರ್ಯಕ್ರಮ ನಿರೂಪಿಸಿದರು. ಮಲಾೈಕಾ ಸಂಸ್ಥೆಯ ಸಂತೋಷ್ ತಿಂಗಳಾಯ ಧನ್ಯವದಿಸಿರು. ಯಶಿಕಾ ಡ್ಯಾನ್ಸ್ ತಂಡವು ಮನಾಕರ್ಷಕ ನೃತ್ಯಾವಳಿಗಳನ್ನು ಪ್ರದರ್ಶಿಸಿದರು.

 

 

 

 

 

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal