About Us       Contact

ಸಾಮರಸ್ಯದ ಬಾಳಿಗೆ ಸ್ನೇಹಮಿಲನಗಳು ಅಡಿಪಾಯ : ಗಿಲ್ಬರ್ಟ್ ಬ್ಯಾಪ್ಠಿಸ್ಟ್

(ಚಿತ್ರ / ವರದಿ  : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.27, 2017: ಮಾನವ ಜೀವನ ಸ್ವಾತಂತ್ರ್ಯ, ಅಸಮಾನತೆ, ಜಾತಿಯತೆ, ಮೇಲುಕೀಳು, ಶೋಷಣೆ ಮತ್ತು ಮೂಢ ನಂಬಿಕೆ ಅಂತಹವುಗಳಿಂದ ದೂರ ಉಳಿಯುವ ಅಗತ್ಯ ಇಂದಿನ ಜನತೆಗಿದೆ. ಇದನ್ನೆಲ್ಲಾ ಮೆಟ್ಟ್ತಿನಿಂತು ಮಾನವೀಯ ತತ್ವಾದರ್ಶ ಮತ್ತು ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿ ಬಾಳಿದಾಗ ಸಾಮರಸ್ಯದ ಬದುಕು ಸಾಧ್ಯವಾಗುವುದು. ಅದಕ್ಕಾಗಿ ಇಂತಹ ಸ್ನೇಹಮಿಲನಗಳು ಪೂರಕವಾಗಿವೆ. ಇದನ್ನು ಮನವರಿಸಿ ನಮ್ಮ ಸಂಸ್ಥೆಯು ವಾರ್ಷಿಕವಾಗಿ ಸ್ನೇಹಮಿಲನ ಕಾರ್ಯಕ್ರಮ ಹಮ್ಮಿಕೊಂಡು ಸಂಸ್ಥೆಯ ಕರ್ಮಚಾರಿ, ಗ್ರಾಹಕರ ಸೇವೆಯನ್ನು ಗುರುತಿಸಿ ಗೌರವಿಸುತ್ತಾ ಅನ್ಯೋನ್ಯತೆಗೆ ಶ್ರಮಿಸುತ್ತಿದೆ. ಕನಿಷ್ಠ ಉದ್ಯೋಗಸ್ಥ ಪರಿವಾರದಲ್ಲಿ ಇಂತಹ ಆದರ್ಶಗಳನ್ನು ಪರಿಪಾಲಿಸುವಲ್ಲಿ ಸಹಕಾರಿ ಆಗಲಿವೆ. ಎಲ್ಲರೂ ನುಡಿದಂತೆ ನಡೆದರೆ ಸಮಾಜದಲ್ಲಿ ಬದಲಾವಣೆ ಸುಲಭಸಾಧ್ಯ ಎಂದು ಮಲಾೈಕಾ ಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ಗಿಲ್ಬರ್ಟ್ ಬ್ಯಾಪ್ಠಿಸ್ಟ್ ನುಡಿದರು.

 

 

 

 

 

ಇಂದಿಲ್ಲಿ ಬುಧವಾರ ಸಂಜೆ ವಿೂರಾರೋಡ್ ಪೂರ್ವದ ಹಾರ್ದಿಕ್ ಪ್ಯಾಲೇಸ್ ಹೊಟೇಲ್‍ನ ಲಾನ್‍ನಲ್ಲಿ ಗೃಹಪಯೋಗಿ ವಸ್ತುಗಳ ಮಾರಾಟ ಹಾಗೂ ವಿತರಣೆಗೆ ಮನೆ ಮಾತಾಗಿರುವ ತುಳು ಕನ್ನಡಿಗರ ಹೆಸರಾಂತ ಮಲಾೈಕಾ ಸಮೂಹವು ಆಯೋಜಿಸಿದ್ದ 2017ನೇ ವಾರ್ಷಿಕ ಸ್ನೇಹಮಿಲನ ಕಾರ್ಯಕ್ರಮವನ್ನುದ್ದೇಶಿಸಿ ಗಿಲ್ಬರ್ಟ್ ಬ್ಯಾಪ್ಠಿಸ್ಟ್ ಮಾತನಾಡಿ ಸಾಮರಸ್ಯದ ಬದುಕು ಮುಂದಿನ ಪೀಳಿಗೆಗೆ ಒಳ್ಳೆಯ ವಾತಾವರಣ ಕೊಡುಗೆ ಆಗಿ ನೀಡಬೇಕು ಎಂದು ಸಲಹೆ ನೀಡಿದರು.  

ಅತಿಥಿಗಳಾಗಿ ವರ್ಣ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಪ್ರಕಾಶ್ ಭಟ್ ಮುಡಿಪು, ವರ್ಣ ಸಂಸ್ಥೆಯ ಉಪಾಧ್ಯಕ್ಷ ಪೂರ್ಣಾನಂದ ಶೇರೆಗಾರ್, ಮಲಾೈಕಾ ಸಂಸ್ಥೆಯ ನಿರ್ದೇಶಕಿ ಮಾರ್ಸೆಲಿನಾ ಜಿ.ಬ್ಯಾಪ್ಠಿಸ್ಟ್, ಮಲಾೈಕಾ ಬ್ಯಾಪ್ಠಿಸ್ಟ್, ಅನಿಲ್ ಜಿಗರ್ ಪೊಪ್ತಾನಿ, ಯಶಿಕಾ ಜಿ.ಬ್ಯಾಪ್ಠಿಸ್ಟ್, ಜೆಸ್ಸಿ ಡಿ'ಸೋಜಾ, ಜಿತೇಂದ್ರ ಪರ್ದೇಶಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶುಭಹಾರೈಸಿದರು.

 

 

 

 

 

ಸಂಸ್ಥೆಯ ಹಿರಿಯ ಸಿಬ್ಬಂದಿಗಳಾದ ಚಂದ್ರಶೇಖರ್ ನಾಯ್ಕ್, ಸುರೇಶ್ ಸಾವಂತ್, ನಂದಲಾಲ್ ತಿವಾರಿ, ರಿತೇಶ್ ಶ್ಹಾ, ಮಲಾೈಕಾ ಮಲ್ಟಿ-ಸ್ಟೇಟ್ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿಯ ರಂಜಿ ಜೋಸ್ ಮತ್ತು ಸಹೋದ್ಯೋಗಿ ತಂಡಕ್ಕೆ ಸಾಧಕ ಫಲಕಗಳನ್ನಿತ್ತು, ಪ್ರಸನ್ನ ಬಿಡೆ, ರಾಕೇಶ್ ಅಟಾನಿ, ಸುನೀಲ್ ಚವ್ಹಾಣ್, ಅಪ್ಝಲ್ ಶೇಖ್, ಅಜೇಯ್ ಯಾದವ್ ಅವರಿಗೆ ಸಾಧಕ ಸರ್ಟಿಫಿಕೇಟ್‍ಗಳನ್ನು ಪ್ರದಾನಿಸಿ ಗೌರವಿಸಿದರು. ಕು| ಸುಪ್ರಿತಾ ಪಿ.ಬಿಡೆ, ಮಾ| ಶರತ್ ಸಿ.ಸುದರ್ಶನ್, ಕು| ಶಿವಾನಿ ಎಸ್.ಮಿಶ್ರಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಿದರು. ಮಹಾನಗರದಾದ್ಯಂತ ಸೇವಾ ನಿರತ ಮಲಾೈಕಾ ಅಪ್ಲೈಯನ್ಸಸ್‍ನ ಎಲ್ಲಾ ಮಳಿಗೆಗಳ ಪಯ್ಕಿ ಅತ್ಯುತ್ತಮ ವ್ಯವಹಾರ ನಡೆಸಿದ ದಹಿಸರ್ ಶಾಖೆಗೆ ಅತ್ಯುತ್ತಮ ಶಾಖೆ ಗೌರವ ಮತ್ತು ಮಹೇಂದ್ರ ಸಾವಡೇಕರ್ ಅವರಿಗೆ ವರ್ಷದ ಸರ್ವೋತ್ತಮ ಅಧಿಕಾರಿ ಗೌರವ ಪ್ರದಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಲಾೈಕಾ ಸಂಸ್ಥೆಯ ಉನ್ನತಾಧಿಕಾರಿಗಳಾದ ಎಲ್ಸಿ ಜೆ.ರೋಡ್ರಿಗಸ್, ಮನೋಹರ್ ಆರ್.ಶೆಟ್ಟಿ, ತೇಜಾ ರವೀಂದ್ರ ಶೆಟ್ಟಿ, ಸುಶಾಂತ್ ಎಸ್.ಸಬತ್, ಲೋವೆಲ್ ಬ್ಯಾಪ್ಠಿಸ್ಟ್, ಪ್ರಕಾಶ್ ಕೋಟ್ಯಾನ್, ರಮನ್ ಐಯ್ಯರ್, ಸದಾನಂದ್ ಕುಂದರ್, ಕೃಷ್ಣ ಪೂಜಾರಿ ಶಂಭೂರು, ಅಲ್ಬನ್ ನೊರೋನ್ಹಾ, ಸುಂದರ್ ಪೂಜಾರಿ ಸುವರ್ಣ (ಪೂಜಾರಿ) ಮತ್ತಿತರರು ಉಪಸ್ಥಿತರಿದ್ದರು.  

ಮಲಾೈಕಾ ಬ್ಯಾಪ್ಠಿಸ್ಟ್ ಸ್ವಾಗತಿಸಿದರು. ರೋನಾಲ್ಡ್ ಮಿನೇಜಸ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಕೋಟ್ಯಾನ್ ಹಾಡುಗಳನ್ನಾಡಿದ್ದು, ಕೆ.ಸುರೇಶ್ ಮ್ಯಾಜೀಕ್ ಶೋ ನಡೆಸಿ ಮನೋರಂಜನೆ ನೀಡಿದರು. ಸಂತೋಷ್ ತಿಂಗಳಾಯ ವಂದಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal