About Us       Contact

100% ಕ್ಯಾಶ್ ಬ್ಯಾಕ್-ಬಡ್ಡಿ ರಹಿತ ಸುಲಭ ಕಂತುಗಳ ಸೌಲಭ್ಯ

ಮುಂಬಯಿ, ಡಿ.31, 2017: ಬೃಹನ್ಮುಂಬಯಿಯಲ್ಲಿ ವಿಶ್ವದ ಬ್ರಾಂಡೇಡ್‍ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಗೃಹಪಯೋಗಿ ವಸ್ತುಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಮನೆ ಮಾತಾಗಿರುವ ತುಳು ಕನ್ನಡಿಗರ ಹೆಸರಾಂತ ಮಲೈಕಾ ಅಪ್ಲೈಯನ್ಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ನೂತನ ವರ್ಷ ಪ್ರಯುಕ್ತ ತಮ್ಮ ಎಲ್ಲಾ ಗ್ರಾಹಕರಿಗೆ ವಿಶೇಷವಾದ ಕೊಡುಗೆಗಳ ಅವಕಾಶ ಕಲ್ಪಿಸಿದೆ.

 

100 ಶೇಕಡಾ ಕ್ಯಾಶ್ ಬ್ಯಾಕ್ ಹಾಗೂ ಬಡ್ಡಿ ರಹಿತ ಸುಲಭ ಮಾಸಿಕ ಕಂತುಗಳಲ್ಲಿ ಸಾಲದ ಸೌಲಭ್ಯ ಸ್ಥಳದಲ್ಲೇ ಒದಗಿಸುತ್ತಿದೆ. ಪ್ರತೀ ಖರೀದಿಯೊಂದಿಗೆ ಆಕರ್ಷಕ ಉಚಿತ ಉಡುಗೊರೆ ಮತ್ತು ಇನ್ಸೂರೆನ್ಸ್ ಅದೃಷ್ಟ ಯೋಜನೆ ಲಕ್ಕಿಕೂಪನ್ ಡ್ರಾ, ರೆನಾಲ್ಟ್ ಕಾರ್ ಉಡುಗೊರೆ ನೀಡುತ್ತಿದೆ. ಸೀಮಿತ ಅವಧಿ ವರೆಗೆ ವಿಶೇಷ ವಿನಿಮಯ ಕೊಡುಗೆ ಸೇರಿದಂತೆ ಮುಂಬಯಿ ಮತ್ತು ತವರೂರ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸಾಗಾಣಿಕೆ ಮುಂತಾದ ಹಲವಾರು ಸೌಲಭ್ಯಗಳನ್ನೂ ಗ್ರಾಹಕರಿಗೆ ನೀಡಲಿದೆ.  

ಎಲ್ಲಾ ಮಲೈಕಾ ಶೋರೂಂಗಳಲ್ಲಿ ಮೊಬೈಲ್, ಎಲ್‍ಇಡಿ ಟಿವಿ, ಎಸಿ, ರೆಫ್ರಿಜರೇಟರ್, ವಾಶಿಂಗ್ ಮೆಶಿನ್, ಕೂಲರ್, ಡೀಪ್ ಫ್ರೀಝರ್, ಲ್ಯಾಪ್‍ಟಾಪ್ ಇತ್ಯಾದಿ ಯಾವುದೇ ಉತ್ಪನ್ನಗಳ ಖರೀದಿಗೆ ಗ್ಲೋಬಲ್ ಗಾರ್ನರ್‍ನಿಂದ, ಶೇ.100 ಕ್ಯಾಶ್‍ಬ್ಯಾಕ್ ಕೊಡುಗೆಗಳಿವೆ. ವರ್ಷಕ್ಕೆ ಉಚಿತ 2 ಲಕ್ಷದ ವಿಮೆಯೂ ಲಭ್ಯವಿದೆ. ವಿಮೆಯ ಕೊಡುಗೆಗಳು ಪ್ರಥಮ 100 ಗ್ರಾಹಕರಿಗೆ ಮಾತ್ರ ಸೀಮಿತ. ಎಲ್ಲ ಖರೀದಿಗೆ ಮಲೈಕಾ ಮಲ್ಟಿ ಸ್ಟೇಟ್ ಕೋ.ಅಪರೇಟಿವ್ ಸೊಸೈಟಿ ಲಿಮಿಟೆಡ್‍ನಿಂದ ಸುಲಭ ಸಾಲ ಸೌಲಭ್ಯವಿದೆ. ಬಜಾಜ್ ಫಿನ್‍ಸರ್ವ್ ಅವರಿಂದ ಶೂನ್ಯ ಬಡ್ಡಿಯ ಸಾಲ ಸೌಲಭ್ಯವಿದೆ. ಹೆಚ್ಚಿನ ಮಾಹಿತಿಗೆ ಮಲೈಕಾ ಅಪ್ಲೈಯನ್ಸಸ್ ಶೋರೂಗೆ ಸಂಪರ್ಕಿಸಬೇಕಾಗಿ ಮಲೈಕಾ ಸಮೂಹದ ಕಾರ್ಯಾಧ್ಯಕ್ಷ ಗಿಲ್ಬರ್ಟ್ ಬ್ಯಾಪ್ಠಿಸ್ಟ್ ಈ ಮೂಲಕ ವಿನಂತಿಸಿದ್ದಾರೆ.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal