About Us       Contact


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮಂಗಳೂರು, ಅ.31: ಗೃಹಪಯೋಗಿ ವಸ್ತುಗಳ ಪ್ರದರ್ಶನ, ಮಾರಾಟಕ್ಕೆ ಮನೆಮಾತಾಗಿರುವ ಹೆಸರಾಂತ ಮಲಾೈಕಾ ಅಪ್ಲೈಯನ್ಸಸ್ ಲಿಮಿಟೆಡ್ ಸಂಸ್ಥೆಯು ಸ್ವಉತ್ಪನ್ನವಾಗಿಸಿ `ಯಸೋಮಾ' ಬ್ರ್ಯಾಂಡ್ ಮುಖೇನ ಸಿದ್ಧಪಡಿಸಿದ ಅಸಂಗತ ವಿಸ್ತಾರತಾ ತಂತ್ರಜ್ನಾನವುಳ್ಳ (ವೈಡ್ ರೇಂಜ್) ಉಪಾಯಗಾರವಾದ ಮತ್ತು ಚಾಕಚಕ್ಯತೆವುಳ್ಳ (ಶಾರ್ಪ್ ಎಂಡ್ ಸ್ಮಾರ್ಟ್ ಟೆಕ್ನಾಲೊಜಿ) ಎಲ್‍ಇಡಿಗಳು ಹಾಗು ವಿವಿಧ ಗೃಹಪಯೋಗಿ ವಸ್ತುಗಳನ್ನು ಇಂದಿಲ್ಲಿ ರಾತ್ರಿ ಮಂಗಳೂರು ಪಳ್ನೀರ್‍ನ ಮಿಲಾಗ್ರಿಸ್ ಚರ್ಚ್ ಸಭಾಗೃಹದಲ್ಲಿ ಮಾರುಕಟ್ಟೆಗೆ ಬಿಡುಗಡೆ ಗೊಳಿಸಿತು.

ಮಲಾೈಕಾ ಸಂಸ್ಥೆಯ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಗಿಲ್ಬರ್ಟ್ ಬ್ಯಾಪ್ಠಿಸ್ಟ್ ಸಾರಥ್ಯದಲ್ಲಿ ನಡೆಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತ ಸೈಂಟ್ ಲಾರೇನ್ಸ್ ಚರ್ಚ್ ಬೋಂದೆಲ್ ಇದರ ಪ್ರಧಾನ ಧರ್ಮಗುರು ರೆ| ಫಾ| ಆ್ಯಂಡ್ರೂ ಲಿಯೋ ಡಿ'ಸೋಜಾ ಆಶೀರ್ವಚನಗೈದು `ಯಸೋಮಾ' ಬ್ರ್ಯಾಂಡ್‍ನ 65’’ ಬೃಹತ್ ಎಲ್‍ಇಡಿ ಟಿವಿ ಅನಾವರಣ ಗೊಳಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಶುಭೇಚ್ಛ ಹಾರೈಸಿದರು. ಹಾಗೂ ಚಲನಚಿತ್ರ ನಟ, ಪ್ರಸಿದ್ಧ ಸಾಮಾಜಿಕ ಧುರೀಣ ಸ್ಟ್ಯಾನಿ ಅಲ್ವಾರಿಸ್ ಮತ್ತಿತರÀ ಗಣ್ಯರು ಉಪಸ್ಥಿತರಿದ್ದು ಮೊತ್ತಮೊದಲ `ಯಶೋಮಾ' ಬ್ರ್ಯಾಂಡ್ ಗೃಹಪಯೋಗಿ ವಸ್ತುಗಳ ಪ್ರದರ್ಶನಕ್ಕೆ ಚಾಲನೆಯಿತ್ತರು.

ಬಂಧುತ್ವದ ಬದುಕೇ ಮಾನವನ ನಿಜಜೀವನವಾಗಿದೆ. ವೈರತ್ವದಿಂದ ಏನೂ ಸಾಧಿಸಲಾಗದು. ನ್ಬುದ್ಧಿಜೀವಿ ಮಾನವನು ಸಹೋದರ-ಸಹೋದರಿಯರಂತೆ ಅನ್ಯೋನ್ಯತೆಯಿಂದ ಬೆಸೆದು ಬಾಳಿದಾಗಲೇ ಜೀವನ ಪಾವನವಾಗುವುದು. ಆದುದರಿಂದ ಯಾವುದು ಒಳಿತು ಇದೆಯೋ ಅದನ್ನು ಪೆÇ್ರೀತ್ಸಾಹಿಸಿರಿ. ಇದರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗುವುದು ಎಂದು ಫಾ| ಆ್ಯಂಡ್ರೂ ಸಲಹಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಮಲಾೈಕಾ ಸಂಸ್ಥೆಯ ಸಿಎಂಡಿ ಗಿಲ್ಬರ್ಟ್ ಬ್ಯಾಪ್ಠಿಸ್ಟ್ ಮಾತನಾಡಿ ಗೃಹಪಯೋಗಿ ವಸ್ತುಗಳ ಸೇವೆಯಲ್ಲಿ ಮಲಾೈಕಾ ಸಂಸ್ಥೆಯು ಕಳೆದ ಮೂರುವರೆ ದಶಕಗಳ ಅಪಾರ ಅನುಭವ ಹೊಂದಿದೆ. ಅಂತರಾಷ್ಟ್ರೀಯ ಸಂಸ್ಥೆಗಳ ಗೃಹಪಯೋಗಿ ವಸ್ತುಗಳ ಜೊತೆಜೊತೆಗೆ ನಮ್ಮ ಸ್ವನಿರ್ಮಿತ ಗೃಹಪಯೋಗಿ ವಸ್ತುಗಳನ್ನೂ ಮಾರಾಟ ಮಾಡುತ್ತಿದ್ದೇವು. ಆದರೆ ಭಾರತದಲ್ಲಿನ ಮಧ್ಯಮ ಹಾಗೂ ಜನಸಾಮಾನ್ಯರ ಬಳಕೆಗೆ ಎಲ್ಲವೂ ಸುಲಭಸಾಧ್ಯ ಆಗುತ್ತಿರಲಿಲ್ಲ. ಇಲ್ಲಿನ ಜನತೆಯ ಅಗತ್ಯಕ್ಕೆ ತಕ್ಕಂತೆ, ವಿದ್ಯುಚ್ಛಕ್ತಿ ಬಳಕೆ, ಮಿತದರ ಎಲ್ಲವನ್ನೂ ಮನವರಿಸಿ ಗ್ರಾಹಕರ ಅನುಕೂಲತೆಗೆ ಅನುಗುಣವಾಗಿ ನಮ್ಮದೇ ಸ್ವಂತ `ಯಶೋಮಾ' ಬ್ರ್ಯಾಂಡ್ ಮೂಲಕ ಗೃಹಪಯೋಗಿ ವಸ್ತುಗಳನ್ನು ಸಿದ್ಧಪಡಿಸಿ ಜನಮನಕ್ಕೆ ಸ್ಪಂದಿಸಿದ್ದೇವೆ. ವಿಶೇಷವಾಗಿ ಯಸೋಮಾ ಎಲ್‍ಇಡಿ, ಸ್ಮಾರ್ಟ್ ಟಿವಿ, ಅಲ್ಟ್ರಾ ಹೆಚ್‍ಡಿ ಟಿವಿ, ಎಲ್‍ಇಡಿ ಟಿವಿ (ಲೆಡ್), ಮಿಕ್ಸರ್ ಗ್ರೈಂಡರ್, ಇಂಡಕ್ಶನ್ ಕುಕರ್, ಆರೋಗ್ಯದಾಯಕ ಸೇವನೆಗಾಗಿನ ಆರ್‍ಓ ಶುದ್ಧೀಕರಣ ನೀರಿನ ಯಂತ್ರ (ವಾಟರ್ ಪ್ಯೂರಿಪಯರ್) ಇನ್ನಿತರ ಗೃಹಪಯೋಗಿ ವಸ್ತುಗಳನ್ನು ಗೃಹಕರಿಗೆ ಒದಗಿಸಿದ್ದೇವೆ. ಇದೀಗ ಸ್ವಂತಿಕೆಯ ಉತ್ಪನ್ನ ತಯಾರಿಕೆಗಳೊಂದಿಗೆ ಗ್ರಾಹರ ಸದಾಶಯಗಳೊಂದಿಗೆ ದೊಡ್ಡ ಸಂಸ್ಥೆಯಾಗಿ ಬೆಳೆಯುತ್ತಿದೆ. ಈ ಬೆಳವಣಿಗೆಗೆ ಮಲಾೈಕಾ ಸಿಬ್ಬಂದಿ, ಪರಿವಾರದ ಶ್ರಮ, ಕಾರ್ಯನಿರ್ವಾಹಣೆ ಅನನ್ಯ ಎಂದರು.

ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ನಮ್ಮ ಸಂಸ್ಥೆಯು ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಸ್ವಂತಿಕೆಯ ವಸ್ತುಗಳನ್ನು ಉತ್ಪಾದಿಸುವಲ್ಲಿ ಯಶಕಂಡಿದೆ. ಮಾರುಕಟ್ಟೆಯಲ್ಲಿ ದೊರೆಯುವಂತಹ ಮಿಕ್ಸರ್ ಗ್ರೈಂಡರ್ ಕ್ಕಿಂತ ಆಧುನಿಕ ಪ್ರಮಾಣದ ವಾಲ್ಟ್ಸ್ ಅಳವಡಿಸಿ ಮಿಕ್ಸರ್ ಗ್ರೈಂಡರ್ ಸಿದ್ಧಪಡಿಸಿದೆ. ದೀರ್ಘಾವಧಿ ಬಳಕೆಗೆ ಯೋಗ್ಯವಾದ ಇದನ್ನು ಬಡವರಿಂದ ಶ್ರೀಮಂತರೂ ಉಪಯೋಗಿಸಿ ಭರವಸೆಗೆ ಮೂಡಿಸಲಿದೆ. ನಮ್ಮ ಸಾಧನೆಗೆ ಪೂರಕವಾಗಿರುವ ಸಂಸ್ಥೆಯ ಎಲ್ಲಾ ಹಿತೈಷಿಗಳು, ಷೇರುದಾರರು, ಗ್ರಾಹಕರಿಗೆ, ವಿತರಕರಿಗೆ, ಉತ್ಪಾದನ ಹಾಗೂ ಮಾರುಕಟ್ಟೆಯ ಸರ್ವರಿಗೂ ಮಲಾೈಕಾ ಸಮೂಹವು ಕೃತಜ್ಞತೆ ಸಲ್ಲಿಸುತ್ತಿದೆ ಎಂದರು.

ಮಲಾೈಕಾ ಸಂಸ್ಥೆಯ ರಾಷ್ಟ್ರೀಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನೈಝಿಲ್ ಪಿಂಟೋ ಮಾತನಾಡಿ ಉತ್ಪಾದನ ಹಾಗೂ ರಿಯಾಯಿತಿ ದರದ ಸೇವೆಯನ್ನು ವಿವರಿಸಿದರು.

ಈ ಶುಭಾವಸರದಲ್ಲಿ ಮಲಾೈಕಾ ಸಂಸ್ಥೆಯ ಉನ್ನತಾಧಿಕಾರಿಗಳಾದ ಸಿರಿಲ್ ವೇಗಸ್, ಲೋಯಲ್ ಬ್ಯಾಪ್ಠಿಸ್ಟ್, ಸತೀಶ್ ಕುಲಾಲ್, ನವೀನ್ ಪೂಜಾರಿ, ವಿನ್ಸೆಂಟ್ ಬ್ಯಾಪ್ಠಿಸ್ಟ್, ರಾಹುಲ್ ಜೈನ್, ಅಮುಖ್ ನಾಯಕ್, ರತ್ನಾ ಸುವರ್ಣ ಮತ್ತಿತರರು ಉಪಸ್ಥಿತರಿದ್ದು, ಸಂಸ್ಥೆಯ ಸರ್ವೋತ್ತಮ ಗ್ರಾಹಕರೆಣಿಸಿದ ಹಿಲಾರಿ ಕುಟಿನ್ಹಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಸ್ಥೆಯ ಹಿತೈಷಿಗಳು ಹಾಗೂ ಗ್ರಾಹಕರಿಗೆ ಆದಿಯಲ್ಲಿ ಶ್ರದ್ಧಾಂಜಲಿ ಕೋರಲಾಯಿತು. ಮಲಾೈಕಾ ಸಂಸ್ಥೆಯ ಕರ್ನಾಟಕ ಪ್ರಾದೇಶಿಕ ಕಾರ್ಯನಿರ್ವಹಣಾ ಅಧಿಕಾರಿ ರೀನಾ ಸ್ವಾಗತಿಸಿದರು. ಅವಿನಾಶ್ ಡಿ'ಸೋಜಾ ಕಾರ್ಯಕ್ರಮ ನಿರೂಪಿಸಿದರು. ಮಾರ್ಲಿನ್ ಗೋಮ್ಸ್ ವಂದಿಸಿದರು.

ಮಲಾೈಕಾ ಸಂಸ್ಥೆಯು ಸ್ವಂತಿಕೆಯ `ಯಸೋಮಾ' ಬ್ರಾಂಡ್‍ನ ಮತ್ತು ಮಿಕ್ಸರ್ ಗ್ರೈಂಡರ್ ಉತ್ಪಾದಿಸಿ ಗ್ರಾಹಕರಿಗೆ ಒದಗಿಸುತ್ತಿದೆ. ಎಲ್ಲಾ ಬ್ರಾಂಡ್‍ಗಳ ಗೃಹಪಯೋಗಿ, ಇನ್ನಿತರ ಎಲ್ಲಾ ವಸ್ತುಗಳ ಖರೀದಿಯಲ್ಲೂ ಆತ್ಯಾಕರ್ಷಕ ಹಾಗೂ ರಿಯಾಯಿತಿ ದರಗಳ ಲಾಭಾಂಶ ನೀಡುತ್ತಿದೆ. ಮುಂಬಯಿ ನಗರದಾದ್ಯಂತ ಅನೇಕ ಶಾಖೆಗಳ ಮುಖೇನ ವ್ಯವಹಾರಿಸುತ್ತಿರುವ ಮಲಾೈಕಾ ಸಮೂಹ ಸಂಸ್ಥೆಯ ಉತ್ಪಾಧಿತ ಗೃಹಪಯೋಗಿ ಸಾಮಾಗ್ರಿಗಳನ್ನು ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಲ್ಲಿ, ತವರೂರ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ತೊಕ್ಕುಟ್ಟು, ಬಿ.ಸಿ.ರೋಡ್, ವಿಟ್ಲ, ಪುತ್ತೂರು ಇಲ್ಲಿನ ಶಾಖೆಗಳಲ್ಲಿ ವಿತರಿಸುತ್ತಿದೆ. ಅಂತೆಯೇ ಮಲಾೈಕಾ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಯ್ಟಿ ಲಿಮಿಟೆಡ್ ಮೂಲಕ ತನ್ನ ಗ್ರಾಹಕರಿಗೆ ಅನುಕೂಲಕರ ಸೇವೆ, ಸೊಸೈಟಿ ವ್ಯವಹಾರದೊಂದಿಗೆ ಗೃಹಪಯೋಗಿ ವಸ್ತುಗಳನ್ನೂ ಖರೀದಿಸುವ ಅವಕಾಶಗಳನ್ನು ಒದಗಿಸುತ್ತಿದೆ ಎಂದು ಗಿಲ್ಬರ್ಟ್ ಬ್ಯಾಪ್ಠಿಸ್ಟ್ ಈ ಮೂಲಕ ತಿಳಿಸಿದ್ದಾರೆ.

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal