ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಆಶ್ರಯದಲ್ಲಿ ಡಿ.6 ರಂದು ಅಯೋಧ್ಯೆ ಶ್ರೀ ರಾಮ ಜನ್ಮಸ್ಥಾನದ ಮುಕ್ತಿ ಅಂದೋಲನದ ವಿಜಯೋತ್ಸವ ಅಂಗವಾಗಿ ಬಿಸಿರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ವಠಾರದ ಲ್ಲಿ ಸತ್ಯನಾರಾಯಣ ಪೂಜೆ   ಸಭಾ ಕಾರ್ಯಕ್ರಮ ನಡೆಯಿತು.

 

 

 

 ಈ ಕಾರ್ಯಕ್ರಮ ದಲ್ಲಿ ಕರ್ನಾಟಕ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ , ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.
ಹಿಂದೂ ಸಮಾಜ ಉನ್ನತ ಮಟ್ಟದಲ್ಲಿ ಬೆಳೆಯುವ ಸಂಧರ್ಭದಲ್ಲಿ ನಮ್ಮ ಜವಬ್ದಾರಿ ಯನ್ನು ಮರೆಯದೆ ಹಿಂದೂ ಧರ್ಮದ ಶ್ರೇಯಸ್ಸಿಗಾಗಿ, ಜಾಗ್ರತಿಗಾಗಿ ಕಾರ್ಯಪ್ರವ್ರತ್ತರಾಗೋಣ ಎಂದರು, 
ಬಹು ಸಂಖ್ಯಾತ ಎಂಬ ಹೆಸರಿನಲ್ಲಿ ಹಿಂದೂ ಸಮುದಾಯವನ್ನು ಧಮನ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ, ಇದರ ವಿರುದ್ದ ಹಿಂದೂ ಸಮಾಜ ಸೆಟೆದುನಿಂತು ಹೋರಾಟ ಮಾಡಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಚಿಂತನೆಯ , ರಾಷ್ಟ್ರ ಧರ್ಮದ ಕಾರ್ಯದ ಮೂಲಕ ಹಿಂದೂ ಸಮಾಜದ ಮನಸ್ಸು ಕಟ್ಟುವ ಬಹುದೊಡ್ಡ ಪ್ರಯತ್ನ ವನ್ನು ಹಿಂದೂ ಜಾಗರಣ ವೇದಿಕೆ ಮಾಡುತ್ತಿದೆ,ಹಾಗಾಗಿ ಅವರಿಗೆ ಅಭಿನಂದನೆ ಸಲ್ಲಬೇಕು ಎಂದರು. ಶ್ರೀ ರಾಮನ ಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಇಂತಹ ಧಾರ್ಮಿಕ ಕಾರ್ಯಕ್ರಮ ಗಳ ಜೊತೆ ನಾವು ಒಟ್ಟಾಗಿ ಸೇರಿ ಮಾಡಬೇಕಾಗಿದೆ ಎಂದರು. ‌
 
ವಿಟ್ಲ ತಾಲೂಕು ಹಿಂದೂ ಜಾಗರಣ ವೇದಿಕೆ ಪ್ರಧಾನ ಕಾರ್ಯದರ್ಶಿ ಗಣರಾಜ್ ಭಟ್ ಕೆದಿಲ ದಿಕ್ಸೂಚಿ ಭಾಷಣ ಮಾಡಿದರು. ಶ್ರೀರಾಮ ಹುಟ್ಟಿದ ಅ ಪುಣ್ಯ ಭೂಮಿಯ ಲ್ಲಿ ರಾಮನ ಮಂದಿರ ನಿರ್ಮಾಣ ವಾಗಲು ನಮ್ಮ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.  ಅಂತಹ ಪುಣ್ಯ ಭೂಮಿಯಲ್ಲಿ ಮಸೀದಿ ನಿರ್ಮಾಣ ವಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಹಿಂದೂ ಗಳ ತಾಳ್ಮೆ ಯನ್ನು ಪರೀಕ್ಷೆ ಮಾಡಲು ಹೊರಟರೆ ಅದರ ಪರಿಣಾಮ ಸರಿಯಾಗಿ ರುವುದಿಲ್ಲ ಎಂದರು. ಬಂಟ್ವಾಳ ತಾಲೂಕು ಅಧ್ಯಕ್ಷ ಚಂದ್ರ ಕಲಾಯಿ ಕಾರ್ಯಕ್ರಮ ದ ಆಧ್ಯಕ್ಷತೆ ವಹಿಸಿದ್ದರು. ‌
 
ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ, ಜಿಲ್ಲಾ ಅಧ್ಯಕ್ಷ ರತ್ನಾಕರ ಶೆಟ್ಟಿ ಕಲ್ಲಡ್ಕ, ಗೌರವ ಅಧ್ಯಕ್ಷ ವಿಠಲ ಅಲ್ಲಿಪಾದೆ, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಕಲಾಯಿ ಉಪಸ್ಥಿತರಿದ್ದರು. ಶೈಲೇಶ್ ಬಿಸಿರೋಡ್ ಸ್ವಾಗತಿಸಿ, ಬಾಲಕೃಷ್ಣ ಕಾಮಾಜೆ ವಂದಿಸಿದರು. ವಿಟ್ಲ ಪ್ರಖಂಡ ಅಧ್ಯಕ್ಷ  ನರಸಿಂಹ ಶೆಟ್ಟಿ ಮಾಣಿ ಕಾರ್ಯಕ್ರಮ ನಿರೂಪಿಸಿದರು. ‌

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal