ಮುಂಬಯಿ (ಬಂಟ್ವಾಳ), ಸೆ.06: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಪುರಸಭೆ ಬಂಟ್ವಾಳ, ಜಿಲ್ಲಾ ಸ್ವಚ್ಚಭಾರತ್ , ಬಂಟ್ವಾಳ ರೋಟರಿ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಪಂಜಿಕಲ್ಲು ವಲಯ ಮಟ್ಟದ ವಿವಿಧ ಘಟಕಗಳ ಸಪ್ತಾಹ ಕಾರ್ಯಕ್ರಮ ಬಿಸಿರೋಡಿನ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆಯಿತು.

ವಿಶ್ವ ಪೌಷ್ಟಿಕ ಆಹಾರ ಸಪ್ತಾಹ, ಮಾತ್ರವಂದನಾ ಸಪ್ತಾಹ, ಸ್ವಚ್ಚ ಗೆಳತಿ ಋತುಸ್ರಾವದ ಜಾಗ್ರತಿ ಅಭಿಯಾನ, ಹೆಣ್ಣು ಮಕ್ಕಳ ಹುಟ್ಟು ಹಬ್ಬ ಆಚರಣೆ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಮಾಹಿತಿ ಕಾರ್ಯಕ್ರಮ ಕ್ಕೆ ಸ್ವಚ್ಚ ಭಾರತ್ ಮಿಷನ್ ಜಿಲ್ಲಾ ಸಂಯೋಜಕಿ ಮಂಜುಳಾ ಅವರು ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ರೋಟರಿ ಕ್ಲಬ್ ಕಾರ್ಯದರ್ಶಿ ಶಿವಾಣಿ ಬಾಳಿಗಾ ವಹಿಸಿದ್ದರು.
ಬಳಿಕ ಮಾತನಾಡಿದ ಬಾಳಿಗಾ ಅವರು ತ್ಯಾಜ್ಯ ಮುಕ್ತ ಸ್ವಚ್ಚ ಬಂಟ್ವಾಳ ವನ್ನಾಗಿ‌ಮಾಡಲು ನಾವು ಚಿಂತನೆ ಮಾಡಬೇಕಾಗಿದೆ.‌ ಪುರಸಭೆಯ ಜೊತೆ ಕೈ ಜೊಡಿಸುವ ಕೆಲಸ ಅಗಬೇಕಾಗಿದೆ ಎಂದರು.
ಸಿ.ಡಿ.ಪಿ.ಒ.ಇಲಾಖೆ ಈ ಕಾರ್ಯಕ್ರಮ ಆಯೋಜನೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮ ದಲ್ಲಿ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ರೋಟರಿ ಕ್ಲಬ್ ಅದ್ಯಕ್ಷ ಮಂಜುನಾಥ್ ಆಚಾರ್ಯ, ರೋಟರಿ ಸಂಸ್ಥೆಯ ಇಂಟರ್ ನ್ಯಾಶನಲ್ ಸರ್ವೀಸ್ ಡೈರೆಕ್ಟರ್ ಪ್ರತಿಭಾ ರೈ, ಎನ್ಸ್ ಕ್ಲಬ್ ಅದ್ಯಕ್ಷೆ ವಿದ್ಯಾ ರೈ ಉಪಸ್ಥಿತರಿದ್ದರು.

ಹಿರಿಯ ಮೇಲ್ವಚಾರಕಿ ಗಾಯತ್ತಿಕಂಬಳಿ ಸ್ವಾಗತಿಸಿದರು, ಭಂಡಾರಿಬೆಟ್ಟು ಕಾರ್ಯಕರ್ತೆ ಭವ್ಯ ಕಾರ್ಯಕ್ರಮ ನಿರೂಪಿಸಿದರು. ಮಯ್ಯರಬೈಲು ಅಂಗನವಾಡಿ ಕಾರ್ಯಕರ್ತೆ ವಿಶಾಲಾಕ್ಷಿ ವಂದಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal