About Us       Contact

 ಮುಂಬಯಿ, ಜೂ.02: ಆಧುನಿಕ ಶಿಕ್ಷಣವು ಮಕ್ಕಳ ಜೀವನ ಉತ್ತೇಜನಕರ ಆಗಬೇಕೇ ಹೊರತು ಜೀವ ಹಾನಿಕಾರ ಆಗಬಾರದು. ಬರೇ ಅಂಕ ಗಳಿಕಾ ಪ್ರಯತ್ನಕ್ಕೆ ಶಿಕ್ಷಣ ನೀಡಿ ಮಕ್ಕಳನ್ನು ಶಿಕ್ಷೆಗೆ ಗುರಿಯಾಗಿಸಿಸದೆ ಮಕ್ಕಳ ಬದುಕನ್ನು ರೂಪಿಸುವಲ್ಲಿ ಶಿಕ್ಷಣ ಪೂರಕವಾಗಲಿ. ಶಿಕ್ಷಣ ಬರೇ ಬದುಕು ರೂಪಿಸುವ ಶಸ್ತ್ರವಾಗದೆ ಸಂಸ್ಕಾರಯುತ ಜೀವನ ರೂಪಿಸುವ ಶಾಸ್ತ್ರವನ್ನಾಗಿಸಿ ಮಕ್ಕಳನ್ನು ಬೆಳೆಸಿ. ಅಂತಹ ಮಕ್ಕಳಿಂದ ತಾವು ಧನ್ಯರೆಣಿಸುವಿರಿ' ಎಂದು ಕೊಂಕಣಿ ಕಥೊಲಿಕ್ ಅಸೋಸಿಯೇಶನ್ ನಲ್ಲಸೋಫರಾ (ಕೆಸಿಎ) ಸಂಸ್ಥೆಯ ಅಧ್ಯಕ್ಷ ಹ್ಯಾರಿ ಬಿ.ಕುಟಿನ್ಹೋ ತಿಳಿಸಿದರು.

ಕೆಸಿಎ ಸಂಸ್ಥೆಯು ಆರ್ಥಿಕ ಅಸಾಯಕ ಮಕ್ಕಳಿಗೆ ವಾರ್ಷಿಕವಾಗಿ ಕೊಡಮಾಡುವ ಶಾಲಾ ಪಠ್ಯ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಇಂದಿಲ್ಲಿ ಪೂರ್ವಾಹ್ನ ನಲ್ಲಾಸೋಫರಾ ಪೂರ್ವದ ಸೈಂಟ್ ಫ್ರಾನ್ಸಿಸ್ ದೆ'ಸಾಲೆಸ್ ಚರ್ಚ್ ಸನಿಹದ ಕೆಸಿಎ ಕಚೇರಿಯಲ್ಲಿ ನಡೆಸಿದ್ದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹ್ಯಾರಿ ಕುಟಿನ್ಹೋ ಉಪಸ್ಥಿತ ನೂರಾರು ಮಕ್ಕಳಿಗೆ ಪಠ್ಯಚಟುವಟಿಕೆಗಳ ಸಾಮಾಗ್ರಿಗಳನ್ನು ವಿತರಿಸಿ ಜಾಗತಿಕವಾಗಿ ಮಾರ್ಪಾಡು ಹೊಂದುವ ಈ ಯುಗದ ಮಕ್ಕಳಿಗೆ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರೀಯವಾಗಿಸಿದಾಗ ಮಕ್ಕಳ ವಿಕಾಸ ಸಾಧ್ಯವಾಗುವುದು. ಆದುದರಿಂದ ಮಕ್ಕಳು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಪಠ್ಯೇತರ ವಿಷಯಕ್ಕೂ ಮಹತ್ವವನ್ನೀಡಿ ವಿದ್ಯಾರ್ಥಿ ಜೀವನವನ್ನು ಆನಂದಿಸಬೇಕು ಎಂದು ಕುಟಿನ್ಹೋ ರಾಷ್ಟ್ರದ ಭಾವೀ ಪ್ರಜೆಗಳಾದ ಮಕ್ಕಳಿಗೆ ಯಶಕೋರಿದರು.

ಸರ್ವ ಸಮೂದಾಯಗಳ ಸ್ಥಾನೀಯ ವಿವಿಧ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಹ ನೀಡುವ ನಿಟ್ಟಿನಲ್ಲಿ ಕೆಸಿಎ ಕಳೆದ ಅನೇಕ ವರ್ಷಗಳಿಂದ ಆಯೋಜಿಸುತ್ತಿದು, ಈ ಬಾರಿ ಸುಮಾರು 200ಕ್ಕೂಅಧಿಕ ಮಕ್ಕಳಿಗೆ ಶಾಲಾ ಸಮವಸ್ತ್ರ, ನೋಟ್ ಪುಸ್ತಕಗಳು, ಶಾಲಾ ಶುಲ್ಕ, ಇತರೇ ಶಾಲಾ ಪಠ್ಯಚಟುವಟಿಕೆಗಳ ಸಾಮಾಗ್ರಿಗಳನ್ನು ವಿತರಿಸಿ ಉಪಸ್ಥಿತ ಮಕ್ಕಳ ಪೊಷಕರಿಗೆ ಸಲಹಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಗ್ರೇಸಿ ಪಿಂಟೋ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರೋನಾಲ್ಡ್ ಪಾಯ್ಸ್, ಲಿಲ್ಲಿ ಕ್ವಾಡ್ರಸ್ ಮತ್ತಿತರರು ವೇದಿಕೆಯಲ್ಲಿದ್ದು ಕೋಶಾಧಿಕಾರಿ ಆಲ್ವಿನ್ ಫ್ರಾನ್ಸಿಸ್ ಡಿಸೋಜಾ ಮುದರಂಗಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಿಚಾರ್ಡ್ ಪಿಂಟೋ ಧನ್ಯವಾದ ಸಮರ್ಪಿಸಿದರು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal