ಬಂಟ್ವಾಳ, Sep 23 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಜಿಲ್ಲಾ ಪಂಚಾಯತ್ ಮಂಗಳೂರು ಮತ್ತು ಗೋಳ್ತಮಜಲು ಗ್ರಾ.ಪಂ., ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳ್ತಿಲ, ಸ್ತ್ರೀ ಶಕ್ತಿ ಗೊಂಚಲು ಅಮ್ಟೂರು ಗೋಳ್ತಮಜಲು ಇವರ ಸಂಯುಕ್ತ ಆಶ್ರಯದಲ್ಲಿ ಗೋಳ್ತಮಜಲು ವಲಯ ಮಟ್ಟದ ವಿಶ್ವ ಪೌಷ್ಟಿಕ ಆಹಾರ ಸಪ್ತಾಹ, ಪ್ರಧಾನ ಮಂತ್ರಿ ಮಾತ್ರವಂದನಾ ಸಪ್ತಾಹ , ಮಹಿಳಾ ಗ್ರಾಮ‌ಸಭೆ ಬೇಟಿ ಬಚಾವೋ ಬೇಟಿ ಪಡಾವೋ ಜಾಗ್ರತಿ ಅರಿವು ಕಾರ್ಯಕ್ರಮ ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ನಡೆಯಿತು. ಗ್ರಾ.ಪಂ.ಅದ್ಯಕ್ಷೆ ಜಯಲಕ್ಮೀ ಕಾರ್ಯಕ್ರಮವನ್ನು ಉದ್ಘಾಟಿಸಿ , ಅದ್ಯಕ್ಷ ತೆಯನ್ನು ವಹಿಸಿದ್ದರು.

ಬಳಿಕ ಮಾತನಾಡಿದ ಅವರು ಮಹಿಳೆಯ ರು ಆರೋಗ್ಯ ವಂತರಾಗಿದ್ದರೆ ಅ ಮನೆಯೆ ಆರೋಗ್ಯ ಆಗಿರುತ್ತದೆ.
ದಿನ ಬಳಕೆ ಯ ಆಹಾರದಲ್ಲಿ ಪೌಷ್ಟಿಕ ಆಹಾರ ದ ಜೊತೆ ಸಮತೋಲನ ಆಹಾರ ಸೇವನೆ ಆರೋಗ್ಯ ದಲ್ಲಿ ಏರುಪೇರು ಆಗುವುದಿಲ್ಲ ಎಂದರು.
ಅಹಾರ ಪದ್ದತಿಯನ್ನು ಅನುಸರಿಸಿಕೊಂಡು ಬರುವುದರ ಮಾಹಿತಿ ಈ ಕಾರ್ಯಕ್ರಮದ ಮೂಲಕ ನೀಡುವುದು ಮಹತ್ತರ ಕಾರ್ಯ ಎಂದು ಕ್ರತಜ್ಞತೆ ಸಲ್ಲಿಸಿದರು.

ಗೋಳ್ತಮಜಲು ಗ್ರಾ.ಪಂ.ಉಪಾದ್ಯಕ್ಷ ಮಹಮ್ಮದ ಮುಸ್ತಫಾ, ಪಂ.ಅಭಿವ್ರದ್ದಿ ಅಧಿಕಾರಿ ಗ್ರಾ. ಪಂ. ಸದಸ್ಯರಾದ ನಾರಾಯಣ ಗಟ್ಟಿ, ಜಯಂತ ಗೌಡ, ಗೋಪಾಲ ಪೂಜಾರಿ, ಮುಹಮ್ಮದ್, ಲಖಿತಾ ಆರ್ ಶೆಟ್ಟಿ, ಸುಚಿತ್ರ ಗಟ್ಟಿ, ಲಲಿತಾ, ಲತಾ, ರಾಜೇಶ್ ಕೊಟ್ಟಾರಿ, ಅಯಿಶಾ,ಮೇಲ್ವಿಚಾರಕಿ ಶಾಲಿನಿ, ಅಮ್ಡೂರು ಗೊಂಚಲು ಅದ್ಯಕ್ಷ ರಾದ ವಿದ್ಯಾಶ್ರೀ, ಸಾಂತ್ವನಾ ಕೇಂದ್ರದ ಅಪ್ತ ಸಮಾಲೋಚಕಿ ಗೀತಾ,ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ವಿಶ್ವೇಶ್ವರ ಭಟ್, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಮರಿಯ ಕುಟ್ಟಿ, ಶಿಕ್ಷಕಿ ವಾರಿಜ ಶ್ರೀ, ವಿದ್ಯಾಲತಾ, ಗೋಳ್ತಮಜಲು ಪ್ರಾಥಮಿಕ ಆರೋಗ್ಯ ಸಹಾಯಕಿಯರಾದ ರೋಹಿಣಿ , ಜಯಂತಿ ಮತ್ತಿರರು ಉಪಸ್ಥಿತರಿದ್ದರು.
ಮೇಲ್ವಿಚಾರಕಿ ಶಾಲಿನಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಅರುಣಾ ರಾವ್ ಸ್ವಾಗತಿಸಿ ದರು. ಸರ್ವಾಣಿ ರೈ ಕಾರ್ಯಕ್ರಮ ನಿರೂಪಿಸಿದರು. ಬಾಲಪ್ರತಿಭೆ ಕು ಕೀರ್ತನಾ , ಹಾಗೂ ಸರಕಾರದ ಯೋಜನೆಗಳನ್ನು ಅತೀ ಹೆಚ್ಚು ಫಲಾನುಗಳಿಗೆ ತಲುಪಿಸಲು ಕಾರಣೀಕರ್ತರಾದ ಅಂಗನವಾಡಿ ಕಾರ್ಯ ಕರ್ತೆಯರಾದ ಬೇಬಿ ಯಮುನಾ ಅವಳನ್ನು ಗೌರವಿಸಲಾಯಿತು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal