About Us       Contact

ಮುಂಬಯಿ, ಜ.09: ಬಂಟ್ಸ್ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯು `ಬದುಕು ನಿರ್ವಹಣೆ' (ಮ್ಯಾನೇಜಿಂಗ್ ಲೈಫ್) ವಿಷಯದಲ್ಲಿ ವೈಶಿಷ್ಟ್ಯಮಯ ಕಾರ್ಯಗಾರವನ್ನು ಇದೇ ಜನವರಿ.26ನೇ ಶನಿವಾರ ಅಪರಾಹ್ನ 2.30 ಗಂಟೆಯಿಂದ ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್ ಅಲ್ಲಿನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಆಯೋಜಿಸಿದೆ.

ರಾಷ್ಟ್ರದ ಹೆಸರಾಂತ ಹಣಕಾಸು ವಿದ್ವಾಂಸ, ಆಥಿರ್üಕ ಸಲಹೆಗಾರ ಸಿಎ| ಅಮನ್ ಚುಗ್ ಆಗಮಿಸಿ ಹಣದ ಉಪಯೋಗ (ಮ್ಯಾನೇಜಿಂಗ್ ಮನಿ) ಬಗ್ಗೆ ವಿಶೇಷ ಮಾಹಿತಿ ನೀಡಲಿದ್ದಾರೆ. ನಾಡಿನ ನಾಮಾಂಕಿತ ವೈದ್ಯಾಧಿಕಾರಿ ಡಾ| ಹರೀಶ್ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಸ್ವಸ್ಥತೆ ಕಪಾಡುವಿಕೆ (ಮ್ಯಾನೇಜಿಂಗ್ ಹೆಲ್ತ್), ಪ್ರಸಿದ್ದ ಸಂಸಾರಿಕ ಉಪದೇಶಕ ಮುರಳಿ ಮೆಹ್ತಾ ಅವರು ಕುಟುಂಬ ನಿರ್ವಾಹಣೆ (ಮ್ಯಾನೇಜಿಂಗ್ ಫ್ಯಾಮಿಲಿ) ಮತ್ತು ಹೆಸರಾಂತ ಮನೋ ಮೇಧಾವಿ ದೀಪಕ್ ರಾವ್ ಆಗಮಿಸಿ ಮನಸ್ಸು, ಬುದ್ಧಿಯ ಕಾರ್ಯಶಕ್ತಿ ಮತ್ತು ನಿಯಂತ್ರಣ (ಪವರ್ ಆಫ್ ಮೈಂಡ್) ಕುರಿತು ವಿಶೇಷ ಕಾರ್ಯಗಾರ ನಡೆಸಿ ಅರಿವು ಮೂಡಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಶ್ವಮಾನ್ಯತೆ ಪಡೆದ ತುಳುನಾಡ ಇಂದ್ರಜಾಲ ಮೋದಿಗಾರ ಕುದ್ರೋಳಿ ಗಣೇಶ್ ಮತ್ತು ಬಳಗವು ಅತ್ಯಾದ್ಭುತ ಮ್ಯಾಜಿಕ್ ಶೋ ಪ್ರದರ್ಶಿಸಲಿದ್ದಾರೆ. ಬಂಟ್ಸ್ ಸಂಘದ ವಿಶ್ವಸ್ಥರು, ಪದಾಧಿಕಾರಿಗಳ ಉಪಸ್ಥಿತಿ ಮತ್ತು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮಕ್ಕೆ ಅತಿಥಿ ಗಣ್ಯರು ಚಾಲನೆ ನೀಡಲಿದ್ದಾರೆ.

ಶೈಕ್ಷಣಿಕ ಸೇವೆಯಾಗಿಸಿ ವಿದ್ಯಾರ್ಥಿಗಳ ದತ್ತು ಸ್ವೀಕಾರದೊಂದಿಗೆ ಸಮಾಜಸೇವೆ ಮಾಡುವ ಧ್ಯೇಯೋದ್ದೇಶದ ಪಥದಲ್ಲಿ ಒಂದು ಹೆಜ್ಜೆ ಮುಂದಿರಿಸಿರುವ ಬಂಟರ ಸಂಘದ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯು ವಿದ್ಯಾರ್ಥಿಗಳ ದತ್ತು ಸ್ವೀಕಾರ `ದಿಶಾ' ಅಂಧೇರಿ ಬಾಂದ್ರಾ ಪ್ರದೇಶದ ಸುತ್ತಮುತ್ತಲಿನ ಪರಿಸರದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ದತ್ತು ಸ್ವೀಕರಿಸಿ ಬದುಕು ಕಟ್ಟಿಕೊಳ್ಳಲು ಆಸರೆಯಾಗುವ ಸದುದ್ದೇಶ ಹೊಂದಿ ಆ ಕುಟುಂಬಕ್ಕೆ ಬೇಕಾದ ಅಗತ್ಯ ಸೌಲಭ್ಯವನ್ನು ಒದಗಿಸಿ ಸಹಾಯ ಹಸ್ತ ನೀಡುವ `ಆರೋಗ್ಯ ಭಾಗ್ಯ' ಯೋಜನೆಯ ಪ್ರಯುಕ್ತ ಆಯೋಜಿಸಲಾದ ಈ ವಿಶಿಷ್ಟ ಮತ್ತು ಅತ್ಯವಶ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳುವಂತೆ ಸಮಿತಿ ತಿಳಿಸಿದೆ.

ಸಹೃದಯತೆಯ ಈ ಕಾರ್ಯದಲ್ಲಿ ಅಂಧೇರಿ ಬಾಂದ್ರಾ ಪ್ರದೇಶದ ಜನತೆಯ ಉಪಸ್ಥಿತಿ ಸಮಿತಿಯ ಮುನ್ನಡೆಗೆ ಪ್ರೇರಣೆ ನೀಡಲಿದೆ. ಪರಹಿತ ಚಿಂತನೆ ನಮ್ಮ ನೈತಿಕ ಜವಾಬ್ದಾರಿ ಅದು ನಮ್ಮ ಕರ್ತವ್ಯ ಎಂದು ತಿಳಿದು ನಿಷ್ಠೆಯಿಂದ ಮುಂದಡಿಯಿಡುವ ಈ ಸತ್ಕಾರ್ಯಕ್ಕೆ ಪ್ರೊತ್ಸಾಹಿಸ ಬೇಕಾಗಿ ಬಂಟರ ಸಂಘಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ.ಶೆಟ್ಟಿ, ಗೌರವ ಕಾರ್ಯದರ್ಶಿ ರವಿ ಆರ್.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವನಿತಾ ವೈ.ನೋಂದ, ಯುವ ವಿಭಾಗದ ಕಾರ್ಯಾಧ್ಯಕ್ಷ ರಕ್ಷಿತ್ ಶೆಟ್ಟಿ ಹಾಗೂ ಪ್ರಾದೇಶಿಕ ಸಮಿತಿಯಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ನಾನಯರ ಗರಡಿ, ದತ್ತು ಸ್ವೀಕಾರ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ, ನಿಧಿ ಸಂಗ್ರಹ ಸಮಿತಿ ಕಾರ್ಯಾಧ್ಯಕ್ಷ ಯಶವಂತ ಶೆಟ್ಟಿ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷೆ ಸುಜತಾ ಶೆಟ್ಟಿ, ಸದಸ್ಯತ್ವ ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಲಕ್ಷಣ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಸವಿತಾ ಶೆಟ್ಟಿ ಸೇರಿದಂತೆ ಕಾರ್ಯಕಾರಿ ಸಮಿತಿ ಸರ್ವ ಪದಾಧಿಕಾರಿಗಳು ಈ ಮೂಲಕ ತಿಳಿಸಿದ್ದಾರೆ.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal