About Us       Contact

ಮುಂಬಯಿ, ಜೂ.10: ಇಂಡಿಯನ್ ವ್ಹರ್ಚುವಲ್ ಯುನಿವರ್ಸಿಟಿ ಫಾರ್ ಪೀಸ್ ಆ್ಯಂಡ್ ಎಜ್ಯುಕೇಶನ್ ಬೆಂಗಳೂರು ಕರ್ನಾಟಕ ಶಿಕ್ಷಣ ಸಂಸ್ಥೆಯು ಕಳೆದ ಶನಿವಾರ ಸಂಜೆ ಧಾರವಾಡ ವಿಶ್ವವಿದ್ಯಾಲಯದ ಸಭಾಗೃಹದಲ್ಲಿ ಆಯೋಜಿಸಿರುವ ಘಟಿಕೋತ್ವದ ಮತ್ತು ಪದವಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮುಂಬಯಿನ ಸಮಾಜ ಸೇವಕಿ ಡಾ| ರಜನಿ ವಿನಾಯಕ ಪೈ ಅವರಿಗೆ ಡಾಕ್ಟರೇಟ್ ಸನದು ಪ್ರದಾನಿಸಿ ಗೌರವಿಸಿತು.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಸಿದ್ಧಿ ನಿವಾಸಿಯಾದ ರಜನಿ ಮುಂಬಯಿ ಉಪನಗರದ ಮುಲುಂಡ್ ಪಶ್ಚಿಮದಲ್ಲಿ ನೆಲೆಸಿದ್ದು ಕಳೆದ ಒಂದು ದಶಕದಿಂದ ಬಡವರ ಕಾಳಜಿ ಮತ್ತು ನಿರ್ಗತಿಕರಿಗೆ ಸಹಾಯಹಸ್ತಗೈದು ತೆರೆಮರೆಯಲ್ಲೇ ಸಮಾಜ ಸೇವಕಿಯಾಗಿ ಸೇವಾ ನಿರತರಾಗಿದ್ದಾರೆ. ಭಾರತೀಯ ಜನತಾ ಪಕ್ಷದ ಸಕ್ರೀಯ ಕಾರ್ಯಕರ್ತೆಯಾಗಿ ಸ್ಥಾನೀಯವಾಗಿ ಗುರುತಿಸಿ ಕೊಂಡಿರುವ ಇವರು ಮಹಾರಾಷ್ಟ್ರ ರಾಜ್ಯದ ಪಡಿತರ (ರೇಶನಿಂಗ್) ಸಮಿತಿ ಸದಸ್ಯೆಯಾಗಿ, ಸ್ವರಾಂಜಲಿ ಪ್ರತಿಷ್ಠಾನದ ಆನಂದಯಾತ್ರಿ ಮೂಲಕ ದೃಷ್ಟಿಹೀನ ಮಕ್ಕಳ ಸೇವೆಯಲ್ಲಿ ತೊಡಗಿಸಿದ್ದಾರೆ.

ರಜನಿ ಕನ್ನಡ ಸಂಘ ಮುಂಬಯಿ ಇದರ ಸಕ್ರೀಯ ಕಾರ್ಯಕರ್ತೆಯಾಗಿ, ಸದ್ಯ ಮಹಿಳಾ ವಿಭಾಗಧ್ಯಕ್ಷೆಯಾಗಿ ಶ್ರಮಿಸುತ್ತಿದ್ದಾರೆ. ಡಾ| ಪೈ ಅವರಿಗೆ ಮುಂಬಯಿ ಕನ್ನಡ ಸಂಘ ಅಧ್ಯಕ್ಷ ಜಿ.ಎಸ್.ನಾಯಕ್, ಉಪಾಧ್ಯಕ್ಷ ಡಾ| ಎಸ್.ಕೆ ಭವಾನಿ ಮತ್ತು ಸರ್ವ ಪದಾಧಿಕಾರಿಗಳು, ಸದಸ್ಯರು ಅಭಿನಂದಿಸಿದ್ದಾರೆ.
(ಚಿತ್ರ / ವರದಿ : ರೊನಿಡಾ ಮುಂಬಯಿ)

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal