Print

 

ಮುಂಬಯಿ, ಆ.26: ಬಂಟರ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿರುವ ಬಂಟರ ಸಂಘ ಬಂಟವಾಳ ತಾಲೂಕು (ರಿ.) ಇವರ ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿಯು ಮುಂಬಯಿ ಅಲ್ಲಿನ ಪ್ರತಿಷ್ಠಿತ ಆಲ್‍ಕಾರ್ಗೊ ಲಾಜಿಸ್ಟಿಕ್ ಲಿಮಿಟೆಡ್ ಸಂಸ್ಥೆಯ ಸಹಯೋಗದೊಂದಿಗೆ 2019ನೇ ಸಾಲಿನ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮವನ್ನು (ಬೃಹತ್ ವಿದ್ಯಾರ್ಥಿವೇತನ ವಿತರಣೆ) ಇದೇ ಬರುವ ಸೆ.01ನೇ ಆದಿತ್ಯವಾರ ಅಪರಾಹ್ನ 2.30 ಗಂಟೆಗೆ ತುಂಬೆ ವಳವೂರು ಇಲ್ಲಿನ ಬೋಳಂತೂರುಗುತ್ತು ಗಂಗಾಧರ ರೈ ಕಾಂಪ್ಲೆಕ್ಸ್‍ನ ಬಂಟ್ವಾಳದ ಬಂಟರ ಭವನದ ಬೆಳ್ಳೂರು ಪರಾರಿ ಪಿ.ವಿ ಶೆಟ್ಟಿ ಸಭಾಗೃಹದ (ಆಲ್‍ಕಾರ್ಗೋ ಸಂಸ್ಥೆಯ ಕಾರ್ಯಾಧಕ್ಷ ಶಶಿಕಿರಣ್ ಶೆಟ್ಟಿ ಅವರ ಮಾತೃಶ್ರೀ) ಸುಶೀಲ ಜನಾರ್ದನ ಶೆಟ್ಟಿ ವೇದಿಕೆಯಲ್ಲಿ ಆಯೋಜಿಸಿದೆ.

ಮುಂಬಯಿನ ಕೈಗಾರಿಕೋದ್ಯಮಿ, ಹೆಸರಾಂತ ಸಮಾಜ ಸೇವಕ, ಬಂಟರ ಸಂಘ ಬಂಟವಾಳ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲಾಗುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಪ್ರದಾನ ಅತಿಥಿಯಾಗಿ ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಗೌರವ ಅತಿಥಿಗಳಾಗಿ ನಿವೃತ್ತ ಪೋಲಿಸ್ ಆಯುಕ್ತ, ಆಲ್‍ಕಾರ್ಗೊ ಸಂಸ್ಥೆಯ ಸಿಎಸ್‍ಆರ್ ಸಲಹೆಗಾರ ಕೆ.ಎಲ್ ಪ್ರಸಾದ್ ಹಾಗೂ ಆಲ್‍ಕಾರ್ಗೊ ಸಿಎಸ್‍ಆರ್ ಮುಖ್ಯಾಧಿಕಾರಿ ಡಾ| ನೀಲ್‍ರತನ್ ಆರ್.ಶೆಂಡೆ ಉಪಸ್ಥಿತರಿರುವರು. ಸಮಾರಂಭದಲ್ಲಿ ಬಂಟವಾಳ ತಾಲೂಕು ವಲಯ ಬಂಟರ ಸಂಘಗಳ ಸಮ್ಮುಖದಲ್ಲಿ ಬಂಟರ ಸಂಘ ಬಂಟವಾಳ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಸಂಸದರಾಗಿದ್ದು ಬಿಜೆಪಿ ಕರ್ನಾಟಕ ರಾಜ್ಯಧ್ಯಕ್ಷರಾಗಿ ನಿಯೋಜಿತ ನಳಿನ್ ಕುಮಾರ್ ಕಟೀಲ್ ಅವರನ್ನು ಸನ್ಮಾನಿಸಲಾಗುವುದು.

ಕಾರ್ಯಕ್ರಮದಲ್ಲಿ ಬಂಟರ ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಕಾರ್ಯದರ್ಶಿ ಚಂದ್ರ್ರಹಾಸ ಡಿ.ಶೆಟ್ಟಿ ರಂಗೋಲಿ, ಕೋಶಾಧಿಕಾರಿ ಜಗದೀಶ್ ಶೆಟ್ಟಿ ಇರಾಗುತ್ತು, ಸಹ ಕಾರ್ಯದರ್ಶಿ ನವೀನ್‍ಚಂದ್ರ ಶೆಟ್ಟಿ ಮುಂಡಜೆಗುತ್ತು, ಶೈಕ್ಷಣಿಕ ಮತ್ತು ಸಾಮಾಜಿಕ ಕಲ್ಯಾಣ ಸಮಿತಿ ಸಂಚಾಲಕ ಹೆಚ್.ಸಂಕಪ್ಪ ಶೆಟ್ಟಿ ಬಿ.ಸಿ ರೋಡು, ಮಹಿಳಾ ವಿಭಾಗಧ್ಯಕ್ಷೆ ಆಶಾ ಪಿ.ರೈ, ಬಂಟವಾಳ ತಾಲೂಕು ವಲಯ ಬಂಟರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಮತ್ತಿತರ ಗಣ್ಯರು ಉಪಸ್ಥಿತರಿದ್ದು ಎಲ್ಲಾ ಸಮುದಾಯ, ಜಾತಿಗಳ ಸುಮಾರು ಒಂದುವರೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸುಮಾರು 35 ಲಕ್ಷಕ್ಕೂ ಮೊತ್ತದ ಶೈಕ್ಷಣಿಕ ದೇಣಿಗೆ ಈ ಬಾರಿ ವಿತರಿಸಲಿದೆ ಎಂದು ನಗ್ರಿಗುತ್ತು ವಿವೇಕ್ ಶೆಟ್ಟಿ ತಿಳಿಸಿದ್ದಾರೆ.

ಬಂಟರ ಸಂಘ ಬಂಟವಾಳ:


ಬಂಟರ ಸಂಘ ಬಂಟವಾಳ ಸಂಸ್ಥೆಯು 2005ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಕಿರಣ್ ಹೆಗ್ಡೆ ಅನಂತಾಡಿ ಸಂಘದ ಪ್ರಥಮ ಅಧ್ಯಕ್ಷರಾಗಿ ಸೇವೆಯನ್ನಾರಂಭಿಸಿದರು. ನಂತರ ಲ| ಲೋಕನಾಥ ಶೆಟ್ಟಿ ಮತ್ತು ಬೋಳಂತೂರುಗುತ್ತು ಗಂಗಾಧರ ರೈ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಅಧ್ಯಕ್ಷರಾಗಿ ಸಂಘವನ್ನು ದಕ್ಷತೆ ಮತ್ತು ಸಾಧನಾಶೀಲರಾಗಿ ಮುನ್ನಡೆಸಿದರು. ಸೃಜನಾಶೀಲ ಸಂಘಟಕ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರು 2014ರಲ್ಲಿ ಮೂರು ವರ್ಷಗಳ ಕಾಲಾವಧಿಗೆ (ಚತುರ್ಥ ಅಧ್ಯಕ್ಷರು) ಆಯ್ಕೆಗೊಂಡು ಯಶಸ್ವಿಯಾಗಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಾ ಭಾರೀ ಜನಮನ್ನಣೆಗೆ ಪಾತ್ರರಾದರು. ಅಂತೆಯೇ 2017-2020ರ ಅವಧಿಗೂ ದ್ವಿತೀಯ ಬಾರಿ ಸರ್ವಾನುಮತದಿಂದ ವಿವೇಕ್ ಶೆಟ್ಟಿ ಅವರೇ ಅಧ್ಯಕ್ಷರಾಗಿ ಮುನ್ನಡೆಯುವಂತಾಯಿತು.

ತನ್ನ ಸಾರಥ್ಯದಲ್ಲಿ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಸಹಯೋಗದಿಂದ 2016ರಲ್ಲಿ ಕೇವಲ ಒಂದುವರೆ ವರ್ಷದ ಅಲ್ಪಾವಧಿಯಲ್ಲೇ ಅತ್ಯಾಧುನಿಕ ಮತ್ತು ಅತ್ಯಾಕರ್ಷಕ ಬಂಟ್ವಾಳದ ಬಂಟರ ಭವನ ನಿರ್ಮಿಸಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರ ಅಭಯಾಸ್ತದಿಂದ ಸೇವಾರ್ಪಣೆ ಮಾಡಿ ನಗ್ರಿಗುತ್ತು ಜನನಾಯಕರಾಗಿ ಪ್ರಶಂಸೆಗೆ ಪಾತ್ರರಾದರು.

ಅನನ್ಯ ಸಂಸ್ಕೃತಿ ಮತ್ತು ಶಿಕ್ಷಣಪ್ರೇಮಿ ಆಗಿರುವ ನಗ್ರಿಗುತ್ತು ಕಳೆದ ಎರಡು ವರ್ಷಗಳಿಂದ ಆಲ್‍ಕಾರ್ಗೊ ಸಂಸ್ಥೆಯ ಸಹಕಾರದಲ್ಲಿ 2017ರ ಸಾಲಿನಲ್ಲಿ 28 ಲಕ್ಷ ರೂಪಾಯಿ ಮತ್ತು ಕಳೆದ 2018ರ ಸಾಲಿನಲ್ಲಿ 30 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಹಾಗೂ ಸುಮಾರು 5 ಲಕ್ಷ ರೂಪಾಯಿ ಅಂಗವಿಕಲರಿಗೆ ಸಹಾಯಧನ ವಿತರಿಸಿ ತಮ್ಮ ಸೇವಾ ನಿಷ್ಠೆ ಮೆರೆದಿದ್ದಾರೆ. ಕಳೆದ ವರ್ಷ ಅವರ ಹಸ್ತದಿಂದ ವೇತನ ವಿತರಿಸಿ ಈ ವಾರ್ಷಿಕ ಕಾರ್ಯಕ್ರಮಕ್ಕೆ ಇನ್ನಷ್ಟು ಪ್ರತಿಷ್ಠೆ ತಂದೊದಗಿಸಿದ್ದಾರೆ. ಅಸಮಾನ್ಯ ಸಮಾಜ ಸೇವಕರೆಂದೇ ಗುರುತಿಸಿಕೊಂಡು ಕೊಡುಗೈದಾನಿ ಆಗಿರುವ ನಗ್ರಿಗುತ್ತು ವಿವೇಕ್ ಶೆಟ್ಟಿ ಯಾವುದೇ ಕಾರ್ಯಕ್ರಮಗಳೂ ವಿಭಿನ್ನವೂ ಅರ್ಥಪೂರ್ಣ ಆಗಿರುತ್ತವೆ. ತೀರಾ ದೂದರೃಷ್ಠಿವುಳ್ಳವರಾಗಿದ್ದು ಸದಾ ಜಾಗತಿಕವಾಗಿ ಅಲೋಚಿಸುವ ಸಾಮಾಜಿಕ ಕಳಕಳಿಯುಳ್ಳ ಅವರ ಯೋಚನೆಗಳು ಹಿರಿಯ ನಾಗರಿಕರಿಂದ ಯುವ ಪೀಳಿಗೆಯಲ್ಲೂ ಮನಾಕರ್ಷಣಾ ಮೋಡಿ ಮಾಡುವಂತಹದ್ದು. ಕಲಾತ್ಮಕ ಮನಸ್ಸುವುಳ್ಳವರಾಗಿದ್ದು ಆಧುನಿಕತೆಯಲ್ಲೂ ಪ್ರಾಚೀನತೆ ರೂಢಿಸಿ ಭವಿಷ್ಯತನ್ನು ರೂಪಿಸಬಲ್ಲ ಸಹೃದಯಿ. ಸರ್ವರಲ್ಲೂ ಸಮಾನತ್ವ ಕಾಯ್ದಿರಿಸಿ ಮುನ್ನಡೆಯುವ ಚಿಂತನಾಶೀಲರಾಗಿದ್ದು ಓರ್ವ ಅಪ್ಪಟ ಸಂಪ್ರದಯಸ್ಥರೇ ಸರಿ. ಆದುದರಿಂದಲೇ ನಗ್ರಿಗುತ್ತು ವಿವೇಕ್ ಶೆಟ್ಟಿ ಅಂದರೆ ವಿಭಿನ್ನತೆಗೆ ಒಂದು ಹೆಸರು ಎನ್ನುವುದು ವಾಸ್ತವ್ಯ.