About Us       Contact

 

(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಆ.31: ರಾಷ್ಟ್ರವು ಭೌಗೋಳಿಕವಾಗಿ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿ ರಾಷ್ಟ್ರದ ಭಾವೀ ಪ್ರಜೆಗಳಾದ ನಮ್ಮ ಮಕ್ಕಳು ಜಾಗತಿಕ ಅರಿವಿನ ಮೌಲಿಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಶೈಕ್ಷಣಿಕ ಕ್ಷೇತ್ರವು ಅದೆಷ್ಟೋ ಆವಿಷ್ಕಾರಗಳೊಂದಿಗೆ ಮುನ್ನಡೆ ಸಾಧಿಸಿದ್ದು ಇದಕ್ಕೆ ಪೂರಕವಾಗಿ ವಿದ್ಯಾಥಿರ್sಗಳು ಸ್ಪಂದಿಸುವ ಅಗತ್ಯವಿದೆ. ಆದರೆ ವಿಶ್ಷಕ್ಕೆ ಮಾದರಿಯಾದ ಭಾರತೀಯ ಸಂಸ್ಕೃತಿಯನ್ನು ಮರೆಯದೆ ಮಾತಾಪಿತರು, ಗುರುವರ್ಯರು ಹಾಗೂ ವಿದ್ಯಾರ್ಜನೆಗೆ ಪ್ರೊತ್ಸಾಹ ನೀಡಿದ ಇಂತಹ ಸಂಸ್ಥೆಗಳನ್ನು ಮರೆಯದೆ ಸುಶಿಕ್ಷಿತರಾದಾಗ ಮಾತ್ರ ನಿಮ್ಮ ಬಾಳು ಹಸನಾಗುವುದು ಎಂದು ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು, ಮುಜರಾಯಿ ಖಾತೆ ಸಚಿವರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅವರು ದೀಪ ಬೆಳಗಿಸಿ ಮಾತನಾಡಿದರು.

ಕನ್ನಡ ಸಂಘ ಸಾಂತಾಕ್ರೂಜ್ ತನ್ನ 62ನೇ ವಾರ್ಷಿಕ ಮಹಾಸಭೆಯನ್ನು ಇಂದಿಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಕಿರು ಸಭಾಗೃಹದಲ್ಲಿ ಮಹಾಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಎಲ್.ವಿ ಅವಿೂನ್ ವಹಿಸಿದ್ದು, ಸಂಘದ ಜೊತೆ ಕೋಶಾಧಿಕಾರಿ ದಿನೇಶ್ ಬಿ.ಅವಿೂನ್, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್ ವೇದಿಕೆಯಲ್ಲಿದ್ದು, ಸಾಮಾಜಿಕ-ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಲಕ್ಷ್ಮೀ ಎನ್.ಕೋಟ್ಯಾನ್ ಪ್ರಾರ್ಥನೆಯನ್ನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಸ್ವಾಗತಿಸಿ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ಗೌ| ಪ್ರ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್ ಗತ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಲಕ್ಷ್ಮೀ ಎನ್.ಕೋಟ್ಯಾನ್ ವಂದಿಸಿದರು.

ಶಿಕ್ಷಣ ಪ್ರೇಮಿಗಳಾದ ನಾವುಗಳು, ಈ ಸಂಘ ವಿದ್ಯಾಥಿರ್sಗಳಲ್ಲಿನ ಪ್ರತಿಭೆಗಳನ್ನು ಪ್ರೇರೇಪಿಸುತ್ತಿದ್ದೇವೆ. ಪ್ರತಿಭಾನ್ವಿತ ಮಕ್ಕಳಾಗಲೀ, ಆಥಿರ್sಕವಾಗಿ ಹಿಂದುಳಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಸಾಕ್ಷರತೆಯನ್ನು ಸಾಧಿಸಬೇಕು ಅನ್ನುವುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ ನೂರಾರು ವಿದ್ಯಾದಾನಿಗಳು ನಮ್ಮೊಂದಿಗೆ ಸ್ಪಂದಿಸುತ್ತಿದ್ದು ಎಲ್ಲರ ಸಹಯೋಗದಿಂದ ಈ ಕಾರ್ಯ ಸಾಧ್ಯವಾಗಿದೆ. ಆದುರಿಂದಲೇ ಈ ಸಂಘ ಈ ಮಟ್ಟಕ್ಕೆ ಬೆಳೆದು ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿ ಕೊಂಡಿದೆ ಎಂದು ಎಲ್. ವಿ ಅಮೀನ್ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿಲ್ಲವರ ಅಸೋಸಿಯೇಶನ್‍ನ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಉಪಾಧ್ಯಕ್ಷರುಗಳಾದ ಹರೀಶ್ ಜಿ.ಅವಿೂನ್, ಶ್ರೀನಿವಾಸ ಆರ್.ಕರ್ಕೇರ ಉಪಸ್ಥಿತರಿದ್ದು, ವಾರ್ಷಿಕವಾಗಿ ಕೊಡಮಾಡುವ 2019ನೇ ಸಾಲಿನ ದತ್ತು ಸ್ವೀಕೃತ ವಿದ್ಯಾಥಿರ್üಗಳ ವಿದ್ಯಾಸಹಾಯ ನಿಧಿಯನ್ನು ವಿತರಿಸಲಾಯಿತು. ಜಯ ಪೂಜಾರಿ ಮತ್ತು ಎನ್.ಎಂ ಸನೀಲ್ ಮಾತಾನಾಡಿ ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಗೋವಿಂದ ಆರ್.ಬಂಗೇರಾ, ಸುಮಾ ಎಂ.ಪೂಜಾರಿ, ಶಾಲಿನಿ ಎಸ್.ಶೆಟ್ಟಿ, ಸಲಹಾ ಸಮಿತಿ ಸದಸ್ಯರಾದ ನಾರಾಯಣ ಎಸ್.ಶೆಟ್ಟಿ, ಎನ್.ಎಂ ಸನೀಲ್, ವಿಶೇಷ ಆಮಂತ್ರಿತ ಸದಸ್ಯರಾದ ಶಿವರಾಮ ಎಂ. ಕೋಟ್ಯಾನ್, ವಿಜಯಕುಮಾರ್ ಕೆ.ಕೋಟ್ಯಾನ್, ಲಿಂಗಪ್ಪ ಬಿ.ಅವಿೂನ್, ಸುಜತಾ ಸುಧಾಕರ್ ಉಚ್ಚಿಲ್, ಅಂತರಿಕ ಲೆಕ್ಕ ಪರಿಶೋಧಕ ರಾಜಶೇಖರ್ ಎ.ಅಂಚನ್, ದಿನೇಶ್ ಅಮೀನ್, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್, ಕಾರ್ಯದರ್ಶಿ ಶಕೀಲಾ ಪಿ.ಶೆಟ್ಟಿ ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದರು.

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal