About Us       Contact

 

ಬಹುಮುಖ ಪ್ರತಿಭೆಯ ಶೇಖರ ಅಜೆಕಾರು ಅವರು ಪತ್ರಿಕೋದ್ಯಮ, ಸಂಘಟನೆ, ಸಾಹಿತ್ಯ, ಪುಸ್ತಕ ಪ್ರಕಾಶನ ಸಹಿತ ವಿವಿಧ ಕ್ಷೇತ್ರಗಳ ಸಾಧನೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಿ ಸನ್ಮಾನಿಸಲಾಗುತ್ತಿದೆ.ಕುಂದಾಪುರದಿಂದ ಪತ್ರಿಕೋದ್ಯಮ ವೃತ್ತಿ ಬದುಕನ್ನು ಆರಂಭಿಸಿ, ಕರ್ನಾಟಕ ಮಲ್ಲ, ಜನವಾಹಿನಿ ಪತ್ರಿಕೆಗಳಲ್ಲಿ ಪೂರ್ಣಕಾಲಿಕ ಪತ್ರಕರ್ತರಾಗಿ ಸೇವೆ ಸಲ್ಲಿಸಿದರು.ವಿಶಿಷ್ಟ ಸಂಘಟನಾಕಾರರಾಗಿರುವ ಅವರ ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಆದಿಗ್ರಾಮೋತ್ಸವ, ಕರ್ನಾಟಕ ಮಿನಿ ಚಲನಚಿತ್ರೋತ್ಸವಗಳು ಅವರ ಹೊಸಹಾದಿಯ ಕ್ರಿಯಾಶೀಲ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಎಂ.ಎ ಪದವಿ ಪಡೆದಿರುವ ಅವರು ಮುಂಬಯಿ ಸೋಮೈಯ ಕಾಲೇಜ್ ಆಫ್ ಜರ್ನಲಿಸಂನಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

 


ಮುಂಬಯಿಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿ ಗಮನ ಸೆಳೆದರು. ಬಳಿಕ ಬೆಂಗಳುರು ಸಹಿತ ಬೇರೆ ಬೇರೆ ನಗರಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿ ಇದೀಗ ಹುಟ್ಟೂರನ್ನು ಕೇಂದ್ರವಾಗಿಸಿಕೊಂಡು ಕಾರ್ಯ ಪ್ರವೃತ್ತರಾಗಿದ್ದರೆ. ಕಂಬಳದ ಕುರಿತು ೪ ಕೃತಿಗಳನ್ನು ಪ್ರಕಟಿಸಿದ್ದು ಕಂಬಳ ಪ್ರಕರಣ ನ್ಯಾಯಾಲಯದಲ್ಲಿದ್ದಾಗ ಈ ಕೃತಿಗಳು ಪ್ರಶಂಸೆಗೆ ಪಾತ್ರವಾಗಿದ್ದವು. "ಕಂಬಳ" ಸಂಪುಟ ಬೃಹತ್ ಗ್ರಂಥದ ಕೆಲಸದಲ್ಲಿ ನಿರತರಾಗಿದ್ದಾರೆ.ನಮ್ಮೂರು ಅಜೆಕಾರು, ನಮ್ಮ ಕಟೀಲು, ಕೊಲ್ಲೂರು ಡೈರಿ, ಮುಂಬಯಿ ಬೂಕ್, ಅತ್ತೂರು, ಹೆಬ್ಬೇರಿ ಹೆಬ್ರಿ ಅವರು ಊರುಗಳ ಬಗ್ಗೆ ಕೃತಿಗಳನ್ನು ಹೊರ ತಂದಿರುತ್ತಾರೆ, ಮುಂದಿನ ಪುಸ್ತಕಗಳ ಪ್ರಕಟಣೆಯಲ್ಲಿ ನಿರತರಾಗಿದ್ದಾರೆ.
ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಹೆಬ್ರಿ ಗ್ರಾಮ ಪಂಚಾಯತ್ ಪ್ರದೇಶದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಸ್ಥಾಪಿಸಿದ್ದಾರ. ಮುಂಬಯಿಯ ಪೊವಾಯಿ ಕನ್ನಡ ಸೇವಾ ಸಂಘ, ಕುರ್ಪಾಡಿ ಯುವ ವೃಂದ ಅಜೆಕಾರು, ಆದಿಗ್ರಾಮೋತ್ಸವ ಸಮಿತಿ, ಯುವ ಪ್ರತಿಭಾ ವೇದಿಕೆಗಳ ಸ್ಥಾಪಕರಾಗಿದ್ದು ಅನೇಕ ಸಂಘ ಸಂಸ್ಥೆಗಳಿಗೆ ಪ್ರೇರಕರಾಗಿದ್ದಾರೆ. ಪಾಸ್‌ಪೋಲಿ ಕನ್ನಡ ಮಾಧ್ಯಮ ಶಾಲೆಯನ್ನು ಮುಂಬಯಿಯಲ್ಲಿ ಸ್ಥಾಪನೆಗೆ ಕಾರಣರಾಗಿದ್ದಾರೆ.
ಪತ್ರಿಕೋದ್ಯಮದ ಸಾಧನೆಗಾಗಿ ಅಖಿಲ ಭಾರತ ಅಗ್ನಿ ಶಿಖಾ ಮಂಚ್ ಪ್ರಶಸ್ತಿ, ವಿಶ್ವ ಚೇತನ ಪ್ರಶಸ್ತಿ, ಕರುನಾಡ ಪದ್ಮಶ್ರೀ, ಕೊಪ್ಪಳ ಜಿಲ್ಲಾ ದಶಮಾನೋತ್ಸವ ಪ್ರಶಸ್ತಿ, ಡಾ.ಸಿದ್ಧಲಿಂಗಯ್ಯ ಪ್ರಶಸ್ತಿ, ಹೂಗಾರ ಮಾಧ್ಯಮ ಪ್ರಶಸ್ತಿ, ಅಖಿಲ ಭಾರತ ಪತ್ರಿಕಾ ಸಂಪಾದಕರ ಸಮಾವೇಶ ಗೌರವ ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದಾರೆ.
ಸಂಘಟಕರಾಗಿ ಅವರು ಸಂಯೋಜಿಸುತ್ತಿರುವ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಆದಿಗ್ರಾಮೋತ್ಸವ, ಕರ್ನಾಟಕ ಮಿನಿ ಚಲನ ಚಿತ್ರೋತ್ಸವ, ಅಂಗನವಾಡಿ ಮಕ್ಕಳ ಮೇಳ ಇವುಗಳು ವಿಶಿಷ್ಟ ಕಾರ್ಯಗಳೆಂದು ರಾಜ್ಯದ ಗಮನಸೆಳೆದಿವೆ. ಕನ್ನಡದ ಮೊದಲ ಇಂಟರ್‌ನೆಟ್ ಕವನ ಸಂಕಲ ಸೂರ್ಯ ಶಿಕಾರಿಗೆ ಮುನ್ನ ಅಜೆಕಾರು ಅವರ ಹೆಸರಲ್ಲಿ ದಾಖಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಅಜೆಕಾರು ಹೋಬಳಿ ಘಟಕದ ಪ್ರಥಮ ಅಧ್ಯಕ್ಷರಾಗಿ ಪರಿಷತ್‌ನ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal