(ಚಿತ್ರ / ವರದಿ: ರೊನಿಡಾ ಮುಂಬಯಿ)

ಮುಂಬಯಿ (ಬಂಟ್ವಾಳ), ಡಿ.12: ಬಂಟ್ವಾಳ ಜೋಡುಮಾರ್ಗ (ಬಿ.ಸಿ ರೋಡು)ದ ಸಂಚಯಗಿರಿ ಅಲ್ಲಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯಕ್ಕೆ ಇಂದಿಲ್ಲಿ ಬ್ರಿಟೀಷ್ ಮ್ಯೂಸಿಯಂನ ಗ್ರಂಥಾಲಯ ಮೇಲ್ವಿಚಾರಕಿ ಡಾ| ಡೆನೀಯಲ್ ದೆ ಸೈಮೋನ್ ಭೇಟಿ ನೀಡಿದರು.

 

ಭಾರತ ರಾಷ್ಟ್ರದ ಕರ್ನಾಟಕದ ಕರಾವಳಿ ಕಾಸರಗೋಡುನಿಂದ ಉಡುಪಿಯ ಬಾರ್ಕೂರು ತನಕ ಪರಶುರಾಮನ ಸೃಷ್ಠಿಯ ಒಂದು ಭಾಗವಾಗಿ ಮಹಾ ದಾರ್ಶನಿಕರಿಗೆ ಮತ್ತು ಸಂತ ಮಹಾಂತರಿರಿಗೆ ಜನ್ಮ ನೀಡಿದ, ಹತ್ತುಹಲವಾರು ಸಂಪ್ರದಾಯ, ಕೂಡು ಕಟ್ಟುಕಟ್ಟಾಲೆಗಳನ್ನು ಬೆಳೆಸಿ ಉಳಿಸಿ ತುಳು ಭಾಷೆಯೊಂದಿಗೆ ಸ್ವಂತಿಕೆಯ ನಾಡುವಾಗಿ ಸಾವಿರ ಸಾವಿರ ವರ್ಷಗಳ ಇತಿಹಾಸವುಳ್ಳ ಪುಣ್ಯಭೂಮಿ ಪ್ರಸಿದ್ಧಿಯ ತುಳುನಾಡು ಬಗ್ಗೆ ತಿಳಿದು ತುಳು ಬದುಕು ಹಾಗೂ ತೌಳವರ ಪರಂಪರೆ, ಬದುಕು ರೂಪಿಸುವಲ್ಲಿ ಉಪಯೋಗಿಸಲ್ಪಡುವ ವಸ್ತುಗಳ ಸಂಗ್ರಹಣೆ ಮತ್ತು ಭವಿಷ್ಯತ್ತಿನ ಪೀಳಿಗೆಗೆ ಪ್ರೇರಪಣೆ ಆಗಿಸುವ ಅಧ್ಯಯನ ಕೇಂದ್ರದ ಶ್ರಮವನ್ನು ಪ್ರಶಂಸಿ ಡಾ| ಡೆನೀಯಲ್ ಅಚ್ಚರಿ ವ್ಯಕ್ತ ಪಡಿಸಿದರು.

ಈ ಸಂದಭದಲ್ಲಿ ಹಿರಿಯ ಸಾಹಿತಿ ಏರ್ಯ ಲಕ್ಷ್ಮಿ ನಾರಾಯಣ ಆಳ್ವ, ಪ್ರೊ| ವಿವೇಕ್ ರೈ, ಡಾ| ಎಂ.ಪ್ರಭಾಕರ್ ಜೋಶಿ, ನಿರೆನ್ ಜೈನ್ ಉಪಸ್ಥಿತರಿದ್ದು ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ| ತುಕಾರಾಮ ಪೂಜಾರಿ ಸುಖಾಗಮನ ಬಯಸಿದರು. ಡಾ| ಆಶಾಲತಾ ಸುವರ್ಣ ವಂದಿಸಿದರು.

ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ಧಯಾಮಯ್ಯ ಅವರೂ ತುಳು ಕೇಂದ್ರಕ್ಕೆ ಕಳೆದ ಬಾರಿ ಭೇಟಿ ನೀಡಿ ಅಲ್ಲಿನ ರಾಷ್ಟ್ರದ ಪಿತಾಮಹಾ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ಪುಷ್ಪರಾರವನ್ನಿತ್ತು ನಮಿಸಿದ್ದರು. ನಾಡಿನ ಮತ್ತು ದೇಶವಿದೇಶದ ಹಲವಾರು ಗಣ್ಯರು ಈ ಅಧ್ಯಯನ ಕೇಂದ್ರಕ್ಕೆ ಭೇಟಿಯನ್ನಿತ್ತು ಪ್ರೊ| ತುಕಾರಾಮ ಪೂಜಾರಿ ಅವರ ದೂರದೃಷ್ಠಿತ್ವ ಹಾಗೂ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal