About Us       Contact


ಮುಂಬಯಿ, ಆ.23: ಎಂಆರ್ ಜಿ ಸಮೂಹ ಬೆಂಗಳೂರು ಸಂಸ್ಥೆಯ ಕಾರ್ಯಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ (ಬಂಜಾರ) ಅವರು ಕರ್ನಾಟಕ ರಾಜ್ಯದಾದ್ಯಂತ ಸೃಷ್ಟಿಯಾದ ನೆರೆ ಪ್ರವಾಹದಿಂದ ಸಂಕಷ್ಟಕ್ಕೊಳಗಾದ ಜನತೆಗೆ ಸಹಾಯಾರ್ಥವಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ (ರಿಲೀಫ್ ಫಂಡ್‍ಗೆ) ಒಂದು ಕೋಟಿ ರೂಪಾಯಿ ಮೊತ್ತವನ್ನು ನೀಡಿದರು.

ಈ ಚೆಕ್‍ನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕಳೆದ ಗುರುವಾರ ಬೆಂಗಳೂರು ಬೆಂಗಳೂರುನಲ್ಲಿ ಹಸ್ತಾಂತರಿದರು. ಈ ಸಂದರ್ಭದಲ್ಲಿ ಎಂಆರ್ ಜಿ ಸಮೂಹದ ಆಡಳಿತ ನಿರ್ದೇಶಕ ಗೌರವ್ ಪಿ.ಶೆಟ್ಟಿ ಉಪಸ್ಥಿತರಿದ್ದರು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal