About Us       Contact

ಗ್ರಾಹಕರನ್ನು ಗೌರವಿಸಿ ಬದ್ಧತಾ ಸೇವೆ ನಿರ್ವಹಿಸಿ - ಸತೀಶ್ ಪಿ.ಪೂಜಾರಿ

ಮುಂಬಯಿ, ಜ.11, 2018: ದಿ. ಭಾರತ್ ಬ್ಯಾಂಕ್ ಕೋ.ಅಪರೇಟಿವ್ (ಮುಂಬಯಿ) ಲಿಮಿಟೆಡ್ ಇದರ ಬೆಂಗಳೂರು ಸ್ಟಾಫ್ ವೆಲ್ಫೇರ್ ಕ್ಲಬ್ ಇತ್ತೀಚೆಗೆ ಸಿಲಿಕಾನ್ ಸಿಟಿ ಅಲ್ಲಿನ ಗೇಟ್‍ವೇ ರೆಸೋರ್ಟ್‍ನಲ್ಲಿ ವಾಷಿಕ ಸ್ನೇಹಮಿಲನ ಕಾರ್ಯಕ್ರಮ ಹಮ್ಮಿಕೊಂಡಿತ್ತು.

 

 

ಸ್ಟಾಫ್ ವೆಲ್ಫೇರ್ ಕ್ಲಬ್‍ನ ಸದಸ್ಯರಾದ ಚೇತನ್ ಕುಮಾರ್, ನಾಗರಾಜ್ ಸುವರ್ಣಾ, ಚೇತಲಿ ಸುವರ್ಣ ಇವರ ಮುಂದಾಳುತ್ವದಲ್ಲಿ ಹಾಗೂ ಹಿರಿಯ ಪ್ರಬಂಧಕ ಸತೀಶ್ ಪಿ.ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಬೆಂಗಳೂರುನ ಉದ್ಯಮಿ, ಸಮಾಜ ಸೇವಕರಾದ ಸುರೇಖಾ ಡಿ.ಪೂಜಾರಿ, ನಾಗರಾಜ್ ಸುವರ್ಣ, ರವೀಂದ್ರ ಕುಂದರ್, ಗೋಪಲ್ ಪೂಜಾರಿ, ಕಿರಣ್ ಬಿ.ಸಾಕ ಅತಿಥಿಗಳಾಗಿ ಉಪಸ್ಥಿತರಿದ್ದರು.

ವೀಣಾ ಕಿರಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರ ಮಕ್ಕಳು ನೃತ್ಯ ಮತ್ತು ಕ್ರಿಕೆಟ್, ತ್ರೊಬೋಲ್ ಕಾರ್ಯಕಮಗಳನ್ನು ನಡೆಸಿದರು.

 

 

ಭಾರತ್ ಬ್ಯಾಂಕ್ ನಮಗೆಲ್ಲಾ ಒಂದು ಕಲ್ಪವೃಕ್ಷ ಇದ್ದಂತೆ. ಒಂದು ಪರಿವಾರದಂತೆ ನಮ್ಮನ್ನೆಲ್ಲ ಒಗ್ಗೂಡಿಸಿ ನಮ್ಮ ಆಶಯಗಳನ್ನು ಈಡೇರಿಸುಉತಿದೆ. ಆದುದರಿಂದ ನಾವೂ ಪ್ರಾಮಾಣಿಕರಾಗಿ ಶ್ರಮಪಟ್ಟು ದುಡಿಯ ಬೇಕು. ಇದರಿಂದ ನಮ್ಮ ಮತ್ತು ಬ್ಯಾಂಕ್‍ನ ಪ್ರಗತಿ ಖಂಡಿತಾ ಸಾಧ್ಯವಾಗುವುದು. ನಮ್ಮ ಬ್ಯಾಂಕ್‍ನ ನಿರ್ದೇಶನ ಮಂಡಳಿಗೆ ನಾವೆಲ್ಲರೂ ಅಭಾರಿಗಳಾಗಿ ಅವರ ಆಶಯಗಳನ್ನು ಪೂರ್ಣಗೊಳಿಸಿ ಗ್ರಾಹಕರನ್ನೂ ಗೌರವಿಸಿ ಬದ್ಧತೆಯಿಂದ ಸೇವೆ ನಿರ್ವಹಿಸೋಣ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಸತೀಶ್ ಪೂಜಾರಿ ತಿಳಿಸಿದರು. ಹಾಗೂ ವಜೀರ ಕುಮಾರ್ ಪಿ.ಜೈನ್ ಅವರನ್ನು ಸನ್ಮಾನಿಸಿದರು.

ಸತೀಶ್ ಎಲ್.ಸುವರ್ಣ, ಭಾಸ್ಕರ್ ಸರಪಡಿ, ಸದಾನಂದ ಕಾರ್ಕಳ್, ಆಕಾಶ್ ಭಾಸ್ಕರ್ ಪೂಜಾರಿ, ಚೇತನ್ ಕುಮಾರ್ ಮತ್ತಿತರ ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕು| ಲಾಶಿಯಾ ನಾಗರಾಜ್ ಪ್ರಾರ್ಥನೆಯನ್ನಾಡಿದರು. ಭಾಸ್ಕರ್ ಸರಪಡಿ ಸ್ವಾಗತಿಸಿದರು. ಗೋಪಾಲ ಪೂಜಾರಿ ವಂದಿಸಿದರು. ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮ ಸಮಾಪನ ಗೊಂಡಿತು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal