(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಫೆ.10: ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಕಲೆ, ಸಾಹಿತ್ಯ, ಕ್ರೀಡೆ, ಆರೋಗ್ಯ, ಸಾಂಸ್ಕೃತಿಕ ಇತ್ಯಾದಿ ಕ್ಷೇತ್ರಗಳಲ್ಲಿ ಸಕ್ರೀಯವಾಗಿ ಸೇವಾ ನಿರತ ಬಂಟ್ವಾಳ ತಾಲೂಕು ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವರ್ಷಂಪ್ರತಿ ಕೊಡಮಾಡುವ, ಈ ಬಾರಿಯ 2019ನೇ ಸಾಲಿನ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿಯಲ್ಲೊಂದಾದ ಉದ್ಯಮ-ಸಮಾಜ ಸೇವಾ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ-2019ನ್ನು ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಇವರಿಗೆ ಪ್ರದಾನಿಸಿ ಗೌರವಿಸಲಾಯಿತು.

ಇಂದಿಲ್ಲಿ ಭಾನುವಾರ ಕರ್ನಾಟಕ ಕರಾವಳಿಯ ಬಂಟ್ವಾಳ ತಾಲೂಕು ಪುಂಜಾಲಕಟ್ಟೆಯನ ಸ್ವಸ್ತಿಕ್ ಫ್ರೆಂಡ್ಸ್ ಸಂಸ್ಥೆ ತನ್ನ 35ನೇ ವಾರ್ಷಿಕ ಸಂಭ್ರಮವನ್ನು ಆಚರಿಸಿದ್ದು, ಇದೇ ಶುಭಾವಸರದಲ್ಲಿ 11ನೇ ವಾರ್ಷಿಕ ಉಚಿತ ಸಾಮೂಹಿಕ ವಿವಾಹ ನೆರವೇರಿಸಿತು. ಪುಂಜಾಲಕಟ್ಟೆ ಬಸವನಗುಡಿ ಶ್ರೀ ಬಸವೇಶ್ವರ ದೇವಾಲಯದಲ್ಲಿ ದಿಬ್ಬಣ ಮೆರವಣಿಗೆಗೆ ಚಾಲನೆ ನೀಡಲಾಗಿ ನಂತರ ಪುಂಜಾಲಕಟ್ಟೆ ಅಲ್ಲಿನ ಬಂಗ್ಲೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದ ಅಧ್ಯಕ್ಷತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ವಹಿಸಿದ್ದು ಉದ್ಯಮಿ ವಸಂತ ಪೈ ಬದಿಯಡ್ಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಉಭಯ ಸಂಭ್ರಮಗಳ ಭವ್ಯ ಸಮಾರಂಭದಲ್ಲಿ ಮಂಗಳೂರು ಲೋಕಸಭಾ ಸಂಸದ ನಳಿನ್‍ಕುಮಾರ್ ಕಟೀಲ್ ಮುಖ್ಯ ಅತಿಥಿಯಾಗಿದ್ದು ಶ್ರೀನಿವಾಸ ಸಾಫಲ್ಯ ಇವರಿಗೆ ರಾಜ್ಯ ಪ್ರಶಸ್ತಿ ಪ್ರದಾನಿಸಿ ಶುಭಾರೈಸಿದರು. ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಬೆಂಗಳೂರು ನ್ಯಾಯವಾದಿ ಸ್ವರ್ಣಲತಾ ಹೆಗ್ಡೆ, ಬಿಜೆಪಿ ಧುರೀಣ ಹರಿಕೃಷ್ಣ ಬಂಟ್ವಾಳ, ಉದ್ಯಮಿಗಳಾದ ನಿತ್ಯಾನಂದ ಪೂಜಾರಿ ಕೆಂತಲೆ, ವಸಂತ ಹೆಗ್ಡೆ ಬೆಂಗಳೂರು, ಮೋಹನ್ ಚೌಧುರಿ, ಓಂ ಪ್ರಸಾದ್, ಹರೀಂದ್ರ ಪೈ ಸೇರಿದಂತೆ ಗಣ್ಯರನೇಕರು ಉಪಸ್ಥಿತರಿದ್ದು ಸುಂದರ್ ಹೆಗ್ಡೆ (ಚಲನಚಿ ತ್ರ), ಅಶೋಕ್ ಚೊಂತಾರು (ಕೃಷಿ), ಲ| ಎನ್.ಸದಾಶಿವ ಆಚಾರ್ಯ (ಸಮಾಜ ಸೇವೆ), ಅತ್ಯುತ್ತಮ ಯುವ ಸಂಘಟನೆ: ಕಲಾ ಕುಂಭ ಸಾಂಸ್ಕೃತಿ ವೇದಿಕೆ ಕುಲಾಯಿ ಸುರತ್ಕಲ್ (ಸಂಸ್ಥೆ)ಗೆ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿಯನ್ನು ಹಾಗೂ ರವಿ ರೈ ಕಳಸ (ಚಲನ ಚಿತ್ರ), ಹೊನ್ನಪ್ಪ ಎಂ.ಪೂಜಾರಿ (ಅತ್ಯುತ್ತಮ ಸಂಘಟಕ), ಡಾ| ರಾಮಕೃಷ್ಣ (ಸಮಾಜ ಸೇವೆ), ಎಸ್.ಪಿ ಸರಪಾಡಿ (ಕಲಾ ಕ್ಷೇತ್ರ), ಕು| ಅನ್ವಿಷಾ ವಾಮಂಜೂರು (ಸಾಂಸ್ಕೃತಿಕ), ಕು| ಕಾವ್ಯಶ್ರೀ ಜೋಡುಕಲ್ಲು ಉಪ್ಪಳ (ಯೋಗ) ಇವರಿಗೆ ಸ್ವಸ್ತಿಸಿರಿ ಸಂಭ್ರಮ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕ್ಲಬ್‍ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಅಧ್ಯಕ್ಷ ಪ್ರಶಂತ್ ಪುಂಜಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಕೋಶಾಧಿಕಾರಿ ರಾಜೇಶ್ ಪಿ.ಬಂಗೇರ ಪುಳಿಮಜಲು, ಮಾಜಿ ಅಧ್ಯಕ್ಷ ಮಾಧವ ಬಂಗೇರ, ಅಬ್ದುಲ್ ಹಮೀದ್, ರತ್ನಾಕರ ಪಿ.ಎಂ., ಗಿರೀಶ್ ಸಾಲ್ಯಾನ್ ಮತ್ತಿತರ ಸದಸ್ಯರು ಉಪಸ್ಥಿತರಿ ದ್ದರು. ಕ್ಲಬ್ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದ್ದು, ಕಾರ್ಯದರ್ಶಿ ಜಯರಾಜ ಅತ್ತಾಜೆ ವಂದಿಸಿದರು.

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal