ಪುತ್ತೂರು ಪೂವರಿ ಕೂಟ ಹಾಗೂ ಹೆಬ್ಬಾರಬೈಲು ಯಶಸ್ ಪ್ರಕಾಶನದ ಜಂಟಿ ಆಶ್ರಯದಲ್ಲಿ ಕತೆಗಾರ್ತಿ ಶಶಿಕಲಾ ವರ್ಕಾಡಿ ಬರೆದ ತುಳು ಕಥೆಗಳ "ಉರಲ್" ಪುಸ್ತಕ ಅನಾವರಣ ಸಮಾರಂಭ ನೆಹರುನಗರ ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಮೆಮೋರಿಯಲ್ ಹಾಲ್‍ನಲ್ಲಿ ಭಾನುವಾರ ಬೆಳಗ್ಗೆ ನಡೆಯಿತು.

ಪೆರಿಯ ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ವಾಮನ ನಂದಾವರ ಪುಸ್ತಕ ಅನಾವರಣಗೊಳಿಸಿ ಮಾತನಾಡಿ, ಪಂಚದ್ರಾವಿಡ ಭಾಷೆಯಗಳಲ್ಲಿ ತುಳು ಪ್ರಧಾನ ಭಾಷೆ. ಜತೆಗೆ ತುಳು-ಕನ್ನಡ ಭಾಷೆ ಅಕ್ಕ-ತಂಗಿ ಇದ್ದ ಹಾಗೆ. ಪ್ರಸ್ತುತ ವರ್ಷಗಳಲ್ಲಿ ತುಳುವನ್ನು ಶಾಲೆಗಳ ಪಠ್ಯ ಕ್ರಮಗಳಲ್ಲಿ ಅಳವಡಿಸಲಾಗಿದ್ದು, ತುಳು ಭಾಷೆ ಬೆಳೆವಣಿಗೆಗೆ ಪೂರಕವಾಗಿದೆ. ಈ ನಿಟ್ಟಿನಲ್ಲಿ ತುಳು ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಬಿ.ಚಂದ್ರಹಾಸ ರೈ ಸಮಾರಂಭ ಉದ್ಘಾಟಿಸಿ, ಶತಮಾನಗಳಿಂದಲೂ ತುಳು ಸಾಹಿತಿಗಳು ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆ ಆಧುನಿಕ ತುಳು ಸಾಹಿತ್ಯಕ್ಕೆ ಹೊಸ ಹೊಸ ಬರಹಗಾರರು ಕೊಡುಗೆ ನೀಡುತ್ತಿರುವುದು ಶ್ಲಾಘನೀಯ. ಒಂದೆಡೆ ತುಳು ಭಾಷೆಯನ್ನು 8ನೇ ಪರಿಚ್ಛೇದದಲ್ಲಿ ಸೇರ್ಪಡೆಗೆ ಪ್ರಯತ್ನಗಳು ಸಾಗುತ್ತಿದ್ದರೆ, ಇನ್ನೊಂದೆ ತುಳು ಸಾಹಿತಿಗಳು ಸಾಹಿತ್ಯ ನಿರ್ಮಾಣದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ತುಳುವಿಗೆ ಮಾನ್ಯತೆ ನೀಡುವ ಮೂಲಕ ವ್ಯವಹಾರ ತುಳುವಿನಲ್ಲಿ ನಡೆಯಬೇಕು. ಈ ನಿಟ್ಟಿನಲ್ಲಿ ಇನ್ನಷ್ಟು ತುಳುವಿನಲ್ಲಿ ಬರೆಯುವ ಮನಸ್ಸುಗಳು ಹುಟ್ಟಬೇಕು ಎಂಧರು.
ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷ, ನ್ಯಾಯವಾದಿ ಕುಂಬ್ರ ದರ್ಗಾಪ್ರಸಾದ್ ರೈ "ಉರಲ್" ಕುರಿತು ಮಾತನಾಡಿ, ಪುಸ್ತಕದ ಮುಖಪುಟದಲ್ಲಿ ನೇಗಿಲ ಹಿಡಿದು ಗದ್ದೆ ಉಳುತ್ತಿರುವ ರೈತ ಬಿಳಿ ಅಂಗಿ ಧರಿಸಿದರೂ ಆತನ ಮನಸ್ಸು ಬಿಳಿ ಬಣ್ಣದ ಹಾಗೆ ಶುದ್ಧವಾಗಿದೆ. ಉರಲ್‍ನಲ್ಲಿಯ ಬರವಣಿಗೆ ಜನರನ್ನು ಓದಿಸಿಕೊಂಡು ಹೋಗುವಂತಿದೆ. ಕಥೆಯೊಳಗಿನ ಗಾದೆ ಎಲ್ಲರ ಮನಸ್ಸನ್ನು ತಟ್ಟುವಂತಿದೆ. ಒಟ್ಟಾರೆಯಾಗಿ ತುಳು ಶಬ್ದ ಭಂಡಾರವನ್ನು ವಿಸ್ತರಿಸುವ ಪ್ರಯತ್ನ ಪುಸ್ತಕದಿಂದ ಆಗಿದೆ ಎಂದರು.
ಸುದಾನ ವಿದ್ಯಾಸಂಸ್ಥೆಗಳ ಸಂಚಾಲಕ ವಂ| ರೆ| ವಿಜಯ ಹಾರ್ವಿನ್ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾವಿದ, ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಶುಭ ಹಾರೈಸಿದರು. ವೇದಿಕೆಯಲ್ಲಿ ಹಿರಿಯ ಸಾಹಿತಿ ವಿ.ಬಿ.ಅರ್ತಿಕಜೆ, ಲೇಖಕಿ ಶಶಿಕಲಾ ವರ್ಕಾಡಿ ಉಪಸ್ಥಿತರಿದ್ದರು. ಪೂವರಿ ಕೂಟದ ಪ್ರಧಾನ ಸಂಚಾಲಕ ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕ ವೆಂಕಟೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಶಶಿಕಲಾ ವರ್ಕಾಡಿ ವಂದಿಸಿದರು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal