Print


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಮಾ.14: ಪ್ರಸ್ತುತ ಜನಮಾನ್ಯ ಕಲಾರಾಧನೆ ಕಡಿಮೆಯಾಗುತ್ತಿದ್ದು ಭಾರತೀಯ ಪಾವಿತ್ರ ್ಯತಾ ಕಲೆಗಳು ಉಳಿಯಬೇಕಿದ್ದರೆ ಕಲಾವಿದರು ಮತ್ತಷ್ಟು ಬೆಳೆಯಬೇಕು. ಯಾಕೆಂದರೆ ವಿಶ್ವಕ್ಕೆ ಪಾವಿತ್ರ್ಯತೆವುಳ್ಳ ಕಲೆಗಳೇ ಭಾರತೀಯ ಅಸ್ಮಿತೆ ಆಗಿದೆ. ಕಲಾವಿದರು ಗಟ್ಟಿಯಾಗಿದ್ದರೆ ಆ ಕಲೆ ನಿರಂತರವಾಗಿ ಉಳಿಯುತ್ತದೆ. ನಮ್ಮ ನಾಡಿನ, ನಮ್ಮ ದೇಶದ ಪರಿಚಯ ಆ ಸಂಸ್ಕೃತಿಯ ಮೂಲಕ ಕಲಾವಿದರ ಮುಖಾಂತರ ಪ್ರಪಂಚಕ್ಕೆ ತೋರಿಸುತ್ತಾ ಇದ್ದೇವೆ. ಕಲಾರಾಧನೆಯ ಮೂಲಕ 13 ವರ್ಷಗಳನ್ನು ಪೂರೈಸಿದ ಕನ್ನಡಿಗ ಪರಿಷತ್ತುಗೆ ಅಭಿನಂದನೆಗಳು. ಈ ಸಂಸ್ಥೆ ಇಂದು ಒಳ್ಳೆಯ ಉದ್ದೇಶದಿಂದ ಕಲಾರಾಧನೆ ಸಂಸ್ಕೃತಿಯನ್ನು ಉಳಿಸುವಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಭಗವಂತ ಎಲ್ಲಾ ಕಲಾವಿದರಿಗೂ, ಕಲಾಪೋಷಕರಿಗೂ ಆಯುರೋಗ್ಯವನ್ನು ನೀಡಲಿ. ಮುಂದಿನ ಯೋಚನೆ, ಯೋಜನೆಗಳು ಸಹಕಾರವಾಗಲಿ. ನಾವೆಲ್ಲರೂ ಕಲಾರಾಧನೆ ಮೂಲಕವೂ ಹೆತ್ತ ತಾಯಿ ಮತ್ತು ಹೊತ್ತ ಮಣ್ಣು ಇವೆರಡುಗಳ ಋಣ ಪೂರೈಸಿ ಸಂಸ್ಕೃತಿಯನ್ನು ಉಳಿಸೋಣ ಎಂದು ನಾಡಿನ ಹೆಸರಾಂತ ಜ್ಯೋತಿಷ್ಯ ಮತ್ತು ವಾಸ್ತುತಜ್ಞ ಅಶೋಕ್ ಪುರೋಹಿತ್ ತಿಳಿಸಿದರು.

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಇಂದಿಲ್ಲಿ ಶನಿವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಸಂಭ್ರಮಿಸಿದ ಸಾಂಸ್ಕೃತಿಕ ಕಲಾಮಹೋತ್ಸವ-2020 ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಪುರೋಹಿತ್ ಮಾತನಾಡಿದರು.

ಪರಿಷತ್ತುನ ಅಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ, ಗೌರವ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ಯಕ್ಷಮಾನಸ ಮುಂಬಯಿ ಅಧ್ಯಕ್ಷ ಶೇಖರ್ ಆರ್.ಶೆಟ್ಟಿ, ಅಪ್ರತಿಮ ಕಲಾವಿದ, ಕಲಾ ಪೆÇೀಷಕ ಸತೀಶ್ ಶೆಟ್ಟಿ ಕೊಟ್ರಾಪಾಡಿ ಉಪಸ್ಥಿತರಿದ್ದರು.

ಚಂದ್ರಶೇಖರ್ ಪೂಜಾರಿ ಮಾತನಾಡಿ ಕಲೆ ಮಹೋತ್ಸವಗಳಿಗೆ ನಾವೆಲ್ಲ ನಿಮಿತ್ತ ಮಾತ್ರ. ಭಗವಂತನ ಕರುಣೆ ಇದ್ದಾಗ ಮಾತ್ರ ಇಂತಹ ಕಾರ್ಯಕ್ರಮಗಳು ಸುಸಾಂಗವಾಗಿ ನಡೆಯಬಲ್ಲವು. ಇಂತಹ ಕಲಾ ಮಹೋತ್ಸವಗಳು ಭಗವಂತನ ಆಚರಣೆಯೇ ಸರಿ ಎಂದರು.

ಸುನೀತಾ ಶೆಟ್ಟಿ ಮಾತನಾಡಿ ಪೆÇೀಷಕರಿಲ್ಲದೆ ಕಲೆ ಬೆಳೆಯಲು ಸಾಧ್ಯವಿಲ್ಲ. ಸಂಕ್ರಮಣದ ಈ ಪರ್ವಕಾಲದಲ್ಲಿ ನಮ್ಮೆಲ್ಲರ ಭೀತಿಗಳು ಮಾಯವಾಗಿ ಆಶಾದಾಯಕವಾದ ದಿನಗಳು ಮತ್ತೆ ಫಲಿಸಲಿ. ಕಲಾತ್ಮಕವಾದ ಎಲ್ಲಾ ಬದಲಾವಣೆಗಳು ಈ ಸಂಸ್ಥೆಗೆ ಪೋಷಕವಾಗಲಿ ಅನ್ನುತ್ತಾ ಈ ಸಂಸ್ಥೆಗೆ ಜನ್ಮಕೊಟ್ಟವರಿಗೆ ಶ್ಲಾಘಿಸುತ್ತಾ ಕಲಾ ಸೇವೆಯ ಮೂಲಕ ಈ ಸಂಸ್ಥೆಯನ್ನು ಉಳಿಸಿ ಬೆಳೆಸೋಣ ಎಂದು ಆಶಯ ವ್ಯಕ್ತಪಡಿಸಿದರು.

ಶೇಖರ್ ಶೆಟ್ಟಿ ಮಾತಾನಾಡಿ ಕಲಾವಿದರೇ ಒಂದು ಸಮಾಜವಾಗಿದೆ. ಹಲವಾರು ಕಲಾವಿದರ ಏಳಿಗೆಗಾಗಿ ದುಡಿದ ಈ ಸಂಸ್ಥೆಯ ಉದ್ದೇಶಗಳು ಫಲಪ್ರದಗೊಂಡು ಪರಿಷತ್ತು ಎಲ್ಲಾ ಕಲಾವಿದರ ಪಾಲಿನ ಕಲ್ಪವೃಕ್ಷವಾಗಲಿ ಎಂದು ಹಾರೈಸಿದರು.

ಪರುಷತ್ತುವಿಗೆ ಕಲಾವಿದರೇ ಬಲವಾಗಿದ್ದು ಕಲಾಪೆÇೀಷಕರೆಲ್ಲರೂ ಆಧಾರ ಸ್ತಂಭವಾಗಿದ್ದಾರೆ. ಕಲಾವಿದರು ಅಂದರೆ ಹುಚ್ಚರು ಅನ್ನುವುದು ಬಲ್ಲವರ ಅನುಭವ. ಹುಚ್ಚರಿಗೆ ಹೇಳಿ ಪ್ರಯೋಜನವಾಗದು ಅನ್ನುವುದೂ ಕೆಳವರ ಅಭಿಮತ. ಇದು ಪೆದ್ದರ ಉವಾಚವಷ್ಟೇ. ಕಲಾವಿದರಿಗೆ ಕೊರೋನಾದ ಭೀತಿ ಇಲ್ಲ. ಕಲಾವಿದರೆಲ್ಲರೂ ಆರೋಗ್ಯವಂತರು. ಸದ್ಯ ಕೆಲವರ ಕ್ಷಣಮಾತ್ರದ ನಿರ್ಧಾರ ಭವಿಷ್ಯತ್ತಿನ ಬಾಳಿಗೆ ಮಾರಕವಾಗುತ್ತಿದ್ದು ಇದು ಶಾಸ್ವತವಲ್ಲ. ಕಲಾವಿದದರಿಗೆ ಕಡಿಮೆ ಸಂಪಾದನೆಯಿದ್ದು, ತಾವೆಲ್ಲರೂ ಮನಸ್ಸು ಮಾಡಿ ಕಲಾವಿದರಿಗೆ ಮನೆ ನಿರ್ಮಿಸಲು (ಕಲಾವಿದರ ಪರಿಷತ್ತುವಿಗೆ ಸ್ವಂತಃ ಕಚೇರಿ) ಸಹಕರಿಸಿ, ನಾವೆಲ್ಲರೂ ಈ ಮನೆಯಲ್ಲಿ ಕಲೆಯನ್ನು ಬೆಳೆಸುವ ಪ್ರಯತ್ನ ಮಾಡಿವೆವು ಎಂದು ಸುರೇಂದ್ರಕುಮಾರ್ ತಿಳಿಸಿದರು.

ಸಂಜೆ ಸಮಾರೋಪ ಸಮಾರಂಭ ನಡೆಸಲಾಗಿದ್ದು ಕಲಾವಿದರ ಪರಿಷತ್ತು ವಾರ್ಷಿಕವಾಗಿ ಕೊಡಮಾಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಆರ್.ಕೆ ಶೆಟ್ಟಿ ಪ್ರಾಯೋಜಕತ್ವದ`ಕಲಾಶ್ರೀ' ಪ್ರಶಸ್ತಿಯನ್ನು ಪ್ರಸಿದ್ಧ ಸಂಗೀತ ನಿರ್ದೇಶಕ, ಕಲಾಸೌರಭ ಸಂಸ್ಥೆಯ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಇವರಿಗೆ ಪ್ರದಾನಿಸಲಾಗಿದ್ದು ಉಪಸ್ಥಿತ ಅತಿಥಿಗಳು ಪುರಸ್ಕಾರ ಪ್ರದಾನಿಸಿ ಪುರಸ್ಕೃತರಿಗೆ ಅಭಿನಂದಿಸಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಾರಾ ಬಂಗೇರ ಪ್ರಾರ್ಥನೆಯನ್ನಾಡಿದರು. ಉಪಾಧ್ಯಕ್ಷ ಕಮಲಾಕ್ಷ ಜಿ.ಸರಾಫ್ ಸ್ವಾಗತಿಸಿ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಅರವಿಂದ ಶೆಟ್ಟಿ ಕೊಜಕೊಳಿ, ಜೊತೆ ಕಾರ್ಯದರ್ಶಿ ಚಂದ್ರಾವತಿ ದೇವಾಡಿಗ, ಜೊತೆ ಕೋಶಾಧಿಕಾರಿ ನವೀನ್ ಶೆಟ್ಟಿ ಇನ್ನಬಾಳಿಕೆ, ಮಾಜಿ ಕಾರ್ಯದರ್ಶಿ ರಾಜು ಶ್ರೀಯಾನ್ ನಾವುಂದ ವೇದಿಕೆಯಲ್ಲಿದ್ದು ಅತಿಥಿüಗಳಿಗೆ ಪುಷ್ಫಗುಪ್ಚ, ಸ್ಮರಣಿಕೆಗಳನ್ನಿತ್ತು ಗೌರವಿಸಿದರು. ಕಲಾಸಾರಥಿü ಡಾ| ಕರ್ನೂರು ಮೋಹನ್ ರೈ ಅತಿಥಿsಗಳನ್ನು ಪರಿಚಯಿಸಿ ಸಭಾ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕೋಶಾಧಿಕಾರಿ ಪಿ.ಬಿ ಚಂದ್ರಹಾಸ್ ಕೃತಜ್ಞತೆ ಸಮರ್ಪಿಸಿದರು.

ಕಲಾಮಹೋತ್ಸವದ ಪ್ರಯುಕ್ತ ಡಾ| ಆರ್.ಕೆ ಶೆಟ್ಟಿ ಪ್ರಾಯೋಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲ್ಪಟ್ಟಿದ್ದು, ಶೇಖರ ಸಸಿಹಿತ್ಲು ನಿರ್ದೇಶನದ್‍ಲ್ಲಿ ಕು| ಶ್ರದ್ಧಾ ಬಂಗೇರ ಭಕ್ತಿಸ್ತುತಿಗೈದರು. ಮಹಾನಗರದ ವಿವಿಧ ಕಲಾ ಸಂಸ್ಥೆಗಳು `ನೃತ್ಯಸಂಗಮ', `ಗಾನ ಸಂಭ್ರಮ' ಹಾಗೂ ಪರಿಷತ್ತುವಿನ ಸದಸ್ಯರು, ಕಲಾವಿದರು ಕುಣಿತ ಭಜನೆ, `ಸಾಂಸ್ಕೃತಿಕ ತಾಳಮದ್ದಲೆ' ಮತ್ತು `ಸುಧನ್ವ ಮೋಕ್ಷ' ಯಕ್ಷಗಾನ ತಾಳಮದ್ದಲೆ ಪ್ರದರ್ಶಿಸಿದರು. ಗೌ| ಪ್ರ| ಕಾರ್ಯದರ್ಶಿ ಬಾಬಾಪ್ರಸಾದ್ ಅರಸ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.