ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಕೈಕಂಬ ಪೊಳಲಿ ದ್ವಾರದಿಂದ ಬಿಸಿರೋಡು ರಕ್ತೇಶ್ವರಿ ದೇವಿ ದೇವಸ್ಥಾನ ದ ವರೆಗೆ ಪಂಜಿನ ಮೆರವಣಿಗೆ ನಡೆಯಿತು. ಬಳಿಕ ರಕ್ತೇಶ್ವರಿ ದೇವಿ ದೇವಸ್ಥಾನ ದ ಬಳಿಯ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.


ಯುವ ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು ಕಾರ್ಯ ಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು ಅಖಂಡ ಭಾರತದ ನಿರ್ಮಾಣ ದ ಕನಸು ಸಾಕಾರಗೊಳ್ಳಲು ಸಂಘಟನೆಯ ಪಾತ್ರ ಮುಖ್ಯವಾಗಿ ದೆ. ಹಿಂದೂ ತನವನ್ನು ಹಿಂದೂ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಸಂಘಟಿತರಾಗಿ , ಸುದ್ದಿಯಾಗಿ ದೇಶದ ಉಳಿವಿಗಾಗಿ ಶ್ರಮವಹಿಸಿ ಎಂದು ಅವರು ಹೇಳಿದರು.
ಬೆಂಗಳೂರು ಸಾಮಾಜಿಕ ಕಾರ್ಯಕರ್ತ ಗಿರಿಧರ ಉಪಾಧ್ಯಾಯ ದಿಕ್ಸೂಚಿ ಭಾಷಣ ಮಾಡಿದರು.

 

 


ಗಿರಿಧರ ಉಪಾಧ್ಯಾಯ ಮಾತನಾಡಿ ಈ ದೇಶ ವಿಭಜನೆಯಾಗಲು ಕಾಂಗ್ರೆಸ್ ಕಾರಣ, ಮತಕ್ಕಾಗಿ ಅಲ್ಪಸಂಖ್ಯಾತ ರನ್ನು ಒಲ್ಯೆಕೆ ಮಾಡಲು ಹಿಂದೂಗಳ ದಮನ ಕಾರ್ಯ ನಡೆಯುತ್ತಿದೆ. ನೆಹರು ವಂಶದವರಿಂದ ಈ ದೇಶ ಅದೋಗತಿಯತ್ತ ಹೋಯಿತು. ಕಾಶ್ಮೀರ ಸಮಸ್ಯೆ ಹುಟ್ಟು ಹಾಕಲು ನೆಹರು ಅವರೇ ಕಾರಣ ಎಂದು ಅವರು ಹೇಳಿದರು.


ಅಲ್ಪಸಂಖ್ಯಾತ ರು ಬಹುಸಂಖ್ಯಾತರಾದಾಗ ದಂಗೆಯೇಳುತ್ತಾರೆ, ಅಲ್ಪಸಂಖ್ಯಾತ ರು ಕಡಿಮೆ ಇರುವ ಕಡೆ ಮೌನವಾಗಿರುತ್ತಾರೆ. ದೇಶದ ಜನಸಂಖ್ಯೆ ಹೆಚ್ಚಾದ ಸಂಸ್ಕೃತಿಯೂ ಬದಲಾಗುತ್ತೆ ಎನ್ನುವುದಕ್ಕೆ ಹಲಾವರು ಉದಾಹರಣೆಗಳಿವೆ . ಹಿಂದೂ ಸಮಾಜದ ಮೇಲೆ, ಹಿಂದೂ ರಾಷ್ಟ್ರದ ದಾಳಿ ಯಾದಾಗ ಪ್ರತಿಯಾದ ಉತ್ತರ ನೀಡುತ್ತದೆ. ಹಿಂದೂ ಧರ್ಮದ ಮೇಲೆ ಸಂಸ್ಕೃತಿಯ ಮೇಲೆ ದಾಳಿಯಾದಾಗ ಹಿಂದೂ ಸಮಾಜ ಜಾಗ್ರತರಾಗಬೇಕು. ಭಾರತ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಭಾವನಾತ್ಮಕ ಸಂಬಂಧ ಇದೆ.


ಈ ಸಂಸ್ಕೃತಿ ಬೇರೆ ಎಲ್ಲೂ ಕಾಣಲು ಸಾಧ್ಯ ವಿಲ್ಲ. ಇಂತಹ ನಮ್ಮ ಸಾಂಸ್ಕೃತಿಕ ಸಂಪತ್ತನ್ನು ಉಳಿಸಿದಾಗ ಭಾರತ ಉಳಿಯುತ್ತೆ , ಅಖಂಡ ಭಾರತ ವಾಗುತ್ತೆ ಎಂದರು.


ಹಿಂದೂ ಸಮಾಜ ಎಲ್ಲರ ನ್ನು ಸಮಾನವಾಗಿ ನೋಡಿದ ವಿಶಾಲ ಮನೋಭಾವ ದ ಸಮಾಜ. ಹಿಂದೂ ಧರ್ಮ ಎಲ್ಲಿಯವರೆಗೆ ಬಹುಸಂಖ್ಯಾತ ರಾಗುತ್ತದೋ ಅಲ್ಲಿಯವರೆಗೆ ಇತರರು ಆಕ್ರಮಣ ಮಾಡಲು ಸಾಧ್ಯವಿಲ್ಲ. ನಾವೆಲ್ಲಾ ಒಂದಾಗಿ ಬೇಧಬಾವ ಮರೆತು, ಭಾವನೆಗಳ ಮೂಲಕ ಹಿಂದೂ ಸಮಾಜ ದ ಪುನರುತ್ಥಾನದ ಬಗ್ಗೆ ಕೆಲಸ ಮಾಡಿದಾಗ ವಿಶ್ವಗುರು ಅಗಲು ಸಾಧ್ಯ. ಭವ್ಯವಾದ ದೇಶ ವನ್ನು ಕಟ್ಟ ಲು ನಾವೆಲ್ಲರೂ ಒಂದಾಗೋಣ ಎಂದರು.


ಬಂಟ್ವಾಳ ವಿಧಾನಸಭಾ ಕ್ಷೇತ್ರದ ಲ್ಲಿ ಬದಲಾವಣೆ ಮಾಡಿದ ಇಲ್ಲಿನ ಎಲ್ಲಾ ಜನರಿಗೆ ಅಭಿನಂದನೆ ಸಲ್ಲಬೇಕು ಎಂದರು.


ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು, ಹರಿಕ್ರಷ್ಣ ಬಂಟ್ವಾಳ, ಆಶೋಕ್ ಶೆಟ್ಟಿ ಸರಪಾಡಿ ಉಪಸ್ಥಿತರಿದ್ದರು.


ವೇದಿಕೆಯಲ್ಲಿ ಪ್ರಮುಖರಾದ ಮಂಗಳೂರು ವಿಭಾಗದ ಪ್ರಧಾನ ಕಾರ್ಯದರ್ಶಿ ರವಿರಾಜ್ ಬಿಸಿರೋಡು, ಹಿಂದೂಜಾಗರಣ ವೇದಿಕೆ ಪುತ್ತೂರು ಜಿಲ್ಲಾದ್ಯಕ್ಷ ರತ್ನಾಕರ ಶೆಟ್ಟಿ ಕಲ್ಲಡ್ಕ, ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಘಟಕದ ಅದ್ಯಕ್ಷ ಅರುಣ್ ಕುಮಾರ್ ನುಲಿಯಾಲು ಗುತ್ತು,ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ಘಟಕದ ಗೌರವಾದ್ಯಕ್ಷ ವಿಠಲ ಕೋಟ್ಯಾನ್, ಹಿಂದೂ ಜಾಗರಣ ಮಹಿಳಾ ಘಟಕದ ಅಧ್ಯಕ್ಷೆ ಬಬಿತಾ ಕೋಟ್ಯಾನ್, ಹಿಂದೂ ಜಾಗರಣ ವೇದಿಕೆ ಬಂಟ್ವಾಳ ಅಧ್ಯಕ್ಷ ಚಂದ್ರ ಕಲಾಯಿ, ಹಿಂದೂ ಜಾಗರಣ ವೇದಿಕೆ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕೆಂಪುಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.


ಕಿರಣ್ ಶೆಟ್ಟಿ ಮೂರ್ಜೆ ಪ್ರತಿಜ್ಞೆ ವಿಧಿ ಬೋಧಿಸಿದರು. ಪುಪ್ಷರಾಜ್ ಕಮ್ಮಾಜೆ ಸ್ವಾಗತಿಸಿದರು. ಹರ್ಷಾ ಅಮ್ಟಾಡಿ ವಂದಿಸಿದರು. ಸುರೇಶ್ ಎಸ್ ನಾವೂರ ನಿರೂಪಣೆಗೈದರು

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal