Print

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಸೆ.01: ಬಂಟರು ಪರರನ್ನು ಪ್ರೀತಿಸಿ ಬದುಕುವ ಸಹೃದಯಿಗಳಾಗಿದ್ದು, ಸಾಮರಸ್ಯದ ಬಾಳಿಗೆ ಪ್ರೇರಕರು. ಆದುದರಿಂದ ಅನ್ಯೋನ್ಯತೆಗೆ ಬಂಟರು ಶ್ರೇಷ್ಠರು. ಸಂಪತ್ತುಯಿದ್ದು ಸಮಾಜ ದಾನ ನೀಡುವವರಿಗೆ, ಸಮಾಜಕ್ಕೆ ಹೋರಾಟ ಮಾಡುವ ಗಣ್ಯರನ್ನು ಗೌರವಿಸುವುದು ಮಾನವೀಯ ಧರ್ಮವಾಗಬೇಕು. ಸಿರಿವಂತರ ಸಂಪತ್ತು ಸಮಾಜಕ್ಕೆ ವಿನಿಯೋಗಿಸಿದಾಗಲೇ ಅಖಂಡ ಸಮಾಜದ ಕ್ಷೇಮಾಭಿವೃದ್ಧಿ ಸಾಧ್ಯವಾಗುವುದು. ಹೇಗೆ ಮಗು ಕಲಿತು ಕೆಲಸಕ್ಕೆ ಸೇರಿದಾಗ ಮನೆ ಬೆಳಗುವುದೋ ಅದೇ ವ್ಯಕ್ತಿ ಗಳಿಕೆಯ ಕೆಲವಂಶವನ್ನು ಸಮಾಜಕ್ಕೆ ಮರಳಿಸಿದಾಗ ರಾಷ್ಟ್ರವೇ ಸಂಪತ್ಭರಿತವಾಗುವುದು. ಬಂಟ್ವಾಳ ಬಂಟವ ಸಂಘದ ಶ್ರದ್ಧೆಯ ಫಲವು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಂತಾಗಲಿ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ನುಡಿದರು.

 

 

 

 

 

 

 

ಇಂದಿಲ್ಲಿ ಆದಿತ್ಯವಾರ ಸಂಜೆ ತುಂಬೆ ವಳವೂರು ಇಲ್ಲಿನ ಬೋಳಂತೂರುಗುತ್ತು ಗಂಗಾಧರ ರೈ ಕಾಂಪ್ಲೆಕ್ಸ್‍ನ ಬಂಟ್ವಾಳದ ಬಂಟರ ಭವನದ ಬೆಳ್ಳೂರು ಪರಾರಿ ಪಿ.ವಿ ಶೆಟ್ಟಿ ಸಭಾಗೃಹದ ಸಭಾಗೃಹದ (ಆಲ್‍ಕಾರ್ಗೋ ಸಂಸ್ಥೆಯ ಕಾರ್ಯಾಧಕ್ಷ ಶಶಿಕಿರಣ್ ಶೆಟ್ಟಿ ಅವರ ಮಾತೃಶ್ರೀ) ಸುಶೀಲ ಜನಾರ್ದನ ಶೆಟ್ಟಿ ವೇದಿಕೆಯಲ್ಲಿ ಬಂಟರ ಸಂಘ ಬಂಟವಾಳ ತಾಲೂಕು (ರಿ.) ಇದರ ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿಯು ಆಲ್‍ಕಾರ್ಗೊ ಲಾಜಿಸ್ಟಿಕ್ ಲಿಮಿಟೆಡ್ ಮುಂಬಯಿ ಇದರ ಸಹಯೋಗದೊಂದಿಗೆ ಬಂಟರ ಸಂಘ ಬಂಟವಾಳ ತಾಲೂಕು ಇದರ ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿಯು ಆಯೋಜಿಸಿದ್ದ 2019ನೇ ವಾರ್ಷಿಕ ಬೃಹತ್ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಐಕಳ ಹರೀಶ್ ಮಾತನಾಡಿದರು.

ಮುಂಬಯಿನ ಕೈಗಾರಿಕೋದ್ಯಮಿ, ಬಂಟರ ಸಂಘ ಬಂಟವಾಳ ಇದರ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಪ್ರದಾನ ಅಭ್ಯಾಗತರಾಗಿ ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಗೌರವ ಅತಿಥಿಗಳಾಗಿ ನಿವೃತ್ತ ಪೊಲಿಸ್ ಆಯುಕ್ತ, ಆಲ್‍ಕಾರ್ಗೊ ಸಿಎಸ್‍ಆರ್ ಮುಖ್ಯಾಧಿಕಾರಿ ಡಾ| ನೀಲ್‍ರತನ್ ಆರ್.ಶೆಂಡೆ, ಬಂಟ್ವಾಳ ಶಾಸಕ ಉಳೆಪಾಡಿ ರಾಜೇಶ್ ನಾಯ್ಕ್ ಉಪಸ್ಥಿತರಿದ್ದು, ಸ್ಥಾನೀಯ ಸರ್ವ ಸಮುದಾಯ, ಜಾತಿಗಳ ಸುಮಾರು ಒಂದುವರೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸುಮಾರು 40 ಲಕ್ಷಕ್ಕೂ ಮೊತ್ತದ ಶೈಕ್ಷಣಿಕ ದೇಣಿಗೆ ವಿತರಿಸಿ ವಿದ್ಯಾರ್ಥಿಗಳಿಗೆ ಶುಭಾರೈಸಿದರು.

ಸಮಾರಂಭದಲ್ಲಿ ಬಂಟವಾಳ ತಾಲೂಕು ವಲಯ ಬಂಟರ ಸಂಘಗಳ ಸಮ್ಮುಖದಲ್ಲಿ ಬಂಟರ ಸಂಘ ಬಂಟವಾಳ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಸದಸ್ಯ, ಬಿಜೆಪಿ ಕರ್ನಾಟಕ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಅತಿಥಿವರ್ಯರು ಸನ್ಮಾನಿಸಿ ಅಭಿನಂದಿಸಿದರು.

ಸದಾನಂದ ಶೆಟ್ಟಿ ಮಾತನಾಡಿ ಶಿಕ್ಷಣಕ್ಕೆ ಬಂಟರ ಪ್ರೊತ್ಸಾಹ ಸ್ತುತ್ಯರ್ಹ ಕಾಯಕವಾಗಿದೆ. ಬಂಟ್ವಾಳದ ಸಮಗ್ರ ಜನತೆಗೆ ಇದೊಂದು ವರವಾಗಿದೆ. ಬಂಟರಿಗೆ ಸ್ವಜಾತಿ ಪ್ರಿಯತೆ ಹೆಚ್ಚಾಗಿದ್ದರೂ ಜಾತ್ಯಾತೀಯತೆಯಲ್ಲೂ ಮತ್ತು ಅನ್ಯೋನ್ಯತೆಯಲ್ಲೂ ಬಂಟರು ತೀರ ಸಮೀಪಿಗರಾಗಿದೆ. ಸ್ವಾಭಿಮಾನಿಗಳಾದರೂ ನಿಷ್ಠಾವಂತ ಸಮಾಜ ಸೇವಕರು ಎಂದರು.

ಕಷ್ಟದಲ್ಲಿನ ಜನತೆಯ ಕಣ್ಣೀರು ಒರೆಸುವುದೇ ದೇವರ ನಿಜಾರ್ಥದ ಪೂಜೆ. ಇದನ್ನು ನಗ್ರಿಗುತ್ತು ವಿವೇಕ್ ಶೆಟ್ಟಿ ಮುಂದಾಳುತ್ವದ ಈ ಸಂಸ್ಥೆ ನೇರವೇರಿಸಿ ಕೃತಜ್ಞಾತರೆಣಿಸಿದ್ದಾರೆ. ಬಡತನ, ಶಿಕ್ಷಣಕ್ಕೆ ಜಾತಿ ಇಲ್ಲ. ಇಲ್ಲಿ ಜಾತಿಮತಕ್ಕಿಂತ ಮನುಷ್ಯತ್ವ, ಮಾನವೀಯತೆಯೇ ಶ್ರೇಷ್ಠವಾದುದು. ಅಂತಹ ದೇವರ ಪೂಜೆ ಈ ಕಾರ್ಯವಾಗಿದೆ ಎಂದು ಸನ್ಮಾನಕ್ಕೆ ಉತ್ತರಿಸಿ ನಳಿನ್ ಕುಮಾರ್ ತಿಳಿಸಿದರು.

ಮಕ್ಕಳನ್ನು ಸುಶಿಕ್ಷಿತರನ್ನಾಗಿಸಿದಾಗ ಸಮಾಜವನ್ನು ಒಗ್ಗೂಡಿಸುವ ಕೆಲಸ ಸುಲಭ ಸಾಧ್ಯವಾಗುವುದು. ಭಾಷೆ ಮನುಕುಲವನ್ನು ತಿಳಿಯುವ ಕೆಲಸ ಮಾತ್ರ ಮಾಡಿದರೆ ಸಂಬಂಧಗಳು ಸಮಗ್ರತೆಯೊಂದಿಗೆ ಬದುಕು ರೂಪಿಸಲು ಸಹಕರಿಸುತ್ತದೆ. ಶಿಕ್ಷಣವು ರಾಷ್ಟ್ರದ ಮತ್ತು ಬುದ್ಧಿಜೀವಿಗಳ ಭವಿಷ್ಯ ರೂಪಿಸುತ್ತಿದ್ದು ಇದನ್ನು ಮಕ್ಕಳು ಮತ್ತು ಪಾಲಕರು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಡಾ| ನೀಲ್‍ರತನ್ ಆಶಾವಾದ ವ್ಯಕ್ತಪಡಿಸಿದರು.

 

 

 

 

 

 

 

 

 

 

 

 

ರಾಜೇಶ್ ನಾಯ್ಕ್ ಮಾತನಾಡಿ ವಿದ್ಯಾರ್ಜನೆಯಿಂದ ಅದೇಷ್ಟೂ ಮಜಲುಗಳನ್ನು ಏರಬಹುದು. ಇಂತಹ ವಿದ್ಯಾಭ್ಯಾಸಕ್ಕೆ ಬಂಟರ ಸಂಘದ ಕೊಡುಗೆ ಶ್ಲಾಘನೀಯ. ಈ ಸಂಸ್ಥೆಯಿಂದ ನಿರಂತರವಾಗಿ ಇಂತಹ ಸೇವೆ ಮುನ್ನಡೆಯಲಿ. ನಿರಂತರ ಪರಿಶ್ರಮದಿಂದ ಮಾತ್ರ ಸ್ಥಾನಮಾನ, ಸಾಧನೆ ನಿಭಾಯಿಸಲು ಸಾಧ್ಯವಾಗುವುದು ಇದಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಸಾಕ್ಷಿಯಾಗಿದ್ದಾರೆ ಎಂದು ಕಟೀಲು ರಾಜಕೀಯ ಸೇವೆಯನ್ನು ಬಣ್ಣಿಸಿದರು .

ಭಾರತ ದೇಶದ ಮುಂದಿನ ಪ್ರಜೆಗಳಾದ ಮಕ್ಕಳು ಇಂತಹ ಶಿಕ್ಷಣನಿಧಿಯಂತಹ ಆಥಿರ್üಕ ಸಹಾಯ ಪಡೆದು ಸುಶಿಕ್ಷಿತರಾಗಬೇಕು. ಆವಾಗಲೇ ನಮ್ಮ ಶ್ರಮದಾಯಕ ಕನಸು ನನಸಾಗುವುದು. ನಳಿನ್‍ಕುಮಾರ್ ನಮ್ಮ ಪರಿವಾರ ಬಂಧುವಾಗಿದ್ದು ಸಂಸದರಾಗಿದ್ದರೂ ಇಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಮ್ಮ ಸನ್ಮಾನ ಸ್ವೀಕರಿಸಿರುವುದು ನಮ್ಮ ಹೆಮ್ಮೆಯಾಗಿದೆ. ಶೀಘ್ರವೇ ರಾಜ್ಯದ ಮುಖ್ಯಮಂತ್ರಿಯಾಗಿ ಇದೇ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸುವ ಭಾಗ್ಯ ಅವರಿಗೂ, ನಮಗೂ ಲಭಿಸಲಿ ಎಂದುಅಧ್ಯಕ್ಷೀಯ ಭಾಷಣದಲ್ಲಿ ವಿವೇಕ್ ಶೆಟ್ಟಿ ತಿಳಿಸಿದರು.

ಮಣಿಮಾಲ ಬಿ.ಶೆಟ್ಟಿ ಇವರ ಪ್ರಾರ್ಥನೆಯೊಂದಿಗೆ ಸಮಾರಂಭ ಆದಿಗೊಂಡಿತು. ನಗ್ರಿಗುತ್ತು ವಿವೇಕ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣಗೈದರು. ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಕೋಶಾಧಿಕಾರಿ ಜಗದೀಶ್ ಶೆಟ್ಟಿ ಇರಾಗುತ್ತು, ಮಹಿಳಾ ವಿಭಾಗಧ್ಯಕ್ಷೆ ಆಶಾ ಪಿ.ರೈ ಅತಿಥಿಗಳನ್ನು ಪರಿಚಯಿಸಿದರು. ಡಾ| ಪ್ರಶಾಂತ್ ಮಾರ್ಲಾ ಸನ್ಮಾನಿತರನ್ನು ಪರಿಚಯಿಸಿ ಅಭಿನಂದನಾ ನುಡಿಗಳನ್ನಾಡಿದರು. ಬಂಟರ ಬಂಟವಾಳ ತಾಲೂಕು ವಲಯ ಬಂಟರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಅತಿಥಿಗಳನ್ನು ಸ್ಮರಣಿಕೆ, ಪುಷ್ಪಗುಪ್ಛಗಳನ್ನು ನೀಡಿ ಗೌರವಿಸಿದರು. ಸಹ ಕಾರ್ಯದರ್ಶಿ ನವೀನ್‍ಚಂದ್ರ ಶೆಟ್ಟಿ ಮುಂಡಜೆಗುತ್ತು ಮತ್ತು ಶೈಕ್ಷಣಿಕ ಮತ್ತು ಸಾಮಾಜಿಕ ಕಲ್ಯಾಣ ಸಮಿತಿ ಸಂಚಾಲಕ ಹೆಚ್.ಸಂಕಪ್ಪ ಶೆಟ್ಟಿ, ಫಲಾನುಭವಿ ವಿದ್ಯಾರ್ಥಿಗಳ ಪಟ್ಟಿ ಪ್ರಕಟಿಸಿದರು. ಬಾಲಕೃಷ್ಣ ಆಳ್ವ ಕೋಡಾಜೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚಂದ್ರ್ರಹಾಸ ಡಿ.ಶೆಟ್ಟಿ ರಂಗೋಲಿ ಅಭಾರ ಮನ್ನಿಸಿದರು.