About Us       Contact

 


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಜು.28: ನಮ್ಮ ಸಂಘದಲ್ಲಿ ಮುಂದೆ ಅನೇಕ ಒಳ್ಳೆಯ ಕಾರ್ಯಕ್ರಮಗಳು ನಡೆಯಬೇಕು. ನಮ್ಮ ಸಮಾಜ ಅತೋ ಎತ್ತರಕ್ಕೆ ಬೆಳೆದು ಅಭಿವೃದ್ಧಿ ಕಾಣಬೇಕೆಂದು ನನ್ನ ಆಸೆ. ಅದಕ್ಕಾಗಿ ನಾವೆಲ್ಲ ಒಗ್ಗೂಡಿ ಸಂಘದಲ್ಲಿ ನಮ್ಮನ್ನು ನಾವೂ ತೊಡಗಿಸಬೇಕು. ಅಧಿಕಾರ ಶಾಸ್ವತವಲ್ಲ ಸೇವೆಯೇ ಸ್ಥಿರವಾದುದು. ಆದುದರಿಂದ ಅವಕಾಶಗಳನ್ನು ಸದುಪಯೋಗ ಪಡಿಸಿ ಸಂಸ್ಥೆಯ ಮೂಲಕ ಸಮುದಾಯವನ್ನು ಮುನ್ನಡೆಸೋಣ ಎಂದು ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಶೇಖರ ಎಸ್. ಭಂಡಾರಿ ತಿಳಿಸಿದರು.

ಇಂದಿಲ್ಲಿ ಶನಿವಾರ ಅಪರಾಹ್ನ ಸಯಾನ್‍ನ ಮುಖ್ಯ ಅಧ್ಯಾಪಕ ಭವನದ ಶ್ರೀ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಭಂಡಾರಿ ಸೇವಾ ಸಮಿತಿ ತನ್ನ 65ನೇ ವಾರ್ಷಿಕ ಮಹಾಸಭೆ ನಡೆಸಿದ್ದು ಸಭೆಯ ಅಧ್ಯಕ್ಷತೆ ವಹಿಸಿ ಶೇಖರ ಭಂಡಾರಿ ಮಾತನಾಡಿದರು. ಪದಾಧಿಕಾರಿಗಳನ್ನೊಳಗೊಂಡು ಅಧ್ಯಕ್ಷ ಶೇಖರ ಭಂಡಾರಿ ದೀಪ ಪ್ರಜ್ವಲಿಸಿ, ಕುಲದೇವರಾದ ಕಚ್ಚೂರು ಶ್ರೀ ನಾಗೇಶ್ವರ ದೇವರಿಗೆ ಆರತಿ ನೆರವೇರಿಸಿ ಸಭೆಗೆ ಚಾಲನೆ ನೀಡಿದರು.

 

 

 

 

 

 

 

 

 

 

ಕಳೆದ ಎರಡು ಅವಧಿಗೆ ಈ ಸಂಸ್ಥೆಯ ಚುಕ್ಕಾಣಿಯನ್ನಿತ್ತು ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಲು ಸಹಯೋಗವನ್ನಿತ್ತ ಸರ್ವರ ಅಭಾರ ಮನ್ನಿಸುವೆ. ಮುಂದಿನ ಅಧ್ಯಕ್ಷರಿಗೂ ಇನ್ನೂ ಹೆಚ್ಚಿನ ಸೇವೆಯನ್ನೊದಗಿಸುವ ಸುಯೋಗ ಒದಗಿಸುವ ಆಶಯ ನನ್ನದಾಗಿದೆ ಎಂದೂ ಶೇಖರ ಭಂಡಾರಿ ತಿಳಿಸಿದರು.

ಸೇವಾ ಸಮಿತಿ ಉಪಾಧ್ಯಕ್ಷರಾದ ನ್ಯಾಯವಾದಿ ರಾಮಣ್ಣ ಎಂ.ಭಂಡಾರಿ ಮತ್ತು ಪ್ರಭಾಕರ್ ಪಿ.ಭಂಡಾರಿ, ಜೊತೆ ಕಾರ್ಯದರ್ಶಿ ಶಶಿಧರ್ ಡಿ.ಭಂಡಾರಿ ಜೊತೆ ಕೋಶಾಧಿಕಾರಿ ಪ್ರಕಾಶ್ ಭಂಡಾರಿ, ಮಹಿಳಾ ವಿಭಾಗಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ಕಡಂದಲೆ, ಉಪ ಕಾರ್ಯಾಧ್ಯಕ್ಷೆ ಪಲ್ಲವಿ ರಂಜಿತ್ ಭಂಡಾರಿ, ಕಾರ್ಯದರ್ಶಿ ರೇಖಾ ಎ.ಭಂಡಾರಿ, ಕೋಶಾಧಿಕಾರಿ ಕು| ಕ್ಷಮಾ ಆರ್.ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಸೇವಾ ಸಮಿತಿಯ ಇತರ ಪದಾಧಿಕಾರಿಗಳು, ಸದಸ್ಯರನೇಕರು, ಭಂಡಾರಿ ಬಂಧುಗಳು ಉಪಸ್ಥಿತರಿದ್ದು ಗತ ಸಾಲಿನಲ್ಲಿ ಅಗಲಿದ ಸರ್ವ ಭಂಡಾರಿ ಬಾಂಧÀುಗಳು ಹಾಗೂ ಗಣ್ಯರಿಗೆ ಮೌನ ಪ್ರಾರ್ಥನೆಯೊಂದಿಗೆ ಬಾಷ್ಪಾಂಜಲಿ ಅರ್ಪಿಸಯಿತು. ಸಭಿಕರ ಪರವಾಗಿ ರಂಜಿತ್‍ಎಸ್.ಭಂಡಾರಿ, ಪ್ರಕಾಶ್ ಭಂಡಾರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಲಹಿದರು.

ಕು| ರಿಯಾ ಆರ್.ಭಂಡಾರಿ ಪ್ರಾರ್ಥನೆಗೈದರು. ಗೌ| ಪ್ರ| ಕಾರ್ಯದರ್ಶಿ ವಿಜಯ ಆರ್. ಭಂಡಾರಿ ಸ್ವಾಗತಿಸಿದರು.. ಜೊತೆ ಕಾರ್ಯದರ್ಶಿ ಶಶಿಧರ್ ಡಿ.ಭಂಡಾರಿ ಗತ ವಾರ್ಷಿಕ ಮಹಾಸಭೆ ವರದಿ, ವಾರ್ಷಿಕ ಚಟುವಟಿಕೆಗಳ ಮಾಹಿತಿ ಭಿತ್ತರಿಸಿದರು. ಗೌ| ಕೋಶಾಧಿಕಾರಿ ಕರುಣಾಕರ ಜಿ.ಭಂಡಾರಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಜೊತೆ ಕಾರ್ಯದರ್ಶಿ ಪುರುಷೋತ್ತಮ ಜಿ.ಭಂಡಾರಿ ಕೃತಜ್ಞತೆ ಸಮರ್ಪಿಸಿದರು. ಸಭೆಯ ಕೊನೆಯಲ್ಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಮಿತಿ ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ವಿದ್ಯಾಥಿರ್ü ವೇತನ, ಪ್ರತಿಭಾ ಪುರಸ್ಕಾರ ಪ್ರದಾನಿಸಿ ಶುಭಾರೈಸಿದರು.

ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್‍ನ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್.ಭಂಡಾರಿ, ಮಾಜಿ ಅಧ್ಯಕ್ಷ ಬಾಲಕೃಷ್ಣ ಪಿ.ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಸಂಸ್ಥೆಯ 2018-20ರ ಎರಡು ವರ್ಷಗಳ ಕಾಲಾವಧಿ ಕಾರ್ಯಕಾರಿ ಸಮಿತಿಗೆ ಸದಸ್ಯರುಗಳ ಆಯ್ಕೆ ನಡೆಸಲಾಯಿತು. ನಂತರ ಅಧ್ಯಕ್ಷರನ್ನಾಗಿ ನ್ಯಾಯವಾದಿ ಆರ್.ಎಂ.ಭಂಡಾರಿ, ಪ್ರಧಾನ ಕಾರ್ಯದರ್ಶಿ ಆಗಿ ಶಶಿಧರ್ ಡಿ.ಭಂಡಾರಿ ಮಹಾಸಭೆ ಆಯ್ಕೆಗೊಳಿಸಿತು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal