About Us       Contact

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.23, 2017: ಇಂಡಿಯನ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ (ಆಹಾರ್) ನೂತನ ಅಧ್ಯಕ್ಷರಾಗಿ ಸಂತೋಷ್ ಆರ್.ಶೆಟ್ಟಿ ಅವರನ್ನು ಆಹಾರ್ ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ಆಯ್ಕೆಗೊಳಿಸಿತು. ಇವರು ವಲಯ 3ರ ಯುವ ಹೊಟೇಲ್ ಉದ್ಯಮಿಯಾಗಿದ್ದಾರೆ. ಇಂದಿಲ್ಲಿ  ಶನಿವಾರ ಅಪರಾಹ್ನ  ಕುರ್ಲಾ ಪೂರ್ವದಲ್ಲಿನ ಬಂಟರ ಸಂಘದ ಅನೆಕ್ಸ್ ಕಟ್ಟಡದ ವಿಜಯಲಕ್ಷಿ ್ಮೀ ಮಹೇಶ್ ಶೆಟ್ಟಿ (ಬಾಬಾ ಗ್ರೂಪ್) ಕಿರು ಸಭಾಗೃಹದಲ್ಲಿ ಆಹಾರ್ ಅಧ್ಯಕ್ಷ ಆದರ್ಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ  ಸಭೆಯಲ್ಲಿ ಆಹಾರ್‍ನ 16ನೇ ಅಧ್ಯಕ್ಷರಾಗಿ ಆಯ್ಕೆ ಆದರು.

 

 

 

 

 

ಈ ವರೇಗೆ 1976ರಲ್ಲಿ ಸ್ಥಾಪನೆಗೊಂಡ ಆಹಾರ್‍ನಲ್ಲಿ ದತ್ತಕದಂ ಸ್ಥಾಪಕಾಧ್ಯಕ್ಷರಾಗಿ ಸೇವೆ ಆರಂಭಿಸಿದ್ದು, ನಂತರ ಎಂ.ಡಿ ಶೆಟ್ಟಿ, ತಿಮೋತಿ ಡಿಸೋಜಾ, ಸಂತೋಷ್ ಶೆಟ್ಟಿ, ರಮಾನಾಥ ಎಸ್.ಪಯ್ಯಡೆ, ಶಿವರಾಮ ಜಿ. ಶೆಟ್ಟಿ, ಸೀತರಾಮ ಎಂ.ಶೆಟ್ಟಿ, ರವಿಪಾಲ್ ಸಿಂಗ್ ಗಾಂಧಿ, ಎ.ಬಿ ಶೆಟ್ಟಿ, ದಿಪೇಂದರ್ ಸಿಂಗ್ ಸೋನಿ, ಚಂದ್ರಹಾಸ ಕೆ.ಶೆಟ್ಟಿ (ರಜತೋತ್ಸವ ಸಂಭ್ರಮ ವರ್ಷದ ರೂವಾರಿ), ನಾರಾಯಣ ಆಳ್ವ, ಸುಧಾಕರ ವೈ.ಶೆಟ್ಟಿ, ಅರವಿಂದ್ ಶೆಟ್ಟಿ ಮತ್ತು ಆದರ್ಶ್ ಶೆಟ್ಟಿ ಸೇವೆ ಸಲ್ಲಿಸಿದ್ದರು.

ಸಭೆಯಲ್ಲಿ ಆಹಾರ್‍ನ 2017-18ರ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದ್ದು, ಉಪಾಧ್ಯಕ್ಷರುಗಳಾಗಿ ಮಹೇಂದ್ರ ಸೂರು ಕರ್ಕೇರ (ವಲಯ-1), ಕೃಷ್ಣ ವಿ.ಶೆಟ್ಟಿ (ವಲಯ-2), ವಿಜಯ್ ಶೆಟ್ಟಿ(ವಲಯ-3), ಸುರೇಶ್ ಶೆಟ್ಟಿ (ವಲಯ-4), ವಿಜಯ್ ಶೆಟ್ಟಿ (ವಲಯ-5), ಆನಿಲ್ ಶೆಟ್ಟಿ (ವಲಯ-6), ರಾಜನ್ ಶೆಟ್ಟಿ (ವಲಯ-7), ಭುಜಂಗ ಶೆಟ್ಟಿ (ವಲಯ-8), ಕರುಣಾಕರ ಶೆಟ್ಟಿ (ವಲಯ-9), ಪ್ರಭಾಕರ್ ಶೆಟ್ಟಿ(ವಲಯ-10), ವಿಶ್ವಪಾಲ್ ಎಸ್.ಶೆಟ್ಟಿ (ಗೌ| ಪ್ರ| ಕಾರ್ಯದರ್ಶಿ), ಜಯನಂದ (ಗೌ| ಕೋಶಾಧಿಕಾರಿ), ರಾಜೇಶ್ ನಾೈಕ್(ಗೌ| ಜತೆ ಕಾರ್ಯದರ್ಶಿ), ಸವೀದ್ ಹರ್ಷ (ಗೌ| ಜತೆ ಕೋಶಾಧಿಕಾರಿ) ಮತ್ತು ಕಾರ್ಯಕಾರಿ ಸಮಿತಿಗೆ  ಸದಸ್ಯರುಗಳನ್ನು ಆಯ್ಕೆ ಗೊಳಿಸಲಾಯಿತು.

 

 

 

 

 

ಸಭೆಯಲ್ಲಿ ಆಹಾರ್‍ನ ಉಪಾಧ್ಯಕ್ಷರಾದ ವಿಜಯ್ ಕೆ.ಶೆಟ್ಟಿ, ಸುನೀಲ್ ಎಸ್.ಶೆಟ್ಟಿ, ರವೀಂದ್ರನಾಥ್ ಎಲ್.ನಿರೆ, ಅಮರ್ ಎಸ್.ಶೆಟ್ಟಿ, ರಂಜನ್ ಆರ್.ಶೆಟ್ಟಿ, ಜಗದೀಶ್ ಎಸ್.ಶೆಟ್ಟಿ, ಕರುಣಾಕರ್ ಎಸ್.ಶೆಟ್ಟಿ, ಪ್ರಭಾಕರ್ ಬಿ.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಸಂತೋಷ್ ಆರ್.ಶೆಟ್ಟಿ, ಗೌ| ಕೋಶಾಧಿಕಾರಿ ಶಶಿಧರ್ ಜಿ.ಶೆಟ್ಟಿ, ಗೌ| ಜತೆ ಕಾರ್ಯದರ್ಶಿ ವಿಶ್ವಪಾಲ್ ಎಸ್.ಶೆಟ್ಟಿ, ಗೌ| ಜತೆ ಕೋಶಾಧಿಕಾರಿ ಜೆ.ಡಿ ಶೆಟ್ಟಿ ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಕಳೆದ ಗುರುವಾರ ನಡೆಸಲ್ಪಟ್ಟ 38ನೇ ವಾರ್ಷಿಕ ಮಹಾಸಭೆಯಲ್ಲಿ 2017-18ರ ಅವಧಿಗೆ ಕಾರ್ಯಕಾರಿ ಸಮಿತಿಗೆ ಸದಸ್ಯರ ಆಯ್ಕೆ ನಡೆಸಲಾಗಿತ್ತು. ಅರವಿಂದ ಶೆಟ್ಟಿ ಚುನಾವಣಾಧಿಕಾರಿ ಆಗಿ ಆಯ್ಕೆ ಪ್ರಕ್ರಿಯೆ ನಡೆಸಿ ನೂತನ ಸದಸ್ಯರ ಯಾದಿ ಪ್ರಕಟಿಸಿದರು. ಇಂದಿಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆಯನ್ನು ಅರವಿಂದ ಶೆಟ್ಟಿ ಚುನಾವಣಾಧಿಕಾರಿಯಾಗಿ ನಡೆಸಿದರು. ನಿರ್ಗಮನ ಪದಾಧಿಕಾರಿಗಳು ನೂತನ ಪದಾಧಿಕಾರಿಗಳಿಗೆ ಪುಷ್ಟಗುಚ್ಛವನ್ನಿತ್ತು ಆಧಿಕಾರ ಹಸ್ತಾಂತರಿಸಿದರು.

ಸಭೆಯಲ್ಲಿ ಆಹಾರ್‍ನ ಕಾರ್ಯನಿರ್ವಾಹಕ ಕಾರ್ಯದರ್ಶಿ ವಸಂತ್ ಕೆ.ಕಾರ್ಕಳ್, ಬಿ.ಎಸ್ ರಾವ್, ಬೋಳ ಮೋಹಿನಿ ರವಿ ಪೂಜಾರಿ, ಮಂಗೇಶ್ ಮೆಹ್ತಾರ್, ಸಂತೋಷ್ ರಾಣೆ ಮಾಜಿ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದರು.

ಸಂತೋಷ್ ಆರ್.ಶೆಟ್ಟಿ: ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಂತೋಷ್ ಆರ್.ಶೆಟ್ಟಿ ಮೂಲತಃ ಉಡುಪಿ ನಿವಾಸಿ. ರಾಜು ಎ.ಶೆಟ್ಟಿ ಮತ್ತು ಪ್ರೇಮಾ ಆರ್.ಶೆಟ್ಟಿ ದಂಪತಿ ಸುಪುತ್ರ್ರರಾದ ಇವರು ಬಿ.ಇ ಇಂಜೀನಿಯರಿಂಗ್ ಪದವೀದರರು. ಶಿವ್ಡಿಯಲ್ಲಿ ಮತ್ತು ಮಾಟುಂಗಾದಲ್ಲಿ ಹೊಟೇಲು ಉದ್ಯಮ ನಡೆಸುತ್ತಿದ್ದಾರೆ.

 

 

 

 

 

 

 

Santosh R Shetty President Ahar

 

Vishpal Hon.Gen.Sec Ahar

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal