ಬಂಟ್ವಾಳ, Sep 20 :  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಜಿಲ್ಲಾ ಪಂಚಾಯತ್ ಮಂಗಳೂರು ಮತ್ತು ಬಾಳ್ತಿಲ ಗ್ರಾ.ಪಂ., ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳ್ತಿಲ, ಸ್ತ್ರೀ ಶಕ್ತಿ ಗೊಂಚಲು ಬಾಳ್ತಿಲ ಇವರ ಸಂಯುಕ್ತ ಆಶ್ರಯ ದಲ್ಲಿ ಬಾಳ್ತಿಲ ವಲಯ ಮಟ್ಟದ ವಿಶ್ವ ಪೌಷ್ಟಿಕ ಆಹಾರ ಸಪ್ತಾಹ, ಪ್ರಧಾನ ಮಂತ್ರಿ ಮಾತ್ರವಂದನಾ ಸಪ್ತಾಹ , ಮಹಿಳಾ ಗ್ರಾಮ‌ಸಭೆ ಬೇಟಿ ಬಚಾವೋ ಬೇಟಿ ಪಡಾವೋ ಜಾಗ್ರತಿ ಅರಿವು ಕಾರ್ಯಕ್ರಮ ಬಾಳ್ತಿಲ ಗ್ರಾಮ ಪಂಚಾಯತ್ ಸುವರ್ಣ ಸೌಧ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮ ವನ್ನು ತಾ.ಪಂ.ಲಕ್ಮೀಗೋಪಾಲಾಚಾರ್ಯ ಉದ್ಘಾಟಿಸಿದರು.
ಕಾರ್ಯಕ್ರಮ ದ ಅಧ್ಯಕ್ಷ ತೆಯನ್ನು ಗ್ರಾ.ಪಂ. ಅದ್ಯಕ್ಷ ವಿಠಲ ನಾಯ್ಕ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಬಾಳ್ತಿಲ ಗ್ರಾ.ಪಂ.ಉಪಾಧ್ಯಕ್ಷೆ ಪೂರ್ಣಿಮಾ, ಸದಸ್ಯ ರಾದ ಸುಂದರ ಸಾಲಿಯಾನ್, ಬಿ‌ಕೆ ಅಣ್ಣು ಪೂಜಾರಿ, ಮೋಹನ್ ಪಿ.ಎಸ್, ವೆಂಕಟರಾಯ ಪ್ರಭು, ಆನಂದ ಶೆಟ್ಟಿ, ಗುಲಾಬಿ, ರೇಣುಕಾ, ಜಯಶ್ರೀ ಬಂಗೇರ, ಪುಷ್ಪಾ ಬಿ ಶೆಟ್ಟಿ, ವೀಣಾ , ಸಂಪನ್ಮೂಲ ವ್ಯಕ್ತಿಗಳಾಗಿ ಬಾಳ್ತಿಲ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಡಾ! ವಿಶ್ವೇಶರ ಯು.ಕೆ, ಬಿಸಿರೋಡಿನ ಸಾಂತ್ವನ ಕೇಂದ್ರ ದ ಆಪ್ತ ಸಮಾಲೋಚಕಿ ಕು.ಗೀತಾ , ಪಂಚಾಯತ್ ಅಭಿವ್ರದ್ದಿ ಅಧಿಕಾರಿ ಸಂಧ್ಯಾ, ಗೊಂಚಲು ಅದ್ಯಕ್ಷೆ ಯಶೋಧ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಶ್ರೀ ರಾಮ ಶಾಲಾ ವಿದ್ಯಾರ್ಥಿ ನಿ ಕು.ಕೀರ್ತನಾ, ನಾಗರತ್ನಸಂಜೀವ ಪೂಜಾರಿ, ಸುಂದರಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬಾಳ್ತಿಲ ಅಂಗನವಾಡಿ ಕೇಂದ್ರ ದ ಮೇಲ್ವಿಚಾರಕಿ ಸುಂದರಿ ಸ್ವಾಗತಿಸಿ, ಉಮಾವತಿ ಪೂರ್ಲಿಪಾಡಿ ವಂದಿಸಿದರು.
ಮೇಲ್ವಿಚಾರಕಿ ಶಾಲಿನಿ ಕಾರ್ಯಕ್ರಮ ನಿರೂಪಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal